ಮುಲ್ಲಕಾಡು ರೇಚಕ ಸ್ಥಾವರದಿಂದಲೇ ತ್ಯಾಜ್ಯ ನೀರು ನೇರ ತೋಡಿಗೆ!
Team Udayavani, Feb 10, 2021, 5:35 AM IST
ಕಾವೂರು: ಸ್ವತ್ಛತೆ ಕಾಪಾಡಿ ಎಂದು ಸಾರ್ವಜನಿಕರಿಗೆ ಬುದ್ಧಿ ಹೇಳುವ ಸರಕಾರದ ಘಟಕಗಳೇ ಸ್ವತಃ ಈ ಮಾತನ್ನು ಉಲ್ಲಂಘಿಸುತ್ತಿರುವುದು ಕಾವೂರು ಮುಲ್ಲ ಕಾಡಿನ ರೇಚಕ ಸ್ಥಾವರ ಕಂಡಾಗ ತಿಳಿದು ಬರುತ್ತದೆ. ವಾರದಿಂದ ಇಲ್ಲಿನ ರೇಚಕ ಸ್ಥಾವರದ ಶುದ್ಧೀಕರಣ ಘಟಕದಲ್ಲಿ ಕೊಳಚೆ ನೀರನ್ನು ನೇರವಾಗಿ ತೋಡಿಗೆ ಬಿಡುವ ಆರೋಪ ಕೇಳಿಬಂದಿದೆ. ಇಲ್ಲಿನ ಸ್ಥಾವರಕ್ಕೆ ಬಂದ ಒಳಚರಂಡಿ ತ್ಯಾಜ್ಯಗಳನ್ನು ಮೂರು ಹಂತಗಳಲ್ಲಿ ಶುದ್ಧೀಕರಣಗೊಳಿಸಿ ಎಸ್‌ಇಝಡ್‌ಗೆ ಸಾಗಿಸಲಾಗುತ್ತಿದೆ. ಆದರೆ ಇದೀಗ ಇಲ್ಲಿನ ಉಳಿದ ತ್ಯಾಜ್ಯ ಸ್ಲೆಜ್‌ಗಳನ್ನು ನೇರವಾಗಿ ದೊಡ್ಡ ಪೈಪ್ ಮೂಲಕ ರೇಚಕ ಸ್ಥಾವರದ ಒಳಗಿರುವ ತೋಟಕ್ಕೆ ಬಿಡಲಾಗುತ್ತಿದೆ.
ಈ ಕೊಳಚೆ ನೀರು ಸಮೀಪದಲ್ಲೇ ಹರಿಯುವ ಮಳೆ ನೀರು ತೋಡಿಗೆ ಹರಿದು ಮುಲ್ಲಕಾಡು, ಮಂಜಲ್ ಪಾದೆ, ಬಂಗ್ರ ಕೂಳೂರು ಮತ್ತಿತರ ಕಡೆ ದುರ್ನಾತ ಬೀರು ತ್ತಿದೆ. ಇದರಿಂದ ಸ್ಥಳೀಯರು ಸಾಂಕ್ರಾಮಿಕ ರೋಗ ಹರಡುವ ಭೀತಿಗೆ ಒಳಗಾಗಿದ್ದಾರೆ
ರೇಚಕದ ಡೈಯಿಂಗ್ ಬೆಡ್ ಫುಲ್!
ಇಲ್ಲಿನ ರೇಚಕ ಸ್ಥಾವರಕ್ಕೆ ಬರುವ ತ್ಯಾಜ್ಯಗಳನ್ನು ಇಲ್ಲಿನ ಡೈಯಿಂಗ್ ಬೆಡ್‌ನಲ್ಲಿ ಎರಡಿಂಚಿನಷ್ಟು ತುಂಬಿಸಿ ಅದರಲ್ಲಿನ ಕಲ್ಮಶಗಳನ್ನು ತೆಗೆದು ಸಂಸ್ಕರಿಸಿ ಎರಡನೇ ಹಂತಕ್ಕೆ ಪೈಪ್ ಮೂಲಕ ಕಳಿಸಬೇಕಾಗುತ್ತದೆ. ಅನಂತರ ಮೂರನೇ ಹಂತದಲ್ಲಿ ಸಂಸ್ಕರಿಸಿ ಎಸ್‌ಇಝಡ್ ನೀರಿನ ಮರುಬಳಕೆಗೆ ಕ್ರಮ ಕೈಗೊಳ್ಳುತ್ತದೆ. ಆದರೆ ಇಲ್ಲಿ ಮೊದಲ ಹಂತದಲ್ಲೇ ಆರಿಂಚಿನಷ್ಟು ಸ್ಲೆಜ್ ತುಂಬಿಸಿದ ಕಾರಣ ತಾಂತ್ರಿಕವಾಗಿ ಸಮಸ್ಯೆಯಾಗಿ ಬೆಡ್‌ಗಳಲ್ಲಿ ನೀರು ನಿಂತು ಪಾಚಿ ಹಿಡಿದಿದೆ. ಇತ್ತ ಸ್ಲೆಜ್‌ಗಳನ್ನು ನೇರವಾಗಿ ತೋಡಿಗೆ ಬಿಡಲಾಗಿದೆ. ಇದರಿಂದ ಸುತ್ತಮುತ್ತ ಅತಿಯಾದ ದುರ್ನಾತ, ಸೊಳ್ಳೆಕಾಟ ಕಂಡು ಬರುತ್ತಿದ್ದು, ಸಾಂಕ್ರಾಮಿಕ ರೋಗ ಬಾ ಧಿಸಿದರೂ ಅಚ್ಚರಿ ಯಿಲ್ಲ. ಮುಲ್ಲಕಾಡು ಜನತೆ ಇಲ್ಲಿನ ರೇಚಕ ಸ್ಥಾವರದಿಂದ ಈಗಾಗಲೇ ನಿತ್ಯ ನರಕಯಾತನೆ ಅನುಭವಿಸುತ್ತಿದ್ದು ಇದೀಗ ಇಲ್ಲಿನ ಮಾಲಿನ್ಯದಿಂದ ಸುತ್ತಮುತ್ತಲಿನ ಬಾವಿನೀರು ಹಾಳಾಗಿ ಪಾಲಿಕೆಯ ಕೊಳವೆ ನೀರನ್ನು ಆಶ್ರಯಿಸಿದ್ದಾರೆ.ಹಲವು ದಿನ ಗಳಿಂದ ಈ ಭಾಗದಲ್ಲಿ ವಾಸವಿರುವ ಕುಟುಂಬ ಗಳಿಗೆ ಕೆಟ್ಟ ವಾಸನೆ ಬೀರುತ್ತಿದ್ದರಿಂದ ಅನು ಮಾನಗೊಂಡು ಏಕಾಏಕೀ ಭೇಟಿ ನೀಡಿ ಪರಿಶೀಲಿಸಿದಾಗ ಶುದ್ಧೀಕರಣಗೊಳಿಸದೆ ಪೈಪ್‌ನಲ್ಲಿ ತ್ಯಾಜ್ಯವನ್ನು ನೇರವಾಗಿ ತೋಟಕ್ಕೆ ಬಿಡುತ್ತಿರುವುದು ಕಂಡು ಆತಂಕವಾಯಿತು. ಈ ರೀತಿ ನಿರ್ಲಕ್ಷ್ಯಮಾಡಿದರೆ ಸ್ಥಳೀಯರು ಮುಂದಿನ ದಿನಗಳಲ್ಲಿ ಸಾಂಕ್ರಾಮಿಕ ರೋಗಕ್ಕೆ ತುತ್ತಾಗಬಹುದು. ಈ ಹಿಂದೆಯೂ ಇಂತಹ ಅಧ್ವಾನಗಳಾದಾಗ ಮರಗಿಡಗಳಲ್ಲಿ ಎಲ್ಲೆಂದರಲ್ಲಿ ನೊಣಗಳು ಕಂಡು ಬಂದು ಸಾರ್ವಜನಿಕರಿಗೆ ತೊಂದರೆಯಾಗಿತ್ತು ಎನ್ನುತ್ತಾರೆ ದೀಪಕ್ ಪೂಜಾರಿ.
ಬೆರಳೆಣಿಕೆಯ ಕಾರ್ಮಿಕರು!
ಇಲ್ಲಿನ ರೇಚಕ ಸ್ಥಾವರದ ಡೈಯಿಂಗ್ ಬೆಡ್ ಶುಚಿಗೊಳಿಸಲು ಕನಿಷ್ಠ ಹತ್ತು ಕಾರ್ಮಿಕರ ಆವಶ್ಯಕತೆಯಿದೆ. ಆದರೆ ಬುಧವಾರ ಭೇಟಿ ನೀಡಿದಾಗ ಬೆರಳೆಣಿಕೆಯ ಕಾರ್ಮಿಕರು ಕಂಡು ಬಂದಿದ್ದು ನಿತ್ಯ ಕೆಲಸ ಕಾರ್ಯಕ್ಕೂ ಸಾಲದಾಗಿದೆ. ಈ ಎಲ್ಲ ಸಮಸ್ಯೆಯಿಂದ ಡೈಯಿಂಗ್ ಬೆಡ್ ಶುಚಿಗೊಳಿಸಲಾಗದೆ ನೇರವಾಗಿ ತೋಡಿಗೆ ಬಿಡಲಾಗುತ್ತಿದೆ.
ಕ್ರಮಕ್ಕೆ ಸೂಚನೆ
ಮುಲ್ಲಕಾಡು ರೇಚಕ ಸ್ಥಾವರದಲ್ಲಿ ತ್ಯಾಜ್ಯವನ್ನು ನೇರವಾಗಿ ತೋಡಿಗೆ ಬಿಡುತ್ತಿರುವುದರ ಬಗ್ಗೆ ಅಧಿಕಾರಿಗಳಿಗೆ ಪರಿಶೀಲನೆ ನಡೆಸಲು ಸೂಚಿಸಲಾಗುವುದು. ತಪ್ಪು ಎಸಗಿದ್ದು ಕಂಡು ಬಂದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
-ಅಕ್ಷಯ್ ಶ್ರೀಧರ್, ಆಯುಕ್ತರು, ಮ.ನ.ಪಾ.
ತತ್‌ಕ್ಷಣ ಕ್ರಮ ಕೈಗೊಳ್ಳಿ
ಇಲ್ಲಿನ ಸ್ಥಾವರ ನಿರ್ವಹಣೆಗೆ ಶೇ.70ರಷ್ಟು ಎಸ್‌ಇಝಡ್, ಪಾಲಿಕೆ ಶೇ. 30ರಷ್ಟು ಅಂದರೆ 1.30 ಕೋ.ರೂ. ಗುತ್ತಿಗೆದಾ ರರಿಗೆ ಪಾವತಿಸುತ್ತದೆ. ತತ್‌ಕ್ಷಣ ಎಸ್‌ಇಝಡ್ ಅಧಿಕಾರಿಗಳು, ಪಾಲಿಕೆ ಆರೋಗ್ಯ ವಿಭಾಗ ಎಚ್ಚೆತ್ತು ಸೂಕ್ತ ಕ್ರಮ ಕೈಗೊಳ್ಳಬೇಕು. ಗುತ್ತಿಗೆ ರದ್ದುಪಡಿಸಿ ಗುತ್ತಿಗೆ ದಾರರನ್ನು ಕಪ್ಪುಪಟ್ಟಿಗೆ ಸೇರಿಸಬೇಕು.
-ದೀಪಕ್ ಪೂಜಾರಿ,ನಗರ ಯೋಜನೆ, ಸ್ಥಾಯೀ ಸಮಿತಿ ಮಾಜಿ ಅಧ್ಯಕ್ಷರು,
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mysuru: ಇನ್ಫೋಸಿಸ್ ಆವರಣದಲ್ಲಿ ಚಿರತೆ: ಸಿಬಂದಿಗೆ ವರ್ಕ್ ಫ್ರಂ ಹೋಂ
Professional Life: ಚಿತ್ರರಂಗಕ್ಕೆ ನಟ ದರ್ಶನ್ ಮರುಪ್ರವೇಶ!
Demand: ಮನೆ ನಿರ್ಮಾಣ: ಶೇ.18 ಜಿಎಸ್‌ಟಿ ರದ್ಧತಿಗೆ ಆಗ್ರಹಿಸುವೆ: ಟಿ.ಬಿ.ಜಯಚಂದ್ರ
Haveri: ಬಾಲಕಿಗೆ ಲೈಂಗಿಕ ದೌರ್ಜನ್ಯ, ಮತಾಂತರಕ್ಕೆ ಯತ್ನ: ಇಬ್ಬರ ವಶ
Re-Enforcement: ಹಳೇ ಪಿಂಚಣಿ ಯೋಜನೆ ಜಾರಿಗೊಳಿಸಿ: ಸಿ.ಎಸ್.ಷಡಾಕ್ಷರಿ ಮನವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.