ಎನ್‌ಐಸಿ ಪೋರ್ಟಲ್‌ಗಳ ಮೂಲಕ ಅಧಿವೇಶನ?
ವರ್ಚುವಲ್ ಕಲಾಪಕ್ಕೆ ಸಜ್ಜಾಗುತ್ತಿದೆ ವೇದಿಕೆ; ಸುರಕ್ಷೆ ಕಾರಣಕ್ಕೆ ಖಾಸಗಿ ಆ್ಯಪ್ ಗಳಿಂದ ದೂರ
Team Udayavani, Jun 4, 2020, 6:40 AM IST
ಹೊಸದಿಲ್ಲಿ ಸ್ವತಂತ್ರ ಭಾರತದ ಇತಿಹಾಸದಲ್ಲಿ ಮೊದಲ ಬಾರಿ ಆನ್‌ಲೈನ್ ಮೂಲಕ (ವರ್ಚುವಲ್ ಅಧಿವೇಶನ) ಸಂಸತ್ ಅಧಿವೇಶನ ನಡೆಸುವ ಕುರಿತು ರಾಜ್ಯಸಭೆ ಸಭಾಪತಿ ಮತ್ತು ಲೋಕಸಭೆ ಸ್ಪೀಕರ್ ಚರ್ಚಿಸಿದ ಬೆನ್ನಲ್ಲೇ ಇ-ಅಧಿವೇಶನ ನಡೆಸಲು ಸದ್ದಿಲ್ಲದೆ ವೇದಿಕೆ ಸಜ್ಜಾಗುತ್ತಿದೆ.
ಈ ನಿಟ್ಟಿನಲ್ಲಿ ಹಾಲಿ ಇರುವ ಸುರಕ್ಷಿತ ಇ-ಪೋರ್ಟಲ್‌ಗಳನ್ನೇ ಬಳಸಿಕೊಂಡು ಸಂಸದರು ತಾವು ಇರುವ ಸ್ಥಳದಿಂದಲೇ ಮುಂಗಾರು ಅಧಿವೇಶನದಲ್ಲಿ ಪಾಲ್ಗೊಳ್ಳುವಂತೆ ಮಾಡುವ ಸಾಧ್ಯತೆಗಳ ಪರಿಶೀಲನೆ ನಡೆದಿದೆ.ಈ ನಿಟ್ಟಿನಲ್ಲಿ ನ್ಯಾಶನಲ್ ಇನ್ಫಾರ್ಮ್ಯಾಟಿಕ್ಸ್ ಸೆಂಟರ್(ಎನ್‌ಐಸಿ) ನಿರ್ವಹಿಸುತ್ತಿರುವ mprs.nic.in ಮತ್ತು membersls.nic.in ಇ-ಪೋರ್ಟಲ್ ಗಳನ್ನು ಬಳಸಿ ಕೊಳ್ಳಲು ಚಿಂತನೆ ನಡೆದಿದೆ.
ಪ್ರಸ್ತುತ ಸದಸ್ಯರು ಲೋಕಸಭೆ ಮತ್ತು ರಾಜ್ಯಸಭೆ ವೆಬ್‌ಸೈಟ್‌ಗಳನ್ನು ಆನ್‌ಲೈನ್ ನೋಟಿಸ್ ನೀಡುವುದಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಇದರೊಂದಿಗೆ ಉಭಯ ಸದನಗಳಿಗೆ ಸಂಬಂಧಿಸಿದ ಪ್ರಮುಖ ವರದಿಗಳು ಹಾಗೂ ಸಭೆಗೆ ಸಂಬಂಧಿಸಿದ ಸುತ್ತೋಲೆಗಳನ್ನು ತಲುಪಿ ಸಲು ಕಾರ್ಯ ದರ್ಶಿಗಳು ಸಹ ಈ ವೆಬ್‌ಸೈಟ್‌ಗಳನ್ನು ಬಳಸುತ್ತಾರೆ. ಇದೀಗ ಬಳಕೆದಾರರ ಹೆಸರು (ಯೂಸರ್ ನೇಮ್) ಮತ್ತು ಡಿಜಿಟಲ್ ಸಹಿ ಬಳಸಿಕೊಂಡು ಎಂಪಿಗಳು ಎನ್‌ಐಸಿ ಪೋರ್ಟಲ್ ಗಳನ್ನು ಪ್ರವೇಶಿಸಲು ಅವಕಾಶ ನೀಡಲಾಗುತ್ತಿದೆ.
ಸಂಸದರು ಸದನದ ಚರ್ಚೆಗಳಲ್ಲಿ ಸಕ್ರಿಯ
ವಾಗಿ ಭಾಗವಹಿಸಬಹುದು ಎಂಬ ಉದ್ದೇಶ ದಿಂದಲೇ ಸರಕಾರವು ಪೋರ್ಟಲ್‌ಗಳನ್ನು ರೂಪಿಸಿದ್ದು, ದೇಶದಲ್ಲಿ ಕೋವಿಡ್ -19 ಸೋಂಕು ಇರುವ ಕಾರಣ ದಿಲ್ಲಿಯವರೆಗೆ ಪ್ರಯಾಣಿಸಲು ಬಯಸದವರಿಗೆ ವರ್ಚುವಲ್ ಅಧಿವೇಶನದಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಗುತ್ತಿದೆ.
ಎನ್‌ಐಸಿ ಪೋರ್ಟ್‌ಲ್‌ಗಳೇ ಏಕೆ?
ಹೆಚ್ಚಿನ ಸಂಖ್ಯೆಯ ಸದಸ್ಯರು ಸೇರಿಕೊಂಡು ಸಭೆ ನಡೆಸಲೆಂದೇ ಝೂಮ್, ಮೈಕ್ರೋಸಾಫ್ಟ್ ಟೀಮ್ಸ್ ರೀತಿಯ ವೀಡಿಯೋ ಕಾನ್ಫರೆನ್ಸಿಂಗ್ ಆ್ಯಪ್‌ಗಳಿವೆ. ಅವುಗಳ ಮೂಲಕವೇ ದೇಶದ ಸಂಸದರು ಅಧಿವೇಶನದಲ್ಲಿ ಪಾಲ್ಗೊಳ್ಳಬಹುದು. ಆದರೆ ಸುರಕ್ಷಿತವಲ್ಲ ಎಂಬ ಕಾರಣಕ್ಕೇ ಕೇಂದ್ರ ಸರಕಾರ ಝೂಮ್ ಆ್ಯಪ್ ಬಳಸದಂತೆ (ಸರಕಾರದ ಮಟ್ಟದಲ್ಲಿ) ಸೂಚನೆ ನೀಡಿದೆ. ಹೀಗಾಗಿ ಅತ್ಯಂತ ಸುರಕ್ಷಿತವಾಗಿರುವ ಎನ್‌ಐಸಿಯ “ಹೈಬ್ರಿಡ್ ವರ್ಷನ್’ ಪೋರ್ಟಲ್‌ಗಳನ್ನೇ ಬಳಸಲು ಉದ್ದೇಶಿಸಲಾಗಿದೆ.
ಈಗಾಗಲೇ ನೋಟಿಸ್ ಮೊದಲಾದ ಉದ್ದೇಶಗಳಿಗಾಗಿ ಸಂಸದರು ಇವುಗಳನ್ನು ಬಳಸುತ್ತಿರುವುದರಿಂದ ಪೋರ್ಟಲ್‌ಗಳ ಪರಿಚಯವೂ ಅವರಿಗಿದೆ ಎಂದು ಸಂಸದೀಯ ವ್ಯವಹಾರಗಳ ಸಚಿವಾಲಯದ ಹಿರಿಯ ಅಧಿಕಾರಿ ತಿಳಿಸಿದ್ದಾರೆ.
ಎರಡೇ ವಾರದ ಅಧಿವೇಶನ
ಈ ಬಾರಿಯ ಮುಂಗಾರು ಅಧಿವೇಶನ ಒಂದು ತಿಂಗಳ ಬದಲು ಎರಡು ವಾರ ಮಾತ್ರ ನಡೆಯುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಕೋವಿಡ್-19ಕ್ಕೆ ಸಂಬಂಧಿಸಿದ ವಿಷಯಗಳು, ಕೋವಿಡ್-19 ಪರಿಸ್ಥಿತಿ ನಿರ್ವಹಣೆ, ಆರ್ಥಿಕ ಪ್ಯಾಕೇಜ್‌ಗಳಿಗೆ ಸಂಬಂಧಿಸಿದ ವಿಷಯಗಳು ಮಾತ್ರ ಚರ್ಚೆಗೆ ಬರುವ ಸಾಧ್ಯತೆ ಇದೆ. ಬಜೆಟ್ ಮಂಡನೆ ಬಳಿಕ ಅನಿರೀಕ್ಷಿತ ಸಮಸ್ಯೆಗಳು ಎದುರಾಗಿದ್ದು, ವಿವಿಧ ಅಗತ್ಯಗಳಿಗೆ ಮೀಸಲಿಟ್ಟಿದ್ದ ಹಣವನ್ನು ಆರ್ಥಿಕ ಪ್ಯಾಕೇಜ್‌ಗೆ ಬಳಸಿಕೊಳ್ಳಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್
Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ
New Year: ಸ್ನೇಹಿತರ ಮನೆಗೆ ಪಾರ್ಟಿಗೆಂದು ಹೋದ ಬಾಲಕಿಯ ಮೇಲೆ ಅತ್ಯಾ*ಚಾರ
Miraculous; ಎರಡು ಬಸ್ ಗಳ ಮಧ್ಯ ಸಿಲುಕಿದರೂ ವ್ಯಕ್ತಿ ಬಚಾವ್: ವೈರಲ್ ವಿಡಿಯೋ
China; ಭಾರತದ ಭೂಭಾಗದಲ್ಲಿ ಎರಡು ಕೌಂಟಿಗಳು: ಕೇಂದ್ರದಿಂದ ಬಲವಾದ ಪ್ರತಿಭಟನೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.