Watch video:ಸೇತುವೆಯಲ್ಲಿ ಹೈಡ್ರಾಮಾ…ಕೊನೆಗೂ ಮಹಿಳೆಯ ಪ್ರಾಣ ರಕ್ಷಿಸಿದ ಟ್ರಾಫಿಕ್ ಪೊಲೀಸ್
ಟ್ರಾಫಿಕ್ ಕಾನ್ಸ್ ಟೇಬಲ್ ಗಳ ಸಮಯಪ್ರಜ್ಞೆಯಿಂದ ಆಕೆಯ ಜೀವ ರಕ್ಷಿಸಿದ್ದಕ್ಕೆ ನೆಟ್ಟಿಗರು ಬಹುಪರಾಕ್ ಹೇಳಿದ್ದಾರೆ.
Team Udayavani, Aug 3, 2023, 3:50 PM IST
ಮಹಾರಾಷ್ಟ್ರ: ಇತ್ತೀಚೆಗೆ ದೇಶಾದ್ಯಂತ ಆತ್ಮಹತ್ಯೆ ಪ್ರಕರಣಗಳು ಹೆಚ್ಚು ವರದಿಯಾಗುತ್ತಿದೆ. ಆದರೆ ನವಿ ಮುಂಬೈನ ವಾಶಿ ಸೇತುವೆ ಮೇಲಿಂದ ಸಮುದ್ರಕ್ಕೆ ಹಾರಿ ಜೀವ ಕಳೆದುಕೊಳ್ಳಲು ಯತ್ನಿಸಿದ ಮಹಿಳೆಯೊಬ್ಬಳನ್ನು ಮುಂಬೈ ಟ್ರಾಫಿಕ್ ಪೊಲೀಸರು ಚಾಕಚಕ್ಯತೆಯಿಂದ ರಕ್ಷಿಸಿದ ಘಟನೆ ನಡೆದಿದ್ದು, ಮಹಿಳೆಯನ್ನು ರಕ್ಷಿಸಿದ ವಿಡಿಯೋ ಇದೀಗ ವೈರಲ್ ಆಗಿದೆ.
ಇದನ್ನೂ ಓದಿ:ಗಿಳಿ ಕಾಣೆಯಾಗಿದೆ… ಹುಡುಕಿ ಕೊಟ್ಟವರಿಗೆ 10 ಸಾವಿರ ಬಹುಮಾನ
ಮಹಿಳೆಯನ್ನು ಸಮಯಪ್ರಜ್ಞೆಯಿಂದ ಕಾಪಾಡಿದ ಟ್ರಾಫಿಕ್ ಪೊಲೀಸರ ನಡೆಗೆ ಸಾರ್ವಜನಿಕರಿಂದ ಹಾಗೂ ನೆಟ್ಟಿಗರಿಂದ ಶ್ಲಾಘನೆ ವ್ಯಕ್ತವಾಗಿದೆ. ಮಹಿಳೆಯನ್ನು ಟ್ರಾಫಿಕ್ ಕಾನ್ಸ್ ಟೇಬಲ್ ಗಳಾದ ಶಿವಾಜಿರಾವ್ ಬಾಚ್ರೆ, ರಾಜು ಡಾಂಡೇಕರ್, ರಾಥೋಡ್ ಮತ್ತು ಟಾಂಬೆ ರಕ್ಷಿಸಿರುವುದಾಗಿ ಎ ಎನ್ ಐ ವರದಿ ಮಾಡಿದೆ.
ವಿಡಿಯೋದಲ್ಲೇನಿದೆ?:
ಸೇತುವೆಯ ಆಯಕಟ್ಟಿನ ಭಾಗದಲ್ಲಿ ಪೈಪ್ ಅನ್ನು ಹಿಡಿದುಕೊಂಡ ಮಹಿಳೆಯೊಬ್ಬಳು ಅಳುತ್ತಿದ್ದು, ಈ ಸಂದರ್ಭದಲ್ಲಿ ಕೆಲವು ಜನರು (ಕೆಲವರು ಮಹಿಳೆಯ ಕುಟುಂಬದ ಸದಸ್ಯರು) ಆಕೆ ದುಡುಕಿನ ನಿರ್ಧಾರ ತೆಗೆದುಕೊಂಡು ಸಮುದ್ರಕ್ಕೆ ಹಾರದಂತೆ ತಡೆಯಲು ಪ್ರಯತ್ನಿಸುತ್ತಿದ್ದರು. ಆದರೆ ಆಕೆ ಯಾರ ಮಾತನ್ನೂ ಕೇಳಲು ನಿರಾಕರಿಸುತ್ತಿದ್ದು, ಯಾರೂ ಹತ್ತಿರ ಬರಬಾರದು, ದೂರ ಹೋಗಿ, ಇಲ್ಲದಿದ್ದರೆ ಸೇತುವೆ ಮೇಲಿಂದ ಕೆಳಕ್ಕೆ ಹಾರುವುದಾಗಿ ಬೆದರಿಕೆ ಹಾಕುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
Video | Traffic policemen save a woman from jumping into the sea from Vashi Bridge in Navi Mumbai. Policemen Shivajirao Bachre, Raju Dandekar, Rathod & Tambe grabbed her while she threatened to jump from the ledge of the bridge. pic.twitter.com/UGIpH9Lc5Q
— MUMBAI NEWS (@Mumbaikhabar9) August 3, 2023
ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಟ್ರಾಫಿಕ್ ಪೊಲೀಸ್ ಶಿವಾಜಿ ರಾವ್ ಆಕೆಯ ಗಮನವನ್ನು ಬೇರೆಡೆ ಸೆಳೆಯಲು ಪ್ರಯತ್ನಿಸುತ್ತಿದ್ದರು. ಯಾವುದೇ ಕಾರಣಕ್ಕೂ ದುಡುಕಬೇಡ ಎಂದು ಆಕೆಗೆ ಹೇಳುತ್ತಿದ್ದು, ಈ ಸಂದರ್ಭದಲ್ಲಿ ಮತ್ತೊಬ್ಬ ವ್ಯಕ್ತಿ ಆಕೆಯ ಸಮೀಪ ತೆರಳಿ ರಕ್ಷಿಸಲು ಮುಂದಾದಾಗ ಆಕೆ ಕೋಪದಿಂದ ಸೇತುವೆ ಮೇಲಿಂದ ಹಾರುವುದಾಗಿ ಬೆದರಿಕೆಯೊಡ್ಡಿದ್ದಳು. ಆಗ ಗುಂಪುಗೂಡಿದ್ದ ಜನರಿಗೆ ದೂರ ಸರಿಯುವಂತೆ ಟ್ರಾಫಿಕ್ ಪೊಲೀಸರು ಸೂಚಿಸಿದ್ದರು. ಆಕೆ ಅಳುತ್ತಾ ತನ್ನ ಸಿಟ್ಟನ್ನು ಹೊರಹಾಕುತ್ತಿದ್ಳು. ಈ ಸಂದರ್ಭದಲ್ಲಿ ದಿಢೀರನೆ ಮುನ್ನುಗ್ಗಿದ ಟ್ರಾಫಿಕ್ ಪೊಲೀಸ್ ಆಕೆಯ ಬೆನ್ನನ್ನು ಹಿಡಿದು ಮೇಲಕ್ಕೆತ್ತಲು ಪ್ರಯತ್ನಿಸಿದ್ದು, ಕೂಡಲೇ ಉಳಿದ ಜನರು, ಪೊಲೀಸರು ನೆರವು ನೀಡುವ ಮೂಲಕ ಆಕೆಯನ್ನು ರಕ್ಷಿಸಿರುವುದು ವಿಡಿಯೋದಲ್ಲಿ ದಾಖಲಾಗಿದೆ.
ಮಹಿಳೆಯನ್ನು ರಕ್ಷಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಟ್ರಾಫಿಕ್ ಕಾನ್ಸ್ ಟೇಬಲ್ ಗಳ ಸಮಯಪ್ರಜ್ಞೆಯಿಂದ ಆಕೆಯ ಜೀವ ರಕ್ಷಿಸಿದ್ದಕ್ಕೆ ನೆಟ್ಟಿಗರು ಬಹುಪರಾಕ್ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bhopal: ಪತ್ನಿ ಮುಂದೆ ʼಅಂಕಲ್ʼ ಎಂದು ಕರೆದಿದ್ದಕ್ಕೆ ಅಂಗಡಿಯಾತನನ್ನು ಥಳಿಸಿದ ವ್ಯಕ್ತಿ
Speeding Car: ಮನೆಯ ಮುಂದೆ ರಂಗೋಲಿ ಹಾಕುತ್ತಿದ್ದ ಸಹೋದರಿಯರ ಮೇಲೆ ಹರಿದ ಕಾರು…
Kerala: ಸರಣಿ ಅಪಘಾತ… ಅಪಾಯದಿಂದ ಪಾರಾದ ಕೇರಳ ಸಿಎಂ: ವಿಡಿಯೋ ವೈರಲ್
Challenge; ಪೆಟ್ರೋಲ್ ಪಂಪ್‌ಗೆ ಬೆಂಕಿ ಹಚ್ಚಿದ ವ್ಯಕ್ತಿ!
Video Viral; ಲುಂಗಿಯಲ್ಲಿ ಡ್ಯೂಟಿ ಮಾಡಿದ ಎಸ್ ಐ!: ಮಹಿಳೆಯೊಂದಿಗೆ ಅಸಭ್ಯ ವರ್ತನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.