ವಿಧಾನ-ಕದನ 2023: ಗದಗ ಜಿಲ್ಲೆಯಲ್ಲಿ ಕಾಂಗ್ರೆಸ್‌-BJP ನಡುವೆಯೇ ನೇರ ಫೈಟ್‌!


Team Udayavani, Apr 27, 2023, 8:45 AM IST

bjp cong election fight

ಶಿರಹಟ್ಟಿ, ಗದಗ, ರೋಣ ಮತ್ತು ನರಗುಂದ ಸೇರಿ ನಾಲ್ಕು ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿರುವ ಜಿಲ್ಲೆಯಲ್ಲಿ ಪ್ರಸ್ತುತ ಬಿಜೆಪಿಯ ಮೂವರು ಹಾಗೂ ಕಾಂಗ್ರೆಸ್‌ನ ಓರ್ವ ಶಾಸಕರಿದ್ದಾರೆ. 2023ರ ಚುನಾವಣೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದ್ದು, ಪ್ರತಿಯೊಬ್ಬ ಅಭ್ಯರ್ಥಿ ಗೆಲುವು ಸಾಧಿಸಲು ಶತಾಯಗತಾಯ ಪ್ರಯತ್ನ ನಡೆಸುತ್ತಿದ್ದಾರೆ.

ಗದಗ
ಗದಗ ಕ್ಷೇತ್ರದಲ್ಲಿ ಬಿಜೆಪಿ-ಕಾಂಗ್ರೆಸ್‌ ನಡುವೆ ನೇರ ಪೈಪೋಟಿ ಏರ್ಪಟ್ಟಿದೆ. ಕಾಂಗ್ರೆಸ್‌ನಿಂದ ಶಾಸಕ ಎಚ್‌.ಕೆ. ಪಾಟೀಲ, ಬಿಜೆಪಿಯಿಂದ ಅನಿಲ ಮೆಣಸಿನಕಾಯಿ ಸ್ಪ ರ್ಧಿಸಿದ್ದಾರೆ. ಕಳೆದ ಎರಡು ಚುನಾವಣೆಗಳಲ್ಲಿ ಗೆಲುವು ಸಾಧಿ ಸಿರುವ ಶಾಸಕ ಎಚ್‌.ಕೆ. ಪಾಟೀಲ ಹ್ಯಾಟ್ರಿಕ್‌ ಜಯದತ್ತ ದೃಷ್ಟಿ ನೆಟ್ಟಿದ್ದಾರೆ. ಇನ್ನು 2013 ಮತ್ತು 2018ರ ಚುನಾವಣೆಯಲ್ಲಿ ಅಲ್ಪ ಮತಗಳ ಅಂತರದಿಂದ ಸೋಲನುಭವಿಸಿದ್ದ ಬಿಜೆಪಿ ಅಭ್ಯರ್ಥಿ ಅನಿಲ ಮೆಣಸಿನಕಾಯಿ ಈ ಬಾರಿ ಮೊದಲ ಗೆಲುವು ಸಾ ಧಿಸಲು ಹವಣಿಸುತ್ತಿದ್ದು, ಅನುಕಂಪದ ಅಲೆ ಅವರ ಪರವಾಗಿದೆ. ಗದಗ ಮತಕ್ಷೇತ್ರಗಳಲ್ಲಿ ಲಿಂಗಾಯತರು(ಪಂಚಮಸಾಲಿ, ಬಣಜಿಗರು, ಗಾಣಿಗೇರ) ಹಾಗೂ ಅಹಿಂದ ವರ್ಗದವರು (ಅಲ್ಪಸಂಖ್ಯಾತರು, ಕುರುಬ ಸಮುದಾದವರು) ಹೆಚ್ಚಿನ ಪ್ರಮಾಣದಲ್ಲಿ ನೆಲೆಸಿದ್ದು, ಅವರೇ ನಿರ್ಣಾಯಕರಾಗಿದ್ದಾರೆ. ಶಾಸಕ ಎಚ್‌.ಕೆ. ಪಾಟೀಲ ರಡ್ಡಿ ಸಮಾಜಕ್ಕೆ ಸೇರಿದವ‌ರಾಗಿದ್ದರೆ, ಅನಿಲ ಮೆಣಸಿನಕಾಯಿ ಲಿಂಗಾಯತ ಬಣಜಿಗ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಜೆಡಿಎಸ್‌ನಿಂದ ರಡ್ಡಿ ಸಮಾಜದ ವೆಂಕನಗೌಡ ಗೋವಿಂದಗೌಡ್ರ, ಆಪ್‌ನಿಂದ ಪೀರ್‌ಸಾಬ್‌ ಶೇಖ್‌, ಕೆಆರ್‌ಎಸ್‌ನಿಂದ ಆನಂದ ಹಂಡಿ ಸೇರಿ ದಂತೆ ಹಲ ವರು ಅಂತಿಮ ಕಣದಲ್ಲಿದ್ದಾರೆ.

ನರಗುಂದ
ನರಗುಂದ ಕ್ಷೇತ್ರದಲ್ಲೂ ಕಾಂಗ್ರೆಸ್‌-ಬಿಜೆಪಿ ನಡುವೆ ಸ್ಪರ್ಧೆ ಇದೆ. 1999ರಿಂದ ಅಂದರೆ ಕಳೆದ ಎರಡೂವರೆ ದಶಕಗಳಿಂದಲೂ 5 ಚುನಾವಣೆಗಳಲ್ಲಿ ಮುಖಾಮುಖೀಯಾಗಿರುವ ಸಿ.ಸಿ.ಪಾಟೀಲ ಮತ್ತು ಬಿ.ಆರ್‌.ಯಾವಗಲ್‌ ನಡುವೆ ನೇರ ಸ್ಪರ್ಧೆ ಏರ್ಪಟ್ಟಿದ್ದು, 6ನೇ ಚುನಾವಣೆ ಮೇಲೆ ಮತದಾರರ ನಿರೀಕ್ಷೆ ಹೆಚ್ಚಿದೆ. ನರಗುಂದ ಕ್ಷೇತ್ರದಲ್ಲಿ ಲಿಂಗಾಯತರು(ಗಾಣಿಗೇರ, ಪಂಚಮಸಾಲಿ) ಮತ್ತು ಅಹಿಂದ ವರ್ಗದ ಜನರು ನಿರ್ಣಾಯಕ ಪಾತ್ರ ವಹಿಸಲಿದ್ದಾರೆ. ಬಿಜೆಪಿಯಿಂದ ಪಂಚಮಸಾಲಿ ಸಮಾಜದ ಸಿ.ಸಿ.ಪಾಟೀಲ, ಕಾಂಗ್ರೆಸ್‌ನಿಂದ ರಡ್ಡಿ ಸಮುದಾಯದ ಬಿ.ಆರ್‌.ಯಾವಗಲ್‌, ಜೆಡಿಎಸ್‌ನಿಂದ ಲಿಂಗಾಯತ ಸಮಾಜದ ರುದ್ರಗೌಡ ಪಾಟೀಲ ಕಣ ದ ಲ್ಲಿ ದ್ದಾರೆ.

ರೋಣ
ಕಳೆದ ನಾಲ್ಕು ಚುನಾವಣೆಗಳಲ್ಲಿ ಎದುರಾಳಿಗಳಾಗಿ ಸ್ಪ ರ್ಧಿಸಿದ್ದ ಕಾಂಗ್ರೆಸ್‌ನ ಜಿ.ಎಸ್‌.ಪಾಟೀಲ ಹಾಗೂ ಬಿಜೆಪಿಯ ಕಳಕಪ್ಪ ಬಂಡಿ 5ನೇ ಬಾರಿಯೂ ಪ್ರತಿಸ್ಪ ರ್ಧಿಗಳಾಗಿದ್ದಾರೆ. ಬಿಜೆಪಿ ಅಭ್ಯರ್ಥಿ ಬದಲಾವಣೆಗೆ ಗಮನ ಹರಿಸಿತ್ತಾದರೂ ಅಂತಿಮ ಗಳಿಗೆಯಲ್ಲಿ ಕಳಕಪ್ಪ ಬಂಡಿ ಅವರೇ ಅಭ್ಯರ್ಥಿಯಾಗಿ ಮುಂದುವರಿದ್ದಾರೆ. ಆಕಾಂಕ್ಷಿಗಳಲ್ಲೊಬ್ಬರಾಗಿದ್ದ ಕಳಕಪ್ಪ ಬಂಡಿ ಸಹೋದರ ಸಿದ್ದಣ್ಣ ಬಂಡಿ ಮುನಿಸಿಕೊಂಡು ಕಾಂಗ್ರೆಸ್‌ ಸೇರ್ಪಡೆಯಾಗಿರುವುದು ಹಿನ್ನಡೆಯಾದಂತಿದೆ. ಲಿಂಗಾಯತರು(ಪಂಚಮಸಾಲಿ, ಗಾಣಿಗೇರ), ಅಹಿಂದ ವರ್ಗದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಕಾಂಗ್ರೆಸ್‌ನಿಂದ ರಡ್ಡಿ ಸಮಾಜದ ಜಿ.ಎಸ್‌. ಪಾಟೀಲ, ಪಂಚಮಸಾಲಿ ಸಮಾಜದ ಕಳಕಪ್ಪ ಬಂಡಿ, ಜೆಡಿಎಸ್‌ನಿಂದ ಮುಸ್ಲಿಂ ಸಮಾಜದ ಮಕು¤ಂಸಾಬ್‌ ಮುಧೋಳ ಸ್ಪರ್ಧೆ ಮಾಡುತ್ತಿದ್ದಾರೆ.

ಶಿರಹಟ್ಟಿ(ಎಸ್‌ ಸಿ)
ಇನ್ನು ಎಸ್ಸಿ ಮೀಸಲು ಕ್ಷೇತ್ರ ಶಿರಹಟ್ಟಿಯಲ್ಲಿ ಭಿನ್ನವಾಗಿದೆ. ಕಳೆದ ಬಾರಿ ಕಾಂಗ್ರೆಸ್‌ನಿಂದ ಸ್ಪ ರ್ಧಿಸಿದ್ದ ರಾಮಕೃಷ್ಣ ದೊಡ್ಡಮನಿಗೆ ಟಿಕೆಟ್‌ ತಪ್ಪಿಸಿ ಜಿಪಂ ಮಾಜಿ ಅಧ್ಯಕ್ಷೆ ಸುಜಾತಾ ದೊಡ್ಡಮನಿಗೆ ಟಿಕೆಟ್‌ ನೀಡಿದ್ದರಿಂದ ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ಬಂಡಾಯದ ಕಹಳೆಯೂದಿ ಪಕ್ಷೇತರ ಅಭ್ಯರ್ಥಿಯಾಗಿದ್ದಾರೆ. ಅದರಂತೆ ಬಿಜೆಪಿಯಲ್ಲೂ ಹಾಲಿ ಶಾಸಕ ರಾಮಣ್ಣ ಲಮಾಣಿಗೆ ಟಿಕೆಟ್‌ ತಪ್ಪಿಸಿ ವೈದ್ಯ ಡಾ|ಚಂದ್ರು ಲಮಾಣಿಗೆ ಕಮಲದ ಟಿಕೆಟ್‌ ನೀಡಲಾಗಿದೆ. ಬಂಡಾಯವೆದ್ದು ಪಕ್ಷೇತರನಾಗಿ ನಾಮಪತ್ರ ಸಲ್ಲಿಸಿದ್ದ ಹಾಲಿ ಶಾಸಕ ರಾಮಣ್ಣ ಲಮಾಣಿ ಹಾಗೂ ಮುಖಂಡರಾದ ಭೀಮಸಿಂಗ್‌ ರಾಠೊಡ, ಗುರುನಾಥ ದಾನಪ್ಪನವರ ನಾಮಪತ್ರ ವಾಪಸ್‌ ಪಡೆದಿದ್ದಾ ರೆ. ಲಿಂಗಾಯತರು, ಅಹಿಂದ ವರ್ಗದವರು(ದಲಿತರು, ಅಲ್ಪಸಂಖ್ಯಾತರು) ಹಾಗೂ ಮುಖ್ಯವಾಗಿ ಲಂಬಾಣಿ ಸಮುದಾಯದವರಿದ್ದಾರೆ. ಕಾಂಗ್ರೆಸ್‌ನಿಂದ ದಲಿತ ಎಡಗೈ ಸುಜಾತಾ ದೊಡ್ಡಮನಿ, ಬಿಜೆಪಿಯಿಂದ ಲಂಬಾಣಿ ಸಮುದಾಯದ ಡಾ|ಚಂದ್ರು ಲಮಾಣಿ, ಜೆಡಿಎಸ್‌ನಿಂದ ಹನುಮಂತಪ್ಪ ನಾಯಕ ಕಣ ದ ಲ್ಲಿ ರುವ ಪ್ರಮು ಖ ರು.

-ಅರುಣಕುಮಾರ ಹಿರೇಮಠ

ಟಾಪ್ ನ್ಯೂಸ್

Padubidri

Padubidire: “ಬಲೆ ಬಲಿಪುಗ’ 3 ಕಿ.ಮೀ. ಬರಿಗಾಲ ಮ್ಯಾರಥಾನ್‌ ಓಟ

cOurt

Pakshikere: ಮೂವರ ಸಾವಿನ ಪ್ರಕರಣ: ತಾಯಿ, ಪುತ್ರಿಗೆ ಜಾಮೀನು ಮಂಜೂರು

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

aus-rohit

Australia: ಪರ್ತ್‌ಗೆ ಆಗಮಿಸಿದ ರೋಹಿತ್‌ ಶರ್ಮ

Pro Kabaddi League: ಬೆಂಗಾಲ್‌ ವಾರಿಯರ್ ಮೇಲೆ ಪುಣೇರಿ ಪಲ್ಟಾನ್‌ ಸವಾರಿ

Pro Kabaddi League: ಬೆಂಗಾಲ್‌ ವಾರಿಯರ್ ಮೇಲೆ ಪುಣೇರಿ ಪಲ್ಟಾನ್‌ ಸವಾರಿ

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್‌: ನದಿಗೆ ಬಿದ್ದು ಮೂವರ ಸಾವು

Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್‌: ನದಿಗೆ ಬಿದ್ದು ಮೂವರ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನೆಲೋಗಿ….: ಒಂದೇ ಊರಿನ ಇಬ್ಬರು ಈಗ ಶಾಸಕರು!

ನೆಲೋಗಿ….: ಒಂದೇ ಊರಿನ ಇಬ್ಬರು ಈಗ ಶಾಸಕರು!

dk shivakumar

CM Post Crisis: ನಾನು ಈ ಪಕ್ಷ ಕಟ್ಟಿದ್ದೇನೆ..: ದೆಹಲಿಯಲ್ಲಿ ಗುಡುಗಿದ ಡಿಕೆ ಶಿವಕುಮಾರ್

dk shivakumar siddaramaiah rahul gandhi

ಸಿಎಂ ಆಯ್ಕೆಗೆ ಕಗ್ಗಂಟಾಗುತ್ತಿರುವುದು ಅಂದು ‘ರಾಹುಲ್ ಗಾಂಧಿ’ ಕೊಟ್ಟ ಆ ಒಂದು ಮಾತು!

Ramanath-rai

ಚುನಾವಣಾ ರಾಜಕೀಯದಿಂದ ನಿವೃತ್ತನಾಗುತ್ತಿದ್ದೇನೆ: ರಮಾನಾಥ ರೈ ಘೋಷಣೆ

1-wwe

ಮುಖ್ಯಮಂತ್ರಿ ಆಯ್ಕೆ; ಅಮ್ಮ ಡಿಕೆಶಿ ಪರ, ಮಗ ಸಿದ್ದು ಪರ: ಬಿಕ್ಕಟ್ಟಿಗೆ ಹೈಕಮಾಂಡ್‌ ಕಾರಣವೇ?

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Padubidri

Padubidire: “ಬಲೆ ಬಲಿಪುಗ’ 3 ಕಿ.ಮೀ. ಬರಿಗಾಲ ಮ್ಯಾರಥಾನ್‌ ಓಟ

cOurt

Pakshikere: ಮೂವರ ಸಾವಿನ ಪ್ರಕರಣ: ತಾಯಿ, ಪುತ್ರಿಗೆ ಜಾಮೀನು ಮಂಜೂರು

police

Gangolli: ಕ್ರಿಮಿನಲ್‌ ಹಿನ್ನೆಲೆ: ಮೂವರ ಮೇಲೆ ಪ್ರಕರಣ ದಾಖಲು

theft-temple

Koteshwara: ಶೋ ರೂಮ್‌ನಲ್ಲಿ ಕಳವಿಗೆ ಯತ್ನ

Accident-logo

Sulya: ನಿಲ್ಲಿಸಿದ್ದ ಕಾರಿಗೆ ಬಸ್‌ ಢಿಕ್ಕಿ; ಜಖಂ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.