ಎಲ್ಲೂ ಅತಂತ್ರ ಆಗಲಿಲ್ಲ, ಅವರ ಕುತಂತ್ರ ನಡೆಯಲಿಲ್ಲ : ಸಿಎಂ ಬೊಮ್ಮಾಯಿ
ಮುಂದೆ ಎಲ್ಲಾದ್ರೂ ಕಾಂಗ್ರೆಸ್ ಹಡಗು ಮುಳುಗಿದ್ರೆ ಅದು ಕರ್ನಾಟಕದಲ್ಲಿ
Team Udayavani, Mar 10, 2022, 6:44 PM IST
ಬೆಂಗಳೂರು : ಎಲ್ಲೂ ಅತಂತ್ರ ಆಗಲಿಲ್ಲ, ಅವರ ಕುತಂತ್ರ ನಡೆಯಲಿಲ್ಲ, ಮೋದಿ-ಆದಿತ್ಯನಾಥ್ ಅವರ ತಂತ್ರ ಮಾತ್ರ ಕೆಲಸ ಮಾಡಿತು ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಪಂಚ ರಾಜ್ಯಗಳ ಫಲಿತಾಂಶದ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.
ಬಿಜೆಪಿ ಜಯಭೇರಿ ಹಿನ್ನೆಲೆಯಲ್ಲಿ ಬಿಜೆಪಿ ಕಚೇರಿಗೆ ಆಗಮಿಸಿದ ಸಿಎಂ, ನಮ್ಮೆಲ್ಲರಿಗೂ ಇಂದು ಬಹಳ ಸಂತೋಷ ಆಗಿದೆ. ಭಾರತ ದೇಶಕ್ಕೆ ಅತ್ಯಂತ ಸಂತೋಷ ಸಿಕ್ಕಿದೆ. ಈ ಜಯ ಮುಂಬರುವ ಭಾರತ ದೇಶದ ದಿಕ್ಸೂಚಿ ತೋರಿಸಿದೆ.ಕೆಲವು ಶಕ್ತಿಗಳು ತಮ್ಮ ಸ್ವಾರ್ಥ, ರಾಜಕೀಯ ಲಾಭಕ್ಕಾಗಿ ದೇಶದ ಸುರಕ್ಷತೆ ಬಗ್ಗೆಯೂ ಚಿಂತನೆ ಮಾಡದೆ ಸಾಮಾನ್ಯ ಜನರು ಆತಂಕಕ್ಕೊಳಗಾಗಿದ್ದಾರೆ. ವಿಚಿತ್ರ ಕಾರಿ ಶಕ್ತಿ ಹೊಗಲಾಡಿಸಲು ಸ್ವಾತಂತ್ರ್ಯ ಸಿಕ್ಕಿದೆ ಎಂದರು.
24×7 ದೇಶದ ಬಗ್ಗೆ ಚಿಂತನೆ ಮಾಡುವ ಪ್ರಧಾನಿ ಎಂದೂ ಸಿಕ್ಕಿರಲಿಲ್ಲ.ಮೋದಿ ಅವರು ತೆಗೆದುಕೊಂಡ ಪ್ರತಿಯೊಂದು ನಿರ್ಧಾರಕ್ಕೆ ಬೆಂಬಲ ಇದೆ.
ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತ ಎತ್ತರದಲ್ಲಿದೆ.ಉಕ್ರೇನ್, ರಷ್ಯಾ ಯುದ್ಧ ನಡೆಯುತ್ತಿದ್ದು, ನಿಲ್ಲಿಸಿ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಿ ಅಂತ ಹೇಳುವ ಧೈರ್ಯ ಅವರಿಗಿದೆ.ಅಮೇರಿಕಾಗೂ ಇಲ್ಲ ಎಂದರು.
ಸಮಾಜವಾದಿ ಪಕ್ಷ ಗೆದ್ದೇ ಬಿಡ್ತು ಅಂತ ಜಾತಿ ಲೆಕ್ಕಾಚಾರ ಹಾಕಿ ಗೆದ್ದೇ ಬಿಟ್ಟ ಅಖಿಲೇಶ್ ಅಂತ ಮಾಡಿದರು.ಕಿಸಾನ್ ಯೋಜನೆ, ಪ್ರಧಾನ ಮಂತ್ರಿ ಗೃಹ ನಿರ್ಮಾಣ, ಉಜ್ವಲ ಯೋಜನೆ ಜನರಿಗೆ ಮುಟ್ಟಿದೆ. ಯಾರು ಮೋದಿ ಯೋಜನೆ ಮುಟ್ಟಿದೆ, ಎಂದೂ ಬೇರೆಯವರಿಗೆ ಮತ ನೀಡಲ್ಲ.
ಬಿಜೆಪಿ ಕಮಲ ಐದರಲ್ಲಿ ನಾಲ್ಲು ಕಡೆ ಅರಳಿದೆ. ರಾಜಕೀಯವಾಗಿ ನಮಗೂ ಗೊತ್ತಿದೆ. ಆಪ್ ಗೆದ್ದಿದ್ರೂ ಕೂಡ ಬರುವ ದಿನಗಳಲ್ಲಿ ಪಂಜಾಬ್‌ನಲ್ಲಿ ಬಿಜೆಪಿಯಿಂದ ಹೆಚ್ಚು ಸಂಸದರು ಆಯ್ಕೆಯಾಗಲಿದ್ದಾರೆ ಎಂದರು.
ಕಳೆದ ಎರಡು ವರ್ಷ ಕೋವಿಡ್ ಪ್ರಭಾವ ಇದ್ದರೂ, ಹೆಚ್ಚು ಕೆಲಸ ಮಾಡಿದ್ದು ಬಿಜೆಪಿ ಮತ್ತು ಯಡಿಯೂರಪ್ಪ ಸರ್ಕಾರ. ಬಿಜೆಪಿ ಕಾರ್ಯಕರ್ತರ ಶ್ರಮ. ಪ್ರತೀ ಬೂತ್ ಮಟ್ಟದಲ್ಲಿ ಕಿಟ್ ಹಂಚಿದ ಪಕ್ಷ ಬಿಜೆಪಿ. ಅತ್ಯಂತ ಆನೆ ಬಲದಿಂದ ಮುನ್ನಡೆಯುತ್ತಿದೆ. ಕಾಂಗ್ರೆಸ್ ಪಕ್ಷದ ಸಕ್ರಿಯ ಕಾರ್ಯಕರ್ತರ ಹೆಚ್ಚು ನೋಂದಣಿ ಮಾಡಿಸಿದ್ರೆ ಫ್ರಿಡ್ಜ್ ಕೊಡ್ತಾರಂತೆ. ಅದು ಎಲ್ಲಿ ಬಾದಾಮಿ ಕ್ಷೇತ್ರದಲ್ಲಿ. ಈಗ ಕೊಟ್ಟು, ಮುಂದೆ ಹತ್ತು ಪಟ್ಟು ತೆಗೆದುಕೊಳ್ತಾರೆ. ಅಧಿಕಾರಕ್ಕೆ ಬರಲ್ಲ ಅಂತ ಗೊತ್ತು ಹಾಗಾಗಿ ಎಷ್ಟು ಬೇಕಾದ್ರೂ ಕೊಡ್ತಾರೆ . ಮುಂದೆ ಎಲ್ಲಾದ್ರೂ ಕಾಂಗ್ರೆಸ್ ಹಡಗು ಮುಳುಗಿದ್ರೆ ಅದು ಕರ್ನಾಟಕದಲ್ಲಿ ಎಂದರು.
ಕಾಂಗ್ರೆಸ್ ನಾಯಕರು ಗೋವಾಗೆ ಹೋಗಿದ್ದಾರೆ. ಅವರು ಕಾಲಿಟ್ಟಿರೋ ಪರಿಸ್ಥಿತಿ ಸರಿ ಇಲ್ಲ ಎಂದು ಡಿ.ಕೆ. ಶಿವಕುಮಾರ್ ಅವರ ಕಾಲೆಳೆದರು.
ಸಿಟಿ ರವಿ, ದೇವೇಂದ್ರ ಫಡ್ನವೀಸ್ ಅವರಿಗೆ ಗೋವಾ ಉಸ್ತುವಾರಿ ವಹಿಸಿದ್ದರು, ಅವರಿಗೂ ಅಭಿನಂದನೆ ಸಲ್ಲಿಸುತ್ತೇನೆ. ಉತ್ತರ ಪ್ರದೇಶದಲ್ಲಿ ಶೋಭಾ ಕರಂದ್ಲಾಜೆ ಅವರು ನಿರಂತರವಾಗಿ ಶ್ರಮಿಸಿದ್ದಾರೆ. 2023ಕ್ಕೆ ಕರ್ನಾಟಕದಲ್ಲೂ ಅಧಿಕಾರಕ್ಕೆ ಬರಲಿದ್ದೇವೆ. ಬಜೆಟ್ ಕಾರ್ಯಾದೇಶ ಆಗಬೇಕು ಅಂತ ಸೂಚಿಸಿದ್ದೇನೆ. ಈಗಿನಿಂದಲೇ ಎಲ್ಲಾ ಯೋಜನೆ ಆರಂಭಿಸ್ತೇವೆ. ಕಾರ್ಯಕ್ರಮ ಮುಟ್ಟುವ ಲಾಭವನ್ನ ಜನರಿಗೆ ತಲುಪಬೇಕು.
ಬಿಜೆಪಿ ಸದೃಢ ಸಂಘಟನೆ, ಜನರ ಹೃದಯ ಗೆದ್ದು, 2023ರಲ್ಲಿ ಬಿಜೆಪಿ ಬಾವುಟ ಹಾರಿಸಿ ಸುಭೀಕ್ಪ ಆಡಳಿತ ಕೊಟ್ಟೇ ಕೊಡುತ್ತೇವೆ ಎಂದರು.
ಅಧಿವೇಶನ ಮುಗಿದ ಬಳಿಕ, ರಾಜ್ಯ ಸುತ್ತುತ್ತೇವೆ. ಯಡಿಯೂರಪ್ಪ ಹಾಗೂ ಕೇಂದ್ರ ನಾಯಕರ ಜೊತೆ ಸಂಘಟನೆ ಮಾಡುತ್ತೇವೆ. ಪಕ್ಷ ಸಂಘಟನೆ ಇಲ್ಲದ ಕಡೆ ಸುತ್ತಿ, ಸಂಘಟನೆ ಮಾಡುತ್ತೇವೆ. ಕಾಂಗ್ರೆಸ್ ಎಲ್ಲೆಡೆ ಧೂಳೀಪಟ ಆಗಿದ್ದು, ನೆಲಕಚ್ಚಿದೆ. ದೇಶದ ಭವಿಷ್ಯಕ್ಕಾಗಿ ಬಿಜೆಪಿ ಹೋರಾಟ ಮಾಡ್ತಿದೆ, ಕಾಂಗ್ರೆಸ್ ತಮ್ಮ ಅಸ್ತಿತ್ವಕ್ಕೆ ಹೋರಾಟ ಮಾಡ್ತಿದೆ. ಮುಂದಿನ ವಿಜಯ ಗುಜರಾತ್ ನಲ್ಲಿ ಆಗಲಿದೆ, ನಂತರ ಸೂರ್ಯ ಚಂದ್ರ ಹೇಗೆ ಸತ್ಯವೋ ಹಾಗೆ ಬಿಜೆಪಿ ರಾಜ್ಯದಲ್ಲೂ ಅಧಿಕಾರಕ್ಕೆಬಂದೇ ಬರಲಿದೆ ಅದು ಸತ್ಯ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CM ಸಿದ್ದರಾಮಯ್ಯ ಭ್ರಷ್ಟ ಎಂದು ನಿರೂಪಿಸಲು ಯಶಸ್ವಿ: ಆರ್.ಅಶೋಕ್
BJP: ವಿಜಯೇಂದ್ರ ದಿಲ್ಲಿಗೆ: ವರಿಷ್ಠರ ಜತೆ “ಬಣ’ ರಾಜಕೀಯ ಚರ್ಚೆ?
Congress; ಅಧಿವೇಶನಕ್ಕೆ ಮುನ್ನ ಸಂಪುಟಕ್ಕೆ ಸರ್ಜರಿ? ಸಾಧ್ಯತೆಗಳೇನು?
High Court: ನಕ್ಸಲ್ ಚಟುವಟಿಕೆ: ಸಾವಿತ್ರಿ ಬಾಡಿ ವಾರಂಟ್ ಮನವಿ ಮರು ಪರಿಶೀಲನೆಗೆ ನಿರ್ದೇಶ
ಕಸ್ತೂರಿಂಗನ್ ವರದಿ ತಿರಸ್ಕಾರ ಆಗ್ರಹಿಸಿ “ಬೆಂಗಳೂರು ಚಲೋ’
MUST WATCH
ಹೊಸ ಸೇರ್ಪಡೆ
CM ಸಿದ್ದರಾಮಯ್ಯ ಭ್ರಷ್ಟ ಎಂದು ನಿರೂಪಿಸಲು ಯಶಸ್ವಿ: ಆರ್.ಅಶೋಕ್
BJP: ವಿಜಯೇಂದ್ರ ದಿಲ್ಲಿಗೆ: ವರಿಷ್ಠರ ಜತೆ “ಬಣ’ ರಾಜಕೀಯ ಚರ್ಚೆ?
Congress; ಅಧಿವೇಶನಕ್ಕೆ ಮುನ್ನ ಸಂಪುಟಕ್ಕೆ ಸರ್ಜರಿ? ಸಾಧ್ಯತೆಗಳೇನು?
Mahayuti ಗೆಲುವು: ಆ್ಯಕ್ಸಿಸ್ ಮೈ ಇಂಡಿಯಾ, ಚಾಣಕ್ಯ ಸಮೀಕ್ಷೆ ಭವಿಷ್ಯ
High Court: ನಕ್ಸಲ್ ಚಟುವಟಿಕೆ: ಸಾವಿತ್ರಿ ಬಾಡಿ ವಾರಂಟ್ ಮನವಿ ಮರು ಪರಿಶೀಲನೆಗೆ ನಿರ್ದೇಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.