12 ಕ್ರೀಡಾ ಸಾಧಕರಿಗೆ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ ಪ್ರದಾನ
Team Udayavani, Nov 13, 2021, 6:32 PM IST
ನವದೆಹಲಿ: ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಶನಿವಾರ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ,ಅರ್ಜುನ ಪ್ರಶಸ್ತಿ ಮತ್ತು ದ್ರೋಣಾಚಾರ್ಯ ಪ್ರಶಸ್ತಿಗಳನ್ನು ಕ್ರೀಡಾ ಲೋಕದ ಸಾಧಕರಿಗೆ ಪ್ರದಾನ ಮಾಡಿದರು.
ಖೇಲ್ ರತ್ನ ಪ್ರಶಸ್ತಿ ಪಡೆದ ಪ್ರಮುಖ ಸಾಧಕರಲ್ಲಿ ಟೋಕಿಯೊ ಒಲಿಂಪಿಕ್ಸ್ 2021 ರಲ್ಲಿ ಜಾವೆಲಿನ್ ಎಸೆತದಲ್ಲಿ ಸ್ವರ್ಣ ಪದಕ ವಿಜೇತ ನೀರಜ್ ಚೋಪ್ರಾ, ಕುಸ್ತಿ ಪಟು ರವಿ ಕುಮಾರ್, ಲೊವ್ಲಿನಾ ಬೊರ್ಗೊಹೈನ್ (ಬಾಕ್ಸಿಂಗ್), ಶ್ರೀಜೇಶ್ ಪಿಆರ್ (ಹಾಕಿ), ಅವನಿ ಲೆಖರಾ (ಪ್ಯಾರಾ ಶೂಟಿಂಗ್), ಸುಮಿತ್ ಆಂಟಿಲ್ (ಪ್ಯಾರಾ-ಅಥ್ಲೆಟಿಕ್ಸ್), ಪ್ರಮೋದ್ ಭಗತ್ (ಪ್ಯಾರಾ ಬ್ಯಾಡ್ಮಿಂಟನ್), ಕೃಷ್ಣ ನಗರ (ಪ್ಯಾರಾ ಬ್ಯಾಡ್ಮಿಂಟನ್), ಮನೀಶ್ ನರ್ವಾಲ್ (ಪ್ಯಾರಾ ಶೂಟಿಂಗ್), ಮಿಥಾಲಿ ರಾಜ್ (ಕ್ರಿಕೆಟ್), ಸುನಿಲ್ ಛೆಟ್ರಿ (ಫುಟ್‌ಬಾಲ್), ಮತ್ತು ಮನ್‌ಪ್ರೀತ್ ಸಿಂಗ್ (ಹಾಕಿ) ಸೇರಿದ್ದಾರೆ. ಇದೆ ಮೊದಲ ಬಾರಿಗೆ 12 ಮಂದಿಗೆ ಖೇಲ್ ರತ್ನ ಪ್ರಶಸ್ತಿ ನೀಡಲಾಗಿದೆ.
ಈ ಪೈಕಿ, ಶಟ್ಲರ್ ಕೃಷ್ಣನಗರ ಅವರು ತಾಯಿಯ ಹಠಾತ್ ನಿಧನದಿಂದಾಗಿ ಕಾರ್ಯಕ್ರಮಕ್ಕೆ ಹಾಜರಾಗಲು ಸಾಧ್ಯವಾಗಲಿಲ್ಲ.
ಅರ್ಜುನ ಪ್ರಶಸ್ತಿ ಸ್ವೀಕರಿಸಿದ ಕ್ರೀಡಾಪಟುಗಳು
ಅರ್ಪಿಂದರ್ ಸಿಂಗ್, ಸಿಮ್ರಂಜಿತ್ ಕೌರ್, ಶಿಖರ್ ಧವನ್, ಭವಾನಿ ದೇವಿ, ಮೋನಿಕಾ, ವಂದನಾ ಕಟಾರಿಯಾ, ಸಂದೀಪ್ ನರ್ವಾಲ್, ಹಿಮಾನಿ ಉತ್ತಮ್ ಪರಬ್, ಅಭಿಷೇಕ್ ವರ್ಮಾ, ಅಂಕಿತಾ ರೈನಾ, ದೀಪಕ್ ಪುನಿಯಾ, ದಿಲ್‌ಪ್ರೀತ್ ಸಿಂಗ್, ಹರ್ಮನ್ ಪ್ರೀತ್ ಸಿಂಗ್, ರೂಪಿಂದರ್ ಪಾಲ್ ಸಿಂಗ್, ಸುರೇಂದರ್ ಕುಮಾರ್, ಅಮಿತ್ ರೋಹಿದಾಸ್, ಬೀರೇಂದ್ರ ಲಾಕ್ರಾ, ಸುಮಿತ್, ನೀಲಕಂಠ ಶರ್ಮಾ, ಹಾರ್ದಿಕ್ ಸಿಂಗ್, ವಿವೇಕ್ ಸಾಗರ್ ಪ್ರಸಾದ್, ಗುರ್ಜಂತ್ ಸಿಂಗ್, ಮಂದೀಪ್ ಸಿಂಗ್, ಶಂಶೇರ್ ಸಿಂಗ್, ಲಲಿತ್ ಕುಮಾರ್ ಉಪಾಧ್ಯಾಯ, ವರುಣ್ ಕುಮಾರ್, ಸಿಮ್ರಂಜೀತ್ ಸಿಂಗ್, ಯೋಗೇಶ್ ಕಥುನಿಯಾ, ನಿಶಾದ್ ಕುಮಾರ್ , ಪ್ರವೀಣ್ ಕುಮಾರ್, ಸುಹಾಶ್ ಯತಿರಾಜ್, ಸಿಂಗ್ರಾಜ್ ಅಧಾನ, ಭಾವಿನಾ ಪಟೇಲ್, ಹರ್ವಿಂದರ್ ಸಿಂಗ್, ಮತ್ತು ಶರದ್ ಕುಮಾರ್.
ದ್ರೋಣಾಚಾರ್ಯ ಪ್ರಶಸ್ತಿ
ಟಿಪಿ ಔಸೆಫ್, ಸರ್ಕಾರ್ ತಲ್ವಾರ್, ಸರ್ಪಾಲ್ ಸಿಂಗ್, ಅಶನ್ ಕುಮಾರ್ ಮತ್ತು ತಪನ್ ಕುಮಾರ್ ಪಾಣಿಗ್ರಾಹಿ ಅವರಿಗೆ ಸಂದಿದೆ. ನಿಯಮಿತ ವಿಭಾಗದಲ್ಲಿ ರಾಧಾಕೃಷ್ಣನ್ ನಾಯರ್ ಪಿ, ಸಂಧ್ಯಾ ಗುರುಂಗ್, ಪ್ರೀತಮ್ ಸಿವಾಚ್, ಜೈ ಪ್ರಕಾಶ್ ನೌಟಿಯಾಲ್ ಮತ್ತು ಸುಬ್ರಮಣಿಯನ್ ರಾಮನ್ ಅವರಿಗೆ ನೀಡಲಾಯಿತು.
ಜೀವಮಾನದ ಸಾಧನೆಗಾಗಿ ಧ್ಯಾನ್ ಚಂದ್ ಪ್ರಶಸ್ತಿಯನ್ನು ಲೇಖಾ ಕೆಸಿ, ಅಭಿಜೀತ್ ಕುಂಟೆ, ದವೀಂದರ್ ಸಿಂಗ್ ಗಾರ್ಚಾ, ವಿಕಾಸ್ ಕುಮಾರ್ ಮತ್ತು ಸಜ್ಜನ್ ಸಿಂಗ್ ಪಡೆದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.