ಹಿಂದೂಗಳ ಪರವಾದ ಯಾವುದೇ ಸರ್ಕಾರ ಇಲ್ಲ: ವಿಜಯ್ ರೇವಣ್ಕರ್
ಜಗತ್ತಿನಲ್ಲಿ 157 ಕ್ರೈಸ್ತ , 52 ಮುಸ್ಲಿಂ, 12 ಬೌದ್ಧ, ಹಾಗೂ 1 ಯಹೂದಿ ರಾಷ್ಟ್ರಗಳಿವೆ...
Team Udayavani, Feb 3, 2023, 2:02 PM IST
ತೀರ್ಥಹಳ್ಳಿ : ಜಗತ್ತಿನಲ್ಲಿ 157 ಕ್ರೈಸ್ತ , 52 ಮುಸ್ಲಿಂ, 12 ಬೌದ್ಧ, ಹಾಗೂ 1 ಯಹೂದಿ ರಾಷ್ಟ್ರಗಳಿವೆ. ಆದರೆ ಹಿಂದೂ ರಾಷ್ಟ್ರ ಎಂದು ಹೇಳುವ ನಮ್ಮ ರಾಷ್ಟ್ರವನ್ನು ಹಿಂದೂ ರಾಷ್ಟ್ರ ಎಂದು ಯಾಕೆ ಘೋಷಣೆ ಮಾಡುವುದಿಲ್ಲ. ಆದಷ್ಟು ಬೇಗ ನಮ್ಮ ರಾಷ್ಟ್ರವನ್ನು ಹಿಂದೂ ರಾಷ್ಟ್ರ ಎಂದು ಘೋಷಣೆ ಮಾಡಬೇಕು ಎಂದು ಹಿಂದೂ ಜನಜಾಗೃತಿ ಸಮಿತಿಯ ಸಮನ್ವಯಕರರಾದ ವಿಜಯ್ ರೇವಣ್ಕರ್ ಆಗ್ರಹಿಸಿದರು.
ಶುಕ್ರವಾರ ಪಟ್ಟಣದ ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನೆಡೆಸಿ ಮಾತನಾಡಿ, ಭಾರತದಲ್ಲಿ ಹಿಂದೂಗಳ ಮೇಲೆ ಶೋಷಣೆ, ಹಿಂದೂ ಧರ್ಮದ ವಿರುದ್ಧ ಪಿತೂರಿ, ಮತಾಂತರ, ಲವ್ ಜಿಹಾದ್ ನಂತಹ ಷಡ್ಯಂತ್ರಗಳು ನೆಡೆಯುತ್ತಿದೆ ಹಾಗೂ ಇಡೀ ದೇಶವನ್ನು ಜಿಹಾದಿ ಮಾಡುವ ಕೆಲಸ ನೆಡೆಯುತ್ತಿದೆ ಈ ಕಾರಣಕ್ಕೆ ಫೆ.5 ರ ಭಾನುವಾರ ಗಾಯತ್ರಿ ಮಂದಿರದಲ್ಲಿ ಹಿಂದೂ ರಾಷ್ಟ್ರ ಜಾಗೃತಿ ಸಭೆ ನೆಡೆಯಲಿದೆ ಎಂದರು.
ಹಿಂದೂಗಳ ಪರವಾದ ಯಾವುದೇ ಸರ್ಕಾರ ಇಲ್ಲ
ಹಿಂದೂ ದೇವಸ್ಥಾನವನ್ನು ಮಾತ್ರ ಸರ್ಕಾರಗಳು ವಶ ಪಡಿಸಿಕೊಳ್ಳುತ್ತದೆ, ಮಸೀದಿ, ಚರ್ಚ್ ವಶಪಡಿಸಿಕೊಳ್ಳುವುದಿಲ್ಲ. ದೇವಸ್ಥಾನಗಳ ಹಣವನ್ನು ಸರ್ಕಾರ ತೆಗೆದುಕೊಂಡು ಹೋಗುತ್ತದೆ ಆದರೆ ಮಸೀದಿ, ಚರ್ಚ್ ಗಳ ಹಣವನ್ನು ಯಾಕೆ ತೆಗೆದುಕೊಳ್ಳುವುದಿಲ್ಲ. ದೇವಸ್ಥಾನಗಳಲ್ಲಿ ಪೂಜೆ ಮಾಡುವ ಅರ್ಚಕರು ಸಂಬಳಕ್ಕೆ ಅಲೆಯಬೇಕಿದೆ. ಹಿಂದೂಗಳಿಗೆ ಅನ್ಯಾಯವಾಗದೆ ಎಲ್ಲರಿಗೂ ಸಮಾನ ನ್ಯಾಯ ಸಿಗಬೇಕು ಎಂದರು.
ಕೆ. ಎಸ್. ಭಗವಾನ್ ಶ್ರೀ ರಾಮಚಂದ್ರನ ಬಗ್ಗೆ ಸೀತಾ ಮಾತೆಯ ಬಗ್ಗೆ ಅಶ್ಲೀಲವಾಗಿ ಮಾತನಾಡುತ್ತಾರೆ. ಅವರಿಗೆ ಶಿಕ್ಷೆ ಎನ್ನುವುದೇ ಇಲ್ಲ. ಆದರೆ ಹಿಂದೂ ಪರವಾಗಿ ಮಾತನಾಡುವ ಹರ್ಷ, ಕಮಲೇಶ್ ತಿವಾರಿ ಮುಂತಾದ ಹಿಂದೂ ನಾಯಕರ ಹತ್ಯೆಯಾಗುತ್ತದೆ. ಯಾಕೆ ಹಿಂದೂ ಧಾರ್ಮಿಕ ಭಾವನೆಗಳಿಗೆ ಬೆಲೆ ಇಲ್ಲವಾ ? ಇಂತಹ ಎಷ್ಟೋ ಸಮಸ್ಯೆಗಳಿಗೆ ಪರಿಹಾರವೆಂದರೆ ಭಾರತವನ್ನು ಹಿಂದೂ ರಾಷ್ಟ್ರ ಎಂದು ಸ್ಥಾಪಿಸಬೇಕಾಗಿದೆ ಎಂದರು.
ಪತ್ರಿಕಾಗೋಷ್ಟಿಯಲ್ಲಿ ಕೇರೋಡಿ ಮೋಹನ್, ಹೊಸಳ್ಳಿ ಹರೀಶ್ ಇದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.