ಮೂಲ್ಕಿ: ಲಾರಿ ಢಿಕ್ಕಿ; ಪಾದಚಾರಿ ಮಹಿಳೆ ಗಂಭೀರ
Team Udayavani, Jun 30, 2023, 5:05 AM IST
ಮೂಲ್ಕಿ: ಸರಕು ತುಂಬಿದ್ದ ಲಾರಿ ಹೆದ್ದಾರಿ ದಾಟುತ್ತಿದ್ದ ಮಹಿಳೆಗೆ ಗುರುವಾರ ಮಧ್ಯಾಹ್ನ ಢಿಕ್ಕಿ ಹೊಡೆದು ಮಹಿಳೆ ತಲೆ ಮತ್ತು ಮುಖಕ್ಕೆ ಗಂಭೀರವಾಗಿ ಗಾಯವಾದ ಘಟನೆ ಮೂಲ್ಕಿಯಲ್ಲಿ ಸಂಭವಿಸಿದೆ.
ಅವರು ಮಂಗಳೂರಿನ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮೂಲ್ಕಿಯ ಸಬ್ ರಿಜಿಸ್ಟ್ರಾರ್ ಕಚೇರಿ ಬಳಿಯ ನಿವಾಸಿ ವಾಲ್ಟರ್ ಆರಾನ್ಹ ಅವರ ಪತ್ನಿ ವೆರೋನಿಕಾ ಆರಾನ್ಹ (53) ಗಾಯಾಳು. ಲಾರಿ ಹೆದ್ದಾರಿಯ ಉಡುಪಿ ಕಡೆಯಿಂದ ಬರುತ್ತಿದ್ದಾಗ ಇದೇ ರಸ್ತೆಯ ಹೊಸಪೇಟೆ-ಪಂಚಮಹಾಲ್ ಜಂಕ್ಷನ್‌ನ ಬಳಿಯ ಹೆದ್ದಾರಿಯಲ್ಲಿ ಕಾರೊಂದು ಕೆಟ್ಟು ಚಲಿಸಲಾಗದೆ ನಿಂತಿತ್ತು.
ಲಾರಿ ಚಾಲಕ ಮಹಿಳೆಯನ್ನು ಅಪಘಾತದಿಂದ ರಕ್ಷಿಸುವ ಯತ್ನದಲ್ಲಿ ಲಾರಿಯನ್ನು ತಿರುಗಿಸಿದ್ದು, ಈ ವೇಳೆ ಲಾರಿ ಮಹಿಳೆಗೆ ಮತ್ತು ಕಾರಿಗೆ ಢಿಕ್ಕಿಯಾಗಿ ಡಿÊçೆಡರ್ ಮೇಲೆ ಹತ್ತಿ ನಿಂತಿದೆ. ಅಫಘಾತದ ತೀವ್ರತೆಯಿಂದ ಗಾಯಾಳು ರಸ್ತೆಗೆ ಎಸೆಯಲ್ಪಟ್ಟು ತಲೆಗೆ ಗಂಭೀರ ಪೆಟ್ಟು ಹಾಗೂ ಮುಖಕ್ಕೆ ತೀವ್ರ ಸ್ಪರೂಪದ ಗಾಯವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.