ಮೊಬೈಲ್ ವ್ಯಾಲೆಟ್ ಮಿತಿ 2 ಲಕ್ಷ ರೂ.ಗೆ : ಆರ್ಬಿಐ ಆದೇಶ
Team Udayavani, Apr 8, 2021, 6:55 AM IST
ಹೊಸದಿಲ್ಲಿ : ಮೊಬೈಲ್ ವ್ಯಾಲೆಟ್ ಬಳಕೆದಾರರಿಗೆ ಆರ್ಬಿಐ ಸಿಹಿ ಸುದ್ದಿ ನೀಡಿದೆ. ಇನ್ನು ಮುಂದೆ ನೀವು ವ್ಯಾಲೆಟ್ನಲ್ಲಿ 2 ಲಕ್ಷ ರೂ.ವರೆಗೆ ಇಟ್ಟುಕೊಳ್ಳಬಹುದು. ವ್ಯಾಲೆಟ್ನಲ್ಲಿ ಇಡ ಬಹುದಾದ ಮೊತ್ತದ ಮಿತಿಯನ್ನು 1 ಲಕ್ಷ ರೂ.ನಿಂದ 2 ಲಕ್ಷ ರೂ.ಗಳಿಗೆ ಏರಿಸಿ ಆರ್ಬಿಐ ಬುಧವಾರ ಆದೇಶ ಹೊರಡಿಸಿದೆ.
ಅಲ್ಲದೆ ಪೇಟಿಎಂ, ಫೋನ್ಪೇ, ಮೊಬಿವಿಕ್, ಗೂಗಲ್ಪೇ ಸೇರಿದಂತೆ ಪ್ರೀಪೇಯ್ಡ ಮೊಬೈಲ್ ವ್ಯಾಲೆಟ್ ಕಂಪೆನಿಗಳು ಕೂಡ ಶೀಘ್ರದಲ್ಲೇ ಸಂಪೂರ್ಣ ಕೆವೈಸಿ (ನೋ ಯುವರ್ ಕಸ್ಟಮರ್) ಪ್ರಕ್ರಿಯೆಯನ್ನು ಜಾರಿ ಮಾಡಬೇಕು ಎಂದೂ ಸೂಚಿಸಿದೆ.
ತಮ್ಮ ಗ್ರಾಹಕರನ್ನು ಗುರುತಿಸಲು ಮತ್ತು ದೃಢೀಕರಿಸಲು ಮೊಬೈಲ್ ಕಂಪೆನಿಗಳು ಹಾಗೂ ಹಣಕಾಸು ಸೇವಾ ಕಂಪೆನಿಗಳೂ ಕೆವೈಸಿ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಅನುಸರಿಸಬೇಕು. ಖಾತೆ ತೆರೆಯುವಾಗ ಮಾತ್ರವಲ್ಲದೆ ನಿಯಮಿತವಾಗಿ ಈ ಪ್ರಕ್ರಿಯೆಯನ್ನು ಮಾಡುತ್ತಿರಬೇಕು. ಈ ಕುರಿತ ವಿಸ್ತೃತ ಸೂಚನೆಯನ್ನು ಸದ್ಯದಲ್ಲೇ ಬಿಡುಗಡೆ ಮಾಡಲಾಗುತ್ತದೆ ಎಂದು ಆರ್ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಹೇಳಿದ್ದಾರೆ.
ವ್ಯಾಲೆಟ್ನಿಂದ ವ್ಯಾಲೆಟ್ಗೆ ಹಣ
ಆರ್ಬಿಐಯ ಪ್ರಸ್ತಾವಕ್ಕೆ ಒಪ್ಪಿಗೆ ಸಿಕ್ಕಿದರೆ, ಶೀಘ್ರದಲ್ಲೇ ನೀವು ಒಂದು ಡಿಜಿಟಲ್ ವ್ಯಾಲೆಟ್ನಿಂದ ಮತ್ತೂಂದು ವ್ಯಾಲೆಟ್ಗೆ
ಹಣವನ್ನು ವರ್ಗಾಯಿಸಲೂ ಸಾಧ್ಯ. ಇನ್ನು ಮುಂದೆ ಭಿನ್ನ ವ್ಯಾಲೆಟ್ಗಳಿಗೂ ಹಣವನ್ನು ಕಳುಹಿಸಬಹುದು. ಅಂದರೆ ಪೇಟಿಎಂ ಬಳಕೆದಾರ ಫೋನ್ಪೇ ಬಳಕೆದಾರನ ವ್ಯಾಲೆಟ್ಗೂ ಹಣ ವರ್ಗಾಯಿಸಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್
Noida: ಟಾಯ್ಲೆಟಲ್ಲಿ ರಹಸ್ಯ ಕ್ಯಾಮರಾ ಇಟ್ಟಿದ್ದ ಶಾಲಾ ನಿರ್ದೇಶಕ… ಪತ್ತೆ ಹಚ್ಚಿದ ಶಿಕ್ಷಕಿ
Mumbai: ಗೇಟ್ವೇ ಆಫ್ ಇಂಡಿಯಾ ಬಳಿ ಮುಳುಗಿದ 67 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು
Umar Khalid: ದೆಹಲಿ ಗಲಭೆ ಪ್ರಕರಣದ ಆರೋಪಿ ಉಮರ್ ಖಾಲಿದ್ಗೆ 7 ದಿನಗಳ ಮಧ್ಯಂತರ ಜಾಮೀನು
Loksabha:ಕಾಂಗ್ರೆಸ್ ಅಂಬೇಡ್ಕರ್ ಗೆ ಹಲವು ಬಾರಿ ಅವಮಾನ ಮಾಡಿದೆ: ಪ್ರಧಾನಿ ಮೋದಿ ತಿರುಗೇಟು
MUST WATCH
ಹೊಸ ಸೇರ್ಪಡೆ
Kasaragod ಅಪರಾಧ ಸುದ್ದಿಗಳು; ತಂಬಾಕು ಉತ್ಪನ್ನಗಳ ಸಹಿತ ಇಬ್ಬರ ಬಂಧನ
BBK11: ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್..? ವಿಡಿಯೋದಲ್ಲಿ ಸುಳಿವು
Kundapura: ಹೆಜ್ಜೇನು ದಾಳಿ; ವ್ಯಕ್ತಿ ಸಾವು
Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ
ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.