ಉಕ್ರೇನ್ ನಲ್ಲಿ ಸಿಲುಕಿರುವ ರಾಜ್ಯದ 10 ಕ್ಕೂ ಹೆಚ್ಚು ವಿದ್ಯಾರ್ಥಿಗಳು:ಆತಂಕದಲ್ಲಿ ಪೋಷಕರು
ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಾಗಲೇ ಬಾಂಬ್ ಸ್ಫೋಟ..!
Team Udayavani, Feb 24, 2022, 7:05 PM IST
ಬೆಂಗಳೂರು: ರಷ್ಯಾ ಯುದ್ಧ ಸಾರಿ, ದಾಳಿ ಆರಂಭಿಸಿರುವ ವೇಳೆಯಲ್ಲಿ ವಿದ್ಯಾಭ್ಯಾಸಕ್ಕಾಗಿ ಉಕ್ರೇನ್ ಗೆ ವಿದ್ಯಾಭ್ಯಾಸಕ್ಕಾಗಿ ತೆರಳಿರುವ ರಾಜ್ಯದ 10 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದು, ಪಾಲಕರು ಆತಂಕಕ್ಕೀಡಾಗಿದ್ದಾರೆ.
ಶಿವಮೊಗ್ಗ
ಸಂತೆಕಡೂರು ಮೂಲದ ದ್ವಿತೀಯ ವರ್ಷದ ಎಂಬಿಬಿಎಸ್ ಓದುತ್ತಿರುವ ತೇಜಸ್ ಸಿಲುಕಿಕೊಂಡಿದ್ದಾರೆ. ಅವರು ಜಗದೀಶ್ ಹಾಗೂ ದೇವಕಿ ದಂಪತಿ ಪುತ್ರ.ಕುಟುಂಬದೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದು,ವಿಮಾನ ಹಾರಾಟ ಆರಂಭಗೊಂಡ ಕೂಡಲೇ ಭಾರತಕ್ಕೆ ವಾಪಸ್ ಆಗುವುದಾಗಿ ಕುಟುಂಬದವರಿಗೆ ಕರೆ ಮಾಡಿರುವುದಾಗಿ ತಿಳಿದು ಬಂದಿದೆ.
ತೇಜಸ್ ಅನ್ನು ಸುರಕ್ಷಿತವಾಗಿ ಕರೆಸಿಕೊಳ್ಳುವಂತೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವರನ್ನು ಭೇಟಿ ಮಾಡಿ ಪಾಲಕರು ಮನವಿ ಮಾಡಿಕೊಂಡಿದ್ದಾರೆ.
ತೇಜಸ್ ಸೇರಿದಂತೆ ಕರ್ನಾಟದಿಂದ ಉಕ್ರೇನ್ ಗೆ ತೆರಳಿದ ಎಲ್ಲರನ್ನೂ ಸುರಕ್ಷಿತವಾಗಿ ಕರೆಯಿಸಿಕೊಳ್ಳುತ್ತೇವೆ ಎಂದು ಪಾಲಕರಿಗೆ , ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸೇರಿ ನೀಡಿದ ಗೃಹ ಸಚಿವರು ಅಭಯ ನೀಡಿದ್ದಾರೆ.
ಬೆಳಗಾವಿ
ರಾಯಬಾಗ ತಾಲೂಕಿನ ಕಂಕಣವಾಡಿ ಹಾಗೂ ಗೋಕಾಕ ಘಟಪ್ರಭಾದ ಎಂಬಿಬಿಎಸ್ ಓದುತ್ತಿರುವ ವಿದ್ಯಾರ್ಥಿನಿಯರಿಬ್ಬರು ಸುರಕ್ಷಿತ ಇರುವುದಾಗಿ ಮಾಹಿತಿ ನೀಡಿದ್ದಾರೆ ಪಾಲಕರು ಆತಂಕದಲ್ಲಿದ್ದಾರೆ.
ವಿಜಯಪುರ
ಜಿಲ್ಲೆಯ ತಾಳಿಕೋಟಿ ತಾಲೂಕಿನ ತಮದಡ್ಡಿ ಮೂಲದ ಸುಚಿತ್ರಾ ಮಲ್ಲನಗೌಡ ಕವಡಿಮಟ್ಟಿ ಸಮಸ್ಯೆಗೆ ಸಿಲುಕಿದ್ದು, ಸುಚಿತ್ರಾಳ ತಂದೆ ಮಲ್ಲನಗೌಡ ಕವಡಿಮಟ್ಟಿ ಡಿಸಿಸಿ ಬ್ಯಾಂಕ್ ಫೀಲ್ಡ್ ಆಫೀಸರ್ ಆಗಿದ್ದು, ಅವರ ಕುಟುಂಬ ವಿಜಯಪುರ ನಗರದಲ್ಲಿ ನೆಲೆಸಿದೆ.
ಸುಚಿತ್ರಾಳ ತಂದೆ ಮಲ್ಲನಗೌಡ ಹಾಗೂ ತಾಯಿ ಕಮಲಾ ಕವಡಿಮಟ್ಟಿ ಅವರಿಗೆ ಇಬ್ಬರು ಮಕ್ಕಳಿದ್ದು, ಹಿರಿಯ ಮಗಳು ಸುಚಿತ್ರಾ, ಕಿರಿಯ ಪುತ್ರ ಅಭಿಷೇಕ ಪಿಯುಸಿ ವಿದ್ಯಾರ್ಥಿಯಾಗಿದ್ದಾನೆ.ಮಗಳು ಸುರಕ್ಷಿತವಾಗಿ ಬರಲೆಂದು ಪೋಷಕರು ಆಶಯ ವ್ಯಕ್ತಪಡಿಸುತ್ತಿದ್ದಾರೆ.
ಇದನ್ನೂ ಓದಿ : ಉಕ್ರೇನ್ ನಲ್ಲಿ ಸಿಲುಕಿರುವ ರಾಜ್ಯದ ವಿದ್ಯಾರ್ಥಿಗಳನ್ನು ಕರೆತರಲು ಕ್ರಮ: ಸಿಎಂ ಬೊಮ್ಮಾಯಿ
ದಾವಣಗೆರೆ
ಮೂವರು ವೈದ್ಯಕೀಯ ವಿದ್ಯಾರ್ಥಿಗಳು ಸಿಲುಕಿಕೊಂಡಿದ್ದು, ಭಗತ್ ಸಿಂಗ್ ನಗರದ ವಿದ್ಯಾರ್ಥಿಗಳಾದ ಮಹ್ಮದ್ ಅಬೀದ್, ಮಿಜ್ಬಾ ಹಾಗೂ ಹಬೀಜಾ. ಉಕ್ರೇನ್ ನಲ್ಲಿದ್ದಾರೆ. ಸದ್ಯ ಯಾವುದೇ ತೊಂದರೆ ಇಲ್ಲಾ ಸುರಕ್ಷಿತವಾಗಿದ್ದೇವೆ ಎಂದು ವಿದ್ಯಾರ್ಥಿಗಳು ಪೋಷಕರಿಗೆ ಮಾಹಿತಿ ನೀಡಿದ್ದಾರೆ.
ಚಿತ್ರದುರ್ಗ
ನಗರದ ವಿದ್ಯಾರ್ಥಿನಿ ,ಪಿಡಬ್ಲ್ಯೂಡಿ ಇಂಜಿನಿಯರ್ ತಿಪ್ಪೇಸ್ವಾಮಿ ಪುತ್ರಿ ಸುನೇಹಾ.ಉಕ್ರೇನ್ ನಲ್ಲಿ ಎಂಬಿಬಿಎಸ್ ಓದುತ್ತಿದ್ದು, ಇಂದು ಭಾರತಕ್ಕೆ ವಾಪಸ್ಸಾಗಬೇಕಿತ್ತು. ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಾಗಲೇ ಬಾಂಬ್ ಸ್ಫೋಟ ಸಂಭವಿಸಿದ ಕಾರಣ ನಿಲ್ದಾಣದ ಬಳಿಯ ಸ್ನೇಹಿತರ ಮನೆಯಲ್ಲಿ ಆಶ್ರಯ ಪಡೆದಿದ್ದಾಳೆ. ಹೈದರಾಬಾದ್ ಮೂಲದ ಪ್ರವೀಣ್ ಅವರು ಆಶ್ರಯ ನೀಡಿದ್ದಾರೆ. ಸುನೇಹಾ ಪೋಷಕರು ಆತಂಕಗೊಂಡಿದ್ದು, ಪುತ್ರಿಯನ್ನು ಸುರಕ್ಷಿತವಾಗಿ ಕರೆತರಲು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಧಾರವಾಡ
ವೈದ್ಯಕೀಯ ಶಿಕ್ಷಣಕ್ಕೆಂದು ತೆರಳಿದ್ದ ಧಾರವಾಡ ಜಿಲ್ಲೆ ಕುಂದಗೋಳ ತಾಲೂಕಿನ ಯರಗುಪ್ಪಿಯ ಯುವತಿಯೊಬ್ಬರು ಉಕ್ರೇನ್ ನಲ್ಲಿ ಸಿಲುಕಿಕೊಂಡಿದ್ದಾರೆ. ಯರಗುಪ್ಪಿಯ ಚೈತ್ರಾ ಬಿಬಿಎಸ್ ಮೂರನೇ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದು, ತವರಿಗೆ ಮರಳಲು ಚೈತ್ರಾ ಮುಂದಾಗಿದ್ದರು. ವಿಮಾನ ನಿಲ್ದಾಣದ ಮೇಲೆ ದಾಳಿ ನಡೆಸಿದ್ದರಿಂದ ವಿಮಾನ ಸಂಚಾರ ಸ್ಥಗಿತಗೊಂಡಿದ್ದರಿಂದ ಭಾರತಕ್ಕೆ ಮರಳಲು ಸಾಧ್ಯವಾಗಿಲ್ಲ.ಸುರಕ್ಷತೆ ದೃಷ್ಟಿಯಿಂದ ಬಂಕರ್ ಗಳಲ್ಲಿ ಉಳಿಯಲು ಉಕ್ರೇನ್ ಸರಕಾರ ವ್ಯವಸ್ಥೆ ಮಾಡಿದೆ ಎಂದು ಚೈತ್ರಾ ತಿಳಿಸಿದ್ದಾಗಿ ಹಾಗೂ ಮಗಳು ಸಂಪರ್ಕದಲ್ಲಿ ಇರುವುದಾಗಿ ಚೈತ್ರಾ ಳ ಪಾಲಕರು ತಿಳಿಸಿದ್ದಾರೆ. ಚೈತ್ರಾ ತಂದೆ ಬಿಆರ್ ಟಿಎಸ್ ನಲ್ಲಿ ಕೆಲಸ ಮಾಡುತ್ತಿದ್ದರೆ, ತಾಯಿ ಖಾಸಗಿ ಶಾಲೆಯೊಂದನ್ನು ನಡೆಸುತ್ತಿದ್ದಾರೆ.
ಚಿಕ್ಕಮಗಳೂರು
ಎಂಬಿಬಿಎಸ್ ವಿದ್ಯಾಭ್ಯಾಸ ಮಾಡಲು ತೆರಳಿದ್ದ ಚಿಕ್ಕಮಗಳೂರು ತಾಲೂಕಿನ ಆಲ್ದೂರು ಹೊಸಳ್ಳಿಯ ಇಂದ್ರೇಶ್ ರವರ ಪುತ್ರ ಪ್ರದ್ವಿನ್. ಪ್ರದ್ವಿನ್, ಖಾರ್ಕಿವ್ ನಗರದ ಖಾರ್ಕಿವ್ ಇಂಟರ್ನ್ಯಾಷನಲ್ ಮೆಡಿಕಲ್ ಕಾಲೇಜಿನಲ್ಲಿ ಮೂರನೇ ವರ್ಷದ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದು,ಪುತ್ರನನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತರುವಂತೆ ಪೋಷಕರ ಮನವಿ ಮಾಡಿದ್ದಾರೆ.
ಕಲಬುರಗಿ ವಿದ್ಯಾರ್ಥಿನಿ ಸುರಕ್ಷಿತ
ಉಕ್ರೇನ್ನ ಕಿವ್ ನಗರದಲ್ಲಿ ಕಲಬುರಗಿ ನಗರದ ವಿದ್ಯಾರ್ಥಿನಿಯೋರ್ವಳು ವಾಸವಾಗಿರುವ ಮಾಹಿತಿ ಬಂದಿದೆ. ಗುಲ್ಬರ್ಗಾ ವಿಶ್ವವಿದ್ಯಾಲಯ ಬಯೋ ಕೆಮಿಸ್ಟ್ರಿ ವಿಭಾಗದ ಪ್ರಾಧ್ಯಾಪಕಿ ಲಲಿತಾ ಜೊನ್ನ ಎಂಬುವರ ಮಗಳು ಜೀವಿತಾ ಉಕ್ರೇನ್ನ ಕಿವ್ ನಗರದಲ್ಲಿ ಎಮ್ಬಿಬಿಎಸ್ ಏಳನೇ ಸೆಮಿಸ್ಟರ್ ವ್ಯಾಸಗ ಮಾಡುತ್ತಿದ್ದು, ಕಳೆದ ಅರ್ಧ ಗಂಟೆ ಹಿಂದೆ ತಾಯಿ ಜೊತೆ ಜೀವಿತಾ ವಿಡಿಯೋ ಕಾಲ್ ಮಾಡಿ ಮಾತಾಡಿದ್ದಾರೆ. ಇನ್ನೂ ಕಿರಾಣ ವಸ್ತುಗಳನ್ನ ತರಲು ಮಾರುಕಟ್ಟೆಗೆ ಬಂದಿರುವುದಾಗಿ ಹೇಳಿರುವ ಜೀವಿತಾ. ನಾನು ಸುರಕ್ಷತೆಯಿಂದ ಇದ್ದು, ಆತಂಕ ಪಡುವ ಅಗತ್ಯ ಇಲ್ಲ ಅಂತಾ ತಾಯಿಗೆ ಜೀವಿತಾ ಹೇಳಿದ್ದಾಳೆ ಸಹಜವಾಗಿ ಜೀವಿತಾಳ ಕುಟುಂಬಸ್ಥರು ಆತಂಕಗೊಂಡಿದ್ದಾರೆ.
ಬೀದರ್ ನ ಮೂವರು ವಿದ್ಯಾರ್ಥಿಗಳು
ಬೀದರ್ ನ ಮೂವರು ಉಕ್ರೇನ್ನ ಖಾರ್ಕಿವ್ ನಗರದಲ್ಲಿನ ಖಾರ್ಕಿವ್ ರಾಷ್ಟ್ರೀಯ ವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ ಎಂಬಿಬಿಎಸ್ ವ್ಯಾಸಂಗಕ್ಕಾಗಿ ತೆರಳಿದ್ದುಅಮಿತ್ ಸಿರಂಜೆ, ಬಸವಕಲ್ಯಾಣದ ವೈಷ್ಣವಿ ಸೇರಿ ಮೂವರು ವಿದ್ಯಾರ್ಥಿಗಳು ಖಾರ್ಕಿವ್ನಲ್ಲಿದ್ದಾರೆ. ಈ ಪ್ರದೇಶದಲ್ಲಿ ಗುರುವಾರ ಬೆಳಗ್ಗೆ ಗುಂಡಿನ ದಾಳಿ ನಡೆದಿದೆ. ಗಡಿಯಿಂದ ಕೇವಲ 60 ಕಿ.ಮೀ. ದೂರದಲ್ಲಿರುವ ಖಾರ್ಕಿವ್ ನಗರ ರಷ್ಯಾದ ಮುಂದಿನ ಟಾರ್ಗೆಟ್ ಎಂದು ಹೇಳಲಾಗುತ್ತಿದೆ. ಹಾಗಾಗಿ ಯುದ್ಧೋನ್ಮಾದದಿಂದಾಗಿ ವಿದ್ಯಾರ್ಥಿಗಳಲ್ಲಿ ಆತಂಕ ಮನೆ ಮಾಡಿದೆ.
ಬೀದರ ಜಿಲ್ಲೆಯ ವಿದ್ಯಾರ್ಥಿಗಳು ಸ್ವದೇಶಕ್ಕೆ ಬರಲು ಮಾರ್ಚ್ ಮೊದಲ ವಾರದಲ್ಲಿ ವಿಮಾನ ಟಿಕೆಟ್ ಬುಕಿಂಗ್ ಆಗಿದ್ದವು. ಆದರೆ, ರಷ್ಯಾದ ದಿಢೀರ್ ದಾಳಿಯಿಂದ ಖಾರ್ಕಿವ್ ನಗರದ ವಿಮಾನ ನಿಲ್ದಾಣ ಬಂದ್ ಮಾಡಲಾಗಿದೆ. ಹೀಗಾಗಿ ವಿದ್ಯಾರ್ಥಿಗಳು ಆತಂಕಗೊಂಡಿದ್ದಾರೆ.
ಅಮಿತ್ ಸಿರಂಜೆ ಖಾರ್ಕಿವ್ ವಿವಿಯಲ್ಲಿ ಎಂಬಿಬಿಎಸ್ ನಾಲ್ಕನೇ ಸೆಮಿಸ್ಟರ್ನಲ್ಲಿ ಓದುತ್ತಿದ್ದಾನೆ. ಭಾಲ್ಕಿ ಕರಡ್ಯಾಳ ಗುರುಕುಲನಲ್ಲಿ ಪಿಯುಸಿ ವ್ಯಾಸಂಗ ಮಾಡಿದ್ದ ಇತ, ಕಳೆದ ಆಗಸ್ಟ್ನಲ್ಲಿ ಅಮಿತ್ ಇಲ್ಲಿಗೆ ಬಂದಿದ್ದ. ಉಕ್ರೇನ್ನಲ್ಲಿ ಯುದ್ಧದ ಕಾರ್ಮೋಡ ಆತಂಕ ಆವರಿಸಿದ ನಂತರ ಮಾ.7 ಕ್ಕೆ ಭಾರತಕ್ಕೆ ಬರಲು ವಿಮಾನ ಟಿಕೆಟ್ ಬುಕಿಂಗ್ ಮಾಡಲಾಗಿತ್ತು. ಆದರೆ ದಿಢೀರ್ ದಾಳಿಯಿಂದ ವಿಮಾನ ಬಂದ್ ಆಗಿದ್ದು ಆತಂಕ ಮೂಡಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Amit Shah ಹೇಳಿಕೆ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ: ಬಿ.ಕೆ. ಹರಿಪ್ರಸಾದ್
Mandya: ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 46 ಮಂದಿ ಸಾಧಕರಿಗೆ ಸಮ್ಮಾನ
Winter Session: ಪಂಚಮಸಾಲಿಗಳ ಮೇಲೆ ಲಾಠಿ ಬೀಸಿದವರಿಗೆ ಬಹುಮಾನ; ಶಾಸಕ ಯತ್ನಾಳ್ ಆಕ್ರೋಶ
Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ
Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.