ದೊಂಬಿವಿಲಿಯಲ್ಲಿ ಎರಡು ಅಂತಸ್ತಿನ ಕಟ್ಟಡ ಕುಸಿತ ! ಹದಿನೆಂಟು ಕುಟುಂಬಗಳು ಪಾರು
Team Udayavani, Oct 29, 2020, 7:27 PM IST
ಥಾಣೆ: ಜಿಲ್ಲೆಯ ದೊಂಬಿವಿಲ್ ಪಟ್ಟಣದಲ್ಲಿ ಎರಡು ಅಂತಸ್ತಿನ ಕಟ್ಟಡದ ಒಂದು ಭಾಗ ಗುರುವಾರ ಬೆಳಗ್ಗೆ 4.30ರ ವೇಳೆಗೆ ಕುಸಿದಿದೆ. ಈ ಘಟನೆಯಲ್ಲಿ ಯಾವುದೇ ರೀತಿಯಲ್ಲಿ ಸಾವು ನೋವು ಸಂಭವಿಸಿಲ್ಲ ಎನ್ನುವುದು ಸಮಾಧಾನದ ಅಂಶ.
ದೊಬಿವಿಲ್ ಪಟ್ಟಣದ ಕೊಪರ್ ಪ್ರದೇಶದಲ್ಲಿ 42 ವರ್ಷಗಳ ಹಿಂದೆ ನಿರ್ಮಾಣಗೊಂಡಿದ್ದ ಈ ಕಟ್ಟದಲ್ಲಿ 75 ಮಂದಿ ವಾಸಿಸುತ್ತಿದ್ದರು. ಅಲ್ಲಿ ವಾಸಿಸುತ್ತಿದ್ದವರಿಗೆ ಬೆಳಗ್ಗೆ ಭಾರಿ ಸದ್ದು ಕೇಳಿಸಿತು. ಏನೆಂದು ಅಚ್ಚರಿಯಿಂದ ಹೊರಗೆ ಬಂದು ನೋಡುವಷ್ಟರಲ್ಲಿ ಎರಡು ಅಂತಸ್ತಿನ ಕಟ್ಟಡ ಒಂದು ಭಾಗ ಕುಸಿದು ಬಿತ್ತು. ವಾರ್ಡ್ ಅಧಿಕಾರಿ ಭರತ್ ಪವಾರ್ ಮಾತನಾಡಿ ಕೂಡಲೇ ಅದರಲ್ಲಿ ವಾಸಿಸುತ್ತಿದ್ದವರು ಕಟ್ಟಡದಿಂದ ಹೊರಬಂದು ಬೇರೆಡೆ ಸ್ಥಳಾಂತರಗೊಂಡದ್ದರಿಂದ ಯಾವುದೇ ಸಾವು ನೋವು ಉಂಟಾಗಲಿಲ್ಲ ಎಂದರು.
ಮಾಲೀಕರಿಗೆ ಕಟ್ಟಡ ಅಭದ್ರವಾಗಿದೆ ಎಂದು ಘೋಷಣೆಯಾಗಿರುವ ಬಗ್ಗೆ ನೋಟಿಸ್ ನೀಡಲಾಗಿದ್ದರೂ, ಅವರು ಅಲ್ಲಿದ್ದವರನ್ನು ತೆರವುಗೊಳಿಸುವ ಬಗ್ಗೆ ಯಾವುದೇ ಕ್ರಮ ಕೈಗೊಂಡಿರಲಿಲ್ಲ ಎಂದು ಹೇಳಿದ್ದಾರೆ.
ಸುದ್ದಿ ತಿಳಿದ ಕೂಡಲೇ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ರಕ್ಷಣೆ ಮತ್ತು ಪರಿಹಾರ ಕಾರ್ಯಾಚರಣೆ ನಡೆಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.