ಐಸಿಸಿ ಎಲೈಟ್ ಪ್ಯಾನಲ್‌ಗೆ ನಿತಿನ್ ಮೆನನ್ ಸೇರ್ಪಡೆ
ಎಲೈಟ್ ಪ್ಯಾನಲ್‌ನ ಕಿರಿಯ ತೀರ್ಪುಗಾರ ; ಭಾರತದ ಕೇವಲ ಮೂರನೇ ಅಂಪಾಯರ್
Team Udayavani, Jun 30, 2020, 5:45 AM IST
ದುಬಾೖ: ಭಾರತದ ತೀರ್ಪುಗಾರ ನಿತಿನ್ ಮೆನನ್ ಸೋಮವಾರ ಐಸಿಸಿ ಅಂಪಾಯರ್‌ಗಳ ಎಲೈಟ್ ಪ್ಯಾನಲ್‌ಗೆ ಸೇರ್ಪಡೆಗೊಂಡರು. ಅವರು 2020-21ರ ಋತುವಿನಲ್ಲಿ ಇಂಗ್ಲೆಂಡಿನ ನಿಗೆಲ್ ಲಾಂಗ್ ಸ್ಥಾನವನ್ನು ತುಂಬಲಿದ್ದಾರೆ.
36 ವರ್ಷದ ನಿತಿನ್ ಮೆನನ್ ಐಸಿಸಿ ಎಲೈಟ್ ಪ್ಯಾನಲ್‌ಗೆ ಸೇರ್ಪಡೆಗೊಂಡ ಅತ್ಯಂತ ಕಿರಿಯ ಅಂಪಾಯರ್ ಎಂಬುದು ವಿಶೇಷ. ಅವರು ಈವರೆಗೆ 3 ಟೆಸ್ಟ್, 24 ಏಕದಿನ ಮತ್ತು 16 ಟಿ20 ಪಂದ್ಯಗಳಲ್ಲಿ ಕಾರ್ಯ ನಿಭಾಯಿಸಿದ್ದಾರೆ.
ನಿತಿನ್ ಮೆನನ್ ಎಲೈಟ್ ಪ್ಯಾನಲ್‌ನಲ್ಲಿ ಕಾಣಿಸಿಕೊಂಡ ಭಾರತದ ಕೇವಲ 3ನೇ ಅಂಪಾಯರ್. ಇದಕ್ಕೂ ಮುನ್ನ ಮಾಜಿ ನಾಯಕ ಎಸ್. ವೆಂಕಟರಾಘವನ್ ಮತ್ತು ಸುಂದರಂ ರವಿ ಈ ಗೌರವ ಸಂಪಾ ದಿಸಿದ್ದರು. ಕಳೆದ ವರ್ಷ ರವಿ ಅವರನ್ನು ಈ ಪ್ಯಾನಲ್‌ನಿಂದ ಉಚ್ಚಾಟಿಸಲಾಗಿತ್ತು.
“ವಿಶ್ವದ ಖ್ಯಾತ ಅಂಪಾಯರ್ ಮತ್ತು ರೆಫ್ರಿಗಳ ಜತೆ ಕರ್ತವ್ಯ ನಿಭಾಯಿಸುವುದು ನನ್ನ ಕನಸಾಗಿತ್ತು. ಇದಿನ್ನು ನನಸಾಗಲಿದೆ’ ಎಂಬ ನಿತಿನ್ ಮೆನನ್ ಅವರ ಹೇಳಿಕೆಯನ್ನು ಐಸಿಸಿ ಪ್ರಕಟಿಸಿದೆ.
ಕರ್ತವ್ಯ ವ್ಯಾಪ್ತಿ ವಿಸ್ತಾರ
ಆಯ್ಕೆ ಸಮಿತಿ ಸದಸ್ಯರಾದ ಐಸಿಸಿ ಜನರಲ್ ಮ್ಯಾನೇಜರ್ ಜೆಫ್ ಅಲ ಡೈìಸ್, ವೀಕ್ಷಕ ವಿವರಣಕಾರ ಸಂಜಯ್ ಮಾಂಜ್ರೆàಕರ್, ಮ್ಯಾಚ್ ರೆಫ್ರಿ ರಂಜನ್ ಮದುಗಲ್ಲೆ ಮತ್ತು ಡೇವಿಡ್ ಬೂನ್ ಸೇರಿಕೊಂಡು ನಿತಿನ್ ಮೆನನ್ ಅವರ ಹೆಸರನ್ನು ಸೂಚಿಸಿದರು. ಇದಕ್ಕೂ ಮುನ್ನ ಮೆನನ್ ಎಮಿರೇಟ್ಸ್ ಐಸಿಸಿ ಇಂಟರ್‌ನ್ಯಾಶನಲ್ ಪ್ಯಾನಲ್‌ನ ಸದಸ್ಯರಾಗಿದ್ದರು.
ಇದೀಗ ಎಲೈಟ್ ಪ್ಯಾನಲ್‌ಗೆ ಸೇರ್ಪಡೆ ಯಾದ್ದರಿಂದ ನಿತಿನ್ ಮೆನನ್ ಅವರ ಕರ್ತವ್ಯ ವ್ಯಾಪ್ತಿ ವಿಸ್ತಾರಗೊಳ್ಳಲಿದೆ. ಮುಂದಿನ ವರ್ಷದ ಆ್ಯಶಸ್ ಸರಣಿಯಲ್ಲಿ ಅಂಪಾಯರಿಂಗ್ ನಡೆಸುವ ಅವಕಾಶವೂ ಒದಗಿ ಬರಬಹುದು. ಆದರೆ ಕೋವಿಡ್- 19 ಕಾರಣ ಐಸಿಸಿ ಸ್ಥಳೀಯ ಅಂಪಾಯರ್‌ಗಳಿಗೆ ಆದ್ಯತೆ ನೀಡಿದರೆ ಈ ಅವಕಾಶ ತಪ್ಪಲಿದೆ.
ಆಟಕ್ಕೆ ಗುಡ್‌ಬೈ
ಆರಂಭದಲ್ಲಿ ಕ್ರಿಕೆಟ್ ಆಟಗಾರನಾಗಿದ್ದ ನಿತಿನ್ ಮೆನನ್, ಒಂದೇ ವರ್ಷದಲ್ಲಿ ಇದಕ್ಕೆ ಗುಡ್‌ಬೈ ಹೇಳಿದ್ದರು. ಬಳಿಕ ಅಂಪಾಯರ್ ಆಗುವತ್ತ ಒಲವು ತೋರಿದರು. ಬಿಸಿಸಿಐ ಆಯೋಜಿಸಿದ ಅನೇಕ ಪಂದ್ಯಗಳಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಂಡರು.
ನಿತಿನ್ ಮೆನನ್ ಮೂಲತಃ ಮಧ್ಯ ಪ್ರದೇಶದವರು. ರಾಜ್ಯದ ಪರ ಕೇವಲ 2 ಲಿಸ್ಟ್ ಎ ಪಂದ್ಯಗಳನ್ನಷ್ಟೇ ಆಡಿದ್ದಾರೆ. ಇವರ ತಂದೆ ಮಾಜಿ ಅಂತಾರಾಷ್ಟ್ರೀಯ ಅಂಪಾಯರ್ ನರೇಂದ್ರ ಮೆನನ್. 2006ರಲ್ಲಿ, ಬಿಸಿಸಿಐ 10 ವರ್ಷಗಳ ಬಳಿಕ ನಡೆಸಿದ ಅಂಪಾಯರಿಂಗ್ ಪರೀಕ್ಷೆಯಲ್ಲಿ ನಿತಿನ್ ಮೆನನ್ ತೇರ್ಗಡೆಯಾಗಿ ಈ ಎತ್ತರಕ್ಕೇರಿದ್ದಾರೆ.
“ಆರಂಭದಲ್ಲಿ ಕ್ರಿಕೆಟಿಗನಾಗುವತ್ತ ಒಲವು ಮೂಡಿದ್ದು ನಿಜ. ಆದರೆ ಒಂದೇ ವರ್ಷದಲ್ಲಿ ಆಟದಿಂದ ಹಿಂದೆ ಸರಿದು ಅಂಪಾಯರ್ ಆಗುವತ್ತ ಮುಂದುವರಿದೆ. ಇದಕ್ಕೆ ತಂದೆಯವರೂ ಪ್ರೋತ್ಸಾಹ ನೀಡಿದರು. ಯಶಸ್ಸು ಕೈಹಿಡಿದರೆ ಇದನ್ನೇ ವೃತ್ತಿಯಾಗಿ ತೆಗೆದುಕೊಳ್ಳುವಂತೆ ಸೂಚಿ ಸಿದರು. 2006ರಲ್ಲಿ ಬಿಸಿಸಿಐ ನಡೆಸಿದ ಅಂಪಾಯರ್ ಎಕ್ಸಾಮ್‌ನಲ್ಲಿ ತೇರ್ಗಡೆ ಯಾದೆ. ಈಗ ಅದೃಷ್ಟದ ಬಾಗಿಲು ತೆರೆ ದಿದೆ’ ಎಂಬುದಾಗಿ ನಿತಿನ್ ಮೆನನ್ ಹೇಳಿದರು.
ಐಸಿಸಿ ಎಲೈಟ್ ಪ್ಯಾನಲ್‌ನ ಅಂಪಾಯರ್
“ಅಲೀಮ್ ದಾರ್, ಕುಮಾರ ಧರ್ಮಸೇನ, ಮರೈಸ್ ಎರಾಸ್ಮಸ್, ಕ್ರಿಸ್ ಗಫಾನಿ, ಮೈಕಲ್ ಗಾಫ್, ರಿಚರ್ಡ್ ಇಲ್ಲಿಂಗ್‌ವರ್ತ್, ರಿಚರ್ಡ್ ಕ್ಯಾಟಲ್‌ಬರೊ, ನಿತಿನ್ ಮೆನನ್, ಬ್ರೂಸ್ ಆಕ್ಸೆನ್‌ಫೋರ್ಡ್, ಪಾಲ್ ರೀಫೆಲ್, ರಾಡ್ ಟ್ಯುಕರ್, ಜೋಯೆಲ್ ವಿಲ್ಸನ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gambhir; ಕೊಹ್ಲಿ, ರೋಹಿತ್ ಶರ್ಮ ಟೆಸ್ಟ್ ಭವಿಷ್ಯದ ಬಗ್ಗೆ ಗಂಭೀರ್ ಪ್ರತಿಕ್ರಿಯೆ
BGT ಸೋಲು; ಇಂಗ್ಲೆಂಡ್ ವಿರುದ್ದದ ಸರಣಿಗೆ ಕೊಹ್ಲಿ ಸ್ಥಾನ ಉಳಿಸಿಕೊಳ್ಳಲು ಸಾಧ್ಯವೇ?
BGT; ಬಾರ್ಡರ್-ಗಾವಸ್ಕರ್ ಟ್ರೋಫಿ ವಿತರಣೆಗೆ ಗಾವಸ್ಕರ್ ಗೆ ಆಹ್ವಾನವಿಲ್ಲ! ದಿಗ್ಗಜನ ಬೇಸರ
Sydney: ಆಸ್ಟ್ರೇಲಿಯಾ ಪ್ರೇಕ್ಷಕರಿಗೆ ಸ್ಯಾಂಡ್‌ಪೇಪರ್ ಕೇಸ್ ನೆನಪು ಮಾಡಿದ ವಿರಾಟ್|Video
World Test Championship: ಭಾರತದ ಕನಸು ಛಿದ್ರ; ಆಸೀಸ್ ಫೈನಲ್ ಸ್ಥಾನ ಭದ್ರ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
RJD ಜೊತೆ ಮೈತ್ರಿ ಮಾಡಿಕೊಂಡು 2 ಬಾರಿ ತಪ್ಪೆಸಗಿದ್ದೆ: ನಿತೀಶ್ ಕುಮಾರ್
Kanaka Jayanthi: ಮುಂದಿನ ಮೂರುವರೆ ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ: ಸಚಿವ ಭೈರತಿ
Theatre stampede case: ಪೊಲೀಸರ ಮುಂದೆ ಹಾಜರಾದ ಅಲ್ಲು ಅರ್ಜುನ್, ಆಸ್ಪತ್ರೆಗೆ ಭೇಟಿ ರದ್ದು
Gambhir; ಕೊಹ್ಲಿ, ರೋಹಿತ್ ಶರ್ಮ ಟೆಸ್ಟ್ ಭವಿಷ್ಯದ ಬಗ್ಗೆ ಗಂಭೀರ್ ಪ್ರತಿಕ್ರಿಯೆ
Kasaragod: ಬಟ್ಟಿಪದವು; ಪ್ಲೈವುಡ್ ಮಿಲ್ಲಿಗೆ ಬೆಂಕಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.