2010ರ ಮೇ 22… ಎಂದೂ ಮರುಕಳಿಸದಿರಲಿ


Team Udayavani, May 22, 2023, 7:22 AM IST

MANGALORE FLIGHT BLAST

ಹದಿಮೂರು ವರ್ಷಗಳ ಹಿಂದೆ; ಅಂದರೆ, ದಿನಾಂಕ 22-5-2010. ಅಂದು ಶನಿವಾರ. ಸಮಯ ಮುಂಜಾನೆಯ ಸುಮಾರು ಆರು ಗಂಟೆ ಆರು ನಿಮಿಷ. ಮಂಗಳೂರು (ಬಜಪೆ) ವಿಮಾನ ನಿಲ್ದಾಣದ ಬಳಿ ಇತಿಹಾಸ ಭೀಕರ ವಿಮಾನ ದುರಂತ ಸಂಭವಿಸಿತು. ಇದು ಭಾರತದ ಬೃಹತ್‌ ಮತ್ತು ಜಗತ್ತಿನ ಅತ್ಯಂತ ಭೀಕರ ವಿಮಾನ ದುರಂತ ಗಳಲ್ಲೊಂದು. ಮನುಕುಲ ಎಂದೂ ಮರೆಯದ ದುರಂತ ಅಂದರೆ ಉತ್ಪ್ರೇಕ್ಷೆಯಾಗಲಾರದು. ಈ ದುರಂತ ಸಂಭವಿಸಿ ದಶಕವೇ ಕಳೆದರೂ ಇಂದಿಗೂ ಅದರ ಪಶ್ಚಾತ್‌ ನೋವಿನ ಪರಿಣಾಮಗಳು ಕಾಣಿಸಿಕೊಳ್ಳುತ್ತಲೇ ಇವೆ. ದುರಂತದಲ್ಲಿ ಸಿಲುಕಿದ ಕುಟುಂಬಗಳು ಮಾತ್ರವಲ್ಲ, ಒಟ್ಟು ವ್ಯವಸ್ಥೆಯೇ ಈ ತಲ್ಲಣದಿಂದ ಇನ್ನೂ ಚೇತರಿಸಿಕೊಂಡಿಲ್ಲ.

ದುಬಾೖಯಿಂದ ಅಂದು ಮುಂಜಾನೆ ಬಜಪೆ (ಈಗ ಮಂಗಳೂರು ಅಂತಾರಾಷ್ಟ್ರೀಯ) ವಿಮಾನ ನಿಲ್ದಾಣಕ್ಕೆ ಬಂದ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನ ಇಳಿಯುತ್ತಿದ್ದಂತೇ ತನ್ನ ನಿಯಂತ್ರಣ ಕಳೆದುಕೊಂಡಿತು. ಸಮೀಪದ ಕೆಂಜಾರು ಎಂಬಲ್ಲಿ ಪತನಗೊಂಡಿತ್ತು.

ಈ ಅತ್ಯಂತ ದಾರುಣ ವಿಮಾನ ದುರಂತದಲ್ಲಿ 158 ಮಂದಿ ಜೀವಂತ ಭಸ್ಮವಾದರು. ಕೇವಲ 8 ಮಂದಿ ಅದೃಷ್ಟವಶಾತ್‌ ಬದುಕುಳಿದರು.
1951ರ ಡಿಸೆಂಬರ್‌ 31ರಂದು ಆಗಿನ ಬಜಪೆ ವಿಮಾನ ನಿಲ್ದಾಣ ಉದ್ಘಾಟನೆ ಆಗಿತ್ತು. ಮುಂಬಯಿ ಯಿಂದ ಮೊದಲ ವಿಮಾನದಲ್ಲಿ ಆಗಿನ ಪ್ರಧಾನಿ ಆಗಮಿಸಿದ್ದರು. ಮುಂದೆ ಹಂತ ಹಂತದಲ್ಲಿ ನಿಲ್ದಾಣ ವಿಸ್ತರಣೆ ಆಗುತ್ತಾ ಸಾಗಿತು. ಬೆಂಗಳೂರಿಗೂ ಸಂಪರ್ಕವಾಯಿತು. 80ರ ದಶಕದ ಕೊನೆಯ ಭಾಗದಲ್ಲಿ ಒಂದು ಸಂಭಾವ್ಯ ದುರಂತ (ಬೆಂಗಳೂರಿನಿಂದ ಬಂದಿಳಿದ ವಿಮಾನ ರನ್‌ವೇ ಯಲ್ಲಿ ನಿಯಂತ್ರಣ ತಪ್ಪಿ ಜಾರುತ್ತಾ, ಎದುರಿನ ಬಂಡೆಕಲ್ಲುಗಳ ತಡೆಗೆ ಬಡಿದು ನಿಂತಿತ್ತು. ಜೀವಹಾನಿ ಉಂಟಾಗಿರಲಿಲ್ಲ.) ಒಟ್ಟಾರೆ ಯಾವುದೇ ಸಮಸ್ಯೆ ಉಂಟಾಗಿರಲಿಲ್ಲ. ರನ್‌ವೇಯ ಉದ್ದ ಪರಿಗಣಿಸಿದರೆ, ಸುರಕ್ಷತೆ ಬಗ್ಗೆ ಆಗಾಗ ವಿವಿಧ, ವಿಭಿನ್ನ ಅಭಿಪ್ರಾಯಗಳು ಕೇಳಿ ಬಂದರೂ ನಿಲ್ದಾಣ ಸುರಕ್ಷಿತವೇ ಆಗಿತ್ತು.

ಮುಂದಿನ ಹಂತದಲ್ಲಿ ರನ್‌ವೇಗಳ ವಿಸ್ತರಣೆ ಆಯಿತು. ಹೊಸ ಟರ್ಮಿನಲ್‌ ಕಟ್ಟಡಗಳ ನಿರ್ಮಾ ಣವಾಯಿತು. ಅಂತಾರಾಷ್ಟ್ರೀಯ ಮಟ್ಟದ ವಿಮಾನ ನಿಲ್ದಾಣವಾಗಿ ವಿಸ್ತರಣೆಯಾಯಿತು.

ದುಬಾೖ- ಮಂಗಳೂರು ನಡುವೆ ನೇರ ವಿಮಾನ ಯಾನ ಆರಂಭವಾಗುವ ಮೂಲಕ ಬಹುದಿನಗಳ ಕನಸು ನನಸಾಯಿತು. ಗಲ್ಫ್ನ ಬೇರೆ ದೇಶಗಳಿಗೂ ಆಂತರಿಕವಾಗಿ ಬೇರೆ ಕೇಂದ್ರಗಳಿಗೂ ಸಂಪರ್ಕ ಬೆಳೆಯಿತು. ಈ ಎಲ್ಲ ವಿವರಗಳ ಆಶಯವೆಂದರೆ: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಿ ಸುರಕ್ಷಾ ಮಾನ್ಯತೆಯನ್ನು ಹೊಂದಿತ್ತು ಎಂಬುದು.

ಅಂದು ಈ ದುರದೃಷ್ಟವಂತ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನ ಎಲ್ಲ ಸುರಕ್ಷಾ ಸಂಕೇತಗಳ ವಿನಿಮಯದ ಬಳಿಕ ವಿಮಾನ ನಿಲ್ದಾಣದಲ್ಲಿ ವಸ್ತುಶಃ ಲ್ಯಾಂಡ್‌ ಆಗಿತ್ತು. ಆದರೆ ರನ್‌ವೇಯಲ್ಲಿ ನಿಲ್ಲದೇ, ಮುಂದಕ್ಕೆ ಚಲಿಸುತ್ತಲೇ, ಅಲ್ಲಿನ ಸೂಚನಾ ಗೋಪುರದ ಕಂಬಗಳಿಗೆ ಢಿಕ್ಕಿಯಾಗಿ, ಕಂಬ ಮುರಿದು ವಿಮಾನ ಅಲ್ಲಿಂದ 150 ಮೀಟರ್‌ ಅಂತರದಲ್ಲಿ ವಿದ್ಯುತ್‌ ತಂತಿಗಳಿಗೆ ಬಡಿಯುತ್ತಾ ತನ್ನ ರೆಕ್ಕೆಗಳನ್ನು ಮುರಿದುಕೊಂಡಿತು. ಅಲ್ಲಿಂದ ಬೆಂಕಿಯ ಉಂಡೆಯಾಗಿ ಕೆಂಜಾರು ಎಂಬಲ್ಲಿ ಪೂರ್ವ ದಿಕ್ಕಿನಲ್ಲಿ ಕೆಳಕ್ಕೆ ಉರುಳಿ ಬಿತ್ತು. ಮರಗಳ ನಡುವೆ ಭಾರೀ ಸ್ಫೋಟದೊಂದಿಗೆ ಬಿದ್ದ ವಿಮಾನ ದಟ್ಟ ಕಪ್ಪು ಹೊಗೆಯನ್ನು ಆಕಾಶಕ್ಕೆ ಚಿಮ್ಮುತ್ತಾ ಬೆಂಕಿಗೆ ಆಹುತಿಯಾಯಿತು.

ಬಳಿಕ, ಸ್ಥಳಕ್ಕೆ ಧಾವಿಸಿ ಬಂದ ವಿವಿಧ ಸುರಕ್ಷ ಮತ್ತು ರಕ್ಷಣ, ಪರಿಹಾರ ಇಲಾಖೆಯವರು ಸ್ಥಳೀಯ ಜನ ತೆಯ ಸಹಕಾರದೊಂದಿಗೆ ಪರಿಹಾರ ಕಾರ್ಯನಿರತ ರಾದರು. ಧಗಧಗಿಸುತ್ತಿದ್ದ ಬೆಂಕಿಯ ನಡುವೆ ಸಾಗಿ, ವಿಮಾನದಲ್ಲಿದ್ದವರನ್ನು ಹೊರಗೆ ತರಲು ಸುಲಭ ಸಾಧ್ಯವಾಗಿರಲಿಲ್ಲ. ಆ ಕ್ಷಣಕ್ಕೆ ಸ್ಥಳಕ್ಕೆ ತೆರಳಲು ಆಗುತ್ತಿರಲಿಲ್ಲ. ಬಹುತೇಕ ಶರೀರಗಳು ಸೀಟ್‌ಬೆಲ್ಟ್ ಧರಿಸಿದ ಸ್ಥಿತಿಯಲ್ಲಿಯೇ ಇದ್ದವು.

ವಿಮಾನದಲ್ಲಿ ಸಿಬಂದಿ ಸಹಿತ 166 ಮಂದಿ ಪ್ರಯಾಣಿಕರಿದ್ದರು. ಅವರಲ್ಲಿ 158 ಮಂದಿ ಸಜೀವವಾಗಿ ದಹನಗೊಂಡಿದ್ದರು. ಮರಕ್ಕೆ ಬಡಿದು ವಿಮಾನದ ಬಾಗಿಲು ತೆರೆದುಕೊಂಡಾಗ ಅಲ್ಲೇ ಕುಳಿತಿದ್ದ 8 ಮಂದಿ ಹೊರಗೆ ಎಸೆಯಲ್ಪಟ್ಟರು. ಓರ್ವ ಯುವತಿ ಮರಗಳ ರೆಂಬೆಗಳಲ್ಲಿ ಸಿಲುಕಿಕೊಂಡಿದ್ದು ಬಳಿಕ ರಕ್ಷಿಸಲಾಯಿತು. ಹೊರಕ್ಕೆ ಬಿದ್ದವರಲ್ಲಿ ಓರ್ವರು ನಡೆದೇ ವಿಮಾನ ನಿಲ್ದಾಣ ಕಚೇರಿಗೆ ಹೋಗಿ ಮಾಹಿತಿ ನೀಡಿದ್ದು ಬಳಿಕ ಗೊತ್ತಾಯಿತು. ಅಂತೆಯೇ ಬಜಪೆಯ ಎತ್ತರದ ಪ್ರದೇಶದಲ್ಲಿ ಪ್ರಾರ್ಥನೆ ಮುಗಿಸಿ ಬಂದ ಓರ್ವರು ಬೆಂಕಿಯ ಉಂಡೆ ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದರು.

ದುರಂತ ಸಂಭವಿಸಿದ್ದಾದರೂ ಹೇಗೆ?
ವಿಮಾನದ ಬ್ಲ್ಯಾಕ್‌ ಬಾಕ್ಸ್‌ನ ವಿಶ್ಲೇಷಣೆಯ ಅನಂತರ ಈ ದುರಂತಕ್ಕೆ ಕಾರಣವೇನೆಂದು ತಿಳಿದು ಬಂತು. ಅದು ಆ ವಿಮಾನದ ಮುಖ್ಯ ಪೈಲಟ್‌ ಕ್ಯಾ|ಗ್ಲುಸಿಕಾ ಅವರು ಎಸಗಿದ ಪ್ರಮಾದ. ಸಹ ಪೈಲಟ್‌ ಕ್ಯಾ| ಅಹ್ಲುವಾಲಿಯಾ ಅವರ ಸಲಹೆ, ಎಚ್ಚರಿಕೆಯನ್ನು ಪರಿಗಣಿಸದೆ ಅವರು ವಿಮಾನವನ್ನು ಇಳಿಸಲು ನಿರ್ಧರಿಸಿದ್ದರು. ರನ್‌ವೇ ಅಂತರದ ನಿರ್ಧಾರವನ್ನು ಕೈಗೊಳ್ಳುವಲ್ಲಿ ಅವರಿಂದ ಪ್ರಮಾದವಾಗಿತ್ತು.

ವಿಪರ್ಯಾಸವೆಂದರೆ, ಗ್ಲುಸಿಕಾ ಅವರು ಈ ಹಾದಿ ಯಲ್ಲಿ ಅನೇಕ ಬಾರಿ ವಿಮಾನ ಹಾರಾಟ ನಡೆಸಿದ್ದವರು. 19 ಬಾರಿ ಇಳಿಸಿದ್ದವರು. 10,200 ತಾಸು ವಿಮಾನ ಹಾರಾಟದ ಅನುಭವಿ ಆಗಿದ್ದವರು. ಸತತ ಡ್ನೂಟಿ ನಿರ್ವಹಣೆಯಿಂದ ಅವರು ನಿದ್ದೆಯ ಮಂಪರಿಗೆ ಜಾರಿದ್ದರೆ? ವಿಮಾನ ಇಳಿಯುವ ಪ್ರಕ್ರಿಯೆಯ ಸ್ವಲ್ಪ ಮೊದಲು ಅವರನ್ನು ಎಚ್ಚರ ಗೊಳಿಸಲಾಯಿತು. ವಿಮಾನ ಇಳಿಯುವ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ವಿವಿಧ ಸುರಕ್ಷ ವ್ಯವಸ್ಥೆಗಳು ಜಾಗೃತ ಸ್ಥಿತಿಯಲ್ಲಿ ಇರಲಿಲ್ಲವೇ? ಇಂತಹ ಅನೇ ಕಾನೇಕ ಪ್ರಶ್ನೆಗಳನ್ನು ಈ ದುರಂತ ಹುಟ್ಟು ಹಾಕಿತು.

ಈ ದುರಂತ ಅನೇಕ ಕುಟುಂಬಗಳನ್ನು ಸರ್ವನಾಶ ಮಾಡಿತು. ಗಲ್ಫ್ನಲ್ಲಿ ದುಡಿದು, ಇಲ್ಲಿ ಊರಲ್ಲಿ ಕುಟುಂಬಕ್ಕೆ ಆಧಾರವಾಗಿದ್ದವರು ಮಡಿದರು. ಅನೇಕ ಮೃತ ಶರೀರಗಳ ಗುರುತು ಹಚ್ಚಲು ಡಿಎನ್‌ಎ ಪರೀಕ್ಷೆ ಅನಿವಾರ್ಯವಾಯಿತು. ಆ ಬಳಿಕ ಪರಿ ಹಾರದ ಮೊತ್ತವೂ (ವಾರಸುದಾರಿಕೆಗೆ ಸಂಬಂಧಿಸಿ) ಅನೇಕ ಕುಟುಂಬಗಳು ಒಡೆಯಲು ಕಾರಣವಾ ಯಿತು. ನ್ಯಾಯಾಲಯದ ಮೆಟ್ಟಿಲನ್ನು ಕೆಲವರು ಏರಿ ದರು. ಇವೆಲ್ಲವೂ ಭೀಕರ ವಿಮಾನ ಸ್ಫೋಟದ ಪಶ್ಚಾತ್‌ ಸ್ಫೋಟಗಳು. ಕಾಲವು ಹಾಗೆಲ್ಲ ಸುಲಭವಾಗಿ ಮರೆಸುವಂತಹ ಸ್ಫೋಟವಿದಲ್ಲ.

ಮನೋಹರ ಪ್ರಸಾದ್‌

ಟಾಪ್ ನ್ಯೂಸ್

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

1-ullala

Mangaluru; ನೇತ್ರಾವತಿ ಸೇತುವೆ ದುರಸ್ತಿ ಆರಂಭ: ಸಂಚಾರ ಸಲಹೆ ನೀಡಿದ ಪೊಲೀಸರು

1-aaammm

Jammu and Kashmir; ಉಗ್ರವಾದ ಪರಿಸರ ವ್ಯವಸ್ಥೆ ಬಹುತೇಕ ಕೊನೆಗೊಂಡಿದೆ: ಶಾ

1-lok-sabha

BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

11

Surathkal: ಅಡುಗೆ ಅನಿಲ ಸೋರಿಕೆ ಪ್ರಕರಣ; ಸುಧಾರಿಸದ ಗಾಯಾಳುಗಳ ಆರೋಗ್ಯ

9-ullala

Ullala: ಸೇತುವೆಗೆ ತೇಪೆ ಹಚ್ಚುವ ಕಾಮಗಾರಿ; ರಾ. ಹೆದ್ದಾರಿಯಲ್ಲಿ ವಾಹನ ಸಂಚಾರ ವ್ಯತ್ಯಯ

6

Mangaluru: ನಂತೂರು ವೃತ್ತ; ಸಂಚಾರ ಸ್ವಲ್ಪ ನಿರಾಳ

3

Belma: ಕುಸಿತ ಭೀತಿಯಲ್ಲಿರುವ ಮನೆ; ಕಾಂಕ್ರೀಟ್‌ ತಡೆಗೋಡೆಗೆ ಪಿಡಬ್ಲ್ಯುಡಿ ಪ್ರಸ್ತಾವ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

Untitled-1

Kasaragod Crime News: ರಸ್ತೆಯಲ್ಲಿ ಬಿಯರ್‌ ಬಾಟ್ಲಿ ಒಡೆದ ಮೂವರ ಬಂಧನ

byndoor

Belthangady: ಬಸ್‌ ಬೈಕ್‌ ಢಿಕ್ಕಿ, ಸವಾರ ಗಂಭೀರ

5

Malpe: ಮೆಹಂದಿಯಲ್ಲಿ ತಡರಾತ್ರಿವರೆಗೆ ಡಿಜೆ ಬಳಕೆ; ಪ್ರಕರಣ ದಾಖಲು

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.