Covid-19 ಆಯ್ತು…ಈಗ ಆಫ್ರಿಕಾ ಸೇರಿ ಜಾಗತಿಕವಾಗಿ ಕಳವಳ ಹುಟ್ಟಿಸಿದ ಮಂಕಿಪಾಕ್ಸ್-ಏನಿದು

ಮಧ್ಯ ಆಫ್ರಿಕಾದಲ್ಲಿ ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿಯನ್ನು ಘೋಷಿಸಿದೆ

Team Udayavani, Aug 16, 2024, 3:05 PM IST

Covid-19 ಆಯ್ತು…ಈಗ ಆಫ್ರಿಕಾ ಸೇರಿ ಜಾಗತಿಕವಾಗಿ ಕಳವಳ ಹುಟ್ಟಿಸಿದ ಮಂಕಿಪಾಕ್ಸ್-ಏನಿದು

ವಾಷಿಂಗ್ಟನ್:‌ ಜಾಗತಿಕವಾಗಿ ಭಯ-ಭೀತಿ ಹುಟ್ಟಿಸಿ ಕಂಗೆಡಿಸಿದ್ದ ಕೋವಿಡ್‌ ಮಹಾಮಾರಿ ಸೋಂಕಿನ ಕಹಿ ಮರೆಯುವ ಮುನ್ನವೇ ಇದೀಗ ಆಫ್ರಿಕಾದಲ್ಲಿ ಮಂಕಿಪಾಕ್ಸ್‌ (Mpox Diseases) ಜನರನ್ನು ಕಂಗೆಡಿಸಿದ್ದು, ಇದು ಇತರ ದೇಶಗಳಿಗೂ ಹಬ್ಬುವ ಮೂಲಕ ಜಾಗತಿಕ ಅಪಾಯಕ್ಕೆ ಎಡೆಮಾಡಿಕೊಡುವ ಸಾಧ್ಯತೆ ಇರುವುದಾಗಿ ವರದಿ ತಿಳಿಸಿದೆ.

ಝೀಕಾ ಹಾಗೂ ಚಿಕುನ್‌ ಗುನ್ಯಾದಂತೆ ಮಂಕಿ ಪಾಕ್ಸ್‌ ಸೋಂಕನ್ನು ಕೂಡಾ ನಿರ್ಲಕ್ಷಿಸಲಾಗಿತ್ತು. 1958ರಲ್ಲಿ ಮೊದಲ ಬಾರಿಗೆ ವಿಜ್ಞಾನಿಗಳು ಮಂಕಿಪಾಕ್ಸ್‌ ಸೋಂಕನ್ನು ಪತ್ತೆ ಹಚ್ಚಿದ್ದರು. ಮೊದಲು ಕೋತಿಗಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದ ಈ ಮಂಕಿಪಾಕ್ಸ್‌ ನಂತರ ಮನುಷ್ಯರಿಗೂ ಸೋಂಕು ಹರಡತೊಡಗಿತ್ತು. 1970ರಲ್ಲಿ ಮನುಷ್ಯನಲ್ಲಿ ಮೊದಲ ಬಾರಿಗೆ ಈ ಸೋಂಕನ್ನು ಪತ್ತೆಹಚ್ಚಲಾಗಿತ್ತು. ಆದರೆ ದಶಕಗಳ ಕಾಲ ಈ ಸೋಂಕಿನ ಬಗ್ಗೆ ವೈಜ್ಞಾನಿಕವಾಗಿ ಹಾಗೂ ಆರೋಗ್ಯ ಇಲಾಖೆ ತೀವ್ರ ನಿರ್ಲಕ್ಷ್ಯ ವಹಿಸಿತ್ತು. ಇದರ ಪರಿಣಾಮ ಆಫ್ರಿಕಾ ಖಂಡಗಳಲ್ಲಿ ಮಂಕಿಪಾಕ್ಸ್‌ ಮಹಾಮಾರಿ ಜನರನ್ನು ಕಂಗೆಡಿಸಿಬಿಟ್ಟಿರುವುದಾಗಿ ವರದಿ ವಿವರಿಸಿದೆ.

2022ರಲ್ಲಿ ಅಭಿವೃದ್ಧಿಶೀಲ ದೇಶಗಳಲ್ಲೂ ಮಂಕಿಪಾಕ್ಸ್‌ ರಣಕೇಕೆ ಹಾಕಿದ ನಂತರ ವಿಜ್ಞಾನಿಗಳು ಸಂಶೋಧನೆಯಲ್ಲಿ ತೊಡಗಿಕೊಂಡಿದ್ದರು. ಏತನ್ಮಧ್ಯೆ ಜಾಗತಿಕವಾಗಿ ಮಂಕಿಪಾಕ್ಸ್‌ ಸೋಂಕು ತಡೆ ಲಸಿಕೆ, ಪ್ರಯೋಗಾಲಯ, ಡಯಾಗ್ನೋಸ್ಟಿಕ್‌ ಮೇಲೆ ಹೂಡಿಕೆ ಮಾಡುವಂತೆ ಆಫ್ರಿಕಾದ ಸಂಶೋಧಕರು ದುಂಬಾಲು ಬಿದ್ದಿದ್ದರು ಕೂಡಾ 2022-23ರಲ್ಲಿ ಮಂಕಿಪಾಕ್ಸ್‌ ಜಾಗತಿಕವಾಗಿ ಹರಡಿ ಮತ್ತೆ ಮರಣಭೀತಿ ಹುಟ್ಟಿಸಿರುವುದಾಗಿ ವರದಿ ತಿಳಿಸಿದೆ.

ಇದೀಗ ವಿಶ್ವ ಆರೋಗ್ಯ ಸಂಸ್ಥೆ ( WHO) ಸೋಂಕಿನ ಜಾಗತಿಕ ಕಳವಳದ ಹಿನ್ನೆಲೆಯಲ್ಲಿ ಮಧ್ಯ ಆಫ್ರಿಕಾದಲ್ಲಿ ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿಯನ್ನು ಘೋಷಿಸಿದೆ. ಮಂಕಿಪಾಕ್ಸ್‌ ಮಹಾಮಾರಿ ಆಫ್ರಿಕಾದಲ್ಲಿ ಹೆಚ್ಚಳವಾಗುತ್ತಿರುವ ನಿಟ್ಟಿನಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಇತರ ದೇಶಗಳಲ್ಲೂ ಎಚ್ಚರ ವಹಿಸುವ ನಿಟ್ಟಿನಲ್ಲಿ ತುರ್ತುಸ್ಥಿತಿ ಘೋಷಿಸಿರುವುದಾಗಿ ವರದಿ ತಿಳಿಸಿದೆ.

ಇದು ಮಾರಣಾಂತಿಕವೇ?

ಈ ಮಂಕಿಪಾಕ್ಸ್‌ ಸೋಂಕು ಮನುಷ್ಯನಿಂದ ಮನುಷ್ಯನಿಗೆ ಲೈಂಗಿಕ ಸಂಪರ್ಕದಿಂದ ಹರಡುತ್ತದೆ ಎಂದು ವಿಜ್ಞಾನಿಗಳು ಸಂಶೋಧನೆಯಿಂದ ಪತ್ತೆಹಚ್ಚಿದ್ದರು. ಮಂಕಿ ಪಾಕ್ಸ್‌ ಸೋಂಕು ಪೀಡಿತ ವ್ಯಕ್ತಿಯಲ್ಲಿ ಮೊದಲಿಗೆ ಚಳಿ, ಜ್ವರ ಮೈಕೈ ನೋವು ಕಾಣಿಸಿಕೊಳ್ಳುತ್ತದೆ. ಒಂದು ವೇಳೆ ಇದಕ್ಕೆ ಸೂಕ್ತ ಚಿಕಿತ್ಸೆ ಲಭ್ಯವಾಗದಿದ್ದಲ್ಲಿ, ಮೈ-ಕೈ-ಕಾಲುಗಳಲ್ಲಿ ಗುಳ್ಳೆಗಳು ಕಾಣಿಸಿಕೊಳ್ಳುತ್ತದೆ. ಜೊತೆಗೆ ತುರಿಕೆಯೂ ಇರುತ್ತದೆ. ಮಂಕಿಪಾಕ್ಸ್‌ ಗೆ ಸೂಕ್ತ ಚಿಕಿತ್ಸೆ ಸಿಗದಿದ್ದರೆ ಸಾವು ಕೂಡಾ ಸಂಭವಿಸುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.

ಟಾಪ್ ನ್ಯೂಸ್

Udayavani.com “ನಮ್ಮನೆ ಕೃಷ್ಣ”: ಮೆಚ್ಚುಗೆ ಗಳಿಸಿದ 10ನೇ ರೀಲ್ಸ್ ಪ್ರಸಾರ

Udayavani.com “ನಮ್ಮನೆ ಕೃಷ್ಣ”: ಮೆಚ್ಚುಗೆ ಗಳಿಸಿದ 10ನೇ ರೀಲ್ಸ್ ಪ್ರಸಾರ

akhilesh

Akhilesh Yadav ಗಂಭೀರ ಆರೋಪ: ಅಯೋಧ್ಯೆಯಲ್ಲಿ ಭಾರೀ ಭೂ ಹಗರಣ

1-sadsadasd

Ganesh festival; ಡೋಲು-ತಾಸೆಯವರ ಸಂಖ್ಯೆಗೆ NGT ನಿರ್ಬಂಧಕ್ಕೆ ಸುಪ್ರೀಂ ತಡೆ

Jawan‌ Movie: ಜಪಾನ್‌ನಲ್ಲಿ ಈ ದಿನ ರಿಲೀಸ್‌ ಆಗಲಿದೆ ಶಾರುಖ್‌ – ಅಟ್ಲಿ ʼಜವಾನ್‌ʼ

Jawan‌ Movie: ಜಪಾನ್‌ನಲ್ಲಿ ಈ ದಿನ ರಿಲೀಸ್‌ ಆಗಲಿದೆ ಸೂಪರ್‌ ಹಿಟ್ ʼಜವಾನ್‌ʼ

Good News: ಶೀಘ್ರದಲ್ಲಿ ಪೆಟ್ರೋಲ್‌, ಡೀಸೆಲ್‌ ಬೆಲೆ ಇಳಿಕೆ ಸಾಧ್ಯತೆ? ಪಂಕಜ್‌ ಜೈನ್

Good News: ಶೀಘ್ರದಲ್ಲಿ ಪೆಟ್ರೋಲ್‌, ಡೀಸೆಲ್‌ ಬೆಲೆ ಇಳಿಕೆ ಸಾಧ್ಯತೆ? ಪಂಕಜ್‌ ಜೈನ್

1-ffsdf

Chikkaballapur ನಗರಸಭೆ ಕೋಲಾಹಲ; ಡಾ.ಸುಧಾಕರ್ ಮೇಲುಗೈ: ಸವಾಲು ಹಾಕಿದ ಪ್ರದೀಪ್ ಈಶ್ವರ್!

HDK

Nagamangala Riots: ಗಲಭೆಗೆ ಕಾಂಗ್ರೆಸ್‌ ಸರಕಾರದ ತುಷ್ಟೀಕರಣ ನೀತಿಯೇ ಕಾರಣ: ಎಚ್‌ಡಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

10

Actor James Hollcroft: ಕೆಲ ದಿನಗಳ ಹಿಂದಷ್ಟೇ ನಾಪತ್ತೆಯಾಗಿದ್ದ ನಟ ಶವವಾಗಿ ಪತ್ತೆ

PM Modi ಚೀನವನ್ನು ಸರಿಯಾಗಿ ನಿಭಾಯಿಸಿಲ್ಲ: ರಾಹುಲ್‌ ಗಾಂಧಿ

PM Modi ಚೀನವನ್ನು ಸರಿಯಾಗಿ ನಿಭಾಯಿಸಿಲ್ಲ: ರಾಹುಲ್‌ ಗಾಂಧಿ

Kamala Harris: ಪುಟಿನ್‌ ನಿಮ್ಮನ್ನೇ ತಿಂದು ತೇಗುತ್ತಿದ್ದರು: ಟ್ರಂಪ್‌ಗೆ ಕಮಲಾ ತಿರುಗೇಟು!

Kamala Harris: ಪುಟಿನ್‌ ನಿಮ್ಮನ್ನೇ ತಿಂದು ತೇಗುತ್ತಿದ್ದರು: ಟ್ರಂಪ್‌ಗೆ ಕಮಲಾ ತಿರುಗೇಟು!

1-ssss

US Presidential debate; ಟ್ರಂಪ್-ಕಮಲಾ ಮುಖಾಮುಖಿ: ಬಾಣಕ್ಕೆ ಪ್ರತಿಬಾಣ

Americaದಲ್ಲಿ ಭಾರತ ವಿರೋಧಿ Lawmaker ಇಲ್ಹಾನ್‌ ಭೇಟಿಯಾದ ರಾಹುಲ್-‌ ಯಾರೀಕೆ?

Americaದಲ್ಲಿ ಭಾರತ ವಿರೋಧಿ Lawmaker ಇಲ್ಹಾನ್‌ ಭೇಟಿಯಾದ ರಾಹುಲ್-‌ ಯಾರೀಕೆ?

MUST WATCH

udayavani youtube

ಕೃಷ್ಣ ಮಠದ ಗಣಪತಿ ವಿಸರ್ಜನೆ ವೇಳೆ ತಾಸೆಯ ಪೆಟ್ಟಿಗೆ ಕುಣಿದು ಕುಪ್ಪಳಿಸಿದ ಭಕ್ತರು|

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

ಹೊಸ ಸೇರ್ಪಡೆ

1-baghi

Hombale Films ಬಹು ನಿರೀಕ್ಷಿತ ಬಘೀರ ಚಿತ್ರದ ರಿಲೀಸ್ ಡೇಟ್ ಘೋಷಣೆ

Road Mishap: ಸ್ಕೂಟಿಗೆ ಬೈಕ್‌ ಡಿಕ್ಕಿ; ಬೈಕ್ ಸವಾರ ಮೃತ್ಯು

Road Mishap: ಸ್ಕೂಟಿಗೆ ಬೈಕ್‌ ಡಿಕ್ಕಿ; ಬೈಕ್ ಸವಾರ ಮೃತ್ಯು

Udayavani.com “ನಮ್ಮನೆ ಕೃಷ್ಣ”: ಮೆಚ್ಚುಗೆ ಗಳಿಸಿದ 10ನೇ ರೀಲ್ಸ್ ಪ್ರಸಾರ

Udayavani.com “ನಮ್ಮನೆ ಕೃಷ್ಣ”: ಮೆಚ್ಚುಗೆ ಗಳಿಸಿದ 10ನೇ ರೀಲ್ಸ್ ಪ್ರಸಾರ

Ronny actress Samikshaa

Ronny ಗೆಲ್ಲುವ ಸಿನಿಮಾ: ನಟಿ ಸಮೀಕ್ಷಾ

akhilesh

Akhilesh Yadav ಗಂಭೀರ ಆರೋಪ: ಅಯೋಧ್ಯೆಯಲ್ಲಿ ಭಾರೀ ಭೂ ಹಗರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.