ನಕ್ಸಲ್ ದಾಳಿ ಮಾಸ್ಟರ್ ಮೈಂಡ್ ಅನಕ್ಷರಸ್ಥ!
Team Udayavani, Apr 6, 2021, 6:20 AM IST
ಛತ್ತೀಸ್‌ಗಢದ ಬಿಜಾಪುರದಲ್ಲಿ ಭದ್ರತ ಪಡೆ ಮತ್ತು ನಕ್ಸಲರ ನಡುವೆ ನಡೆದ ಮುಖಾಮುಖೀಯಲ್ಲಿ 22 ಸೈನಿಕರು ಹುತಾತ್ಮರಾಗಿದ್ದಾರೆ. ಎನ್‌ಕೌಂಟರ್‌ನಲ್ಲಿ 31 ಜವಾನರು ಗಾಯಗೊಂಡಿದ್ದಾರೆ ಎನ್ನಲಾಗಿದೆ. ಹೇಗಾಯಿತು ಈ ದಾಳಿ, ದಾಳಿ ಬಳಿಕ ಅಲ್ಲಿ ನಡೆದದ್ದೇನು? ಇಲ್ಲಿದೆ ಮಾಹಿತಿ …
ವಿವಿಧ ಬೆಟಾಲಿಯನ್‌ಗಳ ಸುಮಾರು 2000 ಸಿಬಂದಿ ಕೆಲವು ದಿನಗಳಿಂದ ತೆರ್ರಮ್ ಪ್ರದೇಶದ ಸಿಲ್ಗರ್ ಕಾಡಿನ ಜೋನಾಗುಡ ಬಳಿ ಕಾರ್ಯಾಚರಣೆಗೆ ಹೊರಟಿದ್ದರು. ಶನಿವಾರ ಬೆಳಗ್ಗೆ ಜೋನಾಗುಡ ಬಳಿ ಮಾವೋವಾದಿಗಳ ಗುಂಪೊಂದಿದೆ ಎಂಬ ಮಾಹಿತಿ ಸಿಕ್ಕಿತು. ಇದಕ್ಕೆ ಪುಷ್ಠಿ ನೀಡುವಂತೆ ಇಲ್ಲಿನ ಉಪಗ್ರಹ ಫೋಟೋಗಳಲ್ಲಿ ಕೆಲವು ಚಲನವಲನಗಳು ಕಂಡು ಬಂದಿದ್ದವು.
ಅದು ಗೆರಿಲ್ಲಾ ಯುದ್ಧ ವಲಯ!
ಗೆರಿಲ್ಲಾ ಯುದ್ಧ ಎಂದರೆ ರಹಸ್ಯ ದಾಳಿ ತಂತ್ರ. ಬಸ್ತಾರ್ ತಜ್ಞರ ಪ್ರಕಾರ, ಜೋನಾಗುಡದ ಒಂದು ಪ್ರದೇಶವು ಗೆರಿಲ್ಲಾ ಯುದ್ಧ ವಲಯದಡಿ ಇದೆ. ಹೀಗಾಗಿ ಯೋಧರು ಸಣ್ಣ ಸಣ್ಣ ತಂಡವಾಗಿ ಹೋಗುತ್ತಿದ್ದರು. ನಕ್ಸಲರು ಇಲ್ಲಿದ್ದಾರೆಂಬ ಮಾಹಿತಿ ಸಿಕ್ಕಿದ್ದರಿಂದ ಯೋಧರ ತಂಡಗಳು ಸೇರಿದವು. ಆಗಲೇ ಯು ಆಕಾರದಲ್ಲಿ ಹೊಂಚು ಹಾಕಿದ್ದ ನಕ್ಸಲರು ಯೋಧರ ಸಂಖ್ಯೆ ಹೆಚ್ಚುತ್ತಿದ್ದಂತೆ ಗುಂಡಿನ ಸುರಿಮಳೆಗೈದರು.
5 ಗಂಟೆ ಗುಂಡಿನ ಚಕಮಕಿ ನಕ್ಸಲರು ಮತ್ತು ಯೋಧರ ನಡುವೆ 5 ಗಂಟೆಗಳ ಕಾಲ ಗುಂಡಿನ ಚಕಮಕಿ ನಡೆಯಿತು. ನಕ್ಸಲರು ಮೇಲ್ಭಾಗದಲ್ಲಿದ್ದ ಕಾರಣ ನಮ್ಮ ಯೋಧರ ಮೇಲೆ ಸುಲಭವಾಗಿ ದಾಳಿ ನಡೆಸಿದರು. ಆ ಬಳಿಕ ಯೋಧರ ಶಸ್ತ್ರಾಸ್ತ್ರಗಳು, ಸರಕುಗಳನ್ನು ಲೂಟಿ ಮಾಡಿ ಕಾಡಿನಲ್ಲಿ ಕಣ್ಮರೆಯಾದರು.
ಮಾಸ್ಟರ್ ಮೈಂಡ್ ಯಾರು?
ನಕ್ಸಲೈಟ್ಸ್ ಪೀಪಲ್ಸ್ ಲಿಬರೇಶನ್ ಗೆರಿಲ್ಲಾ ಆರ್ಮಿ (ಪಿಎಲ್‌ಜಿಎ) ಬೆಟಾಲಿಯನ್‌ನ ಕಮಾಂಡರ್ ಹಿಡ್ಮಾ ಈ ದಾಳಿಯ ಮಾಸ್ಟರ್ ಮೈಂಡ್. ಕೆಲವು ದಿನಗಳಿಂದ ಬಿಜಾಪುರ ಮತ್ತು ಸುಕ್ಮಾ ಜಿಲ್ಲೆಗಳಲ್ಲಿ ಜೋನಾಗುಡ, ತೆಕಾಲ್ಗುಡಮ್ ಮತ್ತು ಜಿರಗಾಂವ್‌ನಲ್ಲಿ ಹಿಡ್ಮಾ ತನ್ನ ತಂಡವನ್ನು ಒಟ್ಟುಗೂಡಿಸುತ್ತಿದ್ದ. ಈ ಬಗ್ಗೆ ಪೊಲೀಸರು ಗುಪ್ತಚರ ಮಾಹಿತಿ ಪಡೆದಿದ್ದರು. ಹಿಡ್ಮಾನನ್ನು ಸೆರೆಹಿಡಿಯಲು ರಾಜ್ಯ ಪೊಲೀಸರೂ ಈ ಕಾರ್ಯಾಚರಣೆ ರೂಪಿಸಿದ್ದರು. ಹಿಡ್ಮಾನ ಬೆಟಾಲಿಯನ್ ಸಂಖ್ಯೆ 1, ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಹೊಂದಿತ್ತು.
ಟ್ರ್ಯಾಕ್ಟರ್‌ನಲ್ಲಿ ಶವ ತುಂಬಿದರು!
ಈ ಘರ್ಷಣೆಯಲ್ಲಿ ಹತರಾದ ನಕ್ಸಲರ ಶವಗಳನ್ನು 3 ಟ್ರ್ಯಾಕ್ಟರುಗಳಲ್ಲಿ ತುಂಬಿಸಿ ಕೊಂಡು ಅವರು ಪರಾರಿಯಾಗಿ¨ªಾರೆ.
ಯೋಧರ ಶವಗಳು ಕಾಡಿನಲ್ಲಿದ್ದವು
ಕಾರ್ಯಾಚರಣೆಯಲ್ಲಿ ಮೃತಪಟ್ಟ ಯೋಧರ ಮೃತದೇಹಗಳನ್ನು ತರಲು 24 ಗಂಟೆಗಳಿಗಿಂತ ಹೆಚ್ಚು ಸಮಯ ತಗುಲಿದೆ. ಹುತಾತ್ಮರಾದ ಸೈನಿಕರ ಮೃತದೇಹಗಳು ತೆಕಾಲ್ಗುಡಮ್ ಗ್ರಾಮದಲ್ಲಿ 24 ಗಂಟೆಗಳ ಕಾಲ ಇದ್ದವು ಎಂದು ದೈನಿಕ್ ಭಾಸ್ಕರ್ ವರದಿ ಮಾಡಿದೆ. ಗಾಯಗೊಂಡ ಸೈನಿಕರನ್ನು ಮಾತ್ರ ರಾತ್ರಿ ಕಾಡಿನಿಂದ ಹೊರಗೆ ಕರೆದೊಯ್ಯಲಾಯಿತು.
ಸೈನಿಕರ ಶವ ಸಂಗ್ರಹಿಸಿದ ನಕ್ಸಲರು
ಎರಡನೇ ದಿನ, ಹುತಾತ್ಮರಾದ ಸೈನಿಕರ ಮೃತ ದೇಹಗಳನ್ನು ತರಲು ಹೆಲಿಕಾಪ್ಟರ್ ಅನ್ನು ಕಳುಹಿಸಲಾಗಿತ್ತು. ಕೆಲವು ಜವಾನರ ಶವಗಳನ್ನು ತೆಕಾಲ್ಗುಡಮ್ ಗ್ರಾಮದ ಸ್ಥಳವೊಂದರಲ್ಲಿ ನಕ್ಸಲರು ಅಡಗಿಸಿಟ್ಟದ್ದರಂತೆ. ಗಾಯಗೊಂಡ ಸೈನಿಕರೊಂದಿಗೆ ಬಿಜಾಪುರಕ್ಕೆ ಮರಳಿದಾಗ, ಮತ್ತೂಂದೆಡೆ ನಕ್ಸಲರು ಹುತಾತ್ಮರಾದ ಸೈನಿಕರ ಶವಗಳನ್ನು ಸಂಗ್ರಹಿಸಿ ಅವರ ಶಸ್ತ್ರಾಸ್ತ್ರಗಳು ಮತ್ತು ಕಾಟ್ರಿìಜ್‌ಗಳನ್ನು ಸಹ ಲೂಟಿ ಮಾಡಿದ್ದಾರಂತೆ.
ಹಿಡ್ಮಾ ನೇರ ಭಾಗಿ?
ಈ ಹಿಂದಿನ ಸುಕಾ¾ ದಾಳಿಯ ಹಿಂದೆ 12 ಸಿಆರ್‌ಪಿಎಫ್ ಜವಾನರು ಹುತಾತ್ಮರಾಗಿದ್ದರು. ಜಿರಾಮ್ ಕಣಿವೆಯಲ್ಲಿ 2013ರಲ್ಲಿ ನಡೆದ ಕಾಂಗ್ರೆಸ್ ನಾಯಕರ ಸಹಿತ 30 ಜನರ ಮಾರಣಹೋಮದಲ್ಲೂ ಈ ಹಿಡ್ಮಾ ಭಾಗಿಯಾಗಿದ್ದ 2010ರಲ್ಲಿ ಚಿಂತಲ್‌ನರ್ ಬಳಿಯ ತಾಡೆ¾ಟ್ಲಾದಲ್ಲಿ 76 ಸಿಆರ್‌ಪಿಎಫ್ ಸಿಬಂದಿಯ ಹುತಾತ್ಮರ ಹಿಂದೆಯೂ ಈತನ ಕೈವಾಡವಿತ್ತು.
ದೀಪಕ್ ಹುತಾತ್ಮನಾದ !
ನಕ್ಸಲರ ಪ್ರಮುಖ ದಾಳಿಯ ಕಥೆಯನ್ನು ಯೋಧರೊಬ್ಬರು ಹಂಚಿಕೊಂಡಿದ್ದಾರೆ. ನಕ್ಸಲರು ಇದ್ದಕ್ಕಿದ್ದಂತೆ ನಮ್ಮ ಮೇಲೆ ಗುಂಡು ಹಾರಿಸ ಲಾರಂಭಿಸಿದಾಗ ನಮ್ಮವರು ಗಾಯ ಗೊಂಡರು. ನಾವು ಗಾಯಾಳುಗಳನ್ನು ಮಧ್ಯದಲ್ಲಿ ಇಟ್ಟುಕೊಂಡು ಹೊರಗೆ ವೃತ್ತವನ್ನು ಮಾಡಿ ನಕ್ಸಲರ ಮೇಲೆ ಪ್ರತಿ ದಾಳಿ ನಡೆಸಿದೆವು. ದೀಪಕ್ ಸಾಹೇಬ್ ನಿರಂತರವಾಗಿ ಪ್ರತೀ ದಾಳಿ ನಡೆಸಿ ನಮ್ಮೆಲ್ಲರನ್ನೂ ಪಾರು ಮಾಡಿದರು. ಆದರೆ ಅವರ ಮೇಲೆ ಐಇಡಿ ಸ್ಫೋಟ ಸಂಭವಿಸಿತು. 4ರಿಂದ 5 ಸೈನಿಕರ ಪ್ರಾಣ ಉಳಿಸಿ ಅವರು ಮೃತಪಟ್ಟರು.
ದೀಪಕ್ ಜಂಜಗೀರ್ ಜಿಲ್ಲೆಯ ಪಿಹ್ರಿಡ್ ನಿವಾಸಿ. 2013ರಲ್ಲಿ ಇಲಾಖೆಗೆ ಸೇರಿದ್ದರು. ಈ ಹಿಂದೆಯೂ ನಕ್ಸಲರ ವಿರುದ್ಧ ಹೋರಾಡಿದ್ದರು. ದೀಪಕ್ ಅವರು 2019ರಲ್ಲಿ ವಿವಾಹವಾಗಿದ್ದರು.
ಮಗನನ್ನು ಹುಡುಕಿದ ತಂದೆ
ದೀಪಕ್ ತನ್ನ ತಂಡವನ್ನು ಮುನ್ನಡೆಸುತ್ತಿದ್ದ. ಗುಂಡಿನ ದಾಳಿಯ ಅನಂತರ ಯೋಧರು ಹಿಂದಿರುಗಿದರು. ಈ ವೇಳೆ ದೀಪಕ್ ಸಹಿತ ಕೆಲವರು ಕಾಣೆಯಾಗಿರುವುದು ಕಂಡು ಬಂತು. ದೀಪಕ್ ಅವರ ಕುಟುಂಬ ಸದಸ್ಯರಿಗೂ ಈ ಮಾಹಿತಿ ನೀಡಲಾಯಿತು. ಅವರ ತಂದೆ ರಾಧೇಲಾಲ್ ಭಾರದ್ವಾಜ್ ಮತ್ತು ತಾಯಿ ಪರಮೇಶ್ವರಿ ಕೂಡಲೇ ಬಿಜಾಪುರಕ್ಕೆ ತೆರಳಿದರು. ಆದರೆ ಮಧ್ಯಾಹ್ನದವರೆಗೆ ಏನೂ ಮಾಹಿತಿ ಇರಲಿಲ್ಲ. ಆದರೆ ತೆರ್ರಮ್ ಪೊಲೀಸ್ ಠಾಣೆ ಪ್ರದೇಶದ ಜೋನಾಗುಡದಲ್ಲಿ ದೀಪಕ್ ಮೃತದೇಹವು ಪತ್ತೆಯಾಗಿತ್ತು.
ಹೋಳಿ ಹಬ್ಬದ ಮುನ್ನಾದಿನ ಮಾತು ಕಡೆ ಮಾತು
ದೀಪಕ್ ತಂದೆ ತಮ್ಮ ಮಗನ ದೇಹವನ್ನು ತಬ್ಬಿಕೊಂಡು ಬಿಕ್ಕಿ ಬಿಕ್ಕಿ ಅಳುತ್ತಲೇ ಇದ್ದರು. ಹೋಳಿ ಹಬ್ಬದ ಮೊದಲು ಮಗನೊಂದಿಗೆ ಮಾತನಾಡಿದ್ದೆ. “ನಾನು ತುಂಬಾ ಬ್ಯುಸಿ ಇದ್ದೇನೆ’ ಎಂದಿದ್ದ. ಹೀಗಾಗಿ ಹೆಚ್ಚು ಮಾತನಾಡಲು ಆಗಿರಲಿಲ್ಲ ಎಂದು ಮಾಧ್ಯಮಗಳೊಂದಿಗೆ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಹಿದ್ಮಾನ ಇಂಗ್ಲಿಷ್ ನಿರರ್ಗಳ!
ಹಿದ್ಮಾನ ಪೂರ್ಣ ಹೆಸರು ಮಾಂಡ್ವಿ ಹಿದ್ಮಾ ಅಕಾ ಇಡಮುಲ್ ಪೊಡಿಯಮ್ ಭೀಮಾ. ಸುಕ್ಮಾ ಜಿಲ್ಲೆಯ ಜಾಗರಗುಂಡ ಪ್ರದೇಶದ ಪುಡತಿ ಗ್ರಾಮದವನು. ಅನಕ್ಷರಸ್ಥನಾಗಿದ್ದರೂ, ನಿರರ್ಗಳವಾಗಿ ಇಂಗ್ಲಿಷ್ ಮಾತನಾಡುವವ. ಕಂಪ್ಯೂಟರ್‌ಗಳ ಬಗ್ಗೆಯೂ ಜ್ಞಾನ ಹೊಂದಿದ್ದಾನೆ. ಗೆರಿಲ್ಲಾ ಯುದ್ಧ ಈತನಿಗೆ ಕರಗತ. ಎರಡು ಮದುವೆಗಳನ್ನು ಆಗಿರುವ ಈತನ ಚಟುವ ಟಿಕೆಗಳಿಗೆ ಪತ್ನಿಯರ ಬೆಂಬಲವೂ ಇದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi bom*b ಬೆದರಿಕೆ; ಮಕ್ಕಳಿಗೆ ರಜೆ ಬೇಕಾಗಿತ್ತು: ಕಾರಣ ಬಿಚ್ಚಿಟ್ಟ ಪೊಲೀಸರು!
Sabarimala Railway: ಶಬರಿಮಲೆ ತೀರ್ಥಾಟನೆ: ಕೇರಳಕ್ಕೆ 10 ವಿಶೇಷ ರೈಲು
PM Modi;ಇಂದು 71000ಕ್ಕೂ ಅಧಿಕ ಮಂದಿಗೆ ಉದ್ಯೋಗ ಪತ್ರ ವಿತರಣೆ
Chhattisgarh; ನಕ್ಸಲ್ ವ್ಯಾಪ್ತಿ 9500 ಚ.ಕಿ.ಮೀ.ಗೆ ಇಳಿಕೆ
Tamil Nadu University; ಕುಲಪತಿ ನೇಮಕ: ಸಿಎಂ, ಗೌರ್ನರ್ ನಡುವೆ ಮತ್ತ ಸಂಘರ್ಷ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Ambedkar Row: ಕಾಂಗ್ರೆಸ್ ಎಂದರೆ ಫೇಕ್ ಗಾಂಧಿಗಳ ಪಕ್ಷ: ಛಲವಾದಿ ನಾರಾಯಣಸ್ವಾಮಿ
Delhi bom*b ಬೆದರಿಕೆ; ಮಕ್ಕಳಿಗೆ ರಜೆ ಬೇಕಾಗಿತ್ತು: ಕಾರಣ ಬಿಚ್ಚಿಟ್ಟ ಪೊಲೀಸರು!
ಇಂದು ರಾಷ್ಟ್ರೀಯ ರೈತ ದಿನ: ರೈತರ ಬದುಕು ಹಸನಾದರಷ್ಟೇ ಉಳಿದೀತು ಕೃಷಿ ಸಂಸ್ಕೃತಿ
Sabarimala Railway: ಶಬರಿಮಲೆ ತೀರ್ಥಾಟನೆ: ಕೇರಳಕ್ಕೆ 10 ವಿಶೇಷ ರೈಲು
Champions Trophy, ಭಾರತ ಪ್ರವಾಸಕ್ಕೆ ಇಂಗ್ಲೆಂಡ್ ತಂಡ ಪ್ರಕಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.