ವಿಧಾನ-ಕದನ 2023: ಎಷ್ಟು ಸರ್ವೆ ಮುಗಿಸಿದರೂ ಅಳತೆಗೆ ಸಿಗದು


Team Udayavani, Mar 31, 2023, 7:54 AM IST

bjp cong election fight

ಕಳೆದ ಚುನಾವಣೆಯಲ್ಲಿ ಉಭಯ ಜಿಲ್ಲೆಯ 13 ಸ್ಥಾನಗಳಲ್ಲಿ 12 ರಲ್ಲಿ ಬಿಜೆಪಿ ಗೆದ್ದಿತ್ತು. ಅದಕ್ಕೆ ಹಲವು ಕಾರಣಗಳಿದ್ದವು. ಐದು ವರ್ಷಗಳಲ್ಲಿ ನೇತ್ರಾವತಿ,ಕುಮಾರಧಾರಾ, ಪಯಸ್ವಿನಿ, ಸೌಪರ್ಣಿಕಾ, ಸ್ವರ್ಣಾ, ಫ‌ಲ್ಗುಣಿ ನದಿಗಳಲ್ಲೂ ಸಾಕಷ್ಟು ನೀರು ಹರಿದು ವಾತಾವರಣ ಭಿನ್ನವಾಗಿದೆ. ಬಿಜೆಪಿಯು ಎಲ್ಲ ಕ್ಷೇತ್ರಗಳನ್ನೂ ಗೆದ್ದು ಕಾಂಗ್ರೆಸ್‌ ಮುಕ್ತ ಕರಾವಳಿ ಮಾಡಬೇಕೆಂದಿದೆ. ಕಾಂಗ್ರೆಸ್‌ ಮತ್ತೆ ತನ್ನ ಶಕ್ರಿ ಪ್ರದರ್ಶನ ಮಾಡಿ ಪುಟಿದೇಳಬೇಕೆಂದಿದೆ. ಸದ್ಯಕ್ಕೆ ಇವರಿಬ್ಬರ ಯುದ್ಧಕ್ಕೂ ಸೆಣಸಾಳುಗಳನ್ನು ಆರಿಸಿಕೊಳ್ಳುವುದಕ್ಕೆ ಸದ್ಯ ಆಂತರಿಕ ಸಮೀಕ್ಷೆಗಳೇ ಬುನಾದಿ. ಆ ಬಳಿಕ ಸ್ಟಾರ್‌ ಪ್ರಚಾರಕರ ಪ್ರಚಾರ, ಸರಣಿ ಸಭೆ, ಲೆಕ್ಕಾಚಾರ ಎಲ್ಲವೂ.

ಮಂಗಳೂರು: ವಿಧಾನಸಭಾ ಚುನಾವಣೆಯ ಕಣ ರಂಗೇರುತ್ತಿದ್ದಂತೆ ಮತದಾರರ ನಾಡಿಮಿಡಿತ ಅರಿಯಲು ಕಾಂಗ್ರೆಸ್‌ ಹಾಗೂ ಬಿಜೆಪಿ ಕರಾವಳಿಯ ಉಭಯ ಜಿಲ್ಲೆಗಳಲ್ಲೂ ಸಮೀಕ್ಷೆಯ ಮೊರೆ ಹೋಗಿದ್ದು, ಅದರ ತಾಜಾ ವರದಿಗಾಗಿ ಕಾಯುತ್ತಿವೆ.

ಕಾಂಗ್ರೆಸ್‌ ಪಕ್ಷವು ಆಂತರಿಕ ಪೈಪೋಟಿ ಕಡಿಮೆ ಇರುವಲ್ಲಿ ಹಾಗೂ ಕೆಲವು ಅಂಶಗಳನ್ನು ಆಧರಿಸಿ ಪ್ರಥಮ ಪಟ್ಟಿ ಬಿಡುಗಡೆ ಮಾಡಿದೆ. ಅವುಗಳಲ್ಲಿ ದಕ್ಷಿಣ ಕನ್ನಡ 5 ಹಾಗೂ ಉಡುಪಿ ಜಿಲ್ಲೆಯ 3 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದೆ. ಬಿಜೆಪಿ ಪಟ್ಟಿ ಇನ್ನೂ ಬಿಡುಗಡೆಯಾಗಿಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಪ್ರಕಾರ ಎಪ್ರಿಲ್‌ ಮೊದಲ ವಾರದಲ್ಲಿ ಬಿಡುಗಡೆಯಾಗಲಿದೆ.

ಕಾಂಗ್ರೆಸ್‌ ಪಕ್ಷವೂ ಉಳಿದ ಐದು ಕ್ಷೇತ್ರಗಳ ಅಭ್ಯರ್ಥಿಗಳ ಘೋಷಣೆಗೆ ಲೆಕ್ಕಾಚಾರ ಹಾಕುತ್ತಿದೆ. ಕಾರ್ಕಳ, ಉಡುಪಿ, ಪುತ್ತೂರು, ಮಂಗಳೂರು ದಕ್ಷಿಣ, ಮಂಗಳೂರು ಉತ್ತರಕ್ಕೆ ಅಭ್ಯರ್ಥಿಗಳನ್ನು ಘೋಷಿಸಬೇಕಿದೆ. ಬಿಜೆಪಿ ಯ ಕಾರ್ಯತಂತ್ರವನ್ನೂ ಗಮನಿಸಿ ನಿರ್ಧರಿಸಲಿದೆ.

ವಾಸ್ತವವಾಗಿ ಬಿಜೆಪಿ ಗೆ ಒತ್ತಡ ಹೆಚ್ಚಿದ್ದು, ಉಭಯ ಜಿಲ್ಲೆಗಳಲ್ಲಿ ಈ ಹಿಂದಿನ ಚುನಾವಣೆಯಲ್ಲಿ ಗಳಿಸಿರುವ 13 ರಲ್ಲಿ 12 ಕ್ಷೇತ್ರಗಳನ್ನು ಉಳಿಸಿಕೊಳ್ಳುವುದರ ಜತೆಗೆ ಮತ್ತೂಂದು ಕ್ಷೇತ್ರವನ್ನೂ ಗೆಲ್ಲಬೇಕೆಂಬ ಒತ್ತಡದಲ್ಲಿದೆ. ಅದಕ್ಕಿಂತಲೂ ಹೆಚ್ಚಾಗಿ, ಅಧಿಕಾರಕ್ಕೆ ಬರಲು ಒಂದೊಂದೂ ಕ್ಷೇತ್ರವೂ ಮುಖ್ಯ. ಹಾಗಾಗಿ ಕ್ಷೇತ್ರಗಳ ಸಂಖ್ಯೆ ಕಡಿಮೆಯಾದರೆ ಬಹುಮತ ತಲುಪಲು ಕಷ್ಟವಾಗಬಹುದು. ಆದ ಕಾರಣ ಪ್ರತಿ ಅಂಶಗಳನ್ನೂ ಲೆಕ್ಕ ಹಾಕುತ್ತಿದೆ. ಯಾವುದೋ ಸಣ್ಣದೆನಿಸುವ ಅಂಶಗಳ ಕಾರಣಕ್ಕೆ ತಮ್ಮ ಪರ ಇರುವ ಅನು ಕೂಲಕರ ವಾತಾವರಣದ ಪ್ರಯೋಜನವನ್ನು ಕಳೆದುಕೊಳ್ಳಬಾರದೆಂಬುದು ಬಿಜೆಪಿಯ ಲೆಕ್ಕಾಚಾರ. ಆದ ಕಾರಣ ಪಟ್ಟಿಯೂ ವಿಳಂಬವಾಗುತ್ತಿದೆ. ಈ ದಿಸೆಯಲ್ಲಿ ಸಮೀಕ್ಷೆಯಲ್ಲಿನ ಅಂಶಗಳು ಮಹತ್ವ ಪಡೆಯಲಿವೆ.

ಬಿಜೆಪಿ
ಬಿಜೆಪಿಯಲ್ಲಿ ಹಾಲಿ ಶಾಸಕರ ಬದಲಾವಣೆ ಮಾಡಬೇಕಾ? ಎಂಬ ಬಗ್ಗೆ ಒಂದು ಸುತ್ತಿನ ಸಮೀಕ್ಷೆ ನಡೆದು ವರದಿ ಹೈಕಮಾಂಡ್‌ ಕೈಯಲ್ಲಿದೆ. ಒಂದು ವೇಳೆ ಅವರಿಗೆ ಮತ್ತೆ ಸೀಟು ನೀಡಿದರೆ ಗೆಲ್ಲುವ ಪ್ರಮಾಣ ಎಷ್ಟು?ಎದುರಾಳಿಗಳ ಲೆಕ್ಕಾಚಾರ, ಜಾತಿವಾರು ತಂತ್ರ ಎಲ್ಲವನ್ನೂ ಚರ್ಚಿಸಲಾಗುತ್ತಿದೆ. ಟಿಕೆಟ್‌ ಹಂಚಿಕೆ ಸಂದರ್ಭ ಸಮೀಕ್ಷೆಯ ಅಂಶಗಳು ಪರಿಗಣಿತವಾಗು ವುದರಿಂದ ಆಕಾಂಕ್ಷಿಗಳಲ್ಲಿ ತಳಮಳ ಆರಂಭವಾಗಿದೆ.

ಕಾಂಗ್ರೆಸ್‌
ವಿಧಾನಸಭಾವಾರು ಟ್ರೆಂಡ್‌ ಅರಿಯಲು ಹಾಗೂ ಸಂಭವನೀಯ ಅಭ್ಯರ್ಥಿಗಳ ಪರ ಇರಬಹುದಾದ ಧನಾತ್ಮಕ ಅಂಶಗಳನ್ನು ತಿಳಿಯಲು ಕಾಂಗ್ರೆಸ್‌ ಸಹ ಒಂದು ಸಮೀಕ್ಷೆ ನಡೆಸಿತ್ತು. ಇತರ ಲಾಭ-ನಷ್ಟಗಳು ಯಾವುವು? ಎಂಬ ಬಗ್ಗೆಯೂ ಪಟ್ಟಿ ಮಾಡಲಾಗಿದೆ. ಈ ಆಧಾರದಲ್ಲೇ ಬೆಳ್ತಂಗಡಿ ಮತ್ತು ಕುಂದಾಪುರದಲ್ಲಿ ಹೊಸಬರಿಗೆ ಅವಕಾಶ ನೀಡಲಾಯಿತು. ಮಂಗಳೂರು ದಕ್ಷಿಣದಲ್ಲಿ ಹೊಸ ಮುಖದ ಸಾಧ್ಯತೆಯ ಬಗ್ಗೆಯೂ ಸಮೀಕ್ಷೆ ಉಲ್ಲೇಖೀಸಿದೆ ಎನ್ನಲಾಗಿದೆ.

ಈಗಾಗಲೇ ಚುನಾವಣೆ ದಿನಾಂಕ ಘೋಷಣೆ ಯಾಗಿದ್ದು, ಇನ್ನೊಂದು ವಾರದೊಳಗೆ ಕಣ ಚಿತ್ರಣ ಇನ್ನಷ್ಟು ಸ್ಪಷ್ಟವಾಗಲಿದೆ.

ಯಾರಿಗೂ ಗೊತ್ತಿಲ್ಲ!
ಆಂತರಿಕ ಸಮೀಕ್ಷೆ ಮಾಡುವಾಗ ಪಕ್ಷದ ಪ್ರಮುಖರಿಗೂ ಮಾಹಿತಿ ಇರದು. ಸಮೀಕ್ಷಕರೂ ಸಹ ಜನ ಸಾಮಾನ್ಯರು, ಸಾಮಾನ್ಯ ಕಾರ್ಯಕರ್ತರನ್ನು ಮಾತನಾಡಿಸು ತ್ತಾರೆಯೇ ಹೊರತು ನಾಯಕರು ಮತ್ತು ಅವರ ಆಪ್ತರ ಬಳಿ ಸುಳಿಯು ವುದೇ ಇಲ್ಲ. ಈ ಮಧ್ಯೆ ಜಿಲ್ಲೆಯೊಳಗೇ ಮತ್ತೂಂದೂ ಸಮೀಕ್ಷೆ ನಡೆಸುವ ಪದ್ಧತಿಯೂ ಇದೆ. ಈ ಬಗ್ಗೆ ಎರಡೂ ಪಕ್ಷಗಳ ಮುಖಂಡರು, “ಅವುಗಳ ಬಗ್ಗೆ ನಮಗೆ ಗೊತ್ತಿಲ್ಲ. ಆದರೆ ನಮ್ಮ ಗೆಲುವಿಗೆ ಪೂರಕವಾದ ವಾತಾವರಣವಿದೆ” ಎನ್ನಲು ಮರೆಯುವುದಿಲ್ಲ.

ಖಾಸಗಿ ಏಜೆನ್ಸಿಗಳ ಮೂಲಕ ಕ್ಷೇತ್ರಗಳಲ್ಲಿನ ಸದ್ಯದ ಸ್ಥಿತಿಗತಿ, ಮತದಾರರ ಮನಃಸ್ಥಿತಿ, ಆಡಳಿತ ವಿರೋಧಿ ಅಲೆಯ ಲಾಭ-ನಷ್ಟ, ಹಾಲಿ ಕ್ಷೇತ್ರವನ್ನು ಪ್ರತಿನಿಧಿಸುವ ಶಾಸಕರ ಸಾಮರ್ಥ್ಯ ಮತ್ತು ದೌರ್ಬಲ್ಯ, ಜಾತಿ ಲೆಕ್ಕಾಚಾರ, ಮುಂಬರುವ ದಿನಗಳಲ್ಲಿ ಕ್ಷೇತ್ರಗಳಲ್ಲಿ ಮೇಲುಗೈ ಸಾಧಿಸಲು ಅನುಸರಿಸಬೇಕಾದ ಕಾರ್ಯತಂತ್ರಗಳ ಕುರಿತೂ ಸಮೀಕ್ಷೆಯಲ್ಲಿ ಪ್ರಸ್ತಾಪವಾಗಲಿವೆ. ಖಾಸಗಿ ಏಜೆನ್ಸಿಗಳು ರಾಜಕೀಯ ಆಳ-ಆಗಲವನ್ನು ಬಲ್ಲ ಮಾಧ್ಯಮ ಹಾಗೂ ರಾಜಕೀಯದ ಅನುಭವಿಗಳನ್ನು ಬಳಸಿ ತಮ್ಮದೇ ತಂಡಗಳನ್ನು ಈ ಕಾರ್ಯಕ್ಕೆ ಬಳಸುತ್ತಿವೆ. ಇದರಂತೆ ಕರಾವಳಿಯಾದ್ಯಂತ ಹಲವು ಮಂದಿಯನ್ನು ಭೇಟಿ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಸದ್ಯದ ಮಾಹಿತಿ ಪ್ರಕಾರ ಬಿಜೆಪಿ, ಕಾಂಗ್ರೆಸ್‌ ಎರಡು ಹಂತದ ಸಮೀಕ್ಷೆ ಮುಗಿಸಿವೆ. ಎರಡೂ ಹಂತದಲ್ಲಿ ಸಂಗ್ರಹಿಸಲಾದ ಮಾಹಿತಿಗಳು ರಹಸ್ಯವಾಗಿ ವರಿಷ್ಠರಿಗೆ ಸಲ್ಲಿಕೆಯಾಗಿದೆ. ಜತೆಗೆ ಜೆಡಿಎಸ್‌ ಕೂಡ ಒಂದು ಸುತ್ತಿನ ಆಂತರಿಕ ಸಮೀಕ್ಷೆ ಮುಗಿಸಿದೆ.

ಗುಪ್ತ ಸರ್ವೇಯೇ ಆಧಾರ
ಈ ಖಾಸಗಿ ಏಜೆನ್ಸಿಗಳ ಗುಪ್ತ ಸಮೀಕ್ಷೆಗಳಿಗೆ ಭಾರೀ ಬೇಡಿಕೆ ಇದೆ. ಪಕ್ಷದ ಪರ ವಾತಾವರಣ ಅನುಕೂಲವೋ, ಪ್ರತಿಕೂಲವೋ ಎಂಬುದನ್ನು ಅರಿಯಲು, ಟಿಕೆಟ್‌ ಆಕಾಂಕ್ಷಿಗಳ ಪ್ರಭಾವ ಅರಿಯಲೂ ಈ ಸರ್ವೆ ಅನುಕೂಲ. ಕಳೆದ ಚುನಾವಣೆಯಲ್ಲಿ ಬಿಜೆಪಿಯು ಬೆಳ್ತಂಗಡಿಯಲ್ಲಿ ಹೊಸಬ ರಿಗೆ ಅವಕಾಶ ನೀಡಲಿಕ್ಕೂ ಇಂಥ ದೊಂದು ಗುಪ್ತ ಸರ್ವೆ ವರದಿ ಕಾರಣವಾಗಿತ್ತಂತೆ.

~ ದಿನೇಶ್‌ ಇರಾ

ಟಾಪ್ ನ್ಯೂಸ್

BGT 24: ಕೆಎಲ್‌ ರಾಹುಲ್‌ ಔಟ್‌ ಅಥವಾ ನಾಟೌಟ್:‌ ಏನಿದು ವಿವಾದ? ಇಲ್ಲಿದೆ ಅಂಪೈರ್‌ ಉತ್ತರ

BGT 24: ಕೆಎಲ್‌ ರಾಹುಲ್‌ ಔಟ್‌ ಅಥವಾ ನಾಟೌಟ್:‌ ಏನಿದು ವಿವಾದ? ಇಲ್ಲಿದೆ ಅಂಪೈರ್‌ ಉತ್ತರ

11-elephant

Chikkamagaluru: ನಾವು ನಡೆದಿದ್ದೇ ದಾರಿ, ನಡಿ ಮಗಾ….ಮರಿ ಆನೆಗೆ ನಡೆಯಲು ಕಲಿಸಿದ ತಾಯಿ ಆನೆ

Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ

Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ

Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್‌; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ

Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್‌; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ

Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್

Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್

Sandalwood: ಮಾಸ್‌ ಸಿನಿಮಾಗಳಿಗ ಜೈ ಎಂದ ಪ್ರೇಕ್ಷಕ

Sandalwood: ಮಾಸ್‌ ಸಿನಿಮಾಗಳಿಗೆ ಜೈ ಎಂದ ಪ್ರೇಕ್ಷಕ

Canada-India Row: ಕೆನಡಾದ ಆಂತರಿಕ ವಿಚಾರದಲ್ಲಿ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ

Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನೆಲೋಗಿ….: ಒಂದೇ ಊರಿನ ಇಬ್ಬರು ಈಗ ಶಾಸಕರು!

ನೆಲೋಗಿ….: ಒಂದೇ ಊರಿನ ಇಬ್ಬರು ಈಗ ಶಾಸಕರು!

dk shivakumar

CM Post Crisis: ನಾನು ಈ ಪಕ್ಷ ಕಟ್ಟಿದ್ದೇನೆ..: ದೆಹಲಿಯಲ್ಲಿ ಗುಡುಗಿದ ಡಿಕೆ ಶಿವಕುಮಾರ್

dk shivakumar siddaramaiah rahul gandhi

ಸಿಎಂ ಆಯ್ಕೆಗೆ ಕಗ್ಗಂಟಾಗುತ್ತಿರುವುದು ಅಂದು ‘ರಾಹುಲ್ ಗಾಂಧಿ’ ಕೊಟ್ಟ ಆ ಒಂದು ಮಾತು!

Ramanath-rai

ಚುನಾವಣಾ ರಾಜಕೀಯದಿಂದ ನಿವೃತ್ತನಾಗುತ್ತಿದ್ದೇನೆ: ರಮಾನಾಥ ರೈ ಘೋಷಣೆ

1-wwe

ಮುಖ್ಯಮಂತ್ರಿ ಆಯ್ಕೆ; ಅಮ್ಮ ಡಿಕೆಶಿ ಪರ, ಮಗ ಸಿದ್ದು ಪರ: ಬಿಕ್ಕಟ್ಟಿಗೆ ಹೈಕಮಾಂಡ್‌ ಕಾರಣವೇ?

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

kop

Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ

ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ಮಿಕ್ಸಿಂಗ್ ವಾಹನ ಪಲ್ಟಿ… ತಪ್ಪಿದ ಅನಾಹುತ

ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ

BGT 24: ಕೆಎಲ್‌ ರಾಹುಲ್‌ ಔಟ್‌ ಅಥವಾ ನಾಟೌಟ್:‌ ಏನಿದು ವಿವಾದ? ಇಲ್ಲಿದೆ ಅಂಪೈರ್‌ ಉತ್ತರ

BGT 24: ಕೆಎಲ್‌ ರಾಹುಲ್‌ ಔಟ್‌ ಅಥವಾ ನಾಟೌಟ್:‌ ಏನಿದು ವಿವಾದ? ಇಲ್ಲಿದೆ ಅಂಪೈರ್‌ ಉತ್ತರ

12-

Belthangady: ನ. 21- ಮೇ 23: ಧರ್ಮಸ್ಥಳ ಮೇಳದಿಂದ ಯಕ್ಷ ಗಾನ ಸೇವೆ

11-elephant

Chikkamagaluru: ನಾವು ನಡೆದಿದ್ದೇ ದಾರಿ, ನಡಿ ಮಗಾ….ಮರಿ ಆನೆಗೆ ನಡೆಯಲು ಕಲಿಸಿದ ತಾಯಿ ಆನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.