ಪಿಂಕ್ ಬಾಲ್ ಟೆಸ್ಟ್ ಪಂದ್ಯಕ್ಕೆ ಸೈನಿ, ಶಮಿ ಸೇರ್ಪಡೆ ಸೂಚನೆ !
Team Udayavani, Feb 16, 2021, 11:45 PM IST
ಚೆನ್ನೈ: ಇಂಗ್ಲೆಂಡ್ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಐತಿಹಾಸಿಕ ಜಯ ದಾಖಲಿಸಿದ ಟೀಮ್ ಇಂಡಿಯಾಗೆ ಮತ್ತೂಂದು ಶುಭ ಸುದ್ದಿ ಸಿಕ್ಕಿದ್ದು, ಮೊಟೆರಾದ ಸರ್ದಾರ್ ಪಟೇಲ್ ಕ್ರಿಡಾಂಗಣದಲ್ಲಿ ಆರಂಭವಾಗಲಿರುವ ಸರಣಿಯ ಮೂರನೇ ಹಾಗೂ ಪಿಂಕ್ ಬಾಕ್ ಟೆಸ್ಟ್ ಪಂದ್ಯಕ್ಕೆ ಪ್ರಮುಖ ವೇಗಿಗಳು ತಂಡ ಸೇರಿಕೊಳ್ಳುವ ಸೂಚನೆಯೊಂದು ಲಭಿಸಿದೆ.
ಆಸೀಸ್ ಪ್ರವಾಸದಲ್ಲಿ ಗಾಯದ ಸಮಸ್ಯೆಗೆ ಸಿಲುಕಿದ ಕಾರಣದಿಂದ ಚೆನ್ನೈನಲ್ಲಿ ನಡೆದ ಮೊದಲ 2 ಟೆಸ್ಟ್ ಪಂದ್ಯಗಳಿಗೆ ಅಲಭ್ಯರಾಗಿದ್ದ ಟೀಮ್ ಇಂಡಿಯಾ ವೇಗಿಗಳಾದ ಮೊಹಮ್ಮದ್ ಶಮಿ ಮತ್ತು ನವದೀಪ್ ಸೈನಿ ಡೇ-ನೈಟ್ ಟೆಸ್ಟ್ ಪಂದ್ಯಕ್ಕೆ ತಂಡ ಸೇರಿಕೊಳ್ಳಲಿದ್ದಾರೆ ಎಂದು ವರದಿಗಳು ಹೇಳಿವೆ.
ಈ ಇಬ್ಬರೂ ವೇಗಿಗಳಿಗೆ ಫೆ.20ರಂದು ಆರಂಭವಾಗಲಿರುವ ವಿಜಯ್ ಹಜಾರೆ ಟ್ರೋಫಿ ಕೂಟದಲ್ಲಿ ಪಾಲ್ಗೊಳ್ಳದಂತೆ ಬಿಸಿಸಿಐ ಆದೇಶಿಸಿದೆ. ಟೆಸ್ಟ್ ಸರಣಿಯ ಉಳಿದ ಎರಡು ಪಂದ್ಯಗಳಿಗೆ ಬಿಸಿಸಿಐ ಶೀಘ್ರವೇ ಪರಿಷ್ಕೃತ ತಂಡವನ್ನು ಪ್ರಕಟ ಮಾಡಲಿದ್ದು ಶಮಿ ಮತ್ತು ಸೈನಿ ಆಯ್ಕೆ ಸಾಧ್ಯತೆ ದಟ್ಟವಾಗಿದೆ.
ಸೈನಿ ಮತ್ತು ಶಮಿ ಸದ್ಯ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿದ್ದು ಸಂಪೂರ್ಣ ಸಾಮರ್ಥ್ಯದಲ್ಲಿ ಬೌಲಿಂಗ್ ಮಾಡುತ್ತಿದ್ದಾರೆ. ಈ ನಡುವೆ ವಿಜಯ್ ಹಜಾರೆ ಟ್ರೋಫಿ ಸಲುವಾಗಿ ಡೆಲ್ಲಿ ತಂಡ ಸೈನಿ ಅವರ ಸೇವೆಯನ್ನು ಬಯಸಿತ್ತು. ಆದರೆ ಬಿಸಿಸಿಐ ಅವರನ್ನು ಎನ್‌ಸಿಎಯಲ್ಲಿ ಉಳಿಯುವಂತೆ ಸೂಚಿಸಿದೆ.
ಇದನ್ನೂ ಓದಿ:ಕರತ್ಸೇವ್ ಕನಸಿನ ಓಟ; ಜೊಕೋ, ಒಸಾಕಾ, ಸೆರೆನಾ ಸೆಮಿಗೆ
ಇಂಗ್ಲೆಂಡ್ ತಂಡಕ್ಕೆ ಬೇರ್‌ಸ್ಟೊ, ವುಡ್
ಭಾರತ ವಿರುದ್ಧ ದ್ವಿತೀಯ ಟೆಸ್ಟ್ ಸೋತ ಇಂಗ್ಲೆಂಡ್ ಮುಂದಿನ ಪಿಂಕ್ ಬಾಲ್ ಪಂದ್ಯಕ್ಕಾಗಿ ತಂಡದಲ್ಲಿ 2 ಬದಲಾವಣೆ ಮಾಡಿಕೊಂಡಿದೆ. ಮೊದಲ ಎರಡು ಟೆಸ್ಟ್ ವೇಳೆ ವಿಶ್ರಾಂತಿಯಲ್ಲಿದ್ದ ಜಾನಿ ಬೇರ್‌ಸ್ಟೊ ಮತ್ತು ಮಾರ್ಕ್ ವುಡ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಆದರೆ ದ್ವಿತೀಯ ಪಂದ್ಯ ಆಡಿದ್ದ ಆಲ್‌ರೌಂಡರ್ ಮೊಯಿನ್ ಅಲಿ ತವರಿಗೆ ಮರಳಿದ್ದಾರೆ. “ಆವರ್ತನ ಪದ್ಧತಿ ಹಾಗೂ ಒತ್ತಡದಿಂದ ಮುಕ್ತಗೊಳಿಸುವ ಸಲುವಾಗಿ ಮೊಯಿನ್ ಅಲಿ ಅವರನ್ನು ತವರಿಗೆ ಕಳುಹಿಸಲಾಗಿದೆ’ ಎಂದು ತಂಡದ ಆಯ್ಕೆ ಸಮಿತಿ ತಿಳಿಸಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.