ವಿಶ್ವಸಂಸ್ಥೆಗೆ ಪರಿಷ್ಕೃತ ನಕ್ಷೆಯನ್ನು ಹಸ್ತಾಂತರಿಸಲಿರುವ ನೇಪಾಲ

ನೇಪಾಲ ತನ್ನ ಪರಿಷ್ಕೃತ ನಕ್ಷೆಯ ಪಠ್ಯವನ್ನು ಇಂಗ್ಲಿಷ್‌ಗೆ ಅನುವಾದಿಸಲಿದೆ, ಈ ತಿಂಗಳಲ್ಲಿ ಅದನ್ನು ವಿಶ್ವಸಂಸ್ಥೆ ಸೇರಿದಂತೆ ಕೆಲವು ರಾಷ್ಟ್ರಗಳಿಗೆ ಹಸ್ತಾಂತರಿಸಲಿದೆ. ಇದಕ್ಕಾಗಿ 4,000 ಪ್ರತಿಗಳನ್ನು ಇಂಗ್ಲಿಷ್‌ ಭಾಷೆಯಲ್ಲಿ ಮುದ್ರಿಸಲು ಕೆ.ಪಿ. ಓಲಿ ನೇತೃತ್ವದ ಸರಕಾರ ಸೂಚಿಸಿದೆ.

Team Udayavani, Aug 2, 2020, 5:00 PM IST

Nepala

ಹೊಸದಿಲ್ಲಿ/ಕಾಠ್ಮಂಡು: ಭಾರತ ಗಡಿ ವಿವಾದ ಹೊಂದಿರುವುದು ಹೊಸ ವಿಚಾರವೇನಲ್ಲ.

ಪಾಕಿಸ್ಥಾನ, ಚೀನ ಜತೆಗಿನ ಗಡಿ ತಂಟೆ ಹಲವು ದಶಕಗಳಿಂದಲೂ ಇದೆ. ಆದರೆ ಇದೀಗ ಅವುಗಳ ಸಾಲಿಗೆ ನೇಪಾಲವೂ ಸೇರಿಕೊಂಡಿದೆ. ಇದು ಭಾರತಕ್ಕೆ ಚೀನದಷ್ಟೇ ಗಂಭೀರ ಸಮಸ್ಯೆಯಾಗಿ ಪರಿಣಮಿಸಿದೆ.

ಹಾಗೆ ನೋಡಿದರೆ ಹಿಂದಿನಿಂದಲೂ ನೇಪಾಲದ ಜತೆಗಿನ ಗಡಿ ವಿವಾದ ಇತ್ತು. ಆದರೆ ತೀರಾ ಮುನ್ನೆಲೆಗೆ ಬಂದು ಇತ್ತೀಚಿನ ದಿನಗಳಲ್ಲಿ.

5-6 ತಿಂಗಳ ಹಿಂದೆ ಭಾರತ ತನ್ನ ಭೂಪಟವನ್ನು ಮರು ಚಿತ್ರಿಸಿದಾಗ ಉತ್ತರಾಖಂಡ-ನೇಪಾಲ ಗಡಿ ಪ್ರದೇಶದಲ್ಲಿ ಬರುವ ಕಾಲಾಪಾನಿ ಎಂಬ ಪ್ರದೇಶವನ್ನು ಭಾರತ ತನ್ನ ವ್ಯಾಪ್ತಿಯಲ್ಲಿ ಸೇರಿಸಿತ್ತು.

ಇದರ ಬೆನ್ನಲ್ಲೇ ನೇಪಾಲವು ಲಿಪುಲೇಖ್‌ ಪಾಸ್‌ ಮತ್ತು ಲಿಂಪಿಯಾಧೂರಾ ಪ್ರದೇಶಗಳನ್ನು ತನ್ನ ಗಡಿಯೊಳಗೆ ಸೇರಿಸಿ ಪರಿಷ್ಕೃತ ನಕಾಶೆ ಬಿಡುಗಡೆ ಮಾಡಿತ್ತು. ಇದರ ಬಳಿಕ ವಿವಾದ ಮತ್ತೆ ಜೀವ ಪಡೆದುಕೊಳ್ಳಲು ಆರಂಭಿಸಿದೆ.

ತನ್ನ ಭೂಪಟಕ್ಕೆ ಅನುಗುಣವಾಗಿ ನೇಪಾಲ ಲಿಪುಲೇಖ್‌ ಪಾಸ್‌, ಕಾಲಾಪಾನಿ ಮತ್ತು ಲಿಂಪಿಯಾಧೂರಾ ಪ್ರದೇಶಗಳನ್ನು ತನ್ನ ಭೂಪಟದಲ್ಲಿ ಸೇರಿಸಿ, ಸಂವಿಧಾನ ತಿದ್ದುಪಡಿ ಮಸೂದೆಯನ್ನು ಸಂಸತ್ತಿನ ಮುಂದೆ ಮಂಡಿಸಿತ್ತು. ಭಾರತದ ಪ್ರತಿಭಟನೆಯ ಹೊರತಾಗಿಯೂ ಬಿಡುಗಡೆಯಾದ ಈ ನಕ್ಷೆಯನ್ನು ತನ್ನ ರಾಷ್ಟ್ರೀಯ ಲಾಂಛನದಲ್ಲಿ ಸೇರಿಸುವ ಮೂಲಕ ನೇಪಾಲದ ಸಂಸತ್ತು ಸರ್ವಾನುಮತದಿಂದ ನ್ಯಾಯಸಮ್ಮತಗೊಳಿಸಿತು. ಹೊಸ ನೇಪಾಲ ನಕ್ಷೆಯು ಲಿಂಪಿಯಾಧುರಾದೊಂದಿಗೆ ಕಲಾಪಣಿ ಪ್ರದೇಶವನ್ನು ಮತ್ತು ಉತ್ತರಾಖಂಡದ ಆಯಕಟ್ಟಿನ ಲಿಪುಲೆಖ್‌ ಪಾಸ್‌ ಅನ್ನು ನೇಪಾಲಕ್ಕೆ ಸೇರಿದೆ ಎಂದು ತೋರಿಸುತ್ತದೆ. ಇದೀಗ ಮುಂದುವರಿದು ಹೊಸ ನಕ್ಷೆಯನ್ನು ಕೆ.ಪಿ. ಒಲಿ ಸರಕಾರವು ಯುಎನ್‌ ಸೇರಿದಂತೆ ಅಂತರಾಷ್ಟ್ರೀಯ ಸಮುದಾಯದೊಂದಿಗೆ ಹಂಚಿಕೊಳ್ಳಲು ತಯಾರಿ ನಡೆಸುತ್ತಿದೆ.

ಯುಎನ್‌ಗೆ ಕಳುಹಿಸಲಾಗುವ ಪರಿಷ್ಕೃತ ನಕ್ಷೆಯಲ್ಲಿ ನೇಪಾಲಕ್ಕೆ ಗಡಿ ವಿಚಾರದಲ್ಲಿ ಅನುಕೂಲವಾಗುವ ಸಾಧ್ಯತೆ ಇಲ್ಲ ಎಂದು ಹೇಳಲಾಗಿದೆ. ಈ ಪ್ರಕ್ರಿಯೆ ಸಾಮಾನ್ಯವಾಗಿದ್ದು, ಎಲ್ಲ ದೇಶಗಳು ತನ್ನ ಭೂಪಟಗಳನ್ನು ಕಾಲಕಾಲಕ್ಕೆ ಅನುಗುಣವಾಗಿ ವಿಶ್ವಸಂಸ್ಥೆಗೆ ನೀಡುತ್ತವೆ. ವಿಯೆನ್ನಾದಲ್ಲಿರುವ ಭಾರತೀಯ ಮಿಷನ್‌ ಅಲ್ಲಿನ ಯುಎನ್‌ ಕಚೇರಿಗೆ ಮತ್ತು ವಿಶ್ವಸಂಸ್ಥೆಯ ಕೈಗಾರಿಕಾ ಅಭಿವೃದ್ಧಿ ಸಂಸ್ಥೆಗೆ ಇತ್ತೀಚೆಗೆ ಭಾರತದ ನಕಾಶೆಯನ್ನು ಕಳುಹಿಸಿತ್ತು.

ಅಂತಾರಾಷ್ಟ್ರೀಯ ಸಮುದಾಯಗಳಿಗೆ 4,000 ಪ್ರತಿ
ಅಧಿಕೃತ ಮೂಲಗಳ ಪ್ರಕಾರ, ನೇಪಾಲವು ನಕ್ಷೆಯ ಪಠ್ಯವನ್ನು ಇಂಗ್ಲಿಷ್‌ಗೆ ಅನುವಾದಿಸಿ, ಈ ತಿಂಗಳಲ್ಲಿ ಅಂತಾರಾಷ್ಟ್ರೀಯ ಸಮುದಾಯಕ್ಕೆ ಹಸ್ತಾಂತರಿಸಲಿದೆ. ಇದಕ್ಕಾಗಿ 4,000 ಪ್ರತಿಗಳನ್ನು ಇಂಗ್ಲಿಷ್‌ ಭಾಷೆಯಲ್ಲಿ ಮುದ್ರಿಸಲು ಅಂತಾರಾಷ್ಟ್ರೀಯ ಸಮುದಾಯಗಳಿಗೆ ತಲುಪಿಸಲು ಮುಂದಾಗಿದೆ ಎಂದು ಹೇಳಲಾಗುತ್ತಿದೆ. ದೇಶದೊಳಗೆ ವಿತರಿಸಬೇಕಾದ ನಕ್ಷೆಯ ಪರಿಷ್ಕೃತ ಆವೃತ್ತಿಯ 25 ಸಾವಿರ ಪ್ರತಿಗಳನ್ನು ಮುದ್ರಿಸಿದೆ. ಸ್ಥಳೀಯ ಘಟಕಗಳು, ಪ್ರಾಂತೀಯ ಮತ್ತು ಇತರ ಎಲ್ಲ ಸಾರ್ವಜನಿಕ ಕಚೇರಿಗಳಿಗೆ ಪ್ರತಿಗಳನ್ನು ಉಚಿತವಾಗಿ ತಲುಪಿಸಲಾಗುತ್ತದೆ. ಸಾರ್ವಜನಿಕರು ಅದನ್ನು ಪಡೆದುಕೊಳ್ಳಬೇಕಾದರೆ 50 ರೂ. ಪಾವತಿಸಬೇಕು ಎಂದಿದೆ ಆ ವರದಿ.

ಎಲ್ಲಿದೆ ಈ ಪ್ರದೇಶ
372 ಚದರ ಕಿ.ಮೀ. ವ್ಯಾಪ್ತಿಯಲ್ಲಿರುವ ಕಾಲಾಪಾನಿ 1962ರಿಂದಲೂ ಇಂಡೊ-ಟಿಬೆಟಿಯನ್‌ ಬಾರ್ಡರ್‌ ಪೊಲೀಸ್‌ (ಐಟಿಬಿಪಿ) ನಿಯಂತ್ರಣದಲ್ಲಿದೆ. ಒಟ್ಟಾರೆಯಾಗಿ ಭಾರತವು ನೇಪಾಲದೊಂದಿಗೆ ಸುಮಾರು 1,758 ಕಿ.ಮೀ. ಗಡಿ ಹೊಂದಿದೆ. ಕಾಲಾಪಾನಿ ಉತ್ತರಾಖಂಡದ ಪಿತೋರಗಡ ಜಿಲ್ಲೆಯ ವ್ಯಯಾಪ್ತಿಗೆ ಬರುವ ಪ್ರದೇಶ ಎಂದು ಭಾರತ ಪ್ರತಿಪಾದನೆಯಾದರೆ, ಅದು ತನ್ನ ಧಾರಾಚುಲಾ ಜಿಲ್ಲೆಗೆ ಸೇರಿದ ಭಾಗ ಎಂಬುದು ನೇಪಾಲದ ವಾದ.

ಹಾಗೆ  ನೋಡಿದರೆ ಕಾಲಾಪಾನಿ ಕಣಿವೆಯು ಈಗಿನ ಟಿಬೆಟ್‌ ಭಾಗದಲ್ಲಿ ಕಂಡುಬರುತ್ತದೆ. ಬಹಳ ಸುಂದರವಾದ ಭೌಗೋಳಿಕ ಸೌಂದರ್ಯವನ್ನು ಹೊಂದಿದೆ. ಪ್ರಸಿದ್ಧ ಯಾತ್ರಾಸ್ಥಳವಾದ ಕೈಲಾಸ ಮಾನಸ ಸರೋವರಕ್ಕೆ ತೆರಳುವ ಭಾರತೀಯ ಮಾರ್ಗದಲ್ಲಿ ಬರುತ್ತದೆ. 19ನೇ ಶತಮಾನದ ಮೊದಲಾರ್ಧದಲ್ಲಿ ನೇಪಾಲ ಮತ್ತು ಬ್ರಿಟಿಷ್‌ ಅಧೀನದಲ್ಲಿದ್ದ ಭಾರತ ಸುಗೌಲಿ ಒಪ್ಪಂದಕ್ಕೆ ಸಹಿ ಹಾಕಿತ್ತು. ಇದರನ್ವಯ ಕಾಳಿ ನದಿಯ ಪಶ್ಚಿಮದ ಭಾಗ ಭಾರತಕ್ಕೆ ಸೇರಿದ್ದು. ಆದರೆ ಕಾಲಾಪಾನಿ ಮೂಲಕ ಹಾದುಹೋಗುವ ಕಾಳಿ ನದಿಯ ಮೂಲ ಯಾವುದು ಎಂಬುದಕ್ಕೆ ಒಪ್ಪಂದದಲ್ಲಿ ಖಚಿತ ಉಲ್ಲೇಖವಾಗಿಲ್ಲ.  ಸದ್ಯ ಇದೇ ಈ ವಿವಾದದ ಮೂಲ ಕಾರಣವಾಗಿದೆ.

ಕಾಳಿ ಹರಿಯುವ ಭೂಮಿ
ಪಶ್ಚಿಮ ದಿಕ್ಕಿನಲ್ಲಿ ಹರಿಯುತ್ತಿರುವುದು ಕಾಳಿ ನದಿಯ ಮೂಲವಾಗಿದೆ. ಇದು ಹಲವು ಉಪನದಿಗಳನ್ನು ಇಲ್ಲಿ ಹೊಂದಿದೆ. ಹೀಗಾಗಿ ಆ ಪ್ರದೇಶ ತನಗೇ ಸೇರಿದ್ದು ಎಂದು ನೇಪಾಲ ತನ್ನ ನಕ್ಷೆ ಪುನರ್‌ ರಚಿಸುವ ಸಮಯದಲ್ಲಿ ವ್ಯಾಖ್ಯಾನಿಸಿದೆ. ಆದರೆ ಉಭಯ ದೇಶಗಳ ಗಡಿ ಇರುವುದು ಕಾಲಾಪಾನಿಯ ಪೂರ್ವ ಭಾಗದಲ್ಲಿ. ಹೀಗಾಗಿ ಕಾಲಾಪಾನಿ ತನಗೇ ಸೇರಿದ್ದು ಎಂಬುದು ಭಾರತದ ಬಲವಾದ ವಾದ.

ಇನ್ನೊಂದು ವಿವಾದಿತ ಪ್ರದೇಶ ಲಿಪುಲೇಖ್‌ ಪಾಸ್‌. ಇದು ಭೌಗೋಳಿಕವಾಗಿ ಕಾಲಾಪಾನಿಗಿಂತ ಮೇಲ್ಭಾಗದಲ್ಲಿ ಇದೆ. ಇದು ಉತ್ತರಾಖಂಡ-ನೇಪಾಲ ಗಡಿಯಲ್ಲಿರುವ ಪರ್ವ ಮಾರ್ಗವಾಗಿದೆ. ವಿಶೇಷವಾಗಿ ವ್ಯಾಪಾರ ಮತ್ತು ತೀರ್ಥಯಾತ್ರೆಗಾಗಿ ಪ್ರಾಚೀನ ಕಾಲದಿಂದಲೂ ಇದನ್ನು ಭಾರತೀಯರು ಬಳಸುತ್ತಿದ್ದರು. 1962ರಲ್ಲಿ ನಡೆದ ಭಾರತ-ಚೀನ ಯುದ್ಧದ ಬಳಿಕ ಈ ಮಾರ್ಗವನ್ನು ಮುಚ್ಚಲಾಗಿತ್ತು. ಲಿಂಪಿಯಾಧೂರಾ ಎಂಬ ಮತ್ತೊಂದು ಪ್ರದೇಶ ಇದು ಲಿಪುಲೇಖ್‌ ಪಾಸ್‌ನ ವಾಯವ್ಯ ದಿಕ್ಕಿನಲ್ಲಿದೆ. ಈ ಪ್ರದೇಶ ಕಾಳಿ ನದಿಯ ಮೂಲ ಎಂಬುದು ನೇಪಾಲದ ವಾದ. ತನ್ನ ವಾದವನ್ನು ಪುಷ್ಠೀಕರಿಸಲು ಕಾಲಾಪಾನಿ ಮತ್ತು ಲಿಪುಲೇಖ್‌ ಕೂಡ ಕಾಳಿನದಿಯ ಪೂರ್ವಕ್ಕೆ ಇರುವುದರಿಂದ ಈ ಪ್ರದೇಶಗಳು ತನಗೆ ಸೇರಿದ್ದು ಎಂದು ನೇಪಾಲ ಹೇಳುತ್ತಿದೆ.

ಚೀನ ವಿರುದ್ಧ ಹೋರಾಡಲು ಬೇಕು ಈ ಕಾಲಪಾನಿ
ಉತ್ತರಾಖಂಡ-ನೇಪಾಲ ಗಡಿಯಲ್ಲಿರುವ ಕಾಲಾಪಾನಿಯು ಚೀನದ ಸೇನಾ ಚಟುವಟಿಕೆಗಳ ಮೇಲೆ ನಿಗಾ ಇರಿಸಲು ಬಳಸಲಾಗುತ್ತದೆ. ಆದರೆ ಚೀನ ದ ವಿರುದ್ಧ ಕಾರ್ಯಾಚರಣೆ ನಡೆಸಲು ಭಾರತಕ್ಕೆ ಈ ಪ್ರದೇಶ ಅವಶ್ಯವಾಗಿದೆ. ಆದರೆ ಅದನ್ನು ಬಿಟ್ಟುಕೊಡಲು ನೇಪಾಲಕ್ಕೆ ಇಷ್ಟ ಇಲ್ಲ. ಪ್ರದೇಶದ ಮೇಲೆ ಹಕ್ಕಿ ಸಾಧಿಸಲು ನೇಪಾಲದ ಮೇಲೆ ಚೀನ ಒತ್ತಡ ಹೇರುತ್ತಿದೆ ಎಂಬ ಮಾತುಗಳೂ ಇವೆ. ವಾಜಪೇಯಿ ಅವರು ಪ್ರದಾನಿಯಾಗಿದ್ದ ಸಂದರ್ಭ ಕಾಲಾಪಾನಿ ಗಡಿ ವಿಚಾರವನ್ನು ನೇಪಾಲದ ಆಗಿನ ಪ್ರಧಾನಮಂತ್ರಿ ಗಿರಿಜಾ ಪ್ರಸಾದ್‌ ಕೊಯಿರಾಲಾ ಅವರಲ್ಲಿ ಚರ್ಚಿಸಿದ್ದರು. ಆದರೆ ಅದು ಫ‌ಲ ನೀಡಲಿಲ್ಲ. ಇತ್ತೀಚೆಗೆ ಚೀನ ನೇಪಾಲದಲ್ಲಿ ಭಾರಿ ಪ್ರಮಾಣದ ಹೂಡಿಕೆ ಮಾಡುತ್ತಿದೆ. ಇದರ ಬೆನ್ನಲ್ಲೇ ಭಾರತದ ಜತೆಗಿನ ಗಡಿ ವಿವಾದವೂ ಮುನ್ನೆಲೆಗೆ ಬಂದಿದೆ. ಅತ್ತ ಚೀನವೂ ಭಾರದ ಗಡಿಯನ್ನು ಕೆದಕುತ್ತಿದೆ.

ಮುಳುವಾದ ಚೀನದೊಂದಿಗಿನ ಭಾರತದ ಒಪ್ಪಂದ
ಹಾಗೆ ನೋಡಿದರೆ 2015ರಲ್ಲಿ ಭಾರತ ಮತ್ತು ಚೀನ ವ್ಯಾಪಾರ ಒಪ್ಪಂದವೊಂದಕ್ಕೆ ಸಹಿ ಹಾಕಿತ್ತು. ಲಿಪುಲೇಖ್‌ ಪಾಸ್‌ನಲ್ಲಿ ವಾಣಿಜ್ಯ ವಹಿವಾಟು ಉತ್ತೇಜನಕ್ಕೆ ಒಪ್ಪಂದ ಮಾಡಿಕೊಂಡಿತ್ತು. ಇದು ನೇಪಾಲದ ಕಣ್ಣು ಕೆಂಪಾಗಿಸಲು ಕಾರಣ ಎಂಬ ಮಾತುಗಳೂ ಇದೆ. ಇದರ ವಿರುದ್ಧ ನೇಪಾಲ ತನ್ನ ಅಸಮಧಾನ ವ್ಯಕ್ತಪಡಿಸಿತ್ತು. 2019ರ ನವೆಂಬರ್‌ನಲ್ಲಿ ಕೇಂದ್ರಾಡಳಿತ ಪ್ರದೇಶಗಳಲ್ಲಿ ಬದಲಾವಣೆ ಮಾಡಿದ ಬಳಿಕ ಭಾರತ ಹೊಸ ನಕಾಶೆಯನ್ನು ಬಿಡುಗಡೆ ಮಾಡಿತ್ತು. ಅದರಲ್ಲಿ ಕಾಲಾಪಾನಿ ಸೇರಿತ್ತು. ಆಕ್ಷೇಪ ವ್ಯಕ್ತಪಡಿಸಿದ ನೇಪಾಲ ಗಡಿ ವಿವಾದಕ್ಕೆ ಸಂಬಂಧಿಸಿ ಮಾತುಕತೆಯ ಅಗತ್ಯವಿದೆ ಎಂದಿತ್ತು. ಆದರೆ ಭಾರತ ತನ್ನ ಭೂ ಪ್ರದೇಶವನ್ನು ನಕಾಶೆಯಲ್ಲಿ ಸರಿಯಾಗಿಯೇ ಉಲ್ಲೆಖೀಸಿದೆ ಅದಕ್ಕೆ ಮಾತುಕತೆ ಅಪ್ರಸ್ತುತ ಎಂದು ಹೇಳಿ, ನೇಪಾಲದ ವಾದವನ್ನು ಮಾನ್ಯಮಾಡಲಿಲ್ಲ.

ಭಾರತದ ರಸ್ತೆ ನೇಪಾಲ ಗರಂ
ಕಳೆದ ವರ್ಷ ಲಿಪುಲೇಖ್‌ ಪಾಸ್‌ನಲ್ಲಿ ಭಾರತ 80 ಕಿ.ಮೀ. ರಸ್ತೆ ನಿರ್ಮಿಸಿತ್ತು. ತನ್ನ ಕೈಲಾಸ ಮಾನಸ ಸರೋವರ ಯಾತ್ರಿಕರಿಗೆ ನೆರವಾಗುವ ನಿಟ್ಟಿನಲ್ಲಿ ಭಾರತ ಇದನ್ನು ಮಾಡಿತ್ತು. ಆದರೆ ತನ್ನ ಭೂಪ್ರದೇಶದಲ್ಲಿ ಭಾರತ ರಸ್ತೆ ನಿರ್ಮಿಸಿದೆ ಎಂದು ಇದಕ್ಕೂ ನೇಪಾಲ ಆಕ್ಷೇಪಿಸಿತ್ತು. ಬಳಿಕ ಪರಿಷ್ಕೃತ ನಕಾಶೆ ಬಿಡುಗಡೆ ಮಾಡಿ ನೇಪಾಲ ಈ ವಿವಾದಿತ ಪ್ರದೇಶಗಳನ್ನು ಅದರಲ್ಲಿ ಸೇರಿಸಿತ್ತು. ಈಗ ಅದನ್ನು ಅಂತಾರಾಷ್ಟ್ರೀಯ ಸಮುದಾಯಕ್ಕೆ ಹಸ್ತಾಂತರಿಸಲು ಮುಂದಾಗಿದೆ.

ಟಾಪ್ ನ್ಯೂಸ್

Yathanal

Winter Session: ಪಂಚಮಸಾಲಿಗಳ ಮೇಲೆ ಲಾಠಿ ಬೀಸಿದವರಿಗೆ ಬಹುಮಾನ; ಶಾಸಕ ಯತ್ನಾಳ್‌ ಆಕ್ರೋಶ

BY-Vijayendra

Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ

1-deee

Allu Arjun ನಿವಾಸದಲ್ಲಿ ದಾಂಧಲೆ!; 8 ಮಂದಿ ಬಂಧನ: ಕೃತ್ಯ ಎಸಗಿದ್ದು ಯಾರು?

sullia

Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ

Baduta-Mandya

Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!

1-women

ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90

Kuwait-PM

Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-deee

Allu Arjun ನಿವಾಸದಲ್ಲಿ ದಾಂಧಲೆ!; 8 ಮಂದಿ ಬಂಧನ: ಕೃತ್ಯ ಎಸಗಿದ್ದು ಯಾರು?

1-vasu

Vasundhara Raje ಬೆಂಗಾವಲು ವಾಹನ ಪಲ್ಟಿ; ನಾಲ್ವರು ಪೊಲೀಸರಿಗೆ ಗಾಯ

Kuwait-PM

Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ

police crime

Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ

mohan bhagwat

Mohan Bhagwat; ತಿಳಿವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Yathanal

Winter Session: ಪಂಚಮಸಾಲಿಗಳ ಮೇಲೆ ಲಾಠಿ ಬೀಸಿದವರಿಗೆ ಬಹುಮಾನ; ಶಾಸಕ ಯತ್ನಾಳ್‌ ಆಕ್ರೋಶ

sand 1

Padubidri: ಮರಳು ಅಕ್ರಮ ಸಾಗಾಟ; ವಶ

dw

Malpe: ಕಲ್ಮಾಡಿ; ಕಟ್ಟಡದಿಂದ ಬಿದ್ದು ಕಾರ್ಮಿಕ ಸಾವು

9

Dr MC Sudhakar: ‘ಹೈಕಮಾಂಡ್‌ ಎಷ್ಟು ದಿನ ಜವಾಬ್ದಾರಿ ಕೊಡುತ್ತೋ ಅಷ್ಟು ದಿನ ಸಚಿವ’

3

Brahmavar: ಕೊಕ್ಕರ್ಣೆ; ಜುಗಾರಿ ನಿರತನ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.