ಮೇ 13ರಂದು ನನ್ನ ಮಗನೇ CM: ದೇವೇಗೌಡರ “ವಿಶ್ವಾಸ”ದ ಮಾತು
Team Udayavani, May 1, 2023, 7:10 AM IST
ಚನ್ನಪಟ್ಟಣ: “ಮೇ 10ರಂದು ನನ್ನ ಮಗ ಎಚ್.ಡಿ. ಕುಮಾರಸ್ವಾಮಿಯವರನ್ನು ಗೆಲ್ಲಿಸಿ. 13ರಂದು ಅವರು ಮುಖ್ಯಮಂತ್ರಿ ಆಗಲಿದ್ದಾರೆ” – ಇದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ “ಸ್ಪಷ್ಟ” ನುಡಿ. ರವಿವಾರ ಬೊಂಬೆನಾಡು ಚನ್ನಪಟ್ಟಣದಲ್ಲಿ ಜೆಡಿಎಸ್ ಪಕ್ಷದ ಪರ ಚುನಾವಣ ಪ್ರಚಾರಕ್ಕಿಳಿದ ದೊಡ್ಡಗೌಡರು, ತಮ್ಮ ಮಗ ಕುಮಾರಸ್ವಾಮಿಯವರು ಸಿಎಂ ಆಗಿಯೇ ಆಗುತ್ತಾರೆ ಎಂಬ ವಿಶ್ವಾಸದ ಮಾತುಗಳನ್ನಾಡಿದ್ದಾರೆ.
ಚನ್ನಪಟ್ಟಣದ ಇಗ್ಗಲೂರು ಗ್ರಾಮದಲ್ಲಿ ಎಚ್ಡಿಕೆ ಪರವಾಗಿ ಚುನಾವಣ ಪ್ರಚಾರ ನಡೆಸಿ ಮಾತನಾಡಿದ ಅವರು, “ಈ ರಾಜ್ಯದಲ್ಲಿ ಬಡವರ ಪರ ಇರುವ ರಾಜಕಾರಣಿ ಒಬ್ಬರೇ ಒಬ್ಬರು. ಅದೆಂದರೆ ಕುಮಾರಸ್ವಾಮಿ ಮಾತ್ರ. ಹಾಗಾಗಿ ಈ ಬಾರಿ ಅವರಿಗೆ ನೀವು ಆಶೀರ್ವಾದ ಮಾಡಬೇಕು. ಚನ್ನಪಟ್ಟಣ ನಮಗೆ ಕರ್ಮಭೂಮಿ. ಇದೇ 10ರಂದು ಅವರನ್ನು ನೀವು ಗೆಲ್ಲಿಸಿ, 13ಕ್ಕೆ ಅವರು ಸಿಎಂ ಆಗುತ್ತಾರೆ” ಎಂದು ಹೇಳಿದರು.
ಇದೇ ವೇಳೆ, ದಿಲ್ಲಿಯಲ್ಲಿ ರಾಜ್ಯದ ಅನ್ನದಾತರ ಪರ ಹೋರಾಡಿದ್ದು ಜೆಡಿಎಸ್ ಪಕ್ಷವೇ ಹೊರತು ಬೇರಾರೂ ಅಲ್ಲ. ಜೆಡಿಎಸ್ನ ಹೋರಾಟದ ಫಲವಾಗಿ ಇಂದು ರೈತರು ಸುಗಮ ಜೀವನ ನಡೆಸುವಂತಾಗಿದೆ ಎಂದೂ ದೇವೇಗೌಡರು ನುಡಿದರು.
ಪ್ರಧಾನಿ ಬರುವ ಮುನ್ನವೇ ಗೌಡರ ಪ್ರವೇಶ
ಪ್ರಧಾನಿ ಮೋದಿಯವರು ರವಿವಾರ ಕೋಲಾರ ಸಮಾವೇಶದಲ್ಲಿ ಪಾಲ್ಗೊಂಡು ಚನ್ನಪಟ್ಟಣಕ್ಕೆ ಬರುವ ಮುನ್ನವೇ ಇಗ್ಗಲೂರಿಗೆ ಬರುವ ಮೂಲಕ ದೇವೇಗೌಡರು ಬಿಜೆಪಿಗೆ ಠಕ್ಕರ್ ನೀಡಿದ್ದು ಕಂಡುಬಂತು. ಹೆಲಿಕಾಪ್ಟರ್ ಮೂಲಕ ಸಮಾವೇಶ ಸ್ಥಳಕ್ಕೆ ಬಂದ ಅವರು, ಪುತ್ರನ ಪರ ಭರ್ಜರಿ ಪ್ರಚಾರ ನಡೆಸಿ ಹಿಂದಿರುಗಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನೆಲೋಗಿ….: ಒಂದೇ ಊರಿನ ಇಬ್ಬರು ಈಗ ಶಾಸಕರು!
CM Post Crisis: ನಾನು ಈ ಪಕ್ಷ ಕಟ್ಟಿದ್ದೇನೆ..: ದೆಹಲಿಯಲ್ಲಿ ಗುಡುಗಿದ ಡಿಕೆ ಶಿವಕುಮಾರ್
ಸಿಎಂ ಆಯ್ಕೆಗೆ ಕಗ್ಗಂಟಾಗುತ್ತಿರುವುದು ಅಂದು ‘ರಾಹುಲ್ ಗಾಂಧಿ’ ಕೊಟ್ಟ ಆ ಒಂದು ಮಾತು!
ಚುನಾವಣಾ ರಾಜಕೀಯದಿಂದ ನಿವೃತ್ತನಾಗುತ್ತಿದ್ದೇನೆ: ರಮಾನಾಥ ರೈ ಘೋಷಣೆ
ಮುಖ್ಯಮಂತ್ರಿ ಆಯ್ಕೆ; ಅಮ್ಮ ಡಿಕೆಶಿ ಪರ, ಮಗ ಸಿದ್ದು ಪರ: ಬಿಕ್ಕಟ್ಟಿಗೆ ಹೈಕಮಾಂಡ್ ಕಾರಣವೇ?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.