ಯುದ್ಧ ನಿಲ್ಲಬೇಕೆಂದು ಮೋದಿ ಪ್ರಯತ್ನಿಸುತ್ತಿದ್ದಾರೆ: ಶೃಂಗೇರಿಯಲ್ಲಿ ಹೆಚ್ ಡಿಡಿ
Team Udayavani, Feb 25, 2022, 3:33 PM IST
ಶೃಂಗೇರಿ : ಯುದ್ಧ ಶಮನ ವಾಗಬೇಕೆಂದು ನಮ್ಮ ಪ್ರಧಾನಮಂತ್ರಿಗಳು ಪ್ರಯತ್ನ ಮಾಡುತ್ತಿದ್ದಾರೆ, ರಷ್ಯಾದ ಅಧ್ಯಕ್ಷ ಪುಟಿನ್ ಅವರೊಂದಿಗೆ ಮೋದಿಯವರು ಉತ್ತಮ ಬಾಂಧವ್ಯ ಹೊಂದಿದ್ದಾರೆ ಮುಂದೇನಾಗುತ್ತದೆ ನೋಡೋಣ ಎಂದು ಮಾಜಿ ಪ್ರಧಾನಿ ಹೆಚ್. ಡಿ. ದೇವೇಗೌಡ ಹೇಳಿಕೆ ನೀಡಿದ್ದಾರೆ.
ಶುಕ್ರವಾರ ಮಧ್ಯಾಹ್ನ ಶೃಂಗೇರಿಯಲ್ಲಿಗುರುಗಳ ದರ್ಶನ ಪಡೆದು, ತಾಯಿ ಜಗನ್ಮಾತೆ ಶಾರದಾಂಬೆಯಾ ದರ್ಶನ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಈಶ್ವರ ದೇವಾಲಯಕ್ಕೆ ಪೂಜೆ ಸಲ್ಲಿಸಿ ನಾಳೆ ವಾಪಸ್ ಹೋಗುತ್ತೇನೆ ಎಂದು ತಿಳಿಸಿದರು.
ಪ್ರತಿದಿನ ಪಕ್ಷ ಸಂಘಟನೆ ಕೆಲಸ ಮಾಡುತ್ತಿದ್ದೇನೆ ಶಾರದಾಂಬೆ ಯ ಆಶಿರ್ವಾದ ಪಡೆಯಲು ಬಂದಿದ್ದೇನೆ ಎಂದ್ರು.
ರಷ್ಯಾ ಹಾಗು ಉಕ್ರೇನ್ ಯುದ್ಧದ ಬಗ್ಗೆ ಪ್ರತಿಕ್ರಿಯೆ ನೀಡಿ, ಸಡನ್ನಾಗಿ 4 ದಿನದ ಹಿಂದೆ ಯುದ್ದ ಮಾಡೋದಾಗಿ ರಷ್ಯಾದ ಅಧ್ಯಕ್ಷರು ಹೇಳಿದ್ರು ಆಗಲೇ ಉಕ್ರೇನ್ ಮೇಲೆ ಯುದ್ದ ಶುರುಮಾಡಿದ್ದಾರೆ. ಪ್ರಪಂಚದ ಅನೇಕ ರಾಷ್ಟ್ರಗಳು ಯುದ್ಧ ಬೇಡವೆಂದು ಹೇಳುತ್ತಿದೆ ಆದರೆ ರಷ್ಯಾ ಮಾತ್ರ ನಾನು ನಿಲ್ಲಿಸುವುದಿಲ್ಲ ಅಂತ ಹೇಳುತ್ತಿದೆ ಎಂದು ಬೇಸರ ವ್ಯಕ್ತ ಪಡಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.