ಸ್ಮರಣೀಯ ಇನ್ನಿಂಗ್ಸ್ : ಯಶಸ್ವಿ ಜೈಸ್ವಾಲ್
Team Udayavani, May 13, 2023, 7:17 AM IST
ಕೋಲ್ಕತಾ: ಅತೀ ಕಡಿಮೆ 13 ಎಸೆತಗಳಲ್ಲಿ ಅರ್ಧ ಶತಕ, ಇನ್ನಿಂಗ್ಸ್‌ನ ಮೊದಲ ಓವರ್‌ನಲ್ಲೇ ಸರ್ವಾಧಿಕ 26 ರನ್, ಇನ್ನಿಂಗ್ಸ್‌ನ ಮೊದಲೆರಡು ಎಸೆತಗಳನ್ನೇ ಸಿಕ್ಸರ್‌ಗೆ ಬಡಿದಟ್ಟಿದ ಪರಾಕ್ರಮ… ರಾಜಸ್ಥಾನ್ ರಾಯಲ್ಸ್ ಎಡಗೈ ಆರಂಭಕಾರ ಯಶಸ್ವಿ ಜೈಸ್ವಾಲ್ ಗುರುವಾರ ರಾತ್ರಿ “ಈಡನ್ ಗಾರ್ಡನ್ಸ್”ನಲ್ಲಿ ತೋರ್ಪಡಿಸಿದ ಬ್ಯಾಟಿಂಗ್ ಸಾಹಸ ಒಂದೇ… ಎರಡೇ!
ಆದರೆ ಜೈಸ್ವಾಲ್‌ಗೆ ಮಿಸ್ ಆದದ್ದು ಒಂದೇ, ಅದು ಸೆಂಚುರಿ. ಇದು ಕೇವಲ 2 ರನ್ನಿನಿಂದ ಕೈತಪ್ಪಿತು. ರಾಜಸ್ಥಾನ್ ತಂಡದ 9 ವಿಕೆಟ್ ಜಯಭೇರಿಯ ವೇಳೆ ಜೈಸ್ವಾಲ್ 98 ರನ್ ಬಾರಿಸಿ ಅಜೇಯರಾಗಿ ಉಳಿದಿದ್ದರು. 47 ಎಸೆತಗಳ ಈ ಸ್ಫೋಟಕ ಇನ್ನಿಂಗ್ಸ್ ವೇಳೆ 13 ಫೋರ್ ಹಾಗೂ 5 ಸಿಕ್ಸರ್ ಸಿಡಿಯಲ್ಪಟ್ಟಿತು. ಈ ಸಾಧನೆಗಾಗಿ ಪಂದ್ಯಶ್ರೇಷ್ಠ ಪ್ರಶಸ್ತಿ ಒಲಿದು ಬಂತು.
“ನಾನು ಶತಕದ ಬಗ್ಗೆ ಯೋಚಿಸಲೇ ಇಲ್ಲ. ರನ್‌ರೇಟ್ ಏರಿಸುವುದಷ್ಟೇ ನನ್ನ ಉದ್ದೇಶವಾಗಿತ್ತು. ನಾನು ಮತ್ತು ಸಂಜು ಬ್ರದರ್ ಪಂದ್ಯವನ್ನು ಬೇಗನೇ ಕುಗಿಸುವ ಕುರಿತು ಮಾತಾಡಿಕೊಳ್ಳುತ್ತಿದ್ದೆವು. ಇಂದಿನ ಆಟ, ಅನುಭವ ಅದ್ಭುತವಾಗಿದೆ. ಎಲ್ಲವೂ ನಾನಂದುಕೊಂಡಂತೆಯೇ ನಡೆಯಿತು ಅಂದಲ್ಲ. ಇಂಥ ಆಟಕ್ಕಾಗಿ ಉತ್ತಮ ಸಿದ್ಧತೆ ನಡೆಸಿದ್ದೆ, ನನ್ನ ಮೇಲೆ ನಂಬಿಕೆ ಹೊಂದಿದ್ದೆ. ಇದು ಉತ್ತಮ ಫಲಿತಾಂಶವನ್ನು ತಂದು ಕೊಟ್ಟಿದೆ” ಎಂದು ಮೂಲತಃ ಮುಂಬಯಿ ಆಟಗಾರನಾಗಿರುವ ಯಶಸ್ವಿ ಜೈಸ್ವಾಲ್ ಹೇಳಿದರು.
“ಇದು ಬಹಳ ಕಾಲದ ತನಕ ನೆನಪಿನಲ್ಲಿ ಉಳಿಯುವ ಇನ್ನಿಂಗ್ಸ್. ಹೀಗಾಗಿ ಇದೇ ರೀತಿಯ ಆಟವನ್ನು ನಾನು ಮುಂದುವರಿಸಲು ಬಯಸುತ್ತೇನೆ. ಪ್ರತಿಯೊಂದು ಇನ್ನಿಂಗ್ಸ್ ಕೂಡ ಒಂದು ಪಾಠ…” ಎಂಬುದಾಗಿ 21 ವರ್ಷದ ಜೈಸ್ವಾಲ್ ಪ್ರತಿಕ್ರಿಯಿಸಿದ್ದಾರೆ.
“ನನ್ನ ಸುತ್ತ ಲೆಜೆಂಡ್ರಿ ಕ್ರಿಕೆಟಿಗರ ಒಂದು ತಂಡವೇ ಇದೆ. ಬಟ್ಲರ್, ಧೋನಿ, ಕೊಹ್ಲಿ, ಸ್ಯಾಮ್ಸನ್… ಹೀಗೆ. ಇವರೆಲ್ಲರಿಂದಲೂ ನಾನು ಕಲಿಯಲು ಸಾಕಷ್ಟಿದೆ. ಎಲ್ಲದಕ್ಕೂ ಮೊದಲು ಮಾನಸಿಕವಾಗಿ ಸಜ್ಜುಗೊಳ್ಳಬೇಕು” ಎಂದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.