ಟರ್ಕಿಯಲ್ಲಿ ಹತ್ತು ದಿನದ ಕಾರ್ಯಾಚರಣೆ ಬಳಿಕ ಭಾರತಕ್ಕೆ ವಾಪಾಸಾದ NDRF ತಂಡ
ತಂಡದ ಜೊತೆಗೆ ತೆರಳಿದ್ದ ರ್‍ಯಾಂಬೋ, ಹನಿಯೂ ವಾಪಾಸ್
Team Udayavani, Feb 17, 2023, 2:25 PM IST
ನವದೆಹಲಿ: ಭೂಕಂಪದಿಂದ ನಲುಗಿಹೋಗಿದ್ದ ಟರ್ಕಿ ದೇಶಕ್ಕೇ ಭಾರತ ʻಆಪರೇಷನ್ ದೋಸ್ತ್ʼ ಹೆಸರಲ್ಲಿ ಸಹಾಯಹಸ್ತ ಚಾಚಿ, ತನ್ನ ಸೇನಾ ನೆರವನ್ನಲ್ಲದೇ , ಶ್ವಾನದಳವನ್ನೂ, ಆಹಾರ ಸಾಮಗ್ರಿಗಳನ್ನೂ,ವೈದ್ಯಕೀಯ ಸವಲತ್ತುಗಳನ್ನೂ ಟರ್ಕಿಗೆ ನೀಡಿ ಆಪತ್ಭಾಂಧನಂತೆ ಸಹಾಯ ಮಾಡಿದೆ.
ಇದೀಗ ತನ್ನ 10 ದಿನಗಳ ರಕ್ಷಣಾ ಕಾರ್ಯಾಚರಣೆಯ ಬಳಿಕ ಭಾರತದ 47 ಯೋಧರನ್ನೊಳಗೊಂಡ ಎನ್‌ಡಿಆರ್‌ಎಫ್ ತಂಡ ತನ್ನೊಂದಿಗೆ ಟರ್ಕಿಗೆ ತೆರಳಿದ್ದ ರ್‍ಯಾಂಬೋ ಮತ್ತು ಹನಿ ಎಂಬ ಎರಡು ಶ್ವಾನಗಳೊಂದಿಗೆ ಭಾರತಕ್ಕೆ ವಾಪಾಸಾಗಿದೆ. ರ್‍ಯಾಂಬೋ, ಹನಿ ಮಾತ್ರವಲ್ಲದೇ ಅದರೊಂದಿಗೆ ಜೂಲಿ ಮತ್ತು ರೋಮಿಯೋ ಎಂಬ ಇನ್ನೆರಡು ಶ್ವಾನಗಳೂ ಕೂಡಾ ಟರ್ಕಿಗೆ ತೆರಳಿತ್ತು.
ರಕ್ಷಣಾ ಕಾರ್ಯಾಚರಣೆಗಳಿಗೆ ವಿಶೇಷ ತರಬೇತಿ ಪಡೆದಿರುವ ಲಾಬ್ರೋಡಾರ್ ತಳಿಯ ನಾಲ್ಕು ಶ್ವಾನಗಳು ಎರಡು ಪ್ರತ್ಯೇಕ ಎನ್‌ಡಿಆರ್‌ಎಫ್ ತಂಡಗಳ ಜೊತೆಗೆ ಭೂಕಂಪದ ಮಾರನೇ ದಿನವೇ ಟರ್ಕಿಗೆ ತೆರಳಿತ್ತು.
A 47-member NDRF team along with dog squad members Rambo and Honey returned to India today after conducting a 10-day-long rescue operation from earthquake-hit Turkey. pic.twitter.com/PpaLe6CLre
— ANI (@ANI) February 17, 2023
ಭಾರತದ ರೋಮಿಯೋ ಮತ್ತು ಜೂಲಿ ಕಟ್ಟಡದ ಅವಶೇಷಗಳ ನಡುವೆ ಸಿಲುಕಿಕೊಂಡಿದ್ದ 6 ವರ್ಷದ ಬಾಲಕಿಯನ್ನು ರಕ್ಷಿಸಿದ್ದು ವಿಶ್ವದ ಗಮನ ಸೆಳೆದಿತ್ತು. ಯಂತ್ರಗಳಿಂದಲೂ ಬಾಲಕಿಯನ್ನು ಹುಡುಕಲು ಸಾಧ್ಯವಾಗದೇ ಇದ್ದಾಗ ಈ ಎರಡೂ ಶ್ವಾನಗಳು ಆಕೆ ಇರುವ ಜಾಗವನ್ನು ಹುಡುಕಿಕೊಟ್ಟಿತ್ತು.
ವಿಶ್ವಸಂಸ್ಥೆ ಕೂಡಾ ಟರ್ಕಿ ಮತ್ತು ಸಿರಿಯಾ ನೆರವಿಗೆ ಬಂದಿದ್ದು ಸಿರಿಯಾಗೆ 400 ಮಿಲಿಯನ್ ಡಾಲರ್ ಮತ್ತು ಟರ್ಕಿಗೆ 1 ಬಿಲಿಯನ್ ಡಾಲರ್‌ಗಳ ನೆರವನ್ನು ನೀಡಿದೆ.
ಇದನ್ನೂ ಓದಿ: ಬಜೆಟ್ 2023:ಮಹಿಳೆಯರಿಗೆ ಗೃಹಿಣಿ ಶಕ್ತಿ ಯೋಜನೆ, ಕಾಂಗ್ರೆಸ್ ಗೃಹಲಕ್ಷ್ಮಿ ಯೋಜನೆಗೆ ತಿರುಗೇಟು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mohali: ನಾಲ್ಕಂತಸ್ತಿನ ಕಟ್ಟಡ ಕುಸಿದು 20 ವರ್ಷದ ಯುವತಿ ಸಾವು
Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್ ಬುಕ್ಕಿಂಗ್ ತಾತ್ಕಾಲಿಕ ರದ್ದು
Old cars ಬಿಕರಿಗೆ ಶೇ.18 ಜಿಎಸ್‌ಟಿ! ; ವಿತ್ತ ಸಚಿವೆ ನೇತೃತ್ವದ ಜಿಎಸ್‌ಟಿ ಸಭೆ ತೀರ್ಮಾನ
Maharashtra; ಫಡ್ನವೀಸ್ ಬಳಿ ಗೃಹ, ಶಿಂಧೆಗೆ ನಗರಾಭಿವೃದ್ಧಿ ಸೇರಿ 3 ಪ್ರಮುಖ ಖಾತೆ!
Mumbai; ಚುನಾವಣೆಗೆ ಏಕಾಂಗಿ ಸ್ಪರ್ಧೆ: ಉದ್ಧವ್ ಶಿವಸೇನೆ ಇಂಗಿತ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
BGT 2024: ಮೆಲ್ಬೋರ್ನ್ ಪಂದ್ಯಕ್ಕೂ ಟೀಂ ಇಂಡಿಯಾಗೆ ಗಾಯಾಳುಗಳ ಸಮಸ್ಯೆ
Mohali: ನಾಲ್ಕಂತಸ್ತಿನ ಕಟ್ಟಡ ಕುಸಿದು 20 ವರ್ಷದ ಯುವತಿ ಸಾವು
Vijay Hazare Trophy: ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್ ಸೂರ್ಯವಂಶಿ
BBMP Notice: ವಿರಾಟ್ ಕೊಹ್ಲಿ ಸಹ ಮಾಲಿಕತ್ವದ ರೆಸ್ಟೋರೆಂಟ್‌ಗೆ ಬಿಬಿಎಂಪಿ ನೋಟಿಸ್
Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್ ಬುಕ್ಕಿಂಗ್ ತಾತ್ಕಾಲಿಕ ರದ್ದು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.