“ಪುಸ್ತಕದ ಜ್ಞಾನಕ್ಕಷ್ಟೇ ಸೀಮಿತವಿದ್ದ ವ್ಯವಸ್ಥೆಯನ್ನು NEP ಬದಲಿಸಲಿದೆ”: ಪ್ರಧಾನಿ ಮೋದಿ
Team Udayavani, May 13, 2023, 8:06 AM IST
ಗಾಂಧಿನಗರ: ದೇಶದಲ್ಲಿ ಹಿಂದೆಲ್ಲ ಮಕ್ಕಳು ಬರೀ ಪುಸ್ತಕದ ಜ್ಞಾನವನ್ನಷ್ಟೇ ಹೊಂದಿರುತ್ತಿದ್ದರು ಆದರೆ, ರಾಷ್ಟ್ರೀಯ ನೂತನ ಶಿಕ್ಷಣ ನೀತಿ (ಎನ್‌ಇಪಿ) ಈ ಪದ್ಧತಿಯನ್ನೇ ಬದಲಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಅಖಿಲ ಭಾರತ ಪ್ರಾಥಮಿಕ ಶಿಕ್ಷಕರ ಒಕ್ಕೂಟದ ವತಿಯಿಂದ ಗುಜರಾತ್‌ನಲ್ಲಿ ಆಯೋಜಿಸಲಾಗಿದ್ದ 29ನೇ ದ್ವೈವಾರ್ಷಿಕ ಶೈಕ್ಷಣಿಕ ಸಮ್ಮೇಳನದಲ್ಲಿ ಶಿಕ್ಷಕರನ್ನುದ್ದೇಶಿಸಿ ಪ್ರಧಾನಿ ಮೋದಿ ಮಾತನಾಡಿದರು.
ಈ ವೇಳೆ ಗೂಗಲ್ ಕೇವಲ ಮಾಹಿತಿ ಮತ್ತು ದತ್ತಾಂಶಗಳನ್ನಷ್ಟೇ ಒದಗಿಸಬಲ್ಲದು. ಆದರೆ, ವಿದ್ಯಾರ್ಥಿ ಜೀವನದ ನಿಜವಾದ ಮಾರ್ಗದರ್ಶಕರೆಂದರೆ ಅದು ಶಿಕ್ಷಕರು ಮಾತ್ರ. ಹಿಂದೆಲ್ಲ ಮಕ್ಕಳಿಗೆ ಬರೀ ಪುಸ್ತಕದಲ್ಲಿರುವುದನ್ನು ಬೋಧಿಸುತ್ತಿದ್ದೆವು. ಆದರೀಗ ಎನ್‌ಇಪಿ ಈ ಪದ್ದತಿಯನ್ನು ಬದಲಿಸುವ ಅವಕಾಶ ನೀಡುತ್ತಿದೆ. ಮಕ್ಕಳಿಗೆ ಪ್ರಾಯೋಗಿಕ ಶಿಕ್ಷಣವನ್ನೂ ಎನ್‌ಇಪಿ ನೀಡಬಲ್ಲದು ಆದರೆ, ಅದನ್ನು ತಲುಪಿಸುವ ಹೊಣೆ ಶಿಕ್ಷಕರ ಬೆನ್ನ ಮೇಲಿದೆ ಎಂದಿದ್ದಾರೆ.
ಇದೇ ವೇಳೆ ಮಹಾತ್ಮ ಮಂದಿರ ಉದ್ಘಾಟನೆಯನ್ನೂ ಮೋದಿ ನೆರವೇರಿಸಿದ್ದು, ನಮ್ಮ ಸರ್ಕಾರದ ಯಾವುದೇ ಯೋಜನೆಗಳು ಕೂಡ ಫಲಾನುಭವಿಗಳ ಧರ್ಮ-ಜಾತಿ ನೋಡುವುದಿಲ್ಲ. ಸಮಾಜದ ಸರ್ವಸ್ತರವನ್ನು ಯೋಜನೆಗಳು ತಲುಪುತ್ತಿವೆ. ತಾರತಮ್ಯವಿಲ್ಲದ ವ್ಯವಸ್ಥೆಯೇ ನಿಜವಾದ ಜಾತ್ಯತೀತವಾದವೆಂದು ಮೋದಿ ಪ್ರತಿಪಾದಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Goa: ಕ್ಯಾಲಂಗುಟ್ ಬೀಚ್‌ನಲ್ಲಿ ಪ್ರವಾಸಿ ಬೋಟ್ ಮುಳುಗಿ ಓರ್ವ ಸಾ*ವು, 20 ಮಂದಿ ರಕ್ಷಣೆ
Uttar Pradesh: 6 ಪುರುಷರ ವರಿಸಿ ವಂಚಿಸಿದ ಯುವತಿಯ ಗ್ಯಾಂಗ್ ಜೈಲಿಗೆ
Road Project: ಶಿರಾಡಿ ಘಾಟ್ ಸುರಂಗ ಯೋಜನೆಗೆ ಡಿಪಿಆರ್ ರಚಿಸಿ: ಕೇಂದ್ರ ಸೂಚನೆ
Hosur ವಿಮಾನ ನಿಲ್ದಾಣಕ್ಕೆ 2 ಸ್ಥಳ ನಿಗದಿಪಡಿಸಿದ ತಮಿಳುನಾಡು
GST: ಖರೀದಿ, ಮಾರಾಟ ದರದ ವ್ಯತ್ಯಾಸಕ್ಕಷ್ಟೇ 18% ಜಿಎಸ್‌ಟಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mangaluru: ಪದವು ಜಂಕ್ಷನ್- ಶರ್ಬತ್ ಕಟ್ಟೆ ರಸ್ತೆಗೆ ಅಗತ್ಯವಿದೆ ಫುಟ್‌ಪಾತ್
Padil: ಡಿಸಿ ಕಚೇರಿ ಸಂಕೀರ್ಣಕ್ಕೆ ಚಿನ್ನದ ಬಣ್ಣದ ರಾಷ್ಟ್ರ ಲಾಂಛನ
Uppunda: ಪಾಳು ಕೆರೆ ಈಗ ಈಜುಕೊಳ!; ಚೌಂಡಿ ಕೆರೆಗೆ ಊರಿನ ಯುವಕರಿಂದ ಕಾಯಕಲ್ಪ
Bajpe: ತಂಗುದಾಣ ತೆರವು, ಪ್ರಯಾಣಿಕರು ಅನಾಥ!
Perfect: ಎಡ್ ಶಿರನ್ ಹಾಡಿನಿಂದ ರಾಷ್ಟ್ರೀಯ ಸೆನ್ಸೇಶನ್ ಆದ ಉಡುಪಿಯ ಹುಡುಗ | Video
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.