ಹರಿದ್ವಾರದ ಕುಂಭ ಮೇಳದಲ್ಲಿ ಕಾವಿಧಾರಿ ಮುಸ್ಲಿಂ ಯೋಗಿ ಆಕರ್ಷಣೆ!
ಮಮ್ತಾಜ್ ಅಲಿ ಖಾನ್ ಎಂಬ ಅಪರೂಪದ ಸಾಧಕನ ಕಥೆ
Team Udayavani, Apr 17, 2021, 10:20 AM IST
ಹರಿದ್ವಾರ: ವೈಷ್ಣವರಂತೆ ಹಣೆ ಮೇಲೆ “ಯು’ ಆಕಾರದ ಶ್ರೀಗಂಧದ ತಿಲಕ, ಕೇಸರಿ ಬಣ್ಣದ ಕುರ್ತಾ- ಪಂಚೆ, ದಿನಪೂರ್ತಿ ಮಂತ್ರ- ಭಜನೆ ಪಠನ… ಹರಿದ್ವಾರದಲ್ಲಿ ನಡೆಯುತ್ತಿರುವ ಮಹಾಕುಂಭದ ಬೈರಾಗಿ ಕ್ಯಾಂಪ್‌ನಲ್ಲಿ ಶ್ರೀ “ಎಂ’ ಕಾಣಿಸುವುದು ಅನ್ಯ ಸಾಧುಗಳಂತೆಯೇ! ಅಂದ ಹಾಗೆ, “ಎಂ’ ಎಂದರೆ- ಮಮ್ತಾಜ್ ಅಲಿ ಖಾನ್!
ಹೌದು, ಕೇರಳದ ಮುಸ್ಲಿಂ ಕುಟುಂಬದ ಶ್ರೀ ಎಂ, ಅಪ್ಪಟ ಹಿಂದೂ ಸಾಧುವಾಗಿ ಭಕ್ತಾದಿಗಳಿಗೆ ಭಗವದ್ಗೀತೆ ಪ್ರವಚನ ನೀಡುತ್ತಿದ್ದಾರೆ. “ದೇವರಿಗೆ ಕೃಷ್ಣ, ಅಲ್ಲಾ, ಕ್ರಿಸ್ತ ಮುಂತಾದ ನಾಮಗಳಿವೆ. ಈ ಹೆಸರುಗಳ ಹೊರತಾಗಿಯೂ ದೇವರೊಬ್ಬನೇ! ಒಮ್ಮೆ ಈ ಸತ್ಯವನ್ನು ನಾವು ಅರಿತರೆ, ಭಗವಂತನನ್ನು ಕಾಣುವುದು ಸುಲಭ’ ಅಂತಾರೆ, ಶ್ರೀ ಎಂ.
ಯಾರಿವರು ಶ್ರೀ ಎಂ?: ಪ್ರಸ್ತುತ, ಆಂಧ್ರಪ್ರದೇಶದ ಮಾದನಪಲ್ಲಿಯಲ್ಲಿ ಸತ್ಸಂಗ ಫೌಂಡೇಶ ನ್‌ನ ಶಾಲೆ ಮತ್ತು ಕ್ಲಿನಿಕ್ ಮುನ್ನಡೆಸುತ್ತಿರುವ ಇವರು, ಹಿಂದುಳಿದ ವರ್ಗದವರಿಗೆ ಅಧ್ಯಾತ್ಮಿಕ ಶಿಕ್ಷಣ ನೀಡುತ್ತಿದ್ದಾರೆ. ಶ್ರೀ ಎಂ ಅವರ ಈ ಕಾರ್ಯಕ್ಕಾಗಿ ಕಳೆದ ವರ್ಷ ಪದ್ಮಭೂಷಣ ಪ್ರಶಸ್ತಿಯೂ ಒಲಿದಿತ್ತು.
ಮನೆ ಬಿಟ್ಟು ಹಿಮಾಲಯಕ್ಕೆ: ಕೇರಳದ ತಿರುವನಂತಪುರದ ಮುಸ್ಲಿಂ ಕುಟುಂಬವೊಂದರಲ್ಲಿ ಜನಿಸಿದ ಮಮ್ತಾಜ್ ಅಲಿ ಖಾನ್ ಬಾಲ್ಯದಿಂದಲೇ ಹಿಂದೂ ಧರ್ಮದ ಸೆಳೆತಕ್ಕೊಳಪಟ್ಟರು. 18ನೇ ವಯಸ್ಸಿನಲ್ಲಿ ಮನೆ ತೊರೆದ ಇವರು, ಹಿಮಾಲಯದಲ್ಲಿ ಗುರುವಿನ ಅನ್ವೇಷಣೆಯಲ್ಲಿ ತೊಡಗಿಸಿಕೊಂಡರು.
ರಿಷಿಕೇಶದಿಂದ ಬದರಿನಾಥ್ವರೆಗೆ ಸಾಧುವಿನಂತೆ ಅಲೆದ ಇವರಿಗೆ, ಕೊನೆಗೂ ಬದರಿನಾಥದ ಹಿಂದಿನ ಗುಹೆಯೊಂದರಲ್ಲಿ ಮಹಾನ್ ಯೋಗಿಯ ದರ್ಶನ ಸಿಕ್ಕಿತು. ಅಲ್ಲಿಂದ ಇವರ ಬದುಕಿನ ದಿಕ್ಕೇ ಬದಲಾಯಿತು. ಪ್ರಸ್ತುತ ಕುಂಭಮೇಳದಲ್ಲಿ ಇವರ ವೇದೋಪನಿಷತ್, ಯೋಗ ಸೂತ್ರಗಳ ಕುರಿತ ಪ್ರವಚನ ಕೇಳಲು ಭಕ್ತಾದಿಗಳು ಮುಗಿಬೀಳುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಗೂಗಲ್ ಮ್ಯಾಪ್ ನಂಬಿ ಸೇತುವೆಯಿಂದ ನದಿಗೆ ಬಿದ್ದ ಕಾರು, ಮದುವೆಗೆ ಹೊರಟಿದ್ದ ಮೂವರು ಮೃತ್ಯು
India: ಅರ್ಮೇನಿಯಾಗೆ ದೇಶಿ ನಿರ್ಮಿತ ಪಿನಾಕಾ ರಾಕೆಟ್ ಪೂರೈಕೆ ಶುರು
Maharashtra Election: ಅಘಾಡಿ ಸೋಲಿಗೆ ಉದ್ಧವ್,ಶರದ್ ಕಾರಣ: ಕಾಂಗ್ರೆಸ್
Mann Ki Baat: ಮೈಸೂರಿನ ‘ಅರ್ಲಿ ಬರ್ಡ್’ಗೆ ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ
Amaravati: ತಿರುಪತಿಯಲ್ಲಿ ಮುರಿದಿದ್ದ ರಾಮನ ಬೆರಳು ದುರಸ್ತಿ!
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Nalatawad: ವಿದ್ಯುತ್ ಶಾಕ್‌ನಿಂದ ಮೃತಪಟ್ಟ ಕೋತಿಗೆ ಸ್ಥಳೀಯ ನಿವಾಸಿಗಳಿಂದ ಅಂತ್ಯಸಂಸ್ಕಾರ
Puttur: ಮೃ*ತದೇಹವನ್ನು ರಸ್ತೆ ಬದಿ ಇರಿಸಿ ಹೋದ ಪ್ರಕರಣ; ಪ್ರಮುಖ ಆರೋಪಿ ಸಹಿತ ಮೂವರ ಬಂಧನ
ಗೂಗಲ್ ಮ್ಯಾಪ್ ನಂಬಿ ಸೇತುವೆಯಿಂದ ನದಿಗೆ ಬಿದ್ದ ಕಾರು, ಮದುವೆಗೆ ಹೊರಟಿದ್ದ ಮೂವರು ಮೃತ್ಯು
JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ
Cape Canaveral: ತಾತ್ಕಾಲಿಕ ಉಪಗ್ರಹವಾಗಿದ್ದ “ಮಿನಿ ಮೂನ್’ಗೆ ಗುಡ್ ಬೈ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.