Modi Poland Visit: ಪೋಲೆಂಡ್‌ಗೆ ಆಗಮಿಸಿದ ಪ್ರಧಾನಿ ಮೋದಿ; ಗುಜರಾತಿ ನೃತ್ಯ ಸ್ವಾಗತ, ಜೈಕಾರ
ಅನಿವಾಸಿ ಭಾರತೀಯರಿಂದ ನರೇಂದ್ರ ಮೋದಿಗೆ ಭರ್ಜರಿ ಸ್ವಾಗತ, ವಿವಿಧ ಘೋಷಣೆ
Team Udayavani, Aug 21, 2024, 9:56 PM IST
ವಾರ್ಸಾ (ಪೋಲೆಂಡ್): ಪ್ರಧಾನಿ ನರೇಂದ್ರ ಮೋದಿ ಪೋಲೆಂಡ್ ಹಾಗೂ ಉಕ್ರೇನ್ ದೇಶಗಳ ಅಧಿಕೃತ ಭೇಟಿಗಾಗಿ ಬುಧವಾರ ಸಂಜೆ ಪೋಲೆಂಡ್‌ನ ವಾರ್ಸಾ ಫ್ರೆಡರಿಕ್ ಚಾಪಿನ್ ವಿಮಾನ ನಿಲ್ದಾಣಕ್ಕೆ ಬಂದಿಳಿದರು. 45 ವರ್ಷಗಳ ನಂತರ ಮಧ್ಯ ಯುರೋಪಿಯನ್ ದೇಶಕ್ಕೆ ಭೇಟಿ ನೀಡಿದ ಮೊದಲ ಭಾರತೀಯ ನಾಯಕ (ಪ್ರಧಾನಿ) ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.
ಭಾರತ ಮತ್ತು ಪೋಲೆಂಡ್ ತಮ್ಮ ರಾಜತಾಂತ್ರಿಕ ಸಂಬಂಧಗಳ ಸ್ಥಾಪನೆಯ 70ನೇ ವಾರ್ಷಿಕೋತ್ಸವ ಆಚರಿಸುತ್ತಿರುವಾಗ ಪೋಲೆಂಡ್‌ನ ವಾರ್ಸಾಗೆ ಅವರ ಭೇಟಿ ಮಹತ್ವ ಪಡೆದಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿದ ಪ್ರಧಾನಿ ಮೋದಿ, ಪೋಲೆಂಡ್‌ನಲ್ಲಿ ಬಂದಿಳಿದು ಇಲ್ಲಿನ ವಿವಿಧ ಕಾರ್ಯಕ್ರಮಗಳ ಎದುರು ನೋಡುತ್ತಿದ್ದೇನೆ. ಈ ಭೇಟಿಯು ಭಾರತ ಪೋಲೆಂಡ್ ಸ್ನೇಹ ಬಲಪಡಿಸುತ್ತದೆ ಮತ್ತು ಉಭಯ ರಾಷ್ಟ್ರಗಳ ಜನರಿಗೆ ಪ್ರಯೋಜನ ಸಿಗಲಿದೆ ಎಂದು ಬರೆದಿದ್ದಾರೆ.
ಅನಿವಾಸಿ ಭಾರತೀಯರಿಂದ ಅದ್ಧೂರಿ ಸ್ವಾಗತ:
ಪೋಲೆಂಡ್‌ನಲ್ಲಿ ಭಾರತೀಯ ವಲಸಿಗರು ಪ್ರಧಾನಿ ಮೋದಿ ಆಗಮನಕ್ಕಾಗಿ ಕಾಯುತ್ತಿದ್ದರು. ಈ ವೇಳೆ ಪೋಲೆಂಡ್‌ನ ಕಲಾವಿದರು ವಾರ್ಸಾ ಹೋಟೆಲ್ನಲ್ಲಿ ಭಾರತೀಯ ಸಾಂಪ್ರದಾಯಿಕ ನೃತ್ಯದ ಮೂಲಕ ಮೋದಿಗೆ ಸ್ವಾಗತ ನೀಡಿದರು.
ವಾರ್ಸಾದ ಹೋಟೆಲ್ ಎದುರು ಮೋದಿ ನೋಡಲು ಅನಿವಾಸಿ ಭಾರತೀಯರು ಸೇರಿದ್ದರು. ಮೋದಿ ಆಗಮಿಸುತ್ತಿದ್ದಂತೆ ಅವರು ಜೈಕಾರ ಹಾಕಿ ಸಂತಸ ವ್ಯಕ್ತಪಡಿಸಿದರು.
1979ರಲ್ಲಿ ಮೊರಾರ್ಜಿ ದೇಸಾಯಿ ನಂತರ 45 ವರ್ಷಗಳಲ್ಲಿ ಪೋಲೆಂಡ್‌ಗೆ ಭೇಟಿ ನೀಡಿದ ಮೊದಲ ಭಾರತೀಯ ಪ್ರಧಾನಿ ಮೋದಿ. ರಕ್ಷಣಾ ಸಹಕಾರ ಮತ್ತು ಮಾಹಿತಿ ತಂತ್ರಜ್ಞಾನ, ಔಷಧೀಯ ಮತ್ತು ವಾಹನ ತಯಾರಿಕೆಯಲ್ಲಿ ಸಂಬಂಧಗಳ ಹೆಚ್ಚಿಸುವ ನಿರೀಕ್ಷೆಯಿದೆ.
#WATCH | Prime Minister Narendra Modi greets members of the Indian diaspora, in Warsaw, Poland
PM Modi is on a two-day official visit to Poland. This is the first visit by an Indian Prime Minister to Poland in the past 45 years. pic.twitter.com/sYBG4FKTaW
— ANI (@ANI) August 21, 2024
ಗುಜರಾತಿ ನೃತ್ಯದ ಆಕರ್ಷಣೆ; ‘ಭಾರತ್ ಮಾತಾ ಕೀ ಜೈ’, ‘ಜೈ ಶ್ರೀರಾಮ್’ ಘೋಷಣೆ
ಸಂಜೆ ಪೋಲೆಂಡ್‌ಗೆ ತಲುಪಿದ ಪ್ರಧಾನಿ ನರೇಂದ್ರ ಮೋದಿಗೆ ಗುಜರಾತಿ ನೃತ್ಯದ ಮೂಲಕ ಸ್ವಾಗತ ಕೋರಿದ್ದಾರೆ. ಬಳಿಕ ಅನಿವಾಸಿ ಭಾರತೀಯರು ಮೋದಿಯವರ ಕಾಣುತ್ತಿದ್ದಂತೆ ‘ಭಾರತ್ ಮಾತಾ ಕೀ ಜೈ’, ‘ಜೈ ಶ್ರೀರಾಮ್’ ಘೋಷಣೆಗಳ ಕೂಗಿ ತಮ್ಮ ಸಂಭ್ರಮ ವ್ಯಕ್ತಪಡಿಸಿದರು. ಈ ವೇಳೆ ನರೇಂದ್ರ ಮೋದಿ ಪೋಲೆಂಡ್‌ನಲ್ಲಿರುವ ಭಾರತೀಯ ಸಮುದಾಯದವರಿಗೆ ಆಟೋಗ್ರಾಫ್ ಹಾಕಿ, ಫೋಟೋಗೆ ಪೋಸ್ ಕೊಟ್ಟರು. ಕೆಲವರು ಮಹಿಳೆಯರು ಮೋದಿಯವರ ಕೈಗೆ ರಾಖಿಯನ್ನೂ ಕಟ್ಟಿದರು.
ನಮ್ಮ ರಾಜತಾಂತ್ರಿಕ ಸಂಬಂಧಗಳ 70 ವರ್ಷಗಳನ್ನು ನಾವು ಗುರುತಿಸುತ್ತಿರುವ ಸಂದರ್ಭದಲ್ಲಿ ಪೋಲೆಂಡ್‌ಗೆ ನನ್ನ ಭೇಟಿ ಬಂದಿದೆ. ಪೋಲೆಂಡ್ ಮಧ್ಯ ಯುರೋಪ್‌ನಲ್ಲಿ ಪ್ರಮುಖ ಆರ್ಥಿಕ ಪಾಲುದಾರ. ಪ್ರಜಾಪ್ರಭುತ್ವ ಮತ್ತು ಬಹುತ್ವಕ್ಕೆ ನಮ್ಮ ಪರಸ್ಪರ ಬದ್ಧತೆಯು ನಮ್ಮ ಸಂಬಂಧವನ್ನು ಮತ್ತಷ್ಟು ಬಲಪಡಿಸುತ್ತದೆ. ನನ್ನ ಸ್ನೇಹಿತ ಪ್ರಧಾನಿ ಡೊನಾಲ್ಡ್ ಟಸ್ಕ್ ರನ್ನು ಭೇಟಿ ಮಾಡಲು ನಾನು ಎದುರು ನೋಡುತ್ತಿದ್ದೇನೆ ಎಂದು ಮೋದಿ ಹೇಳಿದ್ದಾರೆ.
ಸ್ಮಾರಕಗಳಿಗೆ ಗೌರವ ನಮನ:
ವಾರ್ಸಾದಲ್ಲಿರುವ ಜಾಮ್ ಸಾಹೇಬ್ ನವಾನಗರ ಸ್ಮಾರಕಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿ ಗೌರವ ನಮನ ಸಲ್ಲಿಸಿದರು. ಈ ಸ್ಮಾರಕವು ನವಾನಗರದ (ಜಾಮ್‌ನಗರ) ಮಹಾರಾಜ ಜಾಮ್ ಸಾಹೇಬ್ ದ್ವಿಗ್ವಿಜಯ ಸಿನ್ಹಾಜಿ ರಣಜಿತ್‌ಸಿನ್ಹಾಜಿ ಸವಿನೆನಪಿಗಾಗಿ ಕಟ್ಟಿಸಲಾಗಿದೆ. ೧೯೪೨ರ ಎರಡನೇ ಮಹಾಯುದ್ಧ ಸಂದರ್ಭದಲ್ಲಿ ನಿರಾಶ್ರಿತರಾಗಿದ್ದ ಪೊಲೀಶ್ ಮಕ್ಕಳಿಗೆ ವಸತಿ ವ್ಯವಸ್ಥೆ ಈ ಮಹಾರಾಜ ಕಲ್ಪಿಸಿದ್ದ ಅವರ ನೆನಪಿಗೆ ಸ್ಮಾರಕ ನಿರ್ಮಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ
Kasabಗೂ ನ್ಯಾಯಯುತ ವಿಚಾರಣೆ ಅವಕಾಶ ಸಿಕ್ಕಿತ್ತು;Yasin ಕೇಸ್ ಬಗ್ಗೆ ಸುಪ್ರೀಂ ಹೇಳಿದ್ದೇನು?
Delhi Polls: 11 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಆಪ್… ಯಾರಿಗೆ ಯಾವ ಕ್ಷೇತ್ರ
Viral Video: ಬೇಟೆಗೆ ಹೊಂಚು ಹಾಕುತ್ತಿದ್ದ ಹಾವನ್ನೇ ಬೇಟೆಯಾಡಲು ಮುಂದಾದ ಮೀನು…
MUST WATCH
ಹೊಸ ಸೇರ್ಪಡೆ
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Chikkamagaluru;ಹಣಕ್ಕಾಗಿ ಮೊಮ್ಮಗನಿಂದಲೇ ವೃದ್ಧ ದಂಪತಿಯ ಬರ್ಬರ ಹ*ತ್ಯೆ
Thailand ನಲ್ಲಿ ಜೇನಿನ ಆಯುರ್ವೇದ ಔಷಧ ಕಥೆ ಹೇಳಿದ ಅಪ್ಪ,ಮಗಳು
Karnataka;ಕಾರ್ಪೊರೇಟ್ ಸಂಸ್ಥೆಗಳಿಂದ 100 ಇಂಜಿನಿಯರಿಂಗ್ ಕಾಲೇಜುಗಳ ದತ್ತು
Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.