ಲಸಿಕೆ ಪಡೆಯಲು ಬೇಡ ಹಿಂಜರಿಕೆ!
Team Udayavani, Jan 22, 2021, 7:20 AM IST
ಭಾರತದಲ್ಲಿ ವ್ಯಾಪಕ ಲಸಿಕೆ ಪ್ರಕ್ರಿಯೆ ಆರಂಭವಾಗಿದೆ. ಇದರ ಬೆನ್ನಲ್ಲೇ ಲಸಿಕೆಯ ಬಗ್ಗೆ ಅನುಮಾನಗಳೂ ಹುಟ್ಟಿಕೊಂಡಿವೆ. ಅದರಲ್ಲೂ ರಾಜ್ಯದಲ್ಲಿ ಲಸಿಕೆ ಪಡೆದ ಇಬ್ಬರು ಮೃತರಾದ ಘಟನೆ ವರದಿಯಾಗಿರುವುದು ಆತಂಕ ಹೆಚ್ಚಿಸಿದೆ. ಆದರೆ ಇದಕ್ಕೆ ಯಾವುದೇ ಪುರಾವೆಗಳಿಲ್ಲ. ಯಾವುದೇ ಲಸಿಕೆಯಾದರೂ ಅದನ್ನು ಪಡೆದಾಗ ಕೆಲವರಲ್ಲಿ ಸಣ್ಣ ಮಟ್ಟದ ಅಡ್ಡಪರಿಣಾಮಗಳು ಕಾಣಿಸಿಕೊಳ್ಳುವುದು ಸಹಜ. ಹೀಗಾಗಿ ಭಯಪಡಬೇಡಿ ಎಂದು ಪರಿಣತರು ಹೇಳುತ್ತಿದ್ದಾರೆ.
ಕೋವಿಡ್ 19 ಲಸಿಕೆಗಳು ಎಷ್ಟು ಸುರಕ್ಷಿತ?
ಅಮೆರಿಕವೊಂದರಲ್ಲೇ ಇದುವರೆಗೂ 1.3 ಕೋಟಿ ಜನರಿಗೆ ಲಸಿಕೆ ನೀಡಲಾಗಿದ್ದರೆ ಭಾರತದಲ್ಲಿ ಈ ಸಂಖ್ಯೆ 4 ಲಕ್ಷ ಸಮೀಪಿಸುತ್ತಿದೆ. ಜಾಗತಿಕವಾಗಿ ಇದುವರೆಗೂ 4 ಕೋಟಿ ಜನರು ಲಸಿಕೆಯನ್ನು ಪಡೆದಿದ್ದಾರೆ. ಬಹುತೇಕ ದೇಶಗಳಲ್ಲೂ ಲಸಿಕೆ ಪಡೆದವರಲ್ಲಿ ಕೆಲವರಿಗೆ ತಲೆನೋವು, ಮಂದ ಜ್ವರ, ಇಂಜೆಕ್ಷನ್ ನೀಡಿದ ಜಾಗದಲ್ಲಿ ಚರ್ಮ ಕೆಂಪಾದಂಥ ಲಕ್ಷಣಗಳು ಕಾಣಿಸಿಕೊಂಡಿರುವುದನ್ನು ಬಿಟ್ಟರೆ ಗಂಭೀರ ಪರಿಣಾಮಗಳೇನೂ ಆಗಿಲ್ಲ. ಭಾರತದ ವಿಚಾರಕ್ಕೇ ಬರುವುದಾದರೆ ಮಂಗಳವಾರದ ವೇಳೆಗೆ ಲಸಿಕೆ ಪಡೆದ 3.8 ಲಕ್ಷ ಮಂದಿಯಲ್ಲಿ ಕೇವಲ 580 ಮಂದಿಯಲ್ಲಿ ಮಾತ್ರ ಪ್ರತಿಕೂಲ ಪರಿಣಾಮಗಳು ಕಾಣಿಸಿಕೊಂಡಿವೆ ಎಂದು ಕೇಂದ್ರ ಸರಕಾರ ಹೇಳಿದೆ. ಅವೂ ಸಹ, ಜ್ವರ, ತಲೆ ನೋವಿನಂಥ ಸಮಸ್ಯೆಗಳೇ ಹೊರತು, ಗಂಭೀರ ಪರಿಣಾಮಗಳಲ್ಲ.
ಎಲ್ಲಾ ಲಸಿಕೆಗಳಲ್ಲೂ ಸಹಜ
ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಇಂದು ವಿವಿಧ ರೋಗಗಳಿಗೆ ಬಳಕೆಯಾಗುತ್ತಿರುವ ಲಸಿಕೆಗಳೆಲ್ಲವೂ ಚಿಕ್ಕಪುಟ್ಟ ಪ್ರಮಾಣದ ಅಡ್ಡಪರಿಣಾಮ ಉಂಟುಮಾಡುತ್ತವೆ. ದಡಾರ, ಮಂಪ್ಸ್ (ಗದ್ದಬಾವು), ರುಬೆಲ್ಲ (ಮೈಮೇಲೆ ಕೆಂಪು ದದ್ದುಗಳೇಳುವ ಸೋಂಕು ರೋಗ)ಗಾಗಿ ನೀಡುವ ಎಂಎಂಆರ್ ಲಸಿಕೆ ಪ್ರಕ್ರಿಯೆಯ ವೇಳೆಯಲ್ಲೂ 10 ಪ್ರತಿಶತ ಜನರಿಗೆ ನೋವು, ಇಂಜೆಕ್ಷನ್ ಕೊಟ್ಟ ಜಾಗದಲ್ಲಿ ಊತ ಕಾಣಿಸಿಕೊಳ್ಳಬಹುದು, ಇನ್ನು 5-15 ಪ್ರತಿ ಶತ ಜನರಲ್ಲಿ ಜ್ವರ ಕಾಣಿಸಿಕೊಳ್ಳುತ್ತದೆ. ಪೊಲೀಯೋ ಲಸಿಕೆಯ ವಿಚಾರಕ್ಕೆ ಬಂದರೆ, ಕೇವಲ 1 ಪ್ರತಿಶತ ಮಕ್ಕಳಿಗೆ ಮಾತ್ರ ಜ್ವರ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಹೀಗಾಗಿ ಕೋವಿಡ್-19 ಲಸಿಕೆ ಪಡೆದಾಗಲೂ ಇಂಥ ಲಕ್ಷಣಗಳು ಕಾಣಿಸಿಕೊಂಡರೆ ಆತಂಕ ಪಡುವ ಅಗತ್ಯವಿಲ್ಲ ಎಂದೇ ಪರಿಣತರು ಹೇಳುತ್ತಾರೆ. ಜಗತ್ತಿನಾದ್ಯಂತ ಸಾಮಾನ್ಯವಾಗಿ ನೀಡಲಾಗುವ ಲಸಿಕೆಗಳಲ್ಲಿ, ಕೆಲವರಲ್ಲಿ ಗಂಭೀರ ಪರಿಣಾಮಗಳು ಕಾಣಿಸಿಕೊಳ್ಳುತ್ತವಾದರೂ ಅವು ಅಪರೂಪದಲ್ಲಿ ಅಪರೂಪ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Viral: ಇದು ಇರುವೆಗಳ ಎಂಜಿನಿಯರಿಂಗ್ ಕೌಶಲ್ಯ! ನೀರು ದಾಟಲು ಇರುವೆಗಳ ಸೇತುವೆ ನಿರ್ಮಾಣ
Trump ಹೆಬ್ಬಯಕೆ: ಗ್ರೀನ್ ಲ್ಯಾಂಡ್ ಖರೀದಿಸಲು ಟ್ರಂಪ್ ಯಾಕೆ ಪ್ರಯತ್ನಿಸುತ್ತಿದ್ದಾರೆ?
Bhopal: ಮಧ್ಯಪ್ರದೇಶದಲ್ಲೀಗ ವಿಷ ತ್ಯಾಜ್ಯ ಅಪಾಯ
Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್ ನಿಶ್ಶಬ್ದ
ಜಿ.ಪಂ.,ತಾ.ಪಂ. ಚುನಾವಣೆ ವಿಳಂಬಕ್ಕೆ ಸರಕಾರವೇ ನೇರ ಹೊಣೆ, ನಾವು ಚುನಾವಣೆಗೆ ಸಿದ್ಧ: ಆಯೋಗ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.