ಕೋವಿಡ್ ಸಂಕಷ್ಟ: ನೆರವಾದ ನರೇಗಾ ಯೋಜನೆ : ಜಿಲ್ಲೆಯಲ್ಲಿ ಉಡುಪಿ ತೋಟಗಾರಿಕೆ ಇಲಾಖೆ ನಂ.3
Team Udayavani, Apr 6, 2021, 2:55 AM IST
ಕಾರ್ಕಳ; 2020-21ನೇ ಸಾಲಿನಲ್ಲಿ ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಲ್ಲಿ ಕಾರ್ಕಳ, ಹೆಬ್ರಿ ಸೇರಿದಂತೆ ಕಾರ್ಕಳ ತಾಲೂಕು ತೋಟಗಾರಿಕೆ ಇಲಾಖೆ ಮಾನವ ದಿನಗಳ ಸೃಜನೆಯಲ್ಲಿ ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಗಳಿಸಿದೆ. ಕುಂದಾಪುರ ಎರಡನೇ ಸ್ಥಾನ ಹಾಗೂ ಉಡುಪಿ ತೋಟಗಾರಿಕೆ ವಿಭಾಗ ಮೂರನೇ ಸ್ಥಾನವನ್ನು ಪಡೆದಿದೆ.
ಪ್ರಸಕ್ತ ವರ್ಷದಲ್ಲಿ ಜಿಲ್ಲೆಯಲ್ಲಿ ಒಟ್ಟು ನಡೆದ ಕಾಮಗಾರಿ 544 ಆಗಿದ್ದು, ಉದ್ಯೋಗ ಖಾತರಿ ಯೋಜನೆಯಲ್ಲಿ 1.52 ಕೋ.ರೂ ಆರ್ಥಿಕ ಸೌಲಭ್ಯವನ್ನು ವಿವಿಧ ಕೆಲಸಗಳ ಮೂಲಕ ಪಡೆದುಕೊಳ್ಳಲಾಗಿದೆ. ಕಾರ್ಕಳ ತೋಟಗಾರಿಕೆ ಇಲಾಖೆ ವ್ಯಾಪ್ತಿಯಲ್ಲಿ 186 ಕೆಲಸಗಳಾಗಿದ್ದು, 6163 ಲಕ್ಷ ರೂ. ಹಾಗೂ ಹೆಬ್ರಿ ತಾ|ನಲ್ಲಿ 98 ಕೆಲಸಗಳು ನಡೆದು 25,97 ಲಕ್ಷ ರೂ. ಆರ್ಥಿಕ ಸೌಲಭ್ಯ ಪಡೆದುಕೊಂಡಿದ್ದಾರೆ. ಕಾರ್ಕಳ ಹೆಬ್ರಿ ಸೇರಿ ಕಾರ್ಕಳ ತೋಟಗಾರಿಕೆ ವಿಭಾಗದಲ್ಲಿ 286 ಕೆಲಸಗಳು ನಡೆದು 87.61 ಲಕ್ಷ ರೂ ಆರ್ಥಿಕ ಸೌಲಭ್ಯವನ್ನು ಪಡೆದುಕೊಂಡಿದ್ದಾರೆ.
ಕಾರ್ಕಳದಲ್ಲಿ ಅತ್ಯಧಿಕ
ಪ್ರಸಕ್ತ ಸಾಲಿಗೆ ಹಿಂದಿನ ಸಾಲಿನಲ್ಲಿ ಬಾಕಿ ಉಳಿದ ಸೃಜನೆಯನ್ನು ಸೇರ್ಪಡೆಗೊಳಿಸಿದರೆ ಜಿಲ್ಲೆಯಲ್ಲಿ 60,403 ಮಾನವ ಸೃಜನೆ ಬಳಕೆಯಾಗಿರುವುದು ಕಂಡುಬರುತ್ತದೆ. ಈ ಪೈಕಿ ಕಾರ್ಕಳ ತಾ| ವೊಂದರಲ್ಲೇ 31101 ಬಳಕೆಯಾಗಿದೆ ಎನ್ನುವುದು ಹೆಮ್ಮೆ ಪಡುವ ಸಾಧನೆಯಾಗಿದೆ.
ಕೋವಿಡ್ ಸೋಂಕಿನಿಂದ ಜನರ ಜೀವನ ತೀವ್ರ ಕಷ್ಟಕರವಾಗಿದೆ. ನರೇಗಾ ಯೋಜನೆ ಗ್ರಾಮೀಣ ಭಾಗದ ಜನರ ಬದುಕಿಗೆ ಆಶಾಕಿರಣವಾಗಿದ್ದು ದುಡಿಯುವ ವರ್ಗದ ನೆರವಿಗೆ ಬಂದಿದೆ. ಸೂಕ್ತ ರೀತಿಯಲ್ಲಿ ಬಳಸಿಕೊಂಡ ಪರಿಣಾಮ ಯೋಜನೆ ತಾ|ನಲ್ಲಿ ಯಶಸ್ಸು ಕಂಡಿದೆ.
275 ರೂ. ಕೂಲಿ
ರೈತರ ಜಮೀನಿನಲ್ಲಿ ವೈಯಕ್ತಿಕ ಕಾಮಗಾರಿ ಗಳಾದ ವಿವಿಧ ತೋಟಗಾರಿಕೆ ಬೆಳೆಗಳ ಪ್ರದೇಶ ವಿಸ್ತರಣೆಗಳಾದ ಮಲ್ಲಿಗೆ ಕೃಷಿ ಪ್ರದೇಶ ವಿಸ್ತರಣೆ, ತೆಂಗು, ಅಡಿಕೆ, ಗೇರು, ಕೃಷಿ ಪ್ರದೇಶ ವಿಸ್ತರಣೆ, ಅಡಿಕೆ ಪುನಃಶ್ಚೇತನ ವಲಯಗಳಲ್ಲಿ ನಿರೀಕ್ಷಿತ ಪ್ರಗತಿ ಸಾಧಿಸಲಾಗಿದೆ. ಪ್ರತಿ ಕುಟುಂಬಕ್ಕೆ 150 ದಿನಗಳ ಅಕುಶಲ ದೈಹಿಕ ಉದ್ಯೋಗವನ್ನು ಒದಗಿಸುವುದರ ಮೂಲಕ ನಿಗದಿತ ಗುಣಮಟ್ಟ ಹಾಗೂ ಬಾಳಿಕೆ ಬರುವಂತೆ ಮಾಡಲಾಗಿದೆ. ದಿನಕ್ಕೆ ವ್ಯಕ್ತಿಗೆ 275 ರೂ. ಕೂಲಿ ನೀಡಲಾಗಿದೆ.
ಕೋವಿಡ್ ಸಂದರ್ಭ ಯುವ ಸಮೂಹ ಸಹಿತ ಎಲ್ಲರೂ ಕೃಷಿ, ಕೂಲಿ ಚಟುವಟಿಕೆ ಕಡೆಗೆ ಗಮನ ಹರಿಸಿದ್ದರು. ಊರ ಹೊರಗಿದ್ದವರೂ ಗ್ರಾಮೀಣ ಭಾಗಕ್ಕೆ ಬಂದು ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು.
ಉತ್ತಮ ಪ್ರಗತಿ
ಕೃಷಿ ಮತ್ತು ತೋಟಗಾರಿಕೆ ಇಲಾಖೆ ವ್ಯಾಪ್ತಿಯಲ್ಲಿ ಹೆಚ್ಚು ಕಾಮಗಾರಿಗಳಿಗೆ ಅವಕಾಶ ಕಲ್ಪಿಸಲಾಗಿತ್ತು. ಯೋಜನೆಯ ಬಗ್ಗೆ ಮಾಹಿತಿಯನ್ನು ನೀಡಿದ್ದೆವು. ಇದು ಪರಿಣಾಮಕಾರಿಯಾಗಿ ಕೆಲಸ ಮಾಡಿದೆ. ತಾ|ನಲ್ಲಿ ಉತ್ತಮ ಪ್ರಗತಿ ಸಾಧನೆಗೆ ಕಾರಣವಾಯಿತು.
-ನಿಧೀಶ್ ಕೆ.ಜಿ. , ಸಹಾಯಕ ನಿರ್ದೇಶಕ , ಉಡುಪಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Sky Force: ಭಾರತದ ಮೊದಲ ವೈಮಾನಿಕ ದಾಳಿಯ ʼಸ್ಕೈ ಫೋರ್ಸ್ʼ ಟ್ರೇಲರ್ ಔಟ್- ಮಿಂಚಿದ ಅಕ್ಷಯ್
Doddaballapura: ಘಾಟಿ ಕ್ಷೇತ್ರದಲ್ಲಿ ಶ್ರೀ ಸುಬ್ರಹ್ಮಣ್ಯಸ್ವಾಮಿ ಬ್ರಹ್ಮ ರಥೋತ್ಸವ
Naxalite: ಮುಂಡಗಾರು ಲತಾ ಸೇರಿ ಆರು ನಕ್ಸಲರು ಶೀಘ್ರ ಮುಖ್ಯವಾಹಿನಿಗೆ: ಪ್ರಕ್ರಿಯೆ ಚುರುಕು
Hunsur: ಬ್ಯಾರಿಕೇಡ್ ಗೆ ಸಿಲುಕಿದ ಗಜರಾಜ
Heart Rate Control: ಹೃದಯ ಬಡಿತದ ನಿಯಂತ್ರಣದಲ್ಲಿ ಆಧುನಿಕ ಹೃದಯ ಲಯ ಸಾಧನಗಳ ಅಗತ್ಯ ಪಾತ್ರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.