Karnataka Election 2023: ಎಂ 3 ಮತಯಂತ್ರ ಈ ಬಾರಿಯ ವಿಶೇಷ
Team Udayavani, Apr 5, 2023, 8:30 AM IST
ಮಂಗಳೂರು: ಈ ಬಾರಿ ಮತದಾರರು ಹೊಸದಾದ ಎಂ-3 (ಮಾರ್ಕ್-3) ಮತಯಂತ್ರಗಳಲ್ಲಿ ಮತಹಾಕಬಹುದು. ಹಿಂದಿನ ಬಿಇಎಲ್ ಉತ್ಪಾದಿತ ಮತಯಂತ್ರಗಳ ಬದಲಿಗೆ ಹೈದರಾಬಾದ್‌ನ ಎಲೆಕ್ಟ್ರಾನಿಕ್ಸ್ ಕಾರ್ಪೊ ರೇಷನ್ ಆಫ್ ಇಂಡಿಯಾ ಲಿ. ಸಂಸ್ಥೆಯವರು ಉತ್ಪಾದಿ ಸಿರುವ ನೂತನ ಮಾರ್ಕ್ 3 ಮತಯಂತ್ರಗಳನ್ನು ತರಿಸಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಗೆ ಒಟ್ಟು 3,687 ಮತದಾನ ಘಟಕ, 2,587 ನಿಯಂತ್ರಣ ಘಟಕ ಹಾಗೂ 2,790 ವಿವಿಪಾಟ್‌ಗಳು ಆಗಮಿಸಿದ್ದು, ಅವುಗಳನ್ನು ಭದ್ರತಾ ಕೊಠಡಿಯಲ್ಲಿ ಈಗಾಗಲೇ ಇರಿಸಲಾಗಿದೆ. ಅಲ್ಲದೇ ಅವುಗಳ ಪ್ರಥಮ ಹಂತದ ತಪಾಸಣೆಯನ್ನೂ ಕೈಗೊಳ್ಳಲಾಗಿದೆ.
ಮೊದಲ ರ್‍ಯಾಂಡಮೈಸೇಶನ್ ಆದ ಕೂಡಲೇ ಈ ಮತಯಂತ್ರಗಳನ್ನು ಚುನಾವಣಾಧಿಕಾರಿಗಳಿಗೆ ಹಸ್ತಾಂತರಿಸಿ ಮುಂದಿನ ಮತದಾನ ಪ್ರಕ್ರಿಯೆ ನಡೆಯುತ್ತದೆ. ಒಟ್ಟು 1,680 ಮತಗಟ್ಟೆಗಳು ಜಿಲ್ಲೆಯಲ್ಲಿವೆ. ಒಂದು ಮತಯಂತ್ರದಲ್ಲಿ ನೋಟಾ ಸೇರಿ 16 ಅಭ್ಯರ್ಥಿಗಳ ಹೆಸರು ಹಾಕಬಹುದು, ಹೆಚ್ಚು ಅಭ್ಯರ್ಥಿಗಳಿದ್ದರೆ ಹೆಚ್ಚುವರಿ ಮತದಾನ ಘಟಕಗಳನ್ನು ಅಳವಡಿಸಬೇಕಾಗುತ್ತದೆ.
ಪ್ರಯೋಜನಗಳೇನು?
ಹೊಸ ಮತಯಂತ್ರಗಳ ಪ್ರಯೋಜನವೆಂದರೆ ಇವು ಹಗುರ ಹಾಗೂ ತೆಳುವಾಗಿವೆ. ಅತ್ಯಾಧುನಿಕ ತಂತ್ರಜ್ಞಾನ ಬಳಸಿ ತಯಾರಿಸಲಾಗಿವೆ.
ಹಿಂದಿನ ಮತಯಂತ್ರಗಳಲ್ಲಿ ಒಂದು ಕಂಟ್ರೋಲ್ ಯುನಿಟ್‌ಗೆ 4 ಬ್ಯಾಲಟ್ ಯುನಿಟ್‌ಗಳನ್ನಷ್ಟೇ ಜೋಡಿಸಲು ಸಾಧ್ಯವಿತ್ತು. ಈಗಿನ ಯಂತ್ರದಲ್ಲಿ 24 ಬ್ಯಾಲಟ್ ಯುನಿಟ್ ಜೋಡಿಸಬಹುದು. ಹೀಗಾಗಿ 384 ಅಭ್ಯರ್ಥಿಗಳಿದ್ದರೂ ಇದರಲ್ಲಿ ಸಂಭಾಳಿಸಬಹುದು.
ಎಂ-3 ಕಂಟ್ರೋಲ್ ಯುನಿಟ್‌ನಲ್ಲಿ ಬ್ಯಾಟರಿ ಬಾಕಿ ಪ್ರಮಾಣ ನಿರಂತರವಾಗಿ ತೋರಿಸುತ್ತದೆ. ಇದರಿಂದಾಗಿ ಬ್ಯಾಟರಿ ಮುಗಿಯುವ ಮುನ್ನ ಮತಗಟ್ಟೆ ಅಧಿ ಕಾರಿಯು ಬೇರೆ ಬ್ಯಾಟರಿ ನೀಡುವಂತೆ ಕೇಳಿಕೊಂಡು ಮತದಾನ ಪ್ರಕ್ರಿಯೆ ಅಡ್ಡಿಯಾಗದಂತೆ ನಿರ್ವಹಿಸಬಹುದು.
ಸ್ವಯಂ ಪರಿಶೀಲನೆ
ಈ ಇವಿಎಂಗಳು ಪ್ರತಿಬಾರಿ ಸ್ವಿಚ್ ಆನ್ ಮಾಡಿದಾಗಲೂ ತನ್ನ ಘಟಕಗಳ ಸ್ಥಿತಿಯನ್ನು ಸ್ವಯಂ ಪರಿಶೀಲನೆ ಮಾಡುತ್ತವೆ. ಇದರಿಂದಾಗಿ ಇವಿಎಂ, ವಿವಿಪಾಟ್‌ಗಳು ಮತದಾನ ಶುರುವಾಗುವ ಮೊದಲೇ ಸರಿಯಿದೆಯೇ ಎನ್ನುವುದನ್ನು ತಿಳಿಯಲು ಸಾಧ್ಯ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನೆಲೋಗಿ….: ಒಂದೇ ಊರಿನ ಇಬ್ಬರು ಈಗ ಶಾಸಕರು!
CM Post Crisis: ನಾನು ಈ ಪಕ್ಷ ಕಟ್ಟಿದ್ದೇನೆ..: ದೆಹಲಿಯಲ್ಲಿ ಗುಡುಗಿದ ಡಿಕೆ ಶಿವಕುಮಾರ್
ಸಿಎಂ ಆಯ್ಕೆಗೆ ಕಗ್ಗಂಟಾಗುತ್ತಿರುವುದು ಅಂದು ‘ರಾಹುಲ್ ಗಾಂಧಿ’ ಕೊಟ್ಟ ಆ ಒಂದು ಮಾತು!
ಚುನಾವಣಾ ರಾಜಕೀಯದಿಂದ ನಿವೃತ್ತನಾಗುತ್ತಿದ್ದೇನೆ: ರಮಾನಾಥ ರೈ ಘೋಷಣೆ
ಮುಖ್ಯಮಂತ್ರಿ ಆಯ್ಕೆ; ಅಮ್ಮ ಡಿಕೆಶಿ ಪರ, ಮಗ ಸಿದ್ದು ಪರ: ಬಿಕ್ಕಟ್ಟಿಗೆ ಹೈಕಮಾಂಡ್ ಕಾರಣವೇ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ
Hysteroscopy: ಸಂತಾನಹೀನತೆಯ ಪತ್ತೆ ಮತ್ತು ಚಿಕಿತ್ಸೆಗೆ ಒಂದು ಅತ್ಯವಶ್ಯಕ ಕಾರ್ಯವಿಧಾನ
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಅವಹೇಳನಕಾರಿ ಪದಬಳಕೆ: ಪ್ರಸಾದ್ ರಾಜ್ ಕಾಂಚನ್ ಖಂಡನೆ
Puttur: ತೆಂಕಿಲದಲ್ಲಿ ರಿಕ್ಷಾ ಅಪಘಾತ: ಚಾಲಕ ಸಾವು
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.