ಇನ್ನೆರಡು ತಿಂಗಳು ಸಮಾರಂಭಗಳು ಬೇಡ : ಶಾಸಕ ಡಾ| ಯತೀಂದ್ರ ಸಿದ್ದರಾಮಯ್ಯ
Team Udayavani, Apr 18, 2021, 2:00 AM IST
ವರುಣಾ ಕ್ಷೇತ್ರದಲ್ಲಿ ಈ ವರಗೆ ಅಂಕೆ ಮೀರಿ ಕೊರೊನಾ ಪ್ರಕರಣಗಳು ವರದಿಯಾಗಿಲ್ಲ. ಎಲ್ಲರೂ ಕಡ್ಡಾಯವಾಗಿ ವ್ಯಾಕ್ಸಿನ್ ಪಡೆಯಬೇಕು. ಲಸಿಕೆ ಪಡೆದರೂ ಕೊರೊನಾ ಬರಬಹುದು, ಆದರೆ ಲಸಿಕೆ ಪಡೆದವರ ಮೇಲೆ ದುಷ್ಪರಿಣಾಮ ಬೀರುವುದಿಲ್ಲ. ಹೀಗಾಗಿ ರಾಜ್ಯದ ಎಲ್ಲರೂ ಲಸಿಕೆ ಹಾಕಿಸಿಕೊಳ್ಳಬೇಕು ಮತ್ತು ಮಾಸ್ಕ್ ಅನ್ನು ಕಡ್ಡಾಯವಾಗಿ ಧರಿಸಬೇಕು. ಈ ಮೂಲಕ ಎಲ್ಲರೂ ಕೊರೊನಾದ ಗಂಭೀರತೆಯಿಂದ ಪಾರಾಗಬಹುದು.
ರಾಜ್ಯ ಸರಕಾರ ತತ್‌ಕ್ಷಣ ಕಾಲೇಜು ಸೇರಿದಂತೆ ಸಿನೆಮಾ ಮಂದಿರ, ಮಾಲ್, ಮಾರ್ಕೆಟ್, ಸಂತೆ, ಛತ್ರ ಸೇರಿದಂತೆ ಸಭೆ ಸಮಾರಂಭಗಳನ್ನು ಮುಲಾಜಿಲ್ಲದೆ ಬಂದ್ ಮಾಡಲಿ. ಯಾವುದೇ ಸಭೆ ಸಮಾರಂಭಗಳಿಗೆ ಇನ್ನೆರಡು ತಿಂಗಳು ಅವಕಾಶ ನೀಡಬಾರದು. ಮದುವೆಗಳಿಗೆ 200 ಜನರ ಬದಲು ಕೇವಲ 50 ಜನರಿಗೆ ಮಾತ್ರ ಅವಕಾಶ ಕೊಡಬೇಕು. ಜತೆಗೆ ಕೊರೊನಾ ನೆಗೆಟಿವ್ ಇದ್ದವರಿಗೆ ಮಾತ್ರ ಮದುವೆಯಲ್ಲಿ ಭಾಗಿಯಾಗುವಂತೆ ಮಾಡಬೇಕು. ಯಾವುದೇ ಕಾಟಾಚಾರದ ಕ್ರಮಗಳು ಈ ಸಂದರ್ಭದಲ್ಲಿ ಪ್ರಯೋಜನಕ್ಕೆ ಬರಲಾರದು.
ಕೊರೊನಾ ಹಾಟ್ ಸ್ಪಾಟ್ ಗುರುತಿಸಿ ರೋಗಿಗಳಿಗೆ ಹಾಸಿಗೆ, ಔಷಧ ಮತ್ತು ಆಕ್ಸಿಜಿನ್ ಕಾಯ್ದಿರಿಸಬೇಕು. ಇನ್ನೆರಡು ತಿಂಗಳ ಕಾಲದ ರೋಗಿಗಳ ನಿಖರವಾದ ಅಂದಾಜು ಮಾಡಿ ಅವರ ಶುಶ್ರೂಷೆಗೆ ಎಲ್ಲ ರೀತಿಯ ವ್ಯವಸ್ಥೆ ಮಾಡಬೇಕು. ಇವೆಲ್ಲದಕ್ಕಿಂತ ಕಳೆದ ಬಾರಿ ಕೊರೊನಾ ಗಂಭೀರತೆ ನೋಡಿದ್ದರೂ, ನಮ್ಮ ಸರಕಾರ ಪಾಠ ಕಲಿತಂತೆ ಕಾಣಿಸುತ್ತಿಲ್ಲ.
ಅಕ್ಕ ಪಕ್ಕದ ರಾಜ್ಯಗಳಿಂದ ಆಗಮಿಸುವವರನ್ನು ಗಡಿಯಲ್ಲೇ ಪರಿಕ್ಷಿಸಿ ಅವರನ್ನು ಒಳ ಬರಮಾಡಿಕೊಳ್ಳುವ ವ್ಯವಸ್ಥೆ ಆಗಬೇಕು. ಹಾಗೆಯೇ ಕೊರೊನಾ ಹೆಚ್ಚಾಗಿರುವ ನಗರಗಳಿಂದ ಹೊರಹೋಗುವವರಿಗೂ ಇದು ಅನ್ವಯವಾಗಬೇಕು. ಕೊರೊನಾ ಪಾಸಿಟಿವ್ ಬಂದಿದ್ದರೂ, ರೋಗಲಕ್ಷಣಗಳಿಲ್ಲದವರಿಗೆ ಹೋಂ ಐಸೋಲೇಶನ್ ವ್ಯವಸ್ಥೆ ಕಲ್ಪಿಸಿ ಮನೆಯಿಂದ ಅವರು ಹೊರಬಾರದಂತೆ ನೋಡಿಕೊಳ್ಳಬೇಕು. ಕೇವಲ ಸರಕಾರದಿಂದ ಮಾತ್ರ ಕೊರೊನಾ ನಿಯಂತ್ರಣ ಸಾಧ್ಯವಿಲ್ಲ. ಸರಕಾರ ಹೇಳಿದ ಕ್ರಮಗಳನ್ನು ಜನರೂ ಚಾಚೂ ತಪ್ಪದೇ ಪಾಲಿಸಿದಾಗ ಮಾತ್ರ ಈ ಮಹಾಮಾರಿಯ ನಿಯಂತ್ರಣ ಸಾಧ್ಯ.
ಕೊರೊನಾ 2ನೇ ಅಲೆ ಪ್ರಬಲವಾಗಿ ಅಪ್ಪಳಿಸುತ್ತದೆ ಎಂಬ ಅರಿವಿದ್ದರೂ, ಅದರ ನಿಯಂತ್ರಣಕ್ಕೆ ಸರಕಾರ ಮನಗೊಡದೆ ಮಾಲ್. ಸಿನೆಮಾ ಮಂದಿರ, ಛತ್ರ, ಜಾತ್ರೆ ಹಬ್ಬಗಳಿಗೆ ಅವಕಾಶ ನೀಡಿದ್ದೂ ಅಲ್ಲದೆ ವಿವಿಧ ಪಕ್ಷಗಳ ರಾಜಕೀಯದ ಸಭೆಗೂ ಸಹ ಅನುಮತಿ ನೀಡಿ ಭಾರೀ ತಪ್ಪು ಮಾಡಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BBMP ಸೇರಿ 11 ಮಸೂದೆ ಮಂಡನೆ? ಡಿ. 9ರ ಬೆಳಗಾವಿ ಅಧಿವೇಶನದಲ್ಲಿ ಮಂಡನೆಗೆ ನಿರ್ಣಯ
Karnataka Govt,.: ಸಂಪುಟ ಹುತ್ತಕ್ಕೆ ಈಗಲೇ ಕೈಹಾಕಲು ಸಿಎಂ ನಿರಾಸಕ್ತಿ?
Karnataka Govt.,: ದಿಲ್ಲಿಯಲ್ಲಿ ಸಂಪುಟ ರಹಸ್ಯ; ಹೈಕಮಾಂಡ್ ಭೇಟಿ ಸಾಧ್ಯತೆ
DA Hike: ಸರಕಾರಿ ನೌಕರರಿಗೆ ಶೇ. 2 ತುಟ್ಟಿ ಭತ್ಯೆ ಹೆಚ್ಚಳ… ಸಿಎಂಗೆ ಅಭಿನಂದನೆ
DK Shivakumar: ಮಹದಾಯಿ, ಮೇಕೆದಾಟು ಯೋಜನೆ ಅನುಮತಿಗೆ ದಿಲ್ಲಿಯಲ್ಲಿ ಡಿಕೆಶಿ ಲಾಬಿ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.