Gadkari; ಪೆಟ್ರೋಲ್ ಲೀಟರ್ ಗೆ 15 ರೂ.ಗೆ ಲಭ್ಯವಾಗುತ್ತೆ…ಆದರೆ; ಸಚಿವ ಗಡ್ಕರಿ ವಾದವೇನು?
Team Udayavani, Jul 5, 2023, 5:00 PM IST
ಜೈಪುರ: ಒಂದು ವೇಳೆ ಜನರು ಸರಾಸರಿ ಶೇ.60ರಷ್ಟು ಎಥೆನಾಲ್ ಮತ್ತು ಶೇ.40ರಷ್ಟು ವಿದ್ಯುತ್ ಬಳಕೆಯ ವಾಹನಗಳನ್ನು ಬಳಸಿದಲ್ಲಿ, ಮುಂಬರುವ ದಿನಗಳಲ್ಲಿ ಪೆಟ್ರೋಲ್ ಪ್ರತಿ ಲೀಟರ್ ಬೆಲೆ 15 ರೂಪಾಯಿಯಾಗಲಿದ್ದು, ಇದರಿಂದ ಜನರಿಗೆ ಲಾಭವಾಗುವ ದಿನ ದೂರವಿಲ್ಲ ಎಂದು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಬುಧವಾರ (ಜು.05) ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ಯಡಮೊಗೆ; ಕಾಲು ಸಂಕದಿಂದ ಆಯತಪ್ಪಿ ನದಿಗೆ ಬಿದ್ದು ವೃದ್ಧ ಮೃತ್ಯು
ರಾಜಸ್ಥಾನದ ಪ್ರತಾಪ್ ಗಢದಲ್ಲಿ ಸಭೆಯೊಂದನ್ನು ಉದ್ದೇಶಿಸಿ ಮಾತನಾಡಿದ ಅವರು, ದೇಶದಲ್ಲಿ ಎಥೆನಾಲ್ ಉತ್ಪಾದನಾ ವೇಗವನ್ನು ಹೆಚ್ಚಿಸಲಾಗುತ್ತಿದೆ. ಹೀಗಾಗಿ ಒಂದು ವೇಳೆ ಜನರು ಶೇ.60ರಷ್ಟು ಎಥೆನಾಲ್ ಚಾಲಿತ ಹಾಗೂ ಶೇ.40ರಷ್ಟು ವಿದ್ಯತ್ ಚಾಲಿತ ವಾಹನಗಳನ್ನು ಬಳಸಿದಲ್ಲಿ ನಂತರ ಪೆಟ್ರೋಲ್ ಪ್ರತಿ ಲೀಟರ್ ಗೆ 15 ರೂಪಾಯಿಗೆ ಲಭ್ಯವಾಗಲಿದೆ. ಇದರಿಂದ ಜನರಿಗೂ ಅನುಕೂಲವಾಗಲಿದೆ ಎಂದರು.
ಎಥೆನಾಲ್, ವಿದ್ಯುತ್ ಚಾಲಿತ ವಾಹನಗಳನ್ನು ಹೆಚ್ಚಾಗಿ ಬಳಕೆ ಮಾಡುವುದರಿಂದ ಮಾಲಿನ್ಯ ಮತ್ತು ಆಮದನ್ನು ಕಡಿಮೆ ಮಾಡಬಹುದಾಗಿದೆ. ರೈತರು ಎಥೆನಾಲ್ ಉತ್ಪಾದನೆಯತ್ತ ಹೆಚ್ಚು ಆಸಕ್ತಿ ಹೊಂದಿದ್ದು, ಇದರಿಂದ ರೈತರ ಆದಾಯ ಕೂಡಾ ದ್ವಿಗುಣಗೊಳ್ಳಲಿದೆ. ದೇಶಾದ್ಯಂತ ರೈತರನ್ನು ಇಂಧನ ಪೂರೈಕೆದಾರರನ್ನಾಗಿ ಮಾಡಬೇಕೆಂಬುದು ಕೇಂದ್ರ ಸರ್ಕಾರದ ಆಶಯವಾಗಿದೆ ಎಂದು ಗಡ್ಕರಿ ಹೇಳಿದರು.
ರೈತರು ಉತ್ಪಾದಿಸಿದ ಎಥೆನಾಲ್ ಚಾಲಿತ ಹೊಸ ಕಾರುಗಳನ್ನು ಬಿಡುಗಡೆಗೊಳಿಸುವ ಯೋಜನೆ ಹೊಂದಿರುವುದಾಗಿ ತಿಳಿಸಿರುವ ಸಚಿವ ಗಡ್ಕರಿ ಅವರು, ಈ ವಾಹನಗಳು ಶೇ.60ರಷ್ಟು ಎಥೆನಾಲ್ ಮತ್ತು ಶೇ.40ರಷ್ಟು ವಿದ್ಯುತ್ ನಿಂದ ಸಂಚಾರ ನಡೆಸಲಿದೆ. ಈ ನಿಟ್ಟಿನಲ್ಲಿ ಪೆಟ್ರೋಲ್ ಬೆಲೆ ಗಣನೀಯವಾಗಿ ಇಳಿಕೆಯಾಗಲಿದೆ ಎಂದು ತಿಳಿಸಿದರು.
ಮುಂಬರುವ ದಿನಗಳಲ್ಲಿ ಬಜಾಜ್, ಟಿವಿಎಸ್, ಹೀರೋ ಕಂಪನಿಗಳು ಶೇ.100ರಷ್ಟು ಎಥೆನಾಲ್ ಚಾಲಿತ ಸ್ಕೂಟರ್ ಗಳನ್ನು ತಯಾರಿಸಲಿವೆ ಎಂದು ಸಚಿವ ನಿತಿನ್ ಗಡ್ಕರಿ ಈ ಸಂದರ್ಭದಲ್ಲಿ ಮಾಹಿತಿ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Chikkamagaluru: ನಾವು ನಡೆದಿದ್ದೇ ದಾರಿ, ನಡಿ ಮಗಾ….ಮರಿ ಆನೆಗೆ ನಡೆಯಲು ಕಲಿಸಿದ ತಾಯಿ ಆನೆ
Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Someshwara ದೇಗುಲ: ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ ಸಂಪನ್ನ
Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.