ನನ್ನ ನಿರೀಕ್ಷೆಯ ಕನಸು ನನಸಾಗಿದೆ…4th Rank ವಿಜೇತೆ ಕುಂದಾಪುರ ಸ್ವಾತಿ ಪೈ ಮನದಾಳದ ಮಾತು
ನನ್ನ ರಾಂಕ್ ಗಾಗಿ ಪೋಷಕರು, ಕಾಲೇಜಿನವರು ಹಾಗೂ ಗೆಳೆಯರು ಕೂಡಾ ತುಂಬಾ ಪ್ರೋತ್ಸಾಹ ನೀಡಿದ್ದಾರೆ.
Team Udayavani, Jul 14, 2020, 6:42 PM IST
ಕುಂದಾಪುರ:ನಾನು ಮೊದಲೇ ನಿರೀಕ್ಷೆಯಲ್ಲಿದ್ದೆ…ಅದರಂತೆ ನನಗೆ ರಾಂಕ್ ಬಂದಿದೆ.
ನನ್ನ ಪೋಷಕರಿಗೆ ತುಂಬಾ ಸಂತೋಷವಾಗಿದೆ. Rankಗಾಗಿ ನಾನು ತುಂಬಾ ಸಿದ್ಧತೆ ಮಾಡಿಕೊಂಡು ಓದಿದ್ದೆ.
ಅದು ನನಗೆ ಫಲ ಕೊಟ್ಟಿದೆ…ಇದು ಕುಂದಾಪುರ ಶ್ರೀವೆಂಕಟರಮಣ ಪಿಯು ಕಾಲೇಜು ವಿದ್ಯಾರ್ಥಿನಿ ಸ್ವಾತಿ ಪೈ ಅವರ ಪ್ರತಿಕ್ರಿಯೆ.
ಕುಂದಾಪುರದ ಶಿವಾನಂದ ಪೈ ಮತ್ತು ಶಿಲ್ಪ ಪೈ ದಂಪತಿಯ ಪುತ್ರಿಯಾಗಿರುವ ಸ್ವಾತಿ ಪೈ ಅವರು ವಾಣಿಜ್ಯ ವಿಭಾಗದಲ್ಲಿ 4ನೇ ರಾಂಕ್ ಪಡೆದಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಮುಂದೆ ತಾನು ಸಿಎ ಮಾಡಬೇಕು ಎಂದು ಮನದಾಳದ ಬಯಕೆಯನ್ನು ಬಿಚ್ಚಿಟ್ಟಿದ್ದಾರೆ.
ನನ್ನ ರಾಂಕ್ ಗಾಗಿ ಪೋಷಕರು, ಕಾಲೇಜಿನವರು ಹಾಗೂ ಗೆಳೆಯರು ಕೂಡಾ ತುಂಬಾ ಪ್ರೋತ್ಸಾಹ ನೀಡಿದ್ದಾರೆ. ಕಾಲೇಜಿನಲ್ಲಿಯೂ ಐದು ಪ್ರಿಪರೇಟರಿ ಪರೀಕ್ಷೆಗಳನ್ನು ನಡೆಸಿರುವುದು ನಮಗೆ ತುಂಬಾ ಸಹಾಯವಾಗಿದೆ ಎಂದು ಸ್ವಾತಿ ತಿಳಿಸಿದ್ದಾರೆ.
ಇದನ್ನೂ ಓದಿ: ಹೆತ್ತವರ ಪ್ರೇರಣೆ ಜೊತೆಗೆ ಕಾಲೇಜಿನ ವಾತಾವರಣ ನನ್ನ ಯಶಸ್ಸಿಗೆ ಸ್ಫೂರ್ತಿ : ಅಭಿಜ್ಞಾ ರಾವ್
ನಾವು ಕೂಡಾ ನಿರೀಕ್ಷೆಯಲ್ಲಿದ್ದೇವು…ತುಂಬಾ ಖುಷಿಯಾಗಿದೆ:
ಈ ಬಾರಿಯೂ ನಮ್ಮ ಕಾಲೇಜಿಗೆ ರಾಂಕ್ ಬಂದೇ ಬರುತ್ತದೆ ಎಂಬ ನಿರೀಕ್ಷೆಯಲ್ಲಿದ್ದೇವು. ಅದರಂತೆ ಸ್ವಾತಿ ಪೈ ವಾಣಿಜ್ಯ ವಿಭಾಗದಲ್ಲಿ ನಾಲ್ಕನೇ ರಾಂಕ್ ಪಡೆದಿದ್ದಾರೆ. ಅವರ ಪೋಷಕರು ಕೂಡಾ ತಮ್ಮ ಮಗಳು ರಾಂಕ್ ಪಡೆಯುತ್ತಾಳೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದರು ಎಂದು ಶ್ರೀವೆಂಕಟರಮಣ ಪಿಯು ಕಾಲೇಜಿನ ಪ್ರಾಂಶುಪಾಲರಾದ ಗಣೇಶ್ ಮೊಗವೀರ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ನಾವು ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಐದಾರು ಪ್ರಿಪರೇಟರಿ ಪರೀಕ್ಷೆಗಳನ್ನು ನಡೆಸಿದ್ದೇವು. ಮಂಗಳೂರಿನಿಂದಲೂ ಕೋಚ್ ಕರೆಯಿಸಿ ತರಬೇತಿ ಕೊಡಿಸಿದ್ದೇವು ಎಂದು ಹೇಳಿದರು. ಅಲ್ಲದೇ ನಮ್ಮ ಕಾಲೇಜಿನ ವಿಜ್ಞಾನ ವಿಭಾಗದ ಭುವನ್ 588 ಅಂಕ ಗಳಿಸಿ ಎಂಟನೇ ರಾಂಕ್ ಪಡೆದಿದ್ದು, ಸೋಹನ್ ಕುಮಾರ್ ಶೆಟ್ಟಿ ವಿಜ್ಞಾನದಲ್ಲಿ 589 ಅಂಕ ಪಡೆದು 7ನೇ ರಾಂಕ್ ಗಳಿಸಿರುವುದಾಗಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.