ಸೂಕ್ಷ್ಮ ನೀರಾವರಿ ಯೋಜನೆ: ಕೇಂದ್ರದಿಂದ ರಾಜ್ಯಕ್ಕೆ ಎರಡನೇ ಕಂತಿನ ಅನುದಾನ ಬಿಡುಗಡೆ
Team Udayavani, Mar 26, 2022, 12:04 PM IST
ಬೆಂಗಳೂರು: ಕರ್ನಾಟಕದಲ್ಲಿ ಸೂಕ್ಷ್ಮನೀರಾವರಿ ಕಾರ್ಯಕ್ರಮಗಳಿಗೆ ಹೆಚ್ಷಿನ ಬೇಡಿಕೆ ಇಟ್ಟಿರುವುದನ್ನು ಗಮನಿಸಿದ ಕೇಂದ್ರ ಸರ್ಕಾರವು ರಾಜ್ಯದ ಬೇಡಿಕೆ ಅನುಸಾರ ಕೇಂದ್ರ ಅನುದಾನವನ್ನು ಹೆಚ್ಚಿಸಿ ಆದೇಶಿಸಿದೆ ಅಲ್ಲದೇ ಎರಡನೇ ಕಂತಿನ ಅನುದಾನವನ್ನು ಸಹ ಬಿಡುಗಡೆ ಮಾಡಿದೆ.
2020-21ನೇ ಸಾಲಿನಲ್ಲಿ ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಕ್ಕೆ ಪಿಎಂಕೆಎಸ್.ವೈ ಪಿಡಿಎಂ ಅಡಿಯಲ್ಲಿ 400 ಕೋ ರೂ .ಬಿಡುಗಡೆ ಮಾಡಿತ್ತು. 2021-22 ನೇಸಾಲಿನಲ್ಲಿ ರಾಜ್ಯದಲ್ಲಿ ಸೂಕ್ಷ್ಮನೀರಾವರಿ ಕಾರ್ಯಕ್ರಮಗಳಿಗೆ ಹೆಚ್ಚಿನ ಬೇಡಿಕೆ ಇರಿವುದರಿಂದ ಕೇಂದ್ರ ಸರ್ಕಾರ ಇದೀಗ ರಾಜ್ಯದ ಮನವಿಯಂತೆ 500 ಕೋ.ರೂಗಳ ಅನುದಾನವನ್ನು ಹಂಚಿಕೆ ಮಾಡಿದೆ.
ಕಳೆದಬಾರಿಗೆ ಹೋಲಿಸಿದಲ್ಲಿ ಶೇ 25 ರಷ್ಟು ಹೆಚ್ಚಿನ ಕೇಂದ್ರ ದ ಪಾಲಿನ ಅನುದಾನ ಪಡೆಯಲಾಗಿದೆ. ಪ್ರಸಕ್ತ ಸಾಲಿನಲ್ಲಿ ಕೇಂದ್ರವು ಹಂಚಿಕೆ ಮಾಡಿದ್ದ 500 ಕೋ ರೂ.ಗಳಲ್ಲಿ ಮೊದಲ ಕಂತಿನ ಅನುದಾನವನ್ನಾಗಿ ರಾಜ್ಯಕ್ಕೆ ರಾಜ್ಯಕ್ಕೆ 300 ಕೋಟಿ ,ರೂ.ಗಳನ್ನು ಬಿಡುಗಡೆ ಮಾಡಲಾಗಿತ್ತು. ಉಳಿದ 200 , ಕೋ ರೂ.ಗಳನ್ನು ಮಾರ್ಚ್25 ರಂದು ಆದೇಶವನ್ನು ಕರ್ನಾಟಕಕ್ಕೆ ಬಿಡುಗಡೆ ಮಾಡಿದೆ.
ಸದರಿ ಕಾರ್ಯಕ್ರಮವು ತೋಟಗಾರಿಕೆ, ಕೃಷಿ, ರೇಷ್ಮೆ ಮತ್ತು ಜಲಾನಯನ ಅಭಿವೃದ್ಧಿ ಇಲಾಖೆಗಳನ್ನೊಳಗೊಂಡಿರುತ್ತದೆ. ಕೇಂದ್ರ ಹಂಚಿಕೆ ಮಾಡಿದ ಅನುದಾನದಲ್ಲಿ ಶೇ.76ರಷ್ಟು ಸಾಮಾನ್ಯ ವರ್ಗಕ್ಕೆ ಶೇ.17 ರಷ್ಟು ಪರಿಶಿಷ್ಟ ಜಾತಿಗೆ ಮತ್ತು ಪರಿಶಿಷ್ಟಪಂಗಡಕ್ಕೆ ಶೇ 7 ರಷ್ಟನ್ನು ನಿಗದಿಪಡಿಸಿ ಅನುದಾನ ಬಿಡುಗಡೆ ಮಾಡಲಾಗಿರುತ್ತದೆ.
ಕೇಂದ್ರದಿಂದ ರಾಜ್ಯಕ್ಕೆ ಇದರ ಯೋಜನೆಯಡಿ ಹಂಚಿಕೆಯಾದ ಎರಡನೇ ಕಂತಿನ 200 ಕೋಟಿ ರೂ.ಗಳ ಕೇಂದ್ರದ ಪಾಲಿನ ಅನುದಾನದಲ್ಲಿ ಕೃಷಿ ಇಲಾಖೆಗೆ ಹಂಚಿಕೆ ಮಾಡಬಹುದಾದ ಅನುದಾನಕ್ಕನುಗುವಾಗಿ ರಾಜ್ಯದ ಪಾಲಿನ ಅನುದಾನವನ್ನೂ ಸೇರಿಸಿ ಲಭ್ಯವಾಗುವ ಒಟ್ಟು ಅನುದಾನಕ್ಕೆ ಜಿಲ್ಲಾವಾರು ಬೇಡಿಕೆ ಅನುಸಾರ ಕ್ರಿಯಾಯೋಜನೆಯನ್ನು ನೀಡಲಾಗಿರುತ್ತದೆ.ಇದರಿಂದ ಬೇಸಿಗೆ ಹಂಗಾಮಿನ ಬೆಳೆಗಳಿಗಳಿಗೆ ಸಕಾಲದಲ್ಲಿ ಸೂಕ್ಷ್ಮನೀರಾವರಿ ಘಟಕಗಳನ್ನು ವಿತರಿಸಿ ಬೆಳೆಗಳನ್ನು ಉಳಿಸಿಕೊಳ್ಳಲು ಸಹಾಯಕವಾಗುತ್ತದೆ.
ಜಿಲ್ಲೆಗಳಿಗೆ ನೀಡಿದ ಕ್ರಿಯಾ ಯೋಜನೆಯನ್ವಯ ಸೂಕ್ಷ್ಮನೀರಾವರಿ ಘಟಕಗಳನ್ನು ರೈತರಿಗೆ ತುರ್ತಾಗಿ ಅಂದರೆ ನಿನ್ನೆಯಿಂದಲೇ ಮಾರ್ಚ್ 25 ರಿಂದ ವಿತರಣೆ ಆರಂಭವಾಗಿರುತ್ತದೆ.ಇದರಿಂದ ಸಂಕಷ್ಟದಲ್ಲಿರುವ ರೈತರಿಗೆ ತುರ್ತಾಗಿ ನೆರವಿಗೆ ಧಾವಿಸಲು ಕರ್ನಾಟಕ ಸರ್ಕಾರ ಕ್ರಮ ಕೈಗೊಂಡಿರುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.