![DKSHi-4](https://www.udayavani.com/wp-content/uploads/2025/02/DKSHi-4-415x234.jpg)
![DKSHi-4](https://www.udayavani.com/wp-content/uploads/2025/02/DKSHi-4-415x234.jpg)
Team Udayavani, Jan 25, 2021, 1:48 PM IST
ಬೆಂಗಳೂರು: ಮೆಡಿಕಲ್ ಸೀಟು ಕೊಡಿಸುವ ನೆಪದಲ್ಲಿ ವಂಚಿಸುವ ಜಾಲ ಮತ್ತೆ ಸಕ್ರಿಯಗೊಂಡಿದ್ದು, ಸೀಟು ಕೊಡಿಸುವುದಾಗಿ ಇಬ್ಬರು ವಿದ್ಯಾರ್ಥಿಗಳ ಪೋಷಕರಿಂದ ಹತ್ತು ಲಕ್ಷ ರೂ.ಗಳಿಗೂ ಅಧಿಕ ಪಡೆದು ವಂಚಿಸಿರುವುದು ಬಯಲಾಗಿದೆ.
ಈ ಕುರಿತು ವಂಚನೆಗೊಳಗಾದ ನವ್ಯಾ ಎಂಬುವವರು ಅಶೋಕ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದು, ಆನಂದ್‌ರಾವ್,
ಮಧುಶಾ, ವಿನುತಾ ಎಂಬುವವರ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಮೈಸೂರು ಮೂಲದ ವಿನುತಾ ಅವರ ಮಗನಿಗೆ ನೀಟ್ ಪರೀಕ್ಷೆಯಲ್ಲಿ ರ್‍ಯಾಂಕಿಂಗ್ ಬರದಿದ್ದರಿಂದ ಸರ್ಕಾರಿ ಸೀಟು ಸಿಕ್ಕಿರಲಿಲ್ಲ. ಈ ಮಧ್ಯೆ ವಿನುತಾ ಅವರ ಮೊಬೈಲ್‌ಗೆ ಸಂದೇಶ ಬಂದಿದ್ದು http://www.netcounselling.com/ ಮೆಡಿಕಲ್ ಸೀಟ್
ಗೆ ಸಂಬಂಧಿಸಿದಂತೆ ಸಂಪರ್ಕಿಸಲು ಕೋರಲಾಗಿತ್ತು.
ಅದರಲ್ಲಿ ರೆಸಿಡೆನ್ಸಿ ರಸ್ತೆಯ ಕಚೇರಿಯ ವಿಳಾಸದ ಲೊಕೇಶನ್ ಕೂಡ ಕಳುಹಿಸಲಾಗಿತ್ತು.
ಅದನ್ನು ನಂಬಿದ ನವ್ಯಾ ಅವರು ಮಗನನ್ನು ಕರೆದುಕೊಂಡು ನೆಟ್‌ಕೌನ್ಸೆಲಿಂಗ್ ಡಾ.ಕಾಮ್ ಕಚೇರಿಗೆ ಬಂದಾಗ ಅವರನ್ನು ಪರಿಚಯಿಸಿಕೊಂಡಿದ್ದ ಮಧುಶಾ, ವಿನುತಾ, ಆನಂದ್ ರಾವ್ ಬಳಿ ಕರೆದೊಯ್ದಿದ್ದರು. ಈ ವೇಳೆ ಆತ ನಗರದ ಪ್ರತಿಷ್ಠಿತ
ಕಾಲೇಜಿನಲ್ಲಿ ಮೆಡಿಕಲ್ ಸೀಟು ಕೊಡಿಸುವುದಾಗಿ ನಂಬಿಸಿ ಮೊದಲು ನೋಂದಣಿ ಶುಲ್ಕವಾಗಿ 50 ಸಾವಿರ ರೂ. ಕಟ್ಟಿಸಿಕೊಂಡಿದ್ದರು. ಬಳಿಕ ಐದು ವರ್ಷಗಳ ಮೆಡಿಕಲ್ ಕೋರ್ಸ್‌ಗೆ 50 ಲಕ್ಷ ರೂ. ಎಂದು ತಿಳಿಸಿದ್ದರು.
ಇದನ್ನೂ ಓದಿ:ಬಜೆಟ್ ನಲ್ಲಿ ಮೈಸೂರು ಅಭಿವೃದ್ಧಿಗೆ ಒತ್ತು ಕೊಡಲು ಸಿಎಂ ಗಮನಕ್ಕೆ ತರುವೆ: ಸೋಮಶೇಖರ್
ಇದಾದ ಬಳಿಕ ಜ.4ಕ್ಕೆ ಪುನಃ ನವ್ಯಾ ಅವರು ಬಂದಾಗ 10 ಲಕ್ಷ ರೂ. ನಗದನ್ನು ಆರೋಪಿಗಳು ಪಡೆದುಕೊಂಡು ಜ.15ರಂದು ಖಾಸಗಿ ಕಾಲೇಜಿನ ಬಳಿ ಮಗನ ದಾಖಲಾತಿ ಮಾಡಲು ಬರುವಂತೆ ಸೂಚಿಸಿದ್ದರು. ಹೀಗಾಗಿ, ನವ್ಯಾ ಅವರು ಜ.15ರಂದು ಕಾಲೇಜಿನ ಬಳಿ ವಿಚಾರಿಸಿದಾಗ ಯಾವುದೇ ಸೀಟ್ ನೀಡಲಾಗಿಲ್ಲ ಎಂದು ತಿಳಿಸಿದ್ದಾರೆ. ಮಧುಶಾ ಅವರ ಮೊಬೈಲ್ ಸ್ವಿಚ್‌ಆಫ್ ಆಗಿತ್ತು. ಇದರಿಂದ ಅನುಮಾನಗೊಂಡ ನವ್ಯಾ ಅವರು ರೆಸಿಡೆನ್ಸಿ ರಸ್ತೆಯಲ್ಲಿರುವ ನೆಟ್‌ಕೌನ್ಸಿಲಿಂಗ್ ಕಚೇರಿ ಬಳಿ ಬಂದಾಗ ಕಚೇರಿಯೂ ಖಾಲಿಯಾಗಿರುವುದು ಗೊತ್ತಾಗಿದೆ. ಬಳಿಕ ತಾವು ಮೋಸಹೋಗಿದ್ದೇವೆ ಎಂದು ಅರಿತು ದೂರು ನೀಡಿದ್ದಾರೆ ಎಂದು
ಪೊಲೀಸರು ತಿಳಿಸಿದರು.
4 ಲಕ್ಷ ರೂ. ಪಡೆದು ವಂಚನೆ!: ಇನ್ನೊಂದು ಪ್ರಕರಣದಲ್ಲಿ ತಮ್ಮ ಮಗಳಿಗೆ ಮೆಡಿಕಲ್ ಸೀಟು ಕೊಡಿಸುವುದಾಗಿ ನಂಬಿಸಿ 4 ಲಕ್ಷ ರೂ. ಪಡೆದು ವಂಚಿಸಿದ್ದಾರೆ ಎಂದು ಪೂರ್ಣಿಮಾ ಎಂಬುವವರು ಪ್ರತ್ಯೇಕ ದೂರು ದಾಖಲಿಸಿದ್ದಾರೆ.
ಹೈಫೈ ಎಂಬೆಸ್ಟಿಯಾ ಕಂಪನಿ ಹೆಸರಿನಲ್ಲಿ ಕರೆ ಮಾಡಿದ್ದ ಪ್ರತೀಕ್ಷಾ, ಭರತ್, ಕಿಶೋರ್ ಎಂಬುವವರು ಮಗಳಿಗೆ ಸೀಟು ಕೊಡಿಸುತ್ತೇವೆ ಎಂದು ನಂಬಿಸಿ ಅಡ್ವಾನ್ಸ್ ರೂಪದಲ್ಲಿ 4ಲಕ್ಷ ರೂ. ಪಡೆದಿದ್ದರು. ಬಳಿಕ ಜ.18ರಿಂದ ಕರೆ ಸ್ವೀಕರಿಸದೇ ವಂಚಿಸಿ
ದ್ದಾರೆ ಎಂದು ಪೂರ್ಣಿಮಾ ದೂರಿದ್ದಾರೆ. ಎರಡೂ ಪ್ರಕರಣಗಳ ಸಂಬಂಧ ತನಿಖೆ ಮುಂದುವರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ
Ramanagara: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ; ತಪ್ಪಿದ ಭಾರೀ ದುರಂತ
Bengaluru: 9 ವರ್ಷದಿಂದ ತಪ್ಪಿಸಿಕೊಂಡಿದ್ದ ಆರೋಪಿ ಪತ್ತೆಗೆ ಸುಳಿವು ನೀಡಿದ ಇನ್ಸ್ಟಾಗ್ರಾಮ್
Water Resource: ನನ್ನ ಜೀವಿತಾವಧಿಯಲ್ಲೇ ನೀರಿನ ಸಮಸ್ಯೆ ಬಗೆಹರಿಯಬೇಕು: ಎಚ್.ಡಿ.ದೇವೇಗೌಡ
Congress Siddu Team: ಸಿದ್ದರಾಮಯ್ಯ ಆಪ್ತರಿಂದ ಈಗ ʼಮಾಸ್ ಲೀಡರ್ʼ ಅಸ್ತ್ರ
You seem to have an Ad Blocker on.
To continue reading, please turn it off or whitelist Udayavani.