![1-congress](https://www.udayavani.com/wp-content/uploads/2025/02/1-congress-415x299.jpg)
![1-congress](https://www.udayavani.com/wp-content/uploads/2025/02/1-congress-415x299.jpg)
Team Udayavani, May 4, 2023, 7:45 AM IST
ಆಳಂದ (ಕಲಬುರಗಿ): ರಾಜ್ಯ ಸರಕಾರದ ಶೇ.40 ಕಮಿಷನ್ ಭ್ರಷ್ಟಾಚಾರವನ್ನು ಮುಚ್ಚಿಕೊಳ್ಳಲು ರಾಷ್ಟ್ರ ನಾಯಕರಾದ ನರೇಂದ್ರ ಮೋದಿ, ಅಮಿತ್ ಶಾ, ಯೋಗಿ ಆದಿತ್ಯನಾಥ ಸಹಿತ 30ಕ್ಕೂ ಅಧಿಕ ಸಚಿವರು ನನ್ನ ಮೇಲೆ ಮುಗಿ ಬಿದ್ದಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ಡಾ| ಮಲ್ಲಿಕಾರ್ಜುನ ಖರ್ಗೆ ಆಕ್ರೋಶ ವ್ಯಕ್ತಪಡಿಸಿದರು.
ನಗರದಲ್ಲಿ ಪಕ್ಷದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಕಲಬುರಗಿ ಮೇಲೆ ಪ್ರಧಾನಿ ಮೋದಿಗೆ ಪ್ರೀತಿ ಜಾಸ್ತಿಯಾಗಿದೆ. ಅಭಿವೃದ್ಧಿ ಕೈಗೊಳ್ಳದೆ, ಅದರ ಬಗ್ಗೆ ಚಕಾರವನ್ನೂ ಎತ್ತದೆ, ಚುನಾವಣೆಯಲ್ಲಿ ಮೋದಿ, ಶಾ, ಯೋಗಿ ಮತಕ್ಕೋಸ್ಕರ ಇಲ್ಲಿಗೆ ಬಂದು ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಯೋಗಿ ಆದಿತ್ಯನಾಥ ಮುಖ್ಯಮಂತ್ರಿ ಆದ ಮೇಲೆ ಇನ್ನೂ ಕೆಟ್ಟ ಬುದ್ಧಿ ಬಂದಿದೆ. ಅಭಿವೃದ್ಧಿಗೆ ಒತ್ತು ಕೊಡುವ ಬದಲು ಬುಲ್ಡೋಜರ್ ಹಾಯಿಸುವುದು, ಗೂಂಡಾಗಳನ್ನು ಗಲ್ಲಿಗೇರಿಸುತ್ತೇವೆ, ಗುಂಡು ಹಾರಿಸುತ್ತೇವೆ ಎಂದೆಲ್ಲ ಮಾತನಾಡಿ ಕಾನೂನು ಕೈಗೆತ್ತಿಕೊಳ್ಳುತ್ತಿದ್ದಾರೆ. ದೇಶದಲ್ಲಿ ನ್ಯಾಯಾಂಗ ವ್ಯವಸ್ಥೆ ಇರುವಾಗ ಹೀಗೆಲ್ಲ ಹೇಳುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಹಿಂದೊಮ್ಮೆ ನಾನು ಸಂಸತ್ತಿನಲ್ಲಿ ಭಾಷಣ ಮಾಡುತ್ತಿದ್ದಾಗ ಯೋಗಿ ಗೋಳ್ಳೋ ಎಂದು ಅಳಲು ಆರಂಭಿಸಿದ್ದರು. “ಯೋಗಿಯವರೇ ಯಾಕೆ ಅಳುತ್ತೀರಿ’ ಎಂದು ಸ್ಪೀಕರ್ ಮಹಾಜನ್ ಕೇಳಿದಾಗ, “ಖರ್ಗೆಯವರು ನನ್ನ ಮುಖ ರಾಮನಂತೆ ಇದೆ. ಆದರೆ ಬಗಲಲ್ಲಿ ಚೂರಿ ಇದೆ” ಎಂದಿದ್ದಾರೆ ಎಂದಿದ್ದರು. ಆದರೆ ನಾನು ಈ ದೇಶದ ಮೂಲನಿವಾಸಿಗಳು ಇಲ್ಲಿಯೇ ಹುಟ್ಟಿ ಇಲ್ಲಿನ ಮಣ್ಣಿಗೆ ಸೇರುತ್ತಾರೆ. ಹೊರಗಿನಿಂದ ಬಂದವರು ಈ ದೇಶವನ್ನು ಲೂಟಿ ಮಾಡಿದ್ದಾರೆ ಎಂದಷ್ಟೇ ಹೇಳಿದ್ದೆ. ಆದರೆ ಈಗ ಇದೇ ಮನುಷ್ಯ ಸಾಧು, ಸಂತರ ವಸ್ತ್ರ ಧರಿಸಿ ಮನುಷ್ಯ ಕುಲದಲ್ಲಿ ಜಗಳ ಹುಟ್ಟುಹಾಕಲು ನೋಡುತ್ತಿದ್ದಾರೆ ಎಂದರು.
ನೆಲೋಗಿ….: ಒಂದೇ ಊರಿನ ಇಬ್ಬರು ಈಗ ಶಾಸಕರು!
CM Post Crisis: ನಾನು ಈ ಪಕ್ಷ ಕಟ್ಟಿದ್ದೇನೆ..: ದೆಹಲಿಯಲ್ಲಿ ಗುಡುಗಿದ ಡಿಕೆ ಶಿವಕುಮಾರ್
ಸಿಎಂ ಆಯ್ಕೆಗೆ ಕಗ್ಗಂಟಾಗುತ್ತಿರುವುದು ಅಂದು ‘ರಾಹುಲ್ ಗಾಂಧಿ’ ಕೊಟ್ಟ ಆ ಒಂದು ಮಾತು!
ಚುನಾವಣಾ ರಾಜಕೀಯದಿಂದ ನಿವೃತ್ತನಾಗುತ್ತಿದ್ದೇನೆ: ರಮಾನಾಥ ರೈ ಘೋಷಣೆ
ಮುಖ್ಯಮಂತ್ರಿ ಆಯ್ಕೆ; ಅಮ್ಮ ಡಿಕೆಶಿ ಪರ, ಮಗ ಸಿದ್ದು ಪರ: ಬಿಕ್ಕಟ್ಟಿಗೆ ಹೈಕಮಾಂಡ್ ಕಾರಣವೇ?
You seem to have an Ad Blocker on.
To continue reading, please turn it off or whitelist Udayavani.