ಪಾದಯಾತ್ರೆ ಕೊನೆಯ ದಿನ: ಹೋರಾಟದ ಕಿಚ್ಚು ಬಿಜೆಪಿಗೆ ಪಾಠ ಕಲಿಸಲಿದೆ; ಕಾಂಗ್ರೆಸ್
Team Udayavani, Mar 3, 2022, 12:19 PM IST
Mekedatu Padayatra, last day, Bengaluru,ಪಾದಯಾತ್ರೆ, ಕೊನೆಯ ದಿನ, ಹೋರಾಟದ ಕಿಚ್ಚು, ಬಿಜೆಪಿ, ಪಾಠ, ಕಾಂಗ್ರೆಸ್
ಬೆಂಗಳೂರು: ಮೇಕೆದಾಟು 2.0 ಪಾದಯಾತ್ರೆ ಯ ಅಂತಿಮ ದಿನವಾದ ಗುರುವಾರ ಬೆಂಗಳೂರಿನಲ್ಲಿ ಭಾರಿ ಜನ ಬೆಂಬಲ ವ್ಯಕ್ತವಾಗಿದ್ದು,ಬೆಳಗ್ಗೆ ಮೇಖ್ರಿ ಸರ್ಕಲ್ ನಿಂದ ಪಾದಯಾತ್ರೆ ಆರಂಭವಾಗಿದ್ದು, ಸಾವಿರಾರು ಮಂದಿ ಭಾಗಿಯಾಗಿದ್ದಾರೆ.
ಮೇಕೆದಾಟು 2.0 ಪಾದಯಾತ್ರೆಯ ಅಂತಿಮ ದಿನ ಇಡೀ ಬೆಂಗಳೂರು ನಮ್ಮೊಂದಿಗೆ ಹೆಜ್ಜೆ ಹಾಕುತ್ತಿದೆ. ಈ ಪಾದಯಾತ್ರೆ ಹಾಗೂ ಹೋರಾಟದ ಕಿಚ್ಚು ಭ್ರಷ್ಟ ಹಾಗೂ ಮೇಕೆದಾಟು ಯೋಜನೆ ಅನುಷ್ಠಾನಗೊಳಿಸಲು ವಿಳಂಬ ನೀತಿ ಅನುಸರಿಸುತ್ತಿರುವ ಬಿಜೆಪಿಗೆ ತಕ್ಕ ಪಾಠ ಕಲಿಸಲಿದೆ. ಮೇಕೆದಾಟು ನಮ್ಮ ಹಕ್ಕು ಇದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ! ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.
ಇಕ್ಬಾಲ್ ಮೈದಾನ ಚಾಮರಾಜಪೇಟೆಯಲ್ಲಿ ಮಧ್ಯಾಹ್ನದ ಭೋಜನ ವಿರಾಮದ ಬಳಿಕ ಸಂಜೆ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಬೃಹತ್ ಸಮಾವೇಶದ ಮೂಲಕ ಇಂದಿನ ಪಾದಯಾತ್ರೆ ಮುಕ್ತಾಯಗೊಳ್ಳಲಿದೆ. ಕಾಂಗ್ರೆಸ್ ನ ಹಿರಿಯ ನಾಯಕರು ಭಾಗಿಯಾಗಲಿದ್ದಾರೆ.
ಇದನ್ನೂ ಓದಿ :ಅಧಿಕಾರದಲ್ಲಿದ್ದಾಗ ಅಸಹಾಯಕತೆ ತೋರಿದವರೀಗ ಪಾದಯಾತ್ರೆಗೆ ಹೊರಟಿದ್ದಾರೆ: ಸುನೀಲ್ ಕುಮಾರ್
ಪಾದಯಾತ್ರೆ ಹಿನ್ನಲೆಯಲ್ಲಿ ಹಲವೆಡೆ ಟ್ರಾಫಿಕ್ ಸಮಸ್ಯೆ ಉಂಟಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.