ಉಪ್ಪಿನಂಗಡಿ: ಕಾಣೆಯಾದ ಮಗು ಪಕ್ಕದ ಫ್ಲ್ಯಾಟ್ ಮೇಲೆ ನಿದ್ರಿಸುತ್ತಿತ್ತು!
Team Udayavani, Feb 12, 2021, 3:50 AM IST
ಸಾಂದರ್ಭಿಕ ಚಿತ್ರ
ಉಪ್ಪಿನಂಗಡಿ: ಮನೆ ಬಳಿ ಆಟವಾಡುತ್ತಿದ್ದ ನಾಲ್ಕು ವರ್ಷದ ಮಗು ಏಕಾಏಕಿ ಕಣ್ಮರೆಯಾಗಿ ಮನೆ ಮಂದಿ ಸಹಿತ ಊರವರನ್ನು ಕಳವಳಕ್ಕೀಡು ಮಾಡಿದ ಘಟನೆ ಉಪ್ಪಿನಂಗಡಿಯಲ್ಲಿ ಗುರುವಾರ ಸಂಭವಿಸಿದೆ.
ಹಳೇ ಬಸ್ ನಿಲ್ದಾಣದ ವಸತಿ ಸಮುಚ್ಚಯದಲ್ಲಿ ಬಾಡಿಗೆದಾರರಾಗಿರುವ ಅಶ್ರಫ್ ದಂಪತಿಯ ಪುತ್ರ ಇಹಾನ್ ಕಣ್ಮರೆಯಾದ ಬಾಲಕ. ಸುದ್ದಿ ತಿಳಿಯು ತ್ತಿದ್ದಂತೆಯೇ ನಾಗರಿಕರು ಪೊಲೀಸ್ ಇಲಾಖೆಗೆ ಮಾಹಿತಿ ನೀಡಿ ಎಲ್ಲೆಡೆ ಹುಡುಕಾಟಕ್ಕೆ ಮುಂದಾದರು.
ಕೆಲವರು ಪಕ್ಕದಲ್ಲೇ ಇರುವ ನಾಲ್ಕು ಮಾಳಿಗೆಯ ಇನ್ನೊಂದು ವಸತಿ ಸಮುಚ್ಚಯದ ತಾರಸಿಯ ಮೇಲೆ ಹೋಗಿ ಪರಿ ಶೀಲಿಸಿದಾಗ ಅಲ್ಲಿ ಮಗು ಮಲಗಿ ನಿದ್ರಿಸುತ್ತಿದ್ದ ಸ್ಥಿತಿಯಲ್ಲಿ ಪತ್ತೆಯಾಯಿತು. ರೋದಿಸುತ್ತಿದ್ದ ತಾಯಿಯ ಮುಖದಲ್ಲಿ ಖುಷಿ ಕಂಡಿತು. ಬಳಿಕ ಎಲ್ಲೆಲ್ಲೋ ಹುಡುಕಾಟ ನಿರತ ಮಂದಿಗೆ ಮಾಹಿತಿ ನೀಡಿ ಹಿಂದಕ್ಕೆ ಕರೆಯಿಸಿಕೊಳ್ಳಲಾಯಿತು.
ನಡೆದದ್ದೇನು?
ವಸತಿ ಸಮುಚ್ಚಯದ ಬಳಿ ಆಟ ವಾಡುತ್ತಿದ್ದ ಮಗು ಸಾಯಂಕಾಲದ ವೇಳೆಗೆ ಪೇಟೆ ಕಡೆಗೆ ಬಂದಾಗ ವ್ಯಾಪಾರಿಗಳು ಮನೆಗೆ ಮರಳುವಂತೆ ಸೂಚಿಸಿದ್ದರು. ಹಿಂದಿರುಗಿ ಮನೆಗೆ ಹೋಗಲು ದಾರಿ ತಿಳಿಯದಾದ ಬಾಲಕ ಅಲ್ಲಿನ ವಸತಿ ಸಮುಚ್ಚಯವೊಂದರ ಮೇಲ್ಭಾಗಕ್ಕೆ ಹೋಗಿತ್ತು. ಆ ವೇಳೆ ಭಯ ಹಾಗೂ ದಣಿವಿನಿಂದ ಅಲ್ಲೇ ನಿದ್ರೆಗೆ ಜಾರಿದ್ದ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹೊಸ ವರ್ಷಕ್ಕೆ ಪುಷ್ಪಾಲಂಕೃತ ಧರ್ಮಸ್ಥಳ: ಒಂದು ಟನ್ ಹಣ್ಣು, ವಿವಿಧ ಬಗೆಯ ಹೂಗಳಿಂದ ಸಿಂಗಾರ
Sri Kukke Subrahmanya ಕ್ಷೇತ್ರದಲ್ಲಿ ವಿಶೇಷ ಪುಷ್ಪಾಲಂಕಾರ ಸೇವೆ
Sullia; ಆರೋಪಿ ತಾಯಿಯ ಅಪರಾಧ ಸಾಬೀತು; ಜ. 4ರಂದು ಶಿಕ್ಷೆ ಪ್ರಮಾಣ ಘೋಷಣೆ
Uppinangady: ತ್ಯಾಜ್ಯ ಸರಿಯಾಗಿ ವಿಂಗಡಿಸಿ ಕೊಡದಿದ್ದರೆ ಕ್ರಮಕ್ಕೆ ಸದಸ್ಯರ ಸಲಹೆ
Bantwal: ಪ್ರವಾಸಕ್ಕೆ ತೆರಳಿದ್ದ ಬಸ್ ಅಪಘಾತ; ಗಾಯಗೊಂಡಿದ್ದ ಮಹಿಳೆ ಮೃ*ತ್ಯು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Transformation; ಕೇವಲ 18 ತಿಂಗಳಲ್ಲಿ 55 ಕೆ.ಜಿ. ತೂಕ ಕಳೆದುಕೊಂಡ ಖ್ಯಾತ ನಟ ರಾಮ್ ಕಪೂರ್
2025: ಬರುವುದೆಲ್ಲಾ ಬರಲಿ ಗೆಲುವು ನಮ್ಮದಾಗಲಿ: ಸಿನಿಮಾದ 6 ವಿಭಾಗದವರ ನಿರೀಕ್ಷೆಯ ಮಾತು
Arrested: ಹೊಸ ವರ್ಷಾಚರಣೆಗೆ ಮಾದಕ ವಸ್ತು ಮಾರುತ್ತಿದ್ದ 11 ಮಂದಿ ಸೆರೆ
EPF ನಿಧಿ ವಂಚನೆ: ರಾಬಿನ್ ಉತಪ್ಪ ವಿರುದ್ದದ ವಾರಂಟ್‌ಗೆ ಹೈಕೋರ್ಟ್ ತಡೆ
Bengaluru: ರಂಗೇರಿದ ರಾತ್ರಿಯಲ್ಲಿ ಹೊಸ ವರ್ಷದ ಸಂಭ್ರಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.