ವನಿತಾ ಪ್ರೀಮಿಯರ್ ಲೀಗ್ ಬಗ್ಗೆ ನೀತಾ ಅಂಬಾನಿ ಹೇಳಿದ್ದೇನು?
Team Udayavani, Mar 5, 2023, 11:24 PM IST
ಮುಂಬೈ: ಐಪಿಎಲ್ ಇತಿಹಾಸದಲ್ಲಿ ಭರ್ಜರಿ ಪ್ರದರ್ಶನದ ಮೂಲಕ ಅತಿ ಹೆಚ್ಚು ಬಾರಿ ಐಪಿಎಲ್ ಟ್ರೋಫಿ ಎತ್ತಿದ ಕೀರ್ತಿಗೆ ಭಾಜನವಾಗಿರುವ ತಂಡ ನೀತಾ ಅಂಬಾನಿ ಮಾಲಿಕತ್ವದ ಮುಂಬೈ ಇಂಡಿಯನ್ಸ್ ತಂಡ.
ಪುರುಷರ ಐಪಿಎಲ್ ಅಲ್ಲದೇ ಇದೀಗ ಪ್ರಾರಂಭವಾಗಿರುವ ಚೊಚ್ಚಲ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲೂ ನೀತಾ ಅಂಬಾನಿ ಮಾಲಿಕತ್ವದ ಮುಂಬೈ ಇಂಡಿಯನ್ಸ್ ಮಹಿಳಾ ತಂಡ ಕಮಾಲ್ ಮಾಡಲು ಮುಂದಾಗಿದೆ .
ಮಾರ್ಚ್ 4ರಂದು ನಡೆದ ಚೊಚ್ಚಲ ಡಬ್ಲೂಪಿಎಲ್‌ನ ಮೊದಲ ಪಂದ್ಯದಲ್ಲೇ ಆರ್ಭಟಿಸಿದ ಮುಂಬೈ ಪಡೆಯ ವನಿತೆಯರು ತಮ್ಮ ಎದುರಾಳಿ ಗುಜರಾತ್ ಜೈಂಟ್ಸ್ ವಿರುದ್ಧ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಪ್ರಾಬಲ್ಯ ಮೆರೆದು ತಮ್ಮ ಆಲ್‌ರೌಂಡ್ ಪ್ರದರ್ಶನದ ಮೂಲಕ ಗುಜರಾತ್ ತಂಡದ ವಿರುದ್ಧ 143 ರನ್ ಅಂತರದ ಬೃಹತ್ ಗೆಲುವು ದಾಖಲಿಸಿದ್ದಾರೆ.
ವನಿತಾ ಪ್ರೀಮಿಯರ್ ಲೀಗ್‌ನ ಮೊದಲ ಪಂದ್ಯಕ್ಕೇ ಡಿ.ವೈ ಪಾಟೀಲ್ ಸ್ಟೇಡಿಯಂ ಕ್ರಿಕೆಟ್ ಅಭಿಮಾನಿಗಳಿಂದ ಕಿಕ್ಕಿರಿದು ತುಂಬಿತ್ತು. ಈ ಪಂದ್ಯದಲ್ಲಿನ ಪ್ರತಿಯೊಂದು ಎಸೆತಕ್ಕೂ ಪ್ರೇಕ್ಷಕರ ಹರ್ಷೋದ್ಘಾರ ಆಟಗಾರ್ತಿಯರ ಜೋಷ್ ಹೆಚ್ಚು ಮಾಡುತ್ತಿತ್ತು.
ಇದರ ಮಧ್ಯೆ ವನಿತೆಯರ ಕ್ರೀಡೆಯನ್ನು ಬೆಂಬಲಿಸುತ್ತಾ ಬಂದಿರುವ ನೀತಾ ಅಂಬಾನಿ ಅವರೂ ಪಂದ್ಯದುದ್ದಕ್ಕೂ ವನಿತೆಯರಿಗೆ ತಮ್ಮ ಸಂಪೂರ್ಣ ಬೆಂಬಲ ನೀಡಿದ್ದಾರೆ. ಮುಂಬೈ ಇಂಡಿಯನ್ಸ್ ತಂಡದ ಅಮೋಘ ವಿಜಯದ ಬಳಿಕ ಡ್ರೆಸ್ಸಿಂಗ್ ರೂಂನಲ್ಲಿ ನಡೆದ ವಿಜಯೋತ್ಸವದಲ್ಲೂ ಭಾಗಿಯಾಗಿದ್ದಾರೆ. ಡಬ್ಲೂಪಿಎಲ್‌ನ ಆರಂಭಿಕ ದಿನ ನನ್ನ ಜೀವನದಲ್ಲಿ ಮರೆಯಲಾಗದ ದಿನವಾಗಿದೆ ಎಂದೂ ನೀತಾ ಅಂಬಾನಿ ಹರ್ಷ ವ್ಯಕ್ತಪಡಿಸಿದ್ದಾರೆ.
ʻಇದೊಂದು ಐತಿಹಾಸಿಕ ದಿನವಾಗಿದೆ. ಇದು ಕ್ರೀಡೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಪ್ರತಿಯೊಬ್ಬ ಮಹಿಳೆಗೂ ಐತಿಹಾಸಿಕ ಕ್ಷಣವಾಗಿದೆ. ಡಬ್ಲೂಪಿಎಲ್‌ನ ಭಾಗವಾಗಿರುವುದು ತುಂಬಾ ರೋಮಾಂಚನಕಾರಿ ಅನುಭವವಾಗಿದೆʼ ಎಂದು ನೀತಾ ಅಂಬಾನಿ ಹೇಳಿದ್ದಾರೆ.
ʻಹೆಚ್ಚು ಹೆಚ್ಚು ವನಿತೆಯರು ಕ್ರೀಡೆಯಲ್ಲಿ ಭಾಗವಹಿಸಲು ಮತ್ತು ಕ್ರೀಡೆಯನ್ನೇ ತಮ್ಮ ವೃತ್ತಿಯನ್ನಾಗಿ ಬೆಳೆಸಿಕೊಳ್ಳಲು ಡಬ್ಲೂಪಿಎಲ್ ಪ್ರೇರಣೆಯಾಗಲಿದೆ. ದೇಶದೆಲ್ಲೆಡೆ ವನಿತೆಯರು ಕ್ರೀಡೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ಈ ಪಂದ್ಯಗಳು ಅತಿ ದೊಡ್ಡ ಪ್ರೇರಣೆಯಾಗಲಿ. ಇದು ಅವರ ಮನಸ್ಸಿಗೆ ಕನಸನ್ನು ನನಸು ಮಾಡಿಕೊಳ್ಳುವ ಶಕ್ತಿ ತುಂಬಲಿʼ ಎಂದು ನೀತಾ ಅಂಬಾನಿ ಹೇಳಿದ್ದಾರೆ.
ಮುಂಬೈ ಇಂಡಿಯನ್ಸ್ ತಂಡ:
ವಿಶ್ವದ ಸ್ಟಾರ್ ವನಿತಾ ಆಟಗಾರ್ತಿಯರಿಂದ ತುಂಬಿರುವ ಮುಂಬೈ ಇಂಡಿಯನ್ಸ್ ತಂಡಕ್ಕೆ ಅನುಭವಿ ಮತ್ತು ಯುವ ಆಟಗಾರ್ತಿಯರ ಬಲವೂ ಇದೆ. ʻಮುಂಬೈ ಇಂಡಿಯನ್ಸ್ ಭಯಮುಕ್ತ ಮತ್ತು ಆಕರ್ಷಕ ಆಟಕ್ಕೆ ಹೆಸರುವಾಸಿ. ನಮ್ಮ ವನಿತೆಯರು ಆರಂಭಿಕ ಪಂದ್ಯದಲ್ಲೇ ತುಂಬಾ ಚೆನ್ನಾಗಿ ಆಡಿದ್ದಾರೆ. ಅವರ ಆಟ ನನಗೆ ಹೆಮ್ಮೆ ತರಿಸಿದೆ. ನಮ್ಮ ನಾಯಕಿ ಹರ್ಮನ್ ಅವರಿಗೆ ವಿಶೇಷ ಅಭಿನಂದನೆಗಳು. ಅವಳಂತೂ ಅದ್ಭುತವಾಗಿ ಆಡಿದ್ದಾಳೆ. ಅಮೆಲಿಯಾ ಕೆರ್ ಕೂಡಾ ತಮ್ಮ ಆಲ್‌ರೌಂಡ್ ಆಟದಿಂದ ಗಮನ ಸೆಳೆದಿದ್ದಾರೆʼ ಎಂದರು.
ಇದೇ ಸಂದರ್ಭದಲ್ಲಿ ಮೈದಾನದಲ್ಲಿ ಸೇರಿದ್ದ ಎಲ್ಲಾ ಪ್ರೇಕ್ಷಕರಿಗೂ ನೀತಾ ಅಂಬಾನಿ ವಿಶೇಷ ಧನ್ಯವಾದ ತಿಳಿಸಿದ್ದಾರೆ. ʻವನಿತಾ ತಂಡಗಳ ನಡುವಿನ ಆಟವನ್ನು ನೋಡಲು ಹೆಣ್ಣು-ಗಂಡು ಎಂಬ ಭೇಧವಿಲ್ಲದೇ ಅತಿ ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳು ಇಲ್ಲಿ ಸೇರಿದ್ದು ನಿಜಕ್ಕೂ ಅದ್ಭುತವೆನಿಸಿದೆʼ ಎಂದಿದ್ದಾರೆ.
ವನಿತಾ ಪಡೆಯನ್ನು ಬೆಂಬಲಿಸಿ:
ತಮ್ಮ ತಂಡದ ಅಭಿಮಾನಿಗಳಿಗೆ ವಿಶೇಷ ಧನ್ಯವಾದ ತಿಳಿಸಿರುವ ನೀತಾ ಅಂಬಾನಿ ʻನಮ್ಮ ವನಿತೆಯರಿಗೆ ಇನ್ನೂ ಹೆಚ್ಚಿನ ಬೆಂಬಲ ನೀಡುವ ಮೂಲಕ ಅವರಿಗೆ ಶಕ್ತಿ ತುಂಬೋಣ. ಈ ಸಂದರ್ಭದಲ್ಲಿ ತಮ್ಮ ಮೊದಲ ಡಬ್ಲೂಪಿಎಲ್ ಆಡಲಿರುವ ಎಲ್ಲಾ ತಂಡಗಳಿಗೂ ಶುಭ ಹಾರೈಸುತ್ತೇನೆʼ ಎಂದು ಶುಭಹಾರೈಸಿ ವನಿತೆಯರಿಗೆ ಶಕ್ತಿ ತುಂಬಿದ್ದಾರೆ.
ಇದನ್ನೂ ಓದಿ:ವನಿತಾ ಪ್ರೀಮಿಯರ್ ಲೀಗ್: ಡೆಲ್ಲಿಯ ಆಲ್ ರೌಂಡ್ ಆಟಕ್ಕೆ ಅಬ್ಬರಿಸದ ಆರ್ ಸಿಬಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Team India; ಅಶ್ವಿನ್ ಬದಲಿಯಾಗಿ ಟೀಂ ಇಂಡಿಯಾ ಸೇರಿದ ಕರ್ನಾಟಕ ಕರಾವಳಿ ಮೂಲದ ಸ್ಪಿನ್ನರ್
Kambli Health: ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಆರೋಗ್ಯ ಸ್ಥಿತಿ ಗಂಭೀರ!
INDvAUS: ಬಿಸಿಸಿಐ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ರಾ ಟ್ರಾವಿಸ್ ಹೆಡ್? Video
Cricket: ಚಾಂಪಿಯನ್ಸ್ ಟ್ರೋಫಿ ವೇಳಾಪಟ್ಟಿ ಅಂತಿಮ; ಭಾರತದ ಪಂದ್ಯಗಳಿಗೆ ಯುಎಇ ಆತಿಥ್ಯ
Champions Trophy, ಭಾರತ ಪ್ರವಾಸಕ್ಕೆ ಇಂಗ್ಲೆಂಡ್ ತಂಡ ಪ್ರಕಟ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ
Road Mishap: ಬೈಕ್- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು
Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು
Rule; 5, 8ನೇ ತರಗತಿಯಲ್ಲಿ ಫೈಲ್ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!
Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.