ಎವರೆಸ್ಟ್ ಈಗ ಮತ್ತಷ್ಟು ಎತ್ತರ; ಶಿಖರದ ಪರಿಷ್ಕೃತ ಮಾಹಿತಿ ಬಿಡುಗಡೆ!
Team Udayavani, Dec 8, 2020, 4:45 PM IST
ಹೊಸದಿಲ್ಲಿ: ಜಗತ್ತಿನ ಅತೀ ದೊಡ್ಡ ಶಿಖರವನ್ನು ಏರುವ ಕನಸು ನಿಮ್ಮದಾಗಿದ್ದರೆ ಇಂದಿನಿಂದಲೇ ತುಸು ಹೆಚ್ಚು ಅಭ್ಯಾಸ ಮಾಡಬೇಕಾಗಿದೆ. ಯಾಕೆಂದರೆ ಈ ಹಿಂದೆ ಕಂಡುಕೊಳ್ಳಲಾದ ಎತ್ತರಕ್ಕಿಂತ ಕೆಲವು ಹೆಜ್ಜೆ ಹೆಚ್ಚು ಇಡಬೇಕಾಗಿದೆ. ಅರ್ಥಾತ್ ನಿಮ್ಮ ಕನಸುಗಳು ಬೆಳೆದಂತೆ ಈಗ ಎವರೆಸ್ಟ್ ಶಿಖರವೂ ಬೆಳೆದಿದೆ.
ಹೌದು. ವಿಶ್ವದ ಅತ್ಯುನ್ನತ ಶಿಖರವಾದ ಎವರೆಸ್ಟ್ ಪರ್ವತದ ಎತ್ತರ ಈಗ ಮೊದಲಿಗಿಂತಲೂ ಹೆಚ್ಚಾಗಿದೆ. ಈ ಮಾಹಿತಿಯನ್ನು ನೇಪಾಲ ಮತ್ತು ಚೀನ ಜಂಟಿಯಾಗಿ ಘೋಷಿಸಿವೆ. ಈ ಹಿಂದೆ ಇದರ ಎತ್ತರವು 8,848 ಮೀಟರ್ ಆಗಿತ್ತು. ಇದನ್ನು ಈಗ 8,848.86 ಮೀಟರ್ (29,032 ಅಡಿ) ಎಂದು ಅಳತೆ ಮಾಡಲಾಗಿದೆ. ಆದರೆ ಅದರ ಎತ್ತರ 84,48.86 ಮೀಟರ್ ಎಂದು ಚೀನ ಈ ಹಿಂದೆ ತಿಳಿಸಿತ್ತು.
ನೇಪಾಲದ ವಿದೇಶಾಂಗ ಸಚಿವರು ಈ ಮಾಹಿತಿಯನ್ನು ಬಿಡುಗಡೆ ಮಾಡಿದ್ದಾರೆ. 2019ರ 13 ಅಕ್ಟೋಬರ್‌ನಲ್ಲಿ ಎವರೆಸ್ಟ್ ಪರ್ವತದ ಎತ್ತರವನ್ನು ಅಳೆಯಲು ನೇಪಾಲ ಮತ್ತು ಚೀನ ಒಪ್ಪಂದ ಮಾಡಿಕೊಂಡಿದ್ದವು. ಇದರ ಜತೆಗೆ ಚೀನ ಮತ್ತು ನೇಪಾಲ ಒಟ್ಟಾಗಿ ಜುಮ್ಲಾಂಗ್ಮಾ ಮತ್ತು ಸಾಗರಮಾಥ ಪರ್ವತದ ಎತ್ತರವನ್ನು ಘೋಷಿಸಲು ನಿರ್ಧರಿಸಿದ್ದವು. ಕಳೆದ ವರ್ಷ ಎವರೆಸ್ಟ್ ಪರ್ವತದ ಎತ್ತರವನ್ನು ಅಳೆಯಲು ತಂಡವನ್ನು ಕಳುಹಿಸಲಾಗಿತ್ತು. ಈ ವರ್ಷ ಮತ್ತೊಮ್ಮೆ ಎವರೆಸ್ಟ್‌ನ ಎತ್ತರವನ್ನು ಅಳೆಯಲು ಟಿಬೆಟ್‌ನಿಂದ ತಂಡವನ್ನು ಕಳುಹಿಸಲಾಗಿತ್ತು.
8848.86 metres is the newly-measured height of Mount Everest, Nepal’s Foreign Minister announces. pic.twitter.com/Fnxh1liY98
— ANI (@ANI) December 8, 2020
2015ರಲ್ಲಿ ಸಂಭವಿಸಿದ ಭೀಕರ ಭೂಕಂಪ ಮತ್ತು ಇತರ ಕೆಲವು ಭೌಗೋಳಿಕ ಘಟನೆಗಳಿಂದಾಗಿ ಗರಿಷ್ಠ ಎತ್ತರ ಬದಲಾಗಬಹುದು ಎಂದು ನೇಪಾಲ ಈ ಹಿಂದೆ ಹೇಳಿತ್ತು. ಈ ಸಂದರ್ಭದಲ್ಲಿ ಅದನ್ನು ಮತ್ತೆ ಅಳೆಯಲು ನಿರ್ಧರಿಸಲಾಗಿತ್ತು.
ಎವರೆಸ್ಟ್ ಪರ್ವತವನ್ನು 1954 ರಲ್ಲಿ ಸರ್ವೆ ಆಫ್ ಇಂಡಿಯಾ ಅಳತೆ ಮಾಡಿದ ಸಂದರ್ಭ ಅದರ ಎತ್ತರ 8,848 ಮೀಟರ್ ಎಂದು ಹೇಳಲಾಗಿತ್ತು. ಹಿಮಾಲಯದ ಬಗ್ಗೆ ಸಂಶೋಧನೆ ನಡೆಸುತ್ತಿರುವ ಅನೇಕ ಸಂಸ್ಥೆಗಳು ಮತ್ತು ವಿಜ್ಞಾನಿಗಳು ಎವರೆಸ್ಟ್‌ನ ಎತ್ತರವು ನಿರಂತರವಾಗಿ ಹೆಚ್ಚುತ್ತಿದೆ ಎಂದು ಹಲವು ಬಾರಿ ಹೇಳಿಕೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 50 ಬ*ಲಿ
Netanyahu ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಬಂಧನ ವಾರಂಟ್
Russia ದಿಂದ ಉಕ್ರೇನ್ ಮೇಲೆ ICBM ದಾಳಿ; ನ್ಯೂಕ್ಲಿಯರ್ ದಾಳಿ ಉದ್ವಿಗ್ನತೆ ಹೆಚ್ಚಳ
Chrome Browser: ಗೂಗಲ್ ಸರ್ಚ್ ಎಂಜಿನ್ ಕ್ರೋಮ್ ಮಾರಾಟ?
MUST WATCH
ಹೊಸ ಸೇರ್ಪಡೆ
Train ಜನಶತಾಬ್ದಿ ಎಕ್ಸ್‌ಪ್ರೆಸ್‌ನಲ್ಲಿ ಹಾವು ಪ್ರತ್ಯಕ್ಷ: ತನಿಖೆಗೆ ಆದೇಶ
Himachal Pradesh;ನಷ್ಟದಲ್ಲಿರುವ ಹೊಟೇಲ್ ಮುಚ್ಚಲು ಹೈಕೋರ್ಟ್ ಆದೇಶ
Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ
Dinesh Gundu Rao: ಅನರ್ಹರ ಕಾರ್ಡ್ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ
Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್ ಘೋಷಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.