ಶಿಕ್ಷಕನನ್ನು ಗುಂಡಿಕ್ಕಿ ಕೊಂದ ಆರೋಪಿಯನ್ನು ಪೋಲೀಸರ ಎದುರೇ ಹೊಡೆದು ಕೊಂದ ಗ್ರಾಮಸ್ಥರು
Team Udayavani, Sep 7, 2020, 6:45 PM IST
ಉತ್ತರಪ್ರದೇಶ : ಕೊಲೆ ಆರೋಪಿಯನ್ನು ಪೋಲೀಸರ ಎದುರೇ ಅದೇ ಗ್ರಾಮದ ಗ್ರಾಮಸ್ಥರು ಸೇರಿಕೊಂಡು ದೊಣ್ಣೆಯಿಂದ ಹೊಡೆದು ಕೊಂದ ಘಟನೆ ಉತ್ತರಪ್ರದೇಶದ ಖುಷಿ ನಗರದಲ್ಲಿ ಸೋಮವಾರ ನಡೆದಿದೆ.
ಕೊಲೆಯಾದ ವ್ಯಕ್ತಿಯು ಸೋಮವಾರ ಮುಂಜಾನೆ ಖುಷಿನಗರದ ಶಿಕ್ಷಕರೊಬ್ಬರ ಮನೆಗೆ ನುಗ್ಗಿ ಶಿಕ್ಷಕನ ಮೇಲೆ ಮೂರು ಸುತ್ತು ಗುಂಡು ಹಾರಿಸಿ ಕೊಲೆಗೈದಿದ್ದಾನೆ ನಂತರ ಅಲ್ಲಿಂದ ಪರಾರಿಯಾಗಲು ಯತ್ನಿಸಿದ ಸಂದರ್ಭ ಅಲ್ಲಿನ ಸ್ಥಳೀಯ ಜನರು ಹಿಡಿಯಲು ಯತ್ನಿಸಿದ್ದಾರೆ ಆದರೆ ಯುವಕ ಮನೆಯ ಮೇಲೆ ಹತ್ತಿ ಗಾಳಿಯಲ್ಲಿ ಗುಂಡು ಹಾರಿಸಿದ್ದಾನೆ, ಅಷ್ಟೋತ್ತಿಗಾಗಲೇ ಪೊಲೀಸರಿಗೆ ಮಾಹಿತಿ ಹೋಗಿದ್ದು ಸ್ಥಳಕ್ಕೆ ಪೊಲೀಸರು ಹಾಜರಾಗಿದ್ದಾರೆ ಆದರೆ ಮನೆಯ ಮೇಲೆ ನಿಂತ ಆರೋಪಿಯನ್ನು ಹಿಡಿಯಲು ಹರಸಾಹಸ ಪಟ್ಟಿದ್ದಾರೆ. ಇನ್ನೇನು ಪೊಲೀಸರು ಆರೋಪಿಯನ್ನು ಬಂಧಿಸುತ್ತಾರೆ ಎನ್ನುವಷ್ಟರಲ್ಲಿ ಗ್ರಾಮಸ್ಥರು ತಮ್ಮ ಊರಿನ ಶಿಕ್ಷನನ್ನು ಕೊಂದ ದ್ವೇಷಕ್ಕೆ ಕೈಗೆ ಸಿಕ್ಕ ದೊಣ್ಣೆ ಕೋಲು , ಕಬ್ಬಿಣದ ಸರಳು ಮುಂತಾದವುಗಳಿಂದ ಹೊಡೆದಿದ್ದಾರೆ, ಸ್ಥಳದಲ್ಲಿದ್ದ ಪೊಲೀಸರು ತಡೆಯಲು ಯತ್ನಿಸಿದರೂ ಸಾಧ್ಯವಾಗಲಿಲ್ಲ ಕೊನೆಗೆ ಗಂಭೀರ ಗಾಯಗೊಂಡಿದ್ದ ಯುವಕನನ್ನು ಆಸ್ಪತ್ರೆಗೆ ದಾಖಲಿಸುವಷ್ಟರಲ್ಲಿ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ.
ಗ್ರಾಮಸ್ಥರು ಆರೋಪಿ ಯುವಕನನ್ನು ಕೋಲಿನಿಂದ ಹೊಡೆಯುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ಇದರಲ್ಲಿ ಪೊಲೀಸರ ಅಸಹಾಯಕ ಸ್ಥಿತಿಯನ್ನು ಕೂಡಾ ಗಮನಿಸಬಹುದಾಗಿದೆ.
ಮುಂಜಾನೆ ಶಿಕ್ಷಕ ನಿದ್ದೆಯಲ್ಲಿ ಇದ್ದ ಸಂದರ್ಭ ಅವರ ಮನೆಗೆ ನುಗ್ಗಿ ಗುಂಡಿನ ದಾಳಿ ನಡೆಸಿ ಹತ್ಯೆ ನಡೆಸಿ ನಂತರ ಗ್ರಾಮಸ್ಥರನ್ನು ಹೆದರಿಸಲು ಗಾಳಿಯಲ್ಲಿ ಗುಂಡು ಹಾರಿಸಿದ ಸಿಟ್ಟಿನಿಂದ ಗ್ರಾಮಸ್ಥರು ತಮ್ಮ ಕೈಗೆ ಸಿಕ್ಕಿದ ವಸ್ತುಗಳಿಂದ ಯುವಕನನ್ನು ಹೊಡೆದಿದ್ದಾರೆ.
ಕೊಲೆಯಾದ ಶಿಕ್ಷಕನನ್ನು ಉತ್ತರಪ್ರದೇಶ ರಾಂಪುರ್ ಬಾಂಗ್ರಾ ನಿವಾಸಿ ಸುಧೀರ್ ಸಿಂಗ್ ಎಂದು ಹೇಳಲಾಗಿದೆ. ಯುವಕನಿಗೆ ಶಿಕ್ಷಕನ ಮೇಲೆ ಯಾಕೆ ಗುಂಡು ಹಾರಿಸಿದ್ದಾನೆ ಎಂಬುದು ಮಾತ್ರ ಕುತೂಹಲಕ್ಕೆ ಕಾರಣವಾಗಿದೆ.
ಪೊಲೀಸ್ ಅಧಿಕಾರಿಗಳು ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದು ಕೊಲೆಗೆ ಸಂಬಂಧಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ambedkar Remarks: ಕನಸಲ್ಲೂ ಅಂಬೇಡ್ಕರ್‌ರನ್ನು ಅವಮಾನಿಸಿಲ್ಲ: ಅಮಿತ್ ಶಾ
Hydarabad: ಪುಷ್ಪ-2 ಚಿತ್ರದ ಪ್ರದರ್ಶನ ವೇಳೆ ಗಾಯಗೊಂಡಿದ್ದ ಬಾಲಕನ ಸ್ಥಿತಿ ಗಂಭೀರ
ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್
Noida: ಟಾಯ್ಲೆಟಲ್ಲಿ ರಹಸ್ಯ ಕ್ಯಾಮರಾ ಇಟ್ಟಿದ್ದ ಶಾಲಾ ನಿರ್ದೇಶಕ… ಪತ್ತೆ ಹಚ್ಚಿದ ಶಿಕ್ಷಕಿ
Mumbai: ಗೇಟ್‌ವೇ ಆಫ್ ಇಂಡಿಯಾ ಬಳಿ ಮುಳುಗಿದ 67 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.