New Parliament: ವಿ”ನೂತನ” ಸಂಸತ್‌ “ಭ‌ವನ”

ಬಹು ನಿರೀಕ್ಷಿತ ಸಂಸತ್‌ ಕಟ್ಟಡಕ್ಕೆ ಅತ್ಯಾಧುನಿಕ ಸ್ಪರ್ಶ... ವೈಶಿಷ್ಟ್ಯಗಳೇನು? ಸಂಪೂರ್ಣ ವಿವರ ಇಲ್ಲಿದೆ

Team Udayavani, May 28, 2023, 7:06 AM IST

new parliament night

ಪ್ರಧಾನಿ ನರೇಂದ್ರಮೋದಿ ನೇತೃತ್ವದ ಕೇಂದ್ರಸರ್ಕಾರದ ಮಹತ್ತರ ಯೋಜನೆ ಸೆಂಟ್ರಲ್‌ ವಿಸ್ತಾ ಅನ್ವಯ ನಿರ್ಮಾಣಗೊಂಡಿರುವ ಬಹುಕೋಟಿ ವೆಚ್ಚದ ಭಾರತದ ನೂತನ ಸಂಸತ್‌ ಕಟ್ಟಡವನ್ನು ಪ್ರಧಾನಿ ನರೇಂದ್ರಮೋದಿ ಭಾನು ವಾರ ಉದ್ಘಾಟಿಸಲಿದ್ದಾರೆ. ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ನಿರ್ಮಾಣಗೊಂಡಿರುವ ಬಹು ನಿರೀಕ್ಷಿತ ಸಂಸತ್‌ ಕಟ್ಟಡದ ವೈಶಿಷ್ಟ್ಯಗಳೇನು? ನಿರ್ಮಾಣದ ಹಂತಹೇಗಿತ್ತು? ನೂತನ ಸಂಸತ್‌ ಕಟ್ಟಡ ಹೇಗಿದೆ ಎಂಬುದರ ಕುರಿತಾದ ಸಂಪೂರ್ಣ ವಿವರ ಇಲ್ಲಿದೆ.

ಏನಿದು ಸೆಂಟ್ರಲ್‌ ವಿಸ್ತಾ?
ರಾಷ್ಟ್ರಪತಿ ಭವನ, ಸಂಸತ್‌ ಭವನ, ಪ್ರಧಾನ ಮಂತ್ರಿ ನಿವಾಸ, ಉಪರಾಷ್ಟ್ರಪತಿ ನಿವಾಸ, ಕೇಂದ್ರ ಸಚಿವಾಲಯಗಳು, ವಿವಿಧ ಇಲಾಖೆಗಳ ಆಡಳಿತ ಕಟ್ಟಡಗಳು ಸೇರಿದಂತೆ ಭಾರತದ ಸಂಪೂರ್ಣ ಆಡಳಿತ ವ್ಯವಸ್ಥೆಯ ಶಕ್ತಿ ಕೇಂದ್ರವಾಗಿರುವ, ಲ್ಯೂಟೆನ್ಸ್‌ ದೆಹಲಿಯ 86 ಎಕರೆ ಪ್ರದೇಶದಲ್ಲಿರುವ ಕಟ್ಟಡಗಳ ಮರುನಿರ್ಮಾಣ/ ನವೀಕರಣದ ಉದ್ದೇಶದೊಂದಿಗೆ ರೂಪಿಸಲಾದ ಯೋಜನೆಯೇ ಸೆಂಟ್ರಲ್‌ ವಿಸ್ತಾ. 2019ರಲ್ಲಿ 20 ಸಾವಿರ ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ಆರಂಭವಾದ ಈ ಯೋಜನೆ 2024ಕ್ಕೆ ಪೂರ್ಣಗೊಳ್ಳುವ ನಿರೀಕ್ಷೆ ಇದ್ದು, ಇದೇ ಯೋಜನೆಯ ಅನ್ವಯ ನಿರ್ಮಾಣಗೊಂಡಿರುವ ಬಹುದೊಡ್ಡ ಯೋಜನೆಯೇ ನೂತನ ಸಂಸತ್‌ ಕಟ್ಟಡ.

950 ಕೋಟಿ ರೂ. ವೆಚ್ಚದ ಸಂಸತ್‌ ಕಟ್ಟಡ
ಸೆಂಟ್ರಲ್‌ ವಿಸ್ತಾ ಅನ್ವಯ ಯೋಜಿಸಿರುವ ಮರು ಅಭಿವೃದ್ಧಿಗಳ ಪೈಕಿ ಸಂಸತ್‌ ಕಟ್ಟಡ ಯೋಜನೆ ಮಹತ್ತರದ್ದಾಗಿದ್ದು 950 ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣಕಾರ್ಯ ಕೈಗೊಳ್ಳಲಾಗಿದೆ. ಪ್ರಸಕ್ತವಿರುವ ಸಂಸತ್‌ ಕಟ್ಟಡಕ್ಕಿಂತ ಬರೋಬ್ಬರಿ 17,000 ಚದರ ಅಡಿ ಹೆಚ್ಚು ವ್ಯಾಪ್ತಿಯಲ್ಲಿ ಅಂದರೆ ಒಟ್ಟಾರೆ 64,500 ಚದರ ಅಡಿಯಲ್ಲಿ ನೂತನ ಸಂಸತ್‌ ಕಟ್ಟಡ ನಿರ್ಮಾಣವಾಗಿದೆ. 888 ಲೋಕಸಭಾ ಸದಸ್ಯರು, 384 ರಾಜ್ಯಸಭಾ ಸದಸ್ಯರಿಗೆ ನೂತನ ಕಟ್ಟಡ ಸ್ಥಾನ ಒದಗಿಸಲಿದ್ದು, ಇದು ಅಸ್ತಿತ್ವದಲ್ಲಿರುವ ಕಟ್ಟಡದಲ್ಲಿನ ಲೋಕಸಭಾ ಸದಸ್ಯರ ಸ್ಥಾನಗಳಿಗಿಂತ ಹೆಚ್ಚುವರಿ 336 ಮಂದಿಗೆ ಹಾಗೂ ರಾಜ್ಯಸಭೆಯಲ್ಲಿ ಹೆಚ್ಚುವರಿ 139 ಮಂದಿಗೆ ಆಸನ ಕಲ್ಪಿಸಲು ಸಮರ್ಥವಾಗಿದೆ.

ನೂತನ ನಿರ್ಮಾಣದ ಅಗತ್ಯವೇನಿತ್ತು ?
ದೇಶದಲ್ಲಿ ಅಸ್ತಿತ್ವದಲ್ಲಿರುವ ಸಂಸತ್‌ ಕಟ್ಟಡ 95 ವರ್ಷಕ್ಕಿಂತಲೂ ಹಳೆಯದ್ದು. ವರ್ಷಾನುಗಟ್ಟಲೆಯಿಂದ ಕಟ್ಟಡದ ಬಳಕೆಯಾಗಿರುವ ಹಿನ್ನೆಲೆ ಈಗಾಗಲೇ ವ್ಯವಸ್ಥೆಯೂ ಹಾಳಾಗಿದ್ದು, ಸುರಕ್ಷತಾ ಕಾಳಜಿಯೂ ಹೆಚ್ಚಾಗಿದೆ ಈ ಹಿನ್ನೆಲೆ ನೂತನ ಕಟ್ಟಡದ ಅಗತ್ಯವಿದೆ ಎಂದು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ತಿಳಿಸಿತ್ತು ಇದಕ್ಕೆ ಪೂರಕವಾದ ಕೆಲ ಕಾರಣಗಳನ್ನೂ ಸಚಿವಾಲಯ ಪಟ್ಟಿ ಮಾಡಿದೆ.

1. ಸ್ಥಳಾವಕಾಶದ ಕೊರತೆ: 1952ರಲ್ಲಿ ಸಂಸತ್ತು ಮೊದಲ ಬಾರಿಗೆ ರಚನೆಯಾದಾಗ ಸಂಸತ್‌ ಸದಸ್ಯರ ಸಂಖ್ಯೆ 703. ಈ ಪೈಕಿ ಲೋಕಸಭೆ ಸದಸ್ಯರ ಸಂಖ್ಯೆ 499 ಹಾಗೂ ರಾಜ್ಯಸಭಾ ಸದಸ್ಯರ ಸಂಖ್ಯೆ 204 ಆಗಿತ್ತು. ಬಳಿಕ ಈ ಪ್ರಮಾಣ ಗಣನೀಯವಾಗಿ ಏರಿಕೆಯಾಗುತ್ತಾ ಬಂದಿದೆ. ಸಂವಿಧಾನ ಕಾಯ್ದೆ 1956ರ ಅನ್ವಯ ನಿಗದಿ ಪಡಿಸಿದ್ದ ಲೋಕಸಭಾ ಸದಸ್ಯರ 500ರ ಮಿತಿಯ ಹೊರತಾಗಿಯೂ 1975ರಲ್ಲಿ ಈ ಸಂಖ್ಯೆ 525ಕ್ಕೆ ಹಾಗೂ 1987ರಲ್ಲಿ 530ಕ್ಕೆ ಹೆಚ್ಚಿಸಲಾಯಿತು. ಅದೇ ರೀತಿ ರಾಜ್ಯಸಭೆ ಸದಸ್ಯರ ಸಂಖ್ಯೆ 1952ರಲ್ಲಿದ್ದ 204ರಿಂದ 1966ರಲ್ಲಿ 228ಕ್ಕೆ ಹಾಗೂ 1987ರಲ್ಲಿ 233ಕ್ಕೆ ಏರಿಕೆಯಾಯಿತು. ಈ ಎಲ್ಲ ಬದಲಾವಣೆಗಳ ಬಳಿಕ ಪ್ರಸಕ್ತ ಲೋಕಸಭೆಯಲ್ಲಿ 543 ಸದಸ್ಯರಿದ್ದು, ರಾಜ್ಯಸಭೆಯಲ್ಲಿ 245 ಸದಸ್ಯರಿದ್ದಾರೆ. ಅಸ್ತಿತ್ವದಲ್ಲಿರುವ ಕಟ್ಟಡದಲ್ಲಿ ಉಭಯ ಸದನಗಳ ಸದಸ್ಯರು ಒಟ್ಟಿಗೆ ಕೂತು ಕಲಾಪ ನಡೆಸಿದರೆ ಸ್ಥಳಾವಕಾಶವೇ ಇಲ್ಲದಂತಾಗುತ್ತಿರುವುದು ಮೂಲ ಸಮಸ್ಯೆಯಾಗಿದೆ..

2. ಸದಸ್ಯರ ಸಂಭಾವ್ಯ ಹೆಚ್ಚಳ : ಈಗಾಗಲೇ ಭಾರತದಲ್ಲಿ ಜನಸಂಖ್ಯೆ ಗಣನೀಯವಾಗಿ ಏರಿಕೆಯಾಗಿದ್ದು, ಇತ್ತೀಚೆಗಷ್ಟೇ ಚೀನಾವನ್ನೂ ಹಿಂದಿಕ್ಕಿ ವಿಶ್ವದಲ್ಲೇ ಅತಿಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರವಾಗಿ ಭಾರತ ಹೊರಹೊಮ್ಮಿದೆ. 2026ರಲ್ಲಿ ರಾಷ್ಟ್ರದಲ್ಲಿ ಜನಗಣತಿ ನಡೆಯಲಿದ್ದು, ಆ ಸಂದರ್ಭದಲ್ಲಿ ಜನಸಂಖ್ಯೆ ಆಧರಿಸಿ ಕ್ಷೇತ್ರ ಮರು ವಿಂಗಡನೆಯಾಗಬಹುದು. ಆ ಬಳಿಕ ಸಂಸತ್‌ ಸದಸ್ಯರ ಸಂಖ್ಯೆಯೂ ಏರಿಕೆಯಾಗಬಹುದು. ಈ ಹಿನ್ನೆಲೆ ಮುಂದಾಲೋಚನೆಯಿಂದಾಗಿ ಲೋಕಸಭೆಯ ಸದಸ್ಯರ ಸಂಖ್ಯೆ 888ಕ್ಕೆ ತಲುಪಿದರೂ, ರಾಜ್ಯಸಭಾ ಸದಸ್ಯರ ಸಂಖ್ಯೆ 384ಕ್ಕೆ ತಲುಪಿದರೂ ಸ್ಥಾನ ಒದಗಿಸುವಂತೆ ನೂತನ ಕಟ್ಟಡವನ್ನು ನಿರ್ಮಾಣ ಮಾಡಲಾಗಿದೆ. ಇದರಿಂದಾಗಿ ಭವಿಷ್ಯದಲ್ಲಿ ಹೆಚ್ಚಲಿರುವ ಸಂಭಾವ್ಯ ಸದಸ್ಯರೂ ಆರಾಮದಾಯಕವಾಗಿ ಕಲಾಪದಲ್ಲಿ ಭಾಗಿಯಾಗಲು ಸಹಾಯವಾಗಲಿದೆ.

3. ಇತರೆ ಕಾರಣಗಳು :
* ಹಳೆಯ ಕಟ್ಟಡ ಅಗ್ನಿಶಾಮಕದಳದ ಮಾನದಂಡಗಳ ಪ್ರಕಾರ ನಿರ್ಮಾಣವಾಗಿಲ್ಲ
* ಪದೇ-ಪದೆ ನಡೆಸಲಾಗಿರುವ ದುರಸ್ಥಿಯಿಂದಾಗಿ ಕಟ್ಟಡದ ಸ್ಥಿತಿ ಹದಗೆಟ್ಟಿದೆ
* ಸ್ವತಂತ್ರ್ಯದ ಬಳಿಕ ಕಟ್ಟಡಕ್ಕೆ 2 ಹಂತಸ್ತು ಸೇರ್ಪಡೆಗೊಳಿಸಿ, ಗಾಳಿ-ಬೆಳಕಿನ ಸಮಸ್ಯೆಯಾಗಿದೆ
* ಸದನದಲ್ಲಿರುವ ಮೊದಲ 2 ಬೆಂಚ್‌ಗಳಲ್ಲಿ ಮಾತ್ರ ದಾಖಲೆಗಳನ್ನಿಡಲು ಸ್ಥಳವಿದೆ
* ಸಂವಹನ ವ್ಯವಸ್ಥೆ, ಮೂಲಸೌಕರ್ಯಗಳು ಸಂಪೂರ್ಣ ಹಳೆಯದ್ದಾಗಿವೆ

ಸಂಸತ್‌ಭವನ ಐತಿಹ್ಯ
* 1927ರಲ್ಲಿ ಬ್ರಿಟಿಷ್‌ ಅವಧಿಯಲ್ಲಿ ಸರ್‌ ಲಾರ್ಡ್‌ ಇರ್ವಿನ್‌ ನೇತೃತ್ವದಲ್ಲಿ 83 ಲಕ್ಷ ವೆಚ್ಚದಲ್ಲಿ ಸಂಸತ್‌
ಭವನವನ್ನು ನಿರ್ಮಾಣ
* ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ನೇತೃತ್ವದಲ್ಲಿ 1975ರಲ್ಲಿ ಸಂಸತ್‌ಭವನದ ಮೊದಲ ವಿಸ್ತರಣೆ
* 1987ರಲ್ಲಿ ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಅವ ರಿಂದ ಸಂಸತ್‌ಗೆ ಗ್ರಂಥಾಲಯ ಕಟ್ಟಡ ಶಂಕುಸ್ಥಾಪನೆ
* 2002ರಲ್ಲಿ ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ ಕಾಲದಲ್ಲಿ ಗ್ರಂಥಾಲಯ ಕಾಮಗಾರಿ ಪೂರ್ಣ, ಉದ್ಘಾ ಟ ನೆ
* 2020ರಲ್ಲಿ ನೂತನ ಸಂಸತ್‌ ಕಟ್ಟಡ ನಿರ್ಮಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಅವ ರಿಂದ ಶಂಕುಸ್ಥಾಪನೆ
* 2023ರಲ್ಲಿ ನೂತನ ಕಟ್ಟಡ ನಿರ್ಮಾಣಗೊಂಡು ಈಗ ಉದ್ಘಾಟನೆ

ನಿರ್ಮಾಣ ಸಂಸ್ಥೆ ಯಾವುದು ?
ಕಟ್ಟಡ ನಿರ್ಮಾಣಕ್ಕಾಗಿ ಹರಾಜು ಪ್ರಕ್ರಿಯೆ ನಡೆಸಲಾಗಿತ್ತು. ಈ ವೇಳೆ ಟಾಟಾ ಸಂಸ್ಥೆ 861.90 ಕೋಟಿ ಬಿಡ್‌ ಮಾಡುವ ಮೂಲಕ ಕಾಮಗಾರಿ ಕೈಗೆತ್ತಿಕೊಂಡಿತು. ಎಲ್‌ ಆ್ಯಂಡ್‌ ಟಿ ಸಂಸ್ಥೆಕೂಡ ಸ್ಪರ್ಧೆಯಲ್ಲಿದ್ದು 865 ಕೋಟಿ ರೂ.ಗಳ ಬಿಡ್ಡಿಂಗ್‌ ಮಾಡಿತ್ತು. ಇನ್ನು 2019ರಲ್ಲಿ ಸರ್ಕಾರವು ಕಟ್ಟಡ ವಿನ್ಯಾಸಕರನ್ನು ಅಂತಿಮ ಆಯ್ಕೆ ಮಾಡಿದ್ದು, ಅಹ್ಮದಾಬಾದ್‌ ನಗರ ಮೂಲದ ವಾಸ್ತುಶಿಲ್ಪ ಸಂಸ್ಥೆ ಎಚ್‌ಸಿಪಿ ಡಿಸೈನ್‌ ಕಟ್ಟಡದ ವಿನ್ಯಾಸ ರಚಿಸಿದೆ.

ಹೇಗಿದೆ ಗೊತ್ತಾ ಬೃಹತ್‌ ಕಟ್ಟಡದ ವಿನ್ಯಾಸ ?
* 4 ಅಂತಸ್ತಿನ ಈ ಕಟ್ಟಡದಲ್ಲಿ ಒಟ್ಟು 950 ಕೊಠಡಿಗಳನ್ನು ನಿರ್ಮಿಸಲಾಗಿದೆ.
* 1,224 ಸಂಸದರಿಗೆ ಹೊಸ ಕಟ್ಟಡ ಸ್ಥಾನ ಒದಗಿಸಲಿದೆ
*ಗ್ಯಾನ್‌ದ್ವಾರ, ಶಕ್ತಿದ್ವಾರ, ಕರ್ಮದ್ವಾರಗಳೆಂಬ 3 ಪ್ರಮುಖ ದ್ವಾರಗಳಿವೆ
* ವಿಐಪಿಗಳು, ಎಂಪಿಗಳು ಹಾಗೂ ವೀಕ್ಷಕರಿಗೆ ಪ್ರತ್ಯೇಕ ಪ್ರವೇಶ ದ್ವಾರಗಳಿವೆ
*ವಿಶೇಷವಾದ ಸಂವಿಧಾನ ಸಭಾಂಗಣ ಕಟ್ಟಡದ ಪ್ರಮುಖ ಆಕರ್ಷಣೆ

ಏನಿದು ಸಂವಿಧಾನ ಸಭಾಂಗಣ ?
ಭಾರತದ ಪ್ರಜಾಪ್ರಭುತ್ವ ಪರಂಪರೆಯನ್ನು ಪ್ರದರ್ಶಿಸುವ ದಿಸೆಯಲ್ಲಿ ಸಂಸತ್‌ ಕಟ್ಟಡದ ಒಳಗೆ ಸಂವಿಧಾನ ಸಭಾಂಗಣವನ್ನು ನಿರ್ಮಾಣ ಮಾಡಲಾಗಿದೆ. ಸಭಾಂಗಣದ ಮಧ್ಯದಲ್ಲಿ ಭಾರತ ಸಂವಿಧಾನದ ಅಸಲಿ ಪ್ರತಿಯನ್ನು ಇರಿಸಲಾಗಿದ್ದು, ಮಹಾತ್ಮಾ ಗಾಂಧೀಜಿ, ಜವಾಹರ್‌ ಲಾಲ್‌ ನೆಹರು, ಸುಭಾಷ್‌ ಚಂದ್ರ ಬೋಸ್‌ ಹಾಗೂ ದೇಶದ ಈ ವರೆಗಿನ ಎಲ್ಲ ಪ್ರಧಾನಮಂತ್ರಿಗಳ ಫೋಟೋಗಳನ್ನೂ ಅಳವಡಿಸಲಾಗಿದೆ. ಅಲ್ಲದೇ, ಸಭಾಂಗಣವಿರುವ ಅಂತಸ್ತಿನಲ್ಲಿ ಗ್ರಂಥಾಲಯವೂ ಇದ್ದು, ಪ್ರತ್ಯೇಕ ಭೋಜನ ಶಾಲೆ, ಉತ್ತಮ ಪಾರ್ಕಿಂಗ ವ್ಯವಸ್ಥೆಯೂ ಇದೆ.

ಕಟ್ಟಡ ನಿರ್ಮಾಣದಲ್ಲೂ ರಾಷ್ಟ್ರಮನ್ನಣೆ
ಸಂಸತ್‌ ಕಟ್ಟಡದ ಪ್ರಮುಖ ವಿಶೇಷತೆಗಳಲ್ಲೊಂದು ಎಂದರೆ ಪ್ರತಿ ನಿರ್ಮಾಣದಲ್ಲು ರಾಷ್ಟ್ರೀಯ ಅಸ್ಮಿತೆಗಳನ್ನು ಪ್ರದರ್ಶಿಸಲಾಗಿದೆ. ಅಂದರೆ,ಲೋಕಸಭಾ ಸದನವನ್ನು ರಾಷ್ಟ್ರಪಕ್ಷಿ ನವಿಲಿನ ಥೀಮ್‌ನಲ್ಲಿ ವಿನ್ಯಾಸಗೊಳಿಸಿದ್ದರೆ, ರಾಜ್ಯ ಸಭಾ ಸದನವನ್ನು ರಾಷ್ಟ್ರಪುಷ್ಪ ಕಮಲದ ಥೀಮ್‌ನಲ್ಲಿ ವಿನ್ಯಾಸಗೊಳಿಸಲಾಗಿದೆ. ಅಲ್ಲದೇ, ಸಂಸತ್‌ ಸದಸ್ಯರು ವಿಶ್ರಾಂತಿಸಲು, ಸಂವಹನ ನಡೆಸಲು ಅವಕಾಶ ನೀಡುವ ಸಭಾಂಗಣವನ್ನೂ ನಿರ್ಮಿಸಲಾಗಿದ್ದು, ಕಟ್ಟಡದ ನಡುವೆ ರಾಷ್ಟ್ರ ವೃಕ್ಷ ಆಲದಮರವಿದೆ. ಇನ್ನು ಕಟ್ಟಡದ ಮುಂದೆ 9,500 ಕೆಜಿ ತೂಕದ 6.5 ಮೀಟರ್‌ ಎತ್ತರದ ರಾಷ್ಟ್ರ ಲಾಂಛನದ ಕಂಚಿನ ಪ್ರತಿಮೆ ಸಂಸತ್‌ ಕಟ್ಟಡದ ಮುಂದಿದ್ದು, 100 ಕುಶಲ ಕರ್ಮಿಗಳು 6 ತಿಂಗಳ ಸಮಯ ತೆಗೆದುಕೊಂಡು ಈ ಕಂಚಿನ ಪ್ರತಿಮೆಯನ್ನು ನಿರ್ಮಿಸಿದ್ದರು. 2022ರ ಜುಲೈ 11 ರಂದು ಪ್ರಧಾನಿ ಮೋದಿ ಈ ಲಾಂಛನ ಉದ್ಘಾಟಿಸಿದ್ದರು.

ಅತ್ಯಾಧುನಿಕ ತಂತ್ರಜ್ಞಾನ ಸಜ್ಜಿತ ಕಟ್ಟಡ
*ಕಟ್ಟಡದ ಪ್ರತಿ ಕಚೇರಿಯೂ ಸುಸಜ್ಜಿತ ಮಾತ್ರವಲ್ಲದೇ ಅತ್ಯಾಧುನಿಕ ಭದ್ರತಾ ಮಾನದಂಡಗಳ ಅಳವಡಿಕೆಯೊಂದಿಗೆ ಸುರಕ್ಷಿತವಾಗಿವೆ. ಕೊಠಡಿಗಳೆಲ್ಲವೂ ಹೆಚ್ಚಿನ ಸ್ಥಳಾವಕಾಶ ಹೊಂದಿದ್ದು ಅತ್ಯುತ್ತಮ ಸಂಪರ್ಕ-ಸಂವಹನ ಸಾಧನಗಳನ್ನೂ ಒಳಗೊಂಡಿವೆ.
*ಅತಿದೊಡ್ಡ ಸಮಿತಿ ಕೊಠಡಿಗಳನ್ನೂ ಹೊಂದಿದ್ದು ಅವುಗಳೆಲ್ಲವೂ ಆಧುನಿಕ ಶ್ರಾವ್ಯ-ದೃಶ್ಯ (ಆಡಿಯೋ ವಿಷುಯೆಲ್‌) ವ್ಯವಸ್ತೆಗಳನ್ನೂ ಒಳಗೊಂಡಿವೆ.ಇದು ಕಾರ್ಯವೈಖರಿಯ ದಕ್ಷತೆ ಹೆಚ್ಚಿಸುವುದರ ಜತೆಗೆ ಸಂವಹನ ಸುಲಭಗೊಳಿಸಲು ಸಹಾಯವಾಗಲಿದೆ.
* ತ್ರಿಕೋನಾಕೃತಿಯಲ್ಲಿ ನಿರ್ಮಿಸಲಾಗಿರುವ ನೂತನ ಕಟ್ಟಡವು ಇಂಧನ ದಕ್ಷತೆಯಿಂದ ಕೂಡಿದೆ. ಇದಕ್ಕಾಗಿ ಹಸಿರು ತಂತ್ರಜ್ಞಾನವನ್ನ ಬಳಸಿಕೊಳ್ಳುವ ಮೂಲಕ ಪರಿಸರ ಸ್ನೇಹಿ ವ್ಯವಸ್ಥೆಯನ್ನೂ ಉತ್ತೇಜಿಸಲಾಗಿದೆ.
* ದಿವ್ಯಾಂಗರ ಪ್ರವೇಶಕ್ಕೂ ಪೂರಕವಾಗುವ ರೀತಿಯಲ್ಲಿ ನೂತನ ಸಂಸತ್‌ ಕಟ್ಟಡವನ್ನು ನಿರ್ಮಾಣ ಮಾಡಲಾಗಿದೆ.

ಕರ್ನಾಟಕದ ಜತೆಗೆ ವಿಶೇಷ ನಂಟು
ಹೊಸದಾಗಿ ನಿರ್ಮಾಣವಾಗುತ್ತಿರುವ ಸಂಸತ್‌ಭವನವು ಕರ್ನಾಟಕ ಜತೆಗೂ ವಿವಿಧ ನಂಟು ಹೊಂದಿದೆ. ಕಟ್ಟಡದ ನಿರ್ಮಾಣದ ಉಸ್ತುವಾರಿ ವಹಿಸಿಕೊಂಡಿರುವುದು ಕರ್ನಾಟಕದವರಾದ ಕೇಂದ್ರ ಸಚಿವ ಪ್ರಹ್ಲಾದ ಜೋಷಿ. ಅಲ್ಲದೇ, ಕಟ್ಟಡ ನಿರ್ಮಾಣಕ್ಕೂ ಮುನ್ನ ಶಂಕುಸ್ಥಾಪನೆಯ ಸಂದರ್ಭದಲ್ಲಿ ಖುದ್ದು ಪ್ರಧಾನಿ ನರೇಂದ್ರ ಮೋದಿ ಅವರ ಸೂಚನೆ ಮೇರೆಗೆ ಶಿಲಾನ್ಯಾಸದ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದ್ದು ಕರ್ನಾಟಕದ ಶೃಂಗೇರಿ ಮಠದ ಪುರೋಹಿತರು. ವಿಶೇಷವೆಂದರೆ ಕಟ್ಟಡ ನಿರ್ಮಾಣಕ್ಕೆ ನೆರವೇರಿಸುವ ಶಂಕುಸ್ಥಾಪನೆಗೆ ಬಳಸಿರುವ ಕಲ್ಲನ್ನು ಕರ್ನಾಟಕದಿಂದಲೇ ತಯಾರಿಸಿಕೊಡಲಾಗಿತ್ತು.

ಸಂಸತ್‌ನಲ್ಲಿ ಅನುಭವ ಮಂಟಪ
ನೂತನ ಕಟ್ಟಡದ ಒಳಾಂಗಣ ವಿನ್ಯಾಸದಲ್ಲಿ ಭಾರತೀಯ ಕಲೆ, ಸಂಸ್ಕೃತಿ, ಪ್ರಾದೇಶಿಕ ಕಲೆ, ಕರಕುಶಲತೆ, ಜವಳಿ, ವಾಸ್ತು ಶಿಲ್ಪ ಸೇರಿದಂತೆ ವೈವಿಧ್ಯತೆಯ ಸಮ್ಮಿಶ್ರಣವನ್ನು ಪ್ರದರ್ಶಿಸಲು ಸಕಲ ಸಿದ್ಧತೆಗಳನ್ನೂ ನಡೆಸಲಾಗಿದೆ. ಅದರಂತೆಯೇ, ಸಾರ್ವಜನಿಕರೂ ಭೇಟಿ ನೀಡಲು ಅವಕಾಶವಿರುವ ಸಂವಿಧಾನ ಸಭಾಂಗಣದಲ್ಲಿ 12ನೇ ಶತಮಾನದನ ದಾರ್ಶನಿಕರಾದ, ಕರ್ನಾಟಕದ ಹೆಮ್ಮೆ ಬಸವಣ್ಣನವರ ಅನುಭವ ಮಂಟಪವನ್ನೂ ಸ್ಥಾಪಿಸಲಾಗುತ್ತಿದೆ. ಅಂದರೆ, ಅನುಭವ ಮಂಟಪಕ್ಕೆ ಸಂಬಂಧಿಸಿದ ಕಲಾಕೃತಿ, ಹಸ್ತ ಪ್ರತಿ ಸೇರಿದಂತೆ ಹಲವು ದಾಖಲೆಗಳನ್ನು ಪ್ರದರ್ಶಿಸಲಾಗುತ್ತದೆ. ಈ ನಿಟ್ಟಿನಲ್ಲಿ ಧಾರವಾಡ ವಿಶ್ವವಿದ್ಯಾಲಯಕ್ಕೆ ಪತ್ರ ಬರೆದು ಅಗತ್ಯ ದಾಖಲೆ ಒದಗಿಸುವಂತೆ ಮನವಿ ಮಾಡಲಾಗಿತ್ತೆಂದೂ ಈ ಹಿಂದೆ ಸಚಿವ ಜೋಷಿ ತಿಳಿಸಿದ್ದರು.

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ-88: ಸಮಸ್ಯೆಯ ಮೂಲ ಹುಡುಕುವ ರೀತಿ

Udupi: ಗೀತಾರ್ಥ ಚಿಂತನೆ-88: ಸಮಸ್ಯೆಯ ಮೂಲ ಹುಡುಕುವ ರೀತಿ

1-crick

T20; ಸ್ಯಾಮ್ಸನ್‌ ಸತತ 2ನೇ ಶತಕ:ದಕ್ಷಿಣ ಆಫ್ರಿಕಾ ಎದುರು ಭಾರತಕ್ಕೆ ಅಮೋಘ ಜಯ

Kaup: ಪಠ್ಯದ ಜತೆಗೆ ಶಿಕ್ಷಣಕ್ಕೆ ಆದ್ಯತೆ ಅತ್ಯಗತ್ಯ: ಡಾ| ಕೆ. ಪ್ರಕಾಶ್‌ ಶೆಟ್ಟಿ

Kaup: ಪಠ್ಯದ ಜತೆಗೆ ಶಿಕ್ಷಣಕ್ಕೆ ಆದ್ಯತೆ ಅತ್ಯಗತ್ಯ: ಡಾ| ಕೆ. ಪ್ರಕಾಶ್‌ ಶೆಟ್ಟಿ

Mangaluru: ಪದ್ಮಶ್ರೀ ಬೇಳೇರಿ ಸಂರಕ್ಷಿತ ಭತ್ತದ 10 ತಳಿ ಸಂವರ್ಧನೆ

Mangaluru: ಪದ್ಮಶ್ರೀ ಬೇಳೇರಿ ಸಂರಕ್ಷಿತ ಭತ್ತದ 10 ತಳಿ ಸಂವರ್ಧನೆ

1-pro

Pro Kabaddi: ಜೈಪುರ್‌ ಮೇಲೆ ಪಾಟ್ನಾ ಸವಾರಿ

ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ ಪ್ರಕರಣ: ಪೊಲೀಸ್‌ ಕ್ರಮಕ್ಕೆ ಕೇರಳ ಸಿಎಂ ಸೂಚನೆ

ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ ಪ್ರಕರಣ: ಪೊಲೀಸ್‌ ಕ್ರಮಕ್ಕೆ ಕೇರಳ ಸಿಎಂ ಸೂಚನೆ

Mangaluru: ಡಿ.14ರಂದು ರಾಷ್ಟ್ರೀಯ ಲೋಕ ಅದಾಲತ್‌

Mangaluru: ಡಿ.14ರಂದು ರಾಷ್ಟ್ರೀಯ ಲೋಕ ಅದಾಲತ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Rangavaibhava

Golden Jubliee: ಕರುನಾಡ ರಂಗವೈಭವ ಮತ್ತೆ ಮರಳಿ ತರಬೇಕಿದೆ…

ರೀಲ್‌ನಿಂದ ರಿಯಲ್‌ ಕೃಷಿಯತ್ತ ಚಿತ್ರೋದ್ಯಮಿ ಚಿತ್ತ; ‌ಬಸವರಾಜ ಚಿತ್ರ ಮಂದಿರದ ಮಾಲೀಕ ಕೋಳೂರು!

ರೀಲ್‌ನಿಂದ ರಿಯಲ್‌ ಕೃಷಿಯತ್ತ ಚಿತ್ರೋದ್ಯಮಿ ಚಿತ್ತ; ‌ಬಸವರಾಜ ಚಿತ್ರ ಮಂದಿರದ ಮಾಲೀಕ ಕೋಳೂರು!

Donald Trump Salry: ಅಮೆರಿಕದ ಅಧ್ಯಕ್ಷರಿಗೆ ಸಿಗುವ ಸಂಬಳ ಎಷ್ಟು? ಏನೇನು ಸೌಲಭ್ಯಗಳಿವೆ

Donald Trump Salary: ಅಮೆರಿಕದ ಅಧ್ಯಕ್ಷರಿಗೆ ಸಿಗುವ ಸಂಬಳ ಎಷ್ಟು? ಏನೇನು ಸೌಲಭ್ಯಗಳಿವೆ

ಅಮೇರಿಕವನ್ನು ಅಭಿನಂದಿಸುವ ಮೊದಲು ಭಾರತೀಯರು ಕಲಿಯಬೇಕಾದ ರಾಜಕೀಯ ಪಾಠ…

Explainer:ಅಮೇರಿಕವನ್ನು ಅಭಿನಂದಿಸುವ ಮೊದಲು ಭಾರತೀಯರು ಕಲಿಯಬೇಕಾದ ರಾಜಕೀಯ ಪಾಠ…

Kannada-Horata

Golden Jubliee: ಕನ್ನಡಕ್ಕೆ ಹೋರಾಡುತ್ತಲೇ ಇರಬೇಕಾದ ಸ್ಥಿತಿ ಬಾರದಿರಲಿ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Udupi: ಗೀತಾರ್ಥ ಚಿಂತನೆ-88: ಸಮಸ್ಯೆಯ ಮೂಲ ಹುಡುಕುವ ರೀತಿ

Udupi: ಗೀತಾರ್ಥ ಚಿಂತನೆ-88: ಸಮಸ್ಯೆಯ ಮೂಲ ಹುಡುಕುವ ರೀತಿ

1-crick

T20; ಸ್ಯಾಮ್ಸನ್‌ ಸತತ 2ನೇ ಶತಕ:ದಕ್ಷಿಣ ಆಫ್ರಿಕಾ ಎದುರು ಭಾರತಕ್ಕೆ ಅಮೋಘ ಜಯ

Manipal: ಸವಾಲು ಮೆಟ್ಟಿ ನಿಂತಾಗ ಸುಸ್ಥಿರ ಜೀವನ: ಡಾ| ಜಗದೀಶ್‌

Manipal: ಸವಾಲು ಮೆಟ್ಟಿ ನಿಂತಾಗ ಸುಸ್ಥಿರ ಜೀವನ: ಡಾ| ಜಗದೀಶ್‌

Kaup: ಪಠ್ಯದ ಜತೆಗೆ ಶಿಕ್ಷಣಕ್ಕೆ ಆದ್ಯತೆ ಅತ್ಯಗತ್ಯ: ಡಾ| ಕೆ. ಪ್ರಕಾಶ್‌ ಶೆಟ್ಟಿ

Kaup: ಪಠ್ಯದ ಜತೆಗೆ ಶಿಕ್ಷಣಕ್ಕೆ ಆದ್ಯತೆ ಅತ್ಯಗತ್ಯ: ಡಾ| ಕೆ. ಪ್ರಕಾಶ್‌ ಶೆಟ್ಟಿ

Mangaluru: ಪದ್ಮಶ್ರೀ ಬೇಳೇರಿ ಸಂರಕ್ಷಿತ ಭತ್ತದ 10 ತಳಿ ಸಂವರ್ಧನೆ

Mangaluru: ಪದ್ಮಶ್ರೀ ಬೇಳೇರಿ ಸಂರಕ್ಷಿತ ಭತ್ತದ 10 ತಳಿ ಸಂವರ್ಧನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.