Mumbai: ಚೊಚ್ಚಲ ಟೆಸ್ಟ್ ಶತಕದ ಬೆನ್ನಲ್ಲೇ ಕನಸಿನ ಮನೆ ಖರೀದಿಸಿದ ಯಶಸ್ವಿ ಜೈಸ್ವಾಲ್
ಬಾಲ್ಯದಿಂದಲೇ ಕಷ್ಟಗಳನ್ನು ಕಂಡಿದ್ದ ಜೈಸ್ವಾಲ್‌ಗೆ ಈಗ ಡಬಲ್ ಸಂಭ್ರಮ
Team Udayavani, Jul 15, 2023, 5:58 PM IST
ಮುಂಬೈ: ಡೊಮಿನಿಕಾದ ವಿಂಡ್‌ಸರ್ ಪಾರ್ಕ್‌ನಲ್ಲಿ ವೆಸ್ಟ್‌ಇಂಡೀಸ್ ವಿರುದ್ಧ ನಡೆದ ಟೆಸ್ಟ್ ಪಂದ್ಯದಲ್ಲಿ ಭಾರತ ಅಮೋಘ ಗೆಲುವು ಸಾಧಿಸಿದೆ. ಇದೇ ವೇಳೆ ತನ್ನ ಪಾದಾರ್ಪಣಾ ಪಂದ್ಯದಲ್ಲೇ ವೆಸ್ಟ್ ಇಂಡೀಸ್ ವಿರುದ್ಧ ಶತಕ ಬಾರಿಸಿ ಮಿಂಚಿದ 21 ವರ್ಷದ ಯಶಸ್ವಿ ಜೈಸ್ವಾಲ್ ಭಾರತದ ಹೀರೋ ಆಗಿ ಮೂಡಿಬಂದಿದ್ದಾರೆ.
ತನ್ನ ಚೊಚ್ಚಲ ಶತಕವನ್ನು ಸಂಭ್ರಮಿಸುತ್ತಿರುವ ಜೈಸ್ವಾಲ್ ಮತ್ತೊಂದು ಸಂಭ್ರಮವನ್ನೂ ಆಚರಿಸುತ್ತಿದ್ದಾರೆ. ತಾನು ಬಾಲ್ಯದಿಂದಲೇ ಕಂಡಿರುವ ಬಹುದೊಡ್ಡ ಕನಸನ್ನು ನನಸು ಮಾಡಿಕೊಂಡಿರುವ ಜೈಸ್ವಾಲ್ ಮುಂಬೈನಲ್ಲಿ 5 ಬಿಎಚ್‌ಕೆ ಫ್ಲಾಟ್ ಒಂದನ್ನು ಖರೀದಿಸಿದ್ದಾರೆ.
ಭಾರತದ ಭರವಸೆಯ ಬ್ಯಾಟರ್ ಎಂದೇ ಕರೆಸಿಕೊಳ್ಳುತ್ತಿರುವ ಯಶಸ್ವಿ ಜೈಸ್ವಾಲ್ ಬಾಲ್ಯದಿಂದಲೇ ಕಷ್ಟಗಳನ್ನು ಕಂಡವರು. ಟೆಂಟ್‌ಗಳಲ್ಲಿ ಮಲಗಿ, ರಸ್ತೆಗಳ ಬಳಿ ಪಾನಿಪುರಿ ಮಾರಿ, ಮರಗಳನ್ನು ಏರಿ IPL ಪಂದ್ಯಗಳನ್ನು ನೋಡುತ್ತಿದ್ದ ಈ ಹುಡುಗನಿಗೆ ಒಂದು ಬಾರಿ ಆಝಾದ್ ಮೈದಾನ್‌ನ ನೆಟ್‌ಗೂ ಪ್ರವೇಶ ನಿರಾಕರಿಸಲಾಗಿತ್ತು.
ತನ್ನ ಚೊಚ್ಚಲ ಪಂದ್ಯದ ಬಳಿಕ ಇಲ್ಲಿಯವರೆಗೆ ಮುಂಬೈನ ಸಾಂತಾ ಕ್ರೂಝ್‌ನಲ್ಲಿ ತಾನು ವಾಸಿಸುತ್ತಿದ್ದ ಎರಡು ಬೆಡ್‌ರೂಮ್‌ಗಳ ಬಾಡಿಗೆ ಮನೆಗೆ ಹೋಗಲಾರೆ ಎಂದು ಜೈಸ್ವಾಲ್ ನಿಶ್ಚಿಸಿದ್ದರು. ಹೀಗಾಗಿ ಜೈಸ್ವಾಲ್ ಡೊಮಿನಿಕಾದಲ್ಲಿ ತನ್ನ ಪಾದಾರ್ಪಣಾ ಪಂದ್ಯವನ್ನು ಆಡುತ್ತಿದ್ದಾಗಲೂ ಆತನ ಮನಸ್ಸು ಮುಂಬೈನ ತನ್ನ ಹೊಸ ಮನೆಯ ಬಗ್ಗೆಯೇ ಚಿಂತಿಸುತ್ತಿತ್ತಂತೆ.
ಈ ಬಗ್ಗೆ ಮಾತನಾಡಿದ ಯಶಸ್ವಿ ಜೈಸ್ವಾಲ್ ಅವರ ಸಹೋದರ ತೇಜಸ್ವಿ ಜೈಸ್ವಾಲ್, ʻಟೆಸ್ಟ್ ಪಂದ್ಯಕ್ಕಾಗಿ ಡೊಮಿನಿಕಾಗೆ ಹೋಗಿದ್ದ ಯಶಸ್ವಿ ಪ್ರತಿ ಬಾರಿ ಕರೆ ಮಾಡಿದಾಗಲೂ ನಾವು ಮನೆಯನ್ನು ಶಿಫ್ಟ್ ಮಾಡುವಂತೆ ಒತ್ತಾಯಿಸುತ್ತಿದ್ದ. ನಾನು ಸರಣಿ ಮುಗಿಸಿ ಬರುವ ವೇಳೆಗೆ ಹೊಸ ಮನೆಯಲ್ಲಿ ಇರಬೇಕು ಎಂದು ಹೇಳಿದ್ದ. ಅವನ ಬಯಕೆ ಒಂದೇ ಆಗಿತ್ತು. ನಾವು ಹೊಸ ಮನೆಯಲ್ಲಿ ಜೀವಿಸುವುದು. ಇಷ್ಟು ಕಷ್ಟದ ಬಾಲ್ಯವನ್ನು ಕಂಡ ಬಳಿಕ ಮುಂಬೈಯಲ್ಲಿ ಮನೆ ಖರೀದಿಸುವುದು ಅವನ ಜೀವನದ ಒಂದೇ ಒಂದು ದೊಡ್ಡ ಕನಸಾಗಿತ್ತುʼ ಎಂದು ಹೇಳಿದ್ದಾರೆ.
ʻಡೊಮಿನಿಕಾದಲ್ಲಿ ಯಶಸ್ವಿ ಬಾರಿಸಿದ ಶತಕ ಆತನ ಶ್ರಮದ ಬೆವರಿಗೆ ಸಂದ ಪ್ರಶಸ್ತಿ. ನಮ್ಮ ಕುಟುಂಬಕ್ಕೆ ಅದು ದೊಡ್ಡ ಹೆಮ್ಮೆ ತರಿಸಿದೆ. ನಮ್ಮ ತಂದೆ ಕಾನ್ವಾರ್ ಯಾತ್ರೆಗೆ ತೆರಳಿದ್ದು ಯಶಸ್ವಿಯ ಯಶಸ್ಸಿನ ಬಗ್ಗೆ ಪ್ರಾರ್ಥಿಸಲಿದ್ದಾರೆʼ ಎಂದು ತೇಜಸ್ವಿ ಜೈಸ್ವಾಲ್ ಹೇಳಿದ್ದಾರೆ.
ಯಶಸ್ವಿ ಜೈಸ್ವಾಲ್‌ಗೆ 12 ನೇ ವರ್ಷ ವಯಸ್ಸಿದ್ದಾಗಲೇ ಜೈಸ್ವಾಲ್ ಕುಟುಂಬ ಉತ್ತರ ಪ್ರದೇಶದ ಬದೋಹಿಯಿಂದ ಮುಂಬೈಗೆ ಶಿಫ್ಟ್ ಆಗಿತ್ತು. ಕ್ರಿಕೆಟ್ ಆಡುವ ಬಯಕೆಯಿಂದ ಕೋಚ್ ಜ್ವಾಲಾ ಸಿಂಗ್ ಅಕಾಡಮಿಯನ್ನು ಸೇರಿಕೊಂಡಿದ್ದ ಯಶಸ್ವಿ ಜೊತೆಗೆ ಯಾರೂ ಗಾಡ್‌ಫಾದರ್‌ಗಳು ಇರದೆಯೂ ಸ್ವಂತ ಪರಿಶ್ರಮದಿಂದ ಮೇಲೆದ್ದು ಬಂದವರು. ಇಂದು ಅವರು ಕಂಡಿದ್ದ ದೊಡ್ಡ ಕನಸಿಗೆ ಸ್ವತಃ ನೀರೆರೆದು ಪೋಷಿಸಿ ಕನಸನ್ನು ನನಸು ಮಾಡಿ ಮಾದರಿಯಾಗಿದ್ದಾರೆ.
ಇದನ್ನೂ ಓದಿ: INDvsWI ಒಂದೇ ಪಂದ್ಯದಲ್ಲಿ ಹಲವು ದಾಖಲೆ: ಇದು ರವಿ ಅಶ್ವಿನ್ ಸಾಧನೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Assembly Election: ಮಹಾರಾಷ್ಟ್ರ ಗೆಲ್ಲಲು 10 ಗ್ಯಾರಂಟಿಗಳ ಕೊಟ್ಟ ʼಮಹಾಯುತಿʼ!
By Election: ಮುಖ್ಯಮಂತ್ರಿ ಗರ್ವದ ಸೊಕ್ಕು ಮುರಿಯಬೇಕು: ಎಚ್.ಡಿ.ದೇವೇಗೌಡ ಗುಡುಗು
Super App: ರೈಲು ಬುಕಿಂಗ್, ಟ್ರ್ಯಾಕ್‌ಗೆ ‘’ಸೂಪರ್‌ಆ್ಯಪ್’: ಮುಂದಿನ ತಿಂಗಳು ಬಿಡುಗಡೆ
Kambala: ಪೆಟಾ ಪಿಐಎಲ್; ವಿಚಾರಣೆ ನ.12ಕ್ಕೆ ಮುಂದೂಡಿದ ಹೈಕೋರ್ಟ್
MUDA Case: ಕೇವಲ 14 ಸೈಟ್‌ಗಾಗಿ ನಾನು ರಾಜಕಾರಣ ಮಾಡಬೇಕಾ?: ಸಿಎಂ ಸಿದ್ದರಾಮಯ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.