ಮೇ 6: ಯೋಗಿ ಆದಿತ್ಯನಾಥ್ ದ.ಕ, ಉಡುಪಿ ಜಿಲ್ಲೆಗೆ ಭೇಟಿ
Team Udayavani, Apr 29, 2023, 7:20 AM IST
ಉಡುಪಿ: ಮೇ 6ಕ್ಕೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಬಿಜೆಪಿ ಪರ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಲಿದ್ದಾರೆ. ಮೇ 6 ರಂದು ಬೆಳಗ್ಗೆ ಶೃಂಗೇರಿಯಲ್ಲಿ ಪ್ರಚಾರ ಕಾರ್ಯದಲ್ಲಿ ಪಾಲ್ಗೊಂಡು ಪುತ್ತೂರಿಗೆ 12.30ಕ್ಕೆ ಆಗಮಿಸಲಿದ್ದಾರೆ. ಅನಂತರ ಮಧ್ಯಾಹ್ನ 2 ಗಂಟೆಗೆ ಬಂಟ್ವಾಳ, ಮಧ್ಯಾಹ್ನ 3.30ಕ್ಕೆ ಕಾರ್ಕಳ, 5 ಗಂಟೆಗೆ ಹೊನ್ನಾವರಕ್ಕೆ ಭೇಟಿ ನೀಡಲಿದ್ದು, ಮುರುಡೇಶ್ವರದಲ್ಲಿ ವಾಸ್ತವ್ಯ ಹೂಡಲಿದ್ದಾರೆ ಎಂದು ಮಂಗಳೂರು ವಿಭಾಗ ಉಸ್ತುವಾರಿ ಉದಯಕುಮಾರ್ ಶೆಟ್ಟಿ ಕಿದಿಯೂರು ತಿಳಿಸಿದ್ದಾರೆ.
ಮಂಗಳೂರು: ಜಿಲ್ಲೆಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭೇಟಿ ನೀಡಿದ ಬೆನ್ನಲ್ಲೇ ಪ್ರಿಯಾಂಕಾ ಗಾಂಧಿ ಕೂಡ ಆಗಮಿಸುವ ಸಾಧ್ಯತೆ ಇದೆ.
ಪ್ರಧಾನಿ ನರೇಂದ್ರ ಮೋದಿ ಅವರು ಮೇ 3ರಂದು ಸಮಾವೇಶ ನಡೆಸುವ ಮೂಲ್ಕಿಯಲ್ಲೇ ಮೇ 7ರಂದು ಪ್ರಿಯಾಂಕಾ ಗಾಂಧಿ ಅವ ರು ರೋಡ್ ಶೋ ನಡೆಸುವ ಬಗ್ಗೆ ಕಾಂಗ್ರೆಸ್ ನಾಯಕರು ಸಿದ್ಧತೆ ನಡೆಸಿದ್ದಾರೆ.
ರಾಹುಲ್ ಗಾಂಧಿ ನಗರದಲ್ಲಿ ಸಮಾವೇಶ ನಡೆಸಿರುವ ಕಾರಣ ಮತ್ತೆ ಪ್ರಿಯಾಂಕಾ ಗಾಂಧಿಯವರ ಕಾರ್ಯಕ್ರಮದ ಬದಲು ರೋಡ್ ಶೋಗೆ ಪ್ರಾಮುಖ್ಯ ನೀಡಲು ಯೋಚಿಸಲಾಗುತ್ತಿದೆ.
ಎ. 27ರಂದು ನಗರದಲ್ಲಿ ಕಾರ್ಯಕ್ರಮ ನಡೆಸಿದ ಬಳಿಕ ನಗರದಲ್ಲಿ ಸೀಫುಡ್ ಸೇವಿಸಿ, ಗಡ್‌ಬಡ್, ತಿರಮಿಸು ಐಸ್‌ಕ್ರೀಂ ಕೂಡ ಸವಿದ ರಾಹುಲ್ ಗಾಂಧಿ ಅವರು ನಗರದ ಖಾಸಗಿ ಹೊಟೇಲ್‌ನಲ್ಲಿ ತಂಗಿದ್ದರು. ಯಾವುದೇ ಅಧಿಕೃತ ಸಭೆ, ಸಮಾಲೋಚನೆ ಇರಲಿಲ್ಲ. ಶುಕ್ರವಾರ ಬೆಳಗ್ಗೆ ಅವರು
ಕಲಬುರಗಿಗೆ ತೆರಳಿದರು.
ಮೇ 7: ಮೂಲ್ಕಿಯಲ್ಲಿ ಪ್ರಿಯಾಂಕಾ ಪ್ರಚಾರ?

ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು
ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ
Udupi: ಸಹಕಾರ ಕ್ಷೇತ್ರ ಪಠ್ಯವಾಗಲಿ: ಡಾ| ಎಂ.ಎನ್.ಆರ್.
Naxal ಎನ್‌ಕೌಂಟರ್ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?
Hebri: ಎನ್‌ಕೌಂಟರ್ ತನಿಖೆ ನಡೆಸುವ ಹೆಬ್ರಿ ಪೊಲೀಸ್ ಠಾಣೆ ಇಲ್ಲಗಳ ಆಗರ!
MUST WATCH
ಹೊಸ ಸೇರ್ಪಡೆ
Road Mishap: ಶಬರಿಮಲೆ ಯಾತ್ರಿಕರಿದ್ದ ಬಸ್ ಡಿಕ್ಕಿ: ಮೊಪೆಡ್ ಸವಾರ ಸಾವು
Madhu Bangarappa ; ಟ್ರೋಲ್ ಗಳಿಗೆ ಬಗ್ಗಲ್ಲ.. ಕಿಡಿ ಕಿಡಿಯಾದ ಶಿಕ್ಷಣ ಸಚಿವ!
Vijayapura: 22 ಲಕ್ಷ ರೂ.ಮೌಲ್ಯದ ಗಾಂಜಾ ಜಪ್ತಿ, 2 ಕಾರು ವಶಕ್ಕೆ ಪಡೆದ ಪೊಲೀಸರು
IFFI 2024;ರಾಜಕೀಯ ಕಾರಣಗಳಿಂದಲೇ ಸಾವರ್ಕರ್‌ಗೆ ಸಿಗಬೇಕಾದ ಮನ್ನಣೆ ಸಿಕ್ಕಿಲ್ಲ:ರಣದೀಪ್ ಹೂಡಾ
Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.