Modi in US: ಚೀನ, ಪಾಕಿಸ್ಥಾನ ಮೇಲೆ ಮೋದಿ ವಾಕ್‌ ಪ್ರಹಾರ

15 ಬಾರಿ ಎದ್ದು ನಿಂತು ಗೌರವ; 79 ಬಾರಿ ಕರತಾಡನ!

Team Udayavani, Jun 24, 2023, 7:18 AM IST

modi speech in us

ವಾಷಿಂಗ್ಟನ್‌: “ಉಗ್ರವಾದವು ಮನುಕುಲದ ಶತ್ರು. ಭಯೋತ್ಪಾದನೆಯ ವಿರುದ್ಧ ಕ್ರಮ ಕೈಗೊಳ್ಳುವ ವಿಚಾರ ಬಂದಾಗ, ಒಂದು ವೇಳೆ ಅಥವಾ ಆದರೆ ಎಂಬ ಪ್ರಶ್ನೆಯೇ ಉದ್ಭವಿಸುವುದಿಲ್ಲ…”

ಅಮೆರಿಕ ಸಂಸತ್ತಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಗುಡುಗಿದ್ದು ಹೀಗೆ. ಅಮೆರಿಕ ಪ್ರವಾಸದಲ್ಲಿರುವ ಮೋದಿಯವರು ಯುಎಸ್‌ ಕಾಂಗ್ರೆಸ್‌ನ ಜಂಟಿ ಸದನವನ್ನು ಉದ್ದೇಶಿಸಿ ಮಾತನಾಡುತ್ತ ಚೀನ ಮತ್ತು ಪಾಕ್‌ ಮೇಲೆ ಪರೋಕ್ಷ ವಾಗ್ಧಾಳಿ ನಡೆಸಿದ್ದಾರೆ.

ಸುಮಾರು ಒಂದು ತಾಸು ಅವಧಿಯ ತಮ್ಮ ಭಾಷಣದಲ್ಲಿ ಪ್ರಧಾನಿ ಮೋದಿಯವರು ಭಯೋತ್ಪಾದನೆ ವಿರುದ್ಧದ ಹೋರಾಟ, ಪ್ರಜಾಪ್ರಭುತ್ವ, ಮಹಿಳಾ ಸಶಕ್ತೀಕರಣ, ಇಂಡೋ ಪೆಸಿಫಿಕ್‌ನಲ್ಲಿ ಕಾಲು ಕೆರೆದು ಜಗಳಕ್ಕೆ ಬರುತ್ತಿರುವ ಚೀನ ಸಹಿತ ಹಲವು ಮಹತ್ವದ ವಿಚಾರಗಳನ್ನು ಪ್ರಸ್ತಾವಿಸಿದರು.

ಎರಡು ಬಾರಿ ಅಮೆರಿಕ ಸಂಸತ್ತಿನ ಜಂಟಿ ಸದನವನ್ನು ಉದ್ದೇಶಿಸಿ ಮಾತನಾಡಿದ ಮೊದಲ ಭಾರತೀಯ ನಾಯಕ ಎಂಬ ಇತಿಹಾಸವನ್ನೂ ಪ್ರಧಾನಿ ಮೋದಿಯವರು ಸೃಷ್ಟಿಸಿದರು.

ಜತೆಗೆ, ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು, ವಿನ್‌ಸ್ಟನ್‌ ಚರ್ಚಿಲ್‌, ನೆಲ್ಸನ್‌ ಮಂಡೇಲಾ ಬಳಿಕ ಒಂದಕ್ಕಿಂತ ಹೆಚ್ಚು ಬಾರಿ ಉಭಯ ಸದನಗಳನ್ನು ಉದ್ದೇಶಿಸಿ ಭಾಷಣ ಮಾಡಲು ಅವಕಾಶ ಪಡೆದ ವಿಶ್ವನಾಯಕ ಎಂಬ ಖ್ಯಾತಿಗೂ ಮೋದಿ ಪಾತ್ರರಾದರು.

ಭಯೋತ್ಪಾದನೆ ಎನ್ನುವುದು ಒಟ್ಟು ಮನುಕುಲಕ್ಕೆ ಅಪಾಯ. ಹೀಗಾಗಿ ಉಗ್ರವಾದವನ್ನು ಪ್ರಾಯೋಜಿಸುತ್ತಿರುವ ಮತ್ತು ರಫ್ತು ಮಾಡುತ್ತಿರುವ ಶಕ್ತಿಗಳ ವಿರುದ್ಧ ನಾವೆಲ್ಲರೂ ಒಗ್ಗಟ್ಟಾಗಬೇಕು ಎಂದು ಮೋದಿ ಕರೆ ನೀಡಿದರು. ವ್ಯೂಹಾತ್ಮಕವಾಗಿ ಮಹತ್ವದ ಪ್ರದೇಶವಾದ ಇಂಡೋ ಪೆಸಿಫಿಕ್‌ ಮೇಲೆ ಆಕ್ರಮಣ ಮತ್ತು ಸಂಘರ್ಷದ ಕರಿನೆರಳು ಬಿದ್ದಿದೆ ಎಂದು ಹೇಳುವ ಮೂಲಕ ಮೋದಿ ಅವರು ಚೀನದ ವಿಸ್ತರಣಾವಾದದ ವಿರುದ್ಧವೂ ಕಿಡಿಕಾರಿದರು. ಇಂಡೋ ಪೆಸಿಫಿಕ್‌ ಪ್ರದೇಶದಲ್ಲಿ ಸ್ಥಿರತೆಯೇ ನಮಗೆ ದೊಡ್ಡ ಸವಾಲಾಗಿದೆ ಎಂದರು.

15 ಬಾರಿ ಎದ್ದು ನಿಂತು ಗೌರವ; 79 ಬಾರಿ ಕರತಾಡನ!

ಮೋದಿ ಭಾಷಣಕ್ಕೆ ಅಮೆರಿಕ ಸಂಸದರಿಂದ ಚಪ್ಪಾಳೆಯ ಸುರಿಮಳೆಯೇ ಸುರಿದಿದೆ. ಸಂಸದರು ಸುಮಾರು 15 ಬಾರಿ ಎದ್ದು ನಿಂತು ಗೌರವ ಸೂಚಿಸಿದ್ದಲ್ಲದೆ 79 ಬಾರಿ ಕರತಾಡನ ಮಾಡುವ ಮೂಲಕ ಮೋದಿಯ ಮಾತುಗಳಿಗೆ ಸಹಮತ ವ್ಯಕ್ತಪಡಿಸಿದರು.

ನಗು ಉಕ್ಕಿಸಿದ ಸಮೋಸಾ ಕಾಕಸ್‌

ಅಮೆರಿಕದಲ್ಲಿ ಇರುವ ಲಕ್ಷಾಂತರ ಮಂದಿ ಭಾರತದಲ್ಲಿ ಬೇರುಗಳನ್ನು ಹೊಂದಿದ್ದಾರೆ. ಅವರಲ್ಲಿ ಕೆಲವರು ಈ ಸದನದ ಛೇಂಬರ್‌ನಲ್ಲಿ ಕುಳಿತಿದ್ದಾರೆ. ಒಬ್ಬರು ನನ್ನ ಹಿಂದೆ ಆಸೀನರಾಗಿದ್ದಾರೆ. ಅವರು ಇತಿಹಾಸವನ್ನೇ ನಿರ್ಮಿಸಿದವರು ಎಂದು ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌ ಕುರಿತು ಪ್ರಧಾನಿ ಮೋದಿ ನುಡಿದಾಗ ಚಪ್ಪಾಳೆಯ ಸುರಿಮಳೆಯಾಯಿತು.

ಭಾರತೀಯರು ಕೇವಲ ಸ್ಪೆಲ್ಲಿಂಗ್‌ ಬೀಯಲ್ಲಿ ಮಾತ್ರವಲ್ಲ, ಎಲ್ಲ ಕ್ಷೇತ್ರಗಳಲ್ಲೂ ಬುದ್ಧಿವಂತರು ಎಂದು ಮೋದಿ ಹೇಳಿದಾಗ ಸಂಸದರು ನಗೆಗಡಲಲ್ಲಿ ತೇಲಿದರು. “ಸಮೋಸಾ ಕಾಕಸ್‌ ಈಗ ಇಡೀ ಸದನದ ಫ್ಲೇವರ್‌ ಆಗಿ ಹೊರಹೊಮ್ಮಿದೆ. ಅದು ಇನ್ನಷ್ಟು ಬೆಳೆದು ವೈವಿಧ್ಯಮಯ ಭಾರತೀಯ ಖಾದ್ಯಗಳ ಸವಿಯನ್ನು ಇಲ್ಲಿ ಪಸರಿಸಲಿ” ಎಂದೂ ಮೋದಿ ಹೇಳಿದರು. ಜನಪ್ರಿಯ ಭಾರತೀಯ ಖಾದ್ಯಗಳಲ್ಲಿ ಒಂದಾದ ಸಮೋಸಾವನ್ನು ಅಮೆರಿಕಕ್ಕೆ ಹೋದ ಭಾರತೀಯರು ಅಲ್ಲೂ ಜನಪ್ರಿಯಗೊಳಿಸಿದ್ದಾರೆ. ಅಮೆರಿಕ ಸಂಸತ್ತಿನಲ್ಲಿರುವ ದಕ್ಷಿಣ ಏಷ್ಯಾ ಮೂಲದ ಚುನಾಯಿತ ಪ್ರತಿನಿಧಿಗಳ ಸಮೂಹ (ವಿಶೇಷವಾಗಿ ಭಾರತೀಯರು)ವನ್ನು “ಸಮೋಸಾ ಕಾಕಸ್‌” ಎಂದೇ ಕರೆಯಲಾಗುತ್ತದೆ ಎನ್ನುವುದು ಇಲ್ಲಿ ಉಲ್ಲೇಖಾರ್ಹ.

ಟಾಪ್ ನ್ಯೂಸ್

1-deee

Allu Arjun ನಿವಾಸದಲ್ಲಿ ದಾಂಧಲೆ!; 8 ಮಂದಿ ಬಂಧನ: ಕೃತ್ಯ ಎಸಗಿದ್ದು ಯಾರು?

sullia

Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ

Baduta-Mandya

Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!

1-women

ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90

Kuwait-PM

Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ

police crime

Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kuwait-PM

Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

Sheik Hasina

Sheikh Hasina ಅವಧಿಯಲ್ಲಾದ ಅಪಹರಣಗಳಿಗೆ ಭಾರತ ಕುಮ್ಮಕ್ಕು: ಬಾಂಗ್ಲಾ ವರದಿ

ravishankar-guruji

Meditation; ಜಾಗತಿಕ ಶಾಂತಿ, ಏಕತೆಗೆ ಧ್ಯಾನ ಮುಖ್ಯ ಸಾಧನ: ಶ್ರೀ ಶ್ರೀ ರವಿಶಂಕರ್‌

iran

Israel ಮೇಲೆ ದಾಳಿಗೆ ಇರಾನ್‌ನಿಂದ ಮಕ್ಕಳ ಬಳಕೆ?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

dw

Kundapura: ಮಲಗಿದಲ್ಲೇ ವ್ಯಕ್ತಿ ಸಾವು

death

Puttur: ಎಲೆಕ್ಟ್ರಿಕ್‌ ಆಟೋ ರಿಕ್ಷಾ ಪಲ್ಟಿ; ಚಾಲಕ ಮೃತ್ಯು

1-deee

Allu Arjun ನಿವಾಸದಲ್ಲಿ ದಾಂಧಲೆ!; 8 ಮಂದಿ ಬಂಧನ: ಕೃತ್ಯ ಎಸಗಿದ್ದು ಯಾರು?

4

Karkala: ಅಸ್ವಸ್ಥಗೊಂಡು ವ್ಯಕ್ತಿ ಸಾವು

sullia

Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.