Airport: 2025ರ ಏಪ್ರಿಲ್ ನಲ್ಲಿ ನೋಯ್ಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟನೆ
ಪ್ರಮುಖ ನಗರಗಳನ್ನು ಸಂಪರ್ಕಿಸಲು ಅನುಕೂಲವಾಗಲಿದೆ
Team Udayavani, Oct 31, 2024, 12:49 PM IST
ನವದೆಹಲಿ: ಬಹುನಿರೀಕ್ಷಿತ ಯೋಜನೆಯಾದ ಏಷ್ಯಾದ ಅತೀ ದೊಡ್ಡ ನೋಯ್ಡಾ (Noida International Airport) ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮುಂದಿನ ವರ್ಷ (2025) ಉದ್ಘಾಟನೆಗೆ ಸಿದ್ಧವಾಗಲಿದೆ ಎಂದು ವರದಿ ತಿಳಿಸಿದೆ.
ನೋಯ್ಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ (NIAL) ಉದ್ಘಾಟನೆಯ ಅಧಿಕೃತ ದಿನಾಂಕ ಘೋಷಿಸಿದ್ದು, ವಿಮಾನ ನಿಲ್ದಾಣದಲ್ಲಿ 2025ರ ಏಪ್ರಿಲ್ 17ರಿಂದ ವಿಮಾನ ಸಂಚಾರ ಆರಂಭವಾಗಲಿದ್ದು, ಒಟ್ಟು ವಿವಿಧ ಭಾಗಗಳಿಂದ 30 ವಿಮಾನಗಳು ಸಂಚರಿಸಲಿವೆ ಎಂದು ವರದಿ ತಿಳಿಸಿದೆ.
ವಿಮಾನ ನಿಲ್ದಾಣ ಕಾರ್ಯ ತ್ವರಿತಗತಿಯಲ್ಲಿ ಸಾಗಿದ್ದು, ಈ ವಿಮಾನ ನಿಲ್ದಾಣ ಉತ್ತರಪ್ರದೇಶದ ಗೌತಮ್ ಬುದ್ಧ ನಗರದಲ್ಲಿದ್ದು, ಮಹತ್ವಕಾಂಕ್ಷೆಯ ಯೋಜನೆ ಆಗ್ರಾ, ಮಥುರಾ ಸೇರಿದಂತೆ ಪ್ರಮುಖ ನಗರಗಳನ್ನು ಸಂಪರ್ಕಿಸಲು ಅನುಕೂಲವಾಗಲಿದೆ ಎಂದು ವರದಿ ತಿಳಿಸಿದೆ.
ನೋಯ್ಡಾ ವಿಮಾನ ನಿಲ್ದಾಣದ ಹೆಚ್ಚಿನ ವಿಮಾನ ಸಂಚಾರ ಯೋಜನೆ:
ನೋಯ್ಡಾ ಇಂಟರ್ ನ್ಯಾಶನಲ್ ವಿಮಾನ ನಿಲ್ದಾಣ ದೆಹಲಿ-ಎನ್ ಸಿಆರ್ ಪ್ರದೇಶದ ಎರಡನೇ ವಿಮಾನ ನಿಲ್ದಾಣವಾಗಿದ್ದು, ಪ್ರತೀ ದಿನ 65 ವಿಮಾನ ಸಂಚಾರದ ಯೋಜನೆ ಹೊಂದಿದ್ದು, ಇದರಲ್ಲಿ 62 ದೇಶಿಯ, ಎರಡು ಅಂತರಾಷ್ಟ್ರೀಯ ಹಾಗೂ ಒಂದು ಸರಕು ಸಾಗಣೆ ಮಾರ್ಗ ಹೊಂದಿರಲಿದೆ ಎಂದು ವರದಿ ವಿವರಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
GSMA ಮಂಡಳಿಯ ಪ್ರಭಾರ ಚೇರ್ಮನ್ ಆಗಿ ನೇಮಕಗೊಂಡ ಗೋಪಾಲ್ ವಿಟ್ಟಲ್
UPI New Rule: ಗಮನಿಸಿ… ಫೆ-1ರಿಂದ ಯುಪಿಐ ಬಳಕೆದಾರರಿಗೆ ಹೊಸ ನಿಯಮ ಅನ್ವಯ…ಏನಿದು?
DeepSeek AI: ಉಚಿತ ಎಐ ಮಾಡೆಲ್-ಚೀನಾದ ಹೊಸ ಆವಿಷ್ಕಾರಕ್ಕೆ ಅಮೆರಿಕದ ಎಐ ಜಗತ್ತು ತಲ್ಲಣ!
Cars: ಫೆ.1ರಿಂದ ಮಾರುತಿ ಸುಜುಕಿ ಕಾರುಗಳ ಬೆಲೆ 32,500 ರೂ.ವರೆಗೂ ಏರಿಕೆ?
Bharat Mobility Expo: 2 ಐಷಾರಾಮಿ ಇವಿ ಬಿಡುಗಡೆ ಮಾಡಿದ ಜೆಎಸ್‌ಡಬ್ಲ್ಯೂ ಎಂಜಿ