ಮೈಸೂರು: ಪ್ರೀತಿಯ ನಾಟಕವಾಡಿ ಯುವತಿಯನ್ನು ಬೆಂಕಿಹಚ್ಚಿ ಕೊಂದ ಹಂತಕ ಅರೆಸ್ಟ್
Team Udayavani, Nov 15, 2020, 5:48 PM IST
ಮೈಸೂರು: ಪಿರಿಯಾಪಟ್ಟಣ ಬಳಿ ಹೊತ್ತಿ ಉರಿಯುತ್ತಿರುವ ಸ್ಥಿತಿಯಲ್ಲಿ ಯುವತಿಯ ಶವ ಪತ್ತೆಯಾದ ಪ್ರಕರಣವನ್ನು ಭೇದಿಸುವಲ್ಲಿ ಪಿರಿಯಾಪಟ್ಟಣ ಪೊಲೀಸರು ಯಶಸ್ವಿಯಾಗಿದ್ದು ಪ್ರಕರಣಕ್ಕೆ ಸಂಬಂಧಿಸಿ ಯುವತಿಯ ಪ್ರಿಯಕರನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಪ್ರಕರಣದ ಆರೋಪಿಯನ್ನು ನಂಜನಗೂಡು ತಾಲೂಕು ಕರಳಪುರ ಗ್ರಾಮದ ಸಿದ್ದರಾಜು ಎನ್ನಲಾಗಿದ್ದು ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ. ನಂಜನಗೂಡು ತಾಲೂಕಿನ ಹುಲ್ಲಹಳ್ಳಿ ಗ್ರಾಮದ ಭಾಗ್ಯ (18) ಕೊಲೆಯಾದ ಯುವತಿ.
ನವೆಂಬರ್ 8 ರಂದು ಪಿರಿಯಾಪಟ್ಟಣ ತಾಲೂಕಿನ ಕೆಲ್ಲೂರು ರಸ್ತೆ ಬದಿಯಲ್ಲಿ ಹೊತ್ತಿ ಉರಿಯುತ್ತಿದ್ದ ಸ್ಥಿತಿಯಲ್ಲಿ ಭಾಗ್ಯ ಶವ ಪತ್ತೆಯಾಗಿತ್ತು, ಈ ಕುರಿತು ಪಿರಿಯಾಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣವನ್ನು ಕೈಗೆತ್ತಿಕೊಂಡ ಪೋಲೀಸರ ತಂಡ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇದನ್ನೂ ಓದಿ:ಕಾಂಗ್ರೆಸ್ ಹಿರಿಯ ನಾಯಕ ಅಹ್ಮದ್ ಪಟೇಲ್ ಅರೋಗ್ಯ ಸ್ಥಿತಿ ಗಂಭೀರ
ವಕೀಲರೊಬ್ಬರ ಕಚೇರಿಯಲ್ಲಿ ಟೈಪಿಸ್ಟ್ ಆಗಿದ್ದ ಭಾಗ್ಯ ಹಾಗೂ ಕರಳಪುರ ಗ್ರಾಮದ ಸಿದ್ದರಾಜು ಪರಸ್ಪರ ಪ್ರೀತಿಸುತ್ತಿದ್ದರು ಅಲ್ಲದೆ ತನ್ನನ್ನು ಮದುವೆಯಾಗುವಂತೆ ಒತ್ತಡ ಹೇರಿದ್ದಳು ಆದರೆ ಮದುವೆಗೆ ನಿರಾಕರಿಸಿದ ಸಿದ್ದರಾಜು ಭಾಗ್ಯಳನ್ನು ಮುಗಿಸುವ ಯೋಚನೆ ಮಾಡಿದ್ದ,
ಅದರಂತೆ ಸಿದ್ದರಾಜು ಶನಿವಾರ ನ. 7 ರಂದು ಮಧ್ಯಾಹ್ನ ಭಾಗ್ಯಳನ್ನ ತನ್ನ ಕಾರಿನಲ್ಲಿ ಕರೆದೊಯ್ದಿದ್ದಾನೆ ಜೊತೆಗೆ ಸಿದ್ದರಾಜು ಗೆಳೆಯ ಪ್ರಸನ್ನ ಕುಮಾರ್ ಕೂಡಾ ತೆರಳಿದ್ದರು ಆದರೆ ನ.8 ರಂದು ಸಿದ್ದರಾಜು ಭಾಗ್ಯಳ ಮೇಲೆ ಅತ್ಯಾಚಾರ ಎಸಗಿ ಪಿರಿಯಾಪಟ್ಟಣ ಬಳಿ ಬೆಂಕಿ ಹಚ್ಚಿ ಪರಾರಿಯಾಗಿದ್ದ, ಆದರೆ ಇತ್ತ ಭಾಗ್ಯಳ ತಂದೆ ಮಗಳು ನಾಪತ್ತೆಯಾಗಿದ್ದಾಳೆ ಎಂದು ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲು ಮಾಡುತ್ತಾರೆ.
ಇದನ್ನೂ ಓದಿ:ಸಗಣಿಯಿಂದ ಹೊಡೆದಾಡುವ ವಿಶಿಷ್ಟ ಹಬ್ಬ; ಚಾ.ನಗರ ಗಡಿಯ ತಮಿಳುನಾಡಿನ ಗುಮಟಾಪುರದ ಗೊರೆ ಹಬ್ಬ
ಪೊಲೀಸರು ಭಾಗ್ಯಳ ಮೊಬೈಲ್ ನೆಟ್ ವರ್ಕ್ ಪತ್ತೆಹಚ್ಚಿದ್ದು ಅಷ್ಟೋತ್ತಿಗಾಗಲೇ ಹೊತ್ತಿ ಉರಿಯುವ ಸ್ಥಿತಿಯಲ್ಲಿ ಪತ್ತೆಯಾದ ಯುವತಿಯ ಶವವನ್ನು ಕಂಡ ಮನೆಯವರು ಕಾಲಿಗೆ ಧರಿಸಿದ್ದ ಗೆಜ್ಜೆಯ ಮೂಲಕ ಶವ ಭಾಗ್ಯಳದ್ದು ಎಂದು ಗುರುತು ಪತ್ತೆಹಚ್ಚಲಾಯಿತು.
ಪ್ರಕರಣದ ಬೆನ್ನು ಹತ್ತಿದ ಪೊಲೀಸರು ಭಾಗ್ಯಳ ಜೊತೆ ಪ್ರೀತಿಯ ನಾಟಕ ಆಡಿದ ಆರೋಪಿ ಸಿದ್ದರಾಜುನನ್ನು ವಶಕ್ಕೆ ಪಡೆದಿದ್ದು ಕೊಲೆಗೆ ಸಹಕರಿಸಿದ ಮತ್ತೊಬ್ಬ ಆರೋಪಿ ಪ್ರಸನ್ನ ಕುಮಾರ್ ಬಂಧನಕ್ಕೆ ಪಿರಿಯಾಪಟ್ಟಣ ಪೊಲೀಸರು ಜಾಲ ಬೀಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ
Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್
AI world: ಕ್ರಿಮಿನಲ್‌ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
CM ಸಿದ್ದರಾಮಯ್ಯ ಭ್ರಷ್ಟ ಎಂದು ನಿರೂಪಿಸಲು ಯಶಸ್ವಿ: ಆರ್.ಅಶೋಕ್
MUST WATCH
ಹೊಸ ಸೇರ್ಪಡೆ
Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ
Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ
Udupi: ಸಹಕಾರ ಕ್ಷೇತ್ರ ಪಠ್ಯವಾಗಲಿ: ಡಾ| ಎಂ.ಎನ್.ಆರ್.
Actor Darshan Bail Case: ಹತ್ಯೆ ಸ್ಥಳದಲ್ಲಿ ದರ್ಶನ್ ಇದ್ರು: ಫೋಟೋ ಸಾಕ್ಷ್ಯ ಲಭ್ಯ!
Dharmasthala: ನ.26-30: ಶ್ರೀ ಕ್ಷೇತ್ರ ಧರ್ಮಸ್ಥಳದ ಲಕ್ಷದೀಪೋತ್ಸವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.