ಆರು ವರ್ಷದ ಅಭಿಮಾನಿಗಾಗಿ ಒಲಿಂಪಿಕ್ಸ್ ಆಡಲಿರುವ ಜೊಕೋ
Team Udayavani, Jul 17, 2021, 2:27 AM IST
ಬೆಲ್ಗ್ರೇಡ್: ವಿಶ್ವದ ನಂ.1 ಟೆನಿಸಿಗ ನೊವಾಕ್ ಜೊಕೋವಿಕ್ ಈ ಬಾರಿಯ ಟೋಕಿಯೊ ಒಲಿಂಪಿಕ್ಸ್ ನಲ್ಲಿ ಆಡಲು ನಿರ್ಧರಿಸಿದ್ದಾರೆ. ಈ ಮೊದಲು ಒಲಿಂಪಿಕ್ಸ್ನಲ್ಲಿ ಆಡಬೇಕೋ ಬೇಡವೋ ಎನ್ನುವ ದ್ವಂದ್ವದಲ್ಲಿದ್ದರು. ತಾನಿನ್ನೂ ಈ ಕುರಿತು ನಿರ್ಧರಿಸಿಲ್ಲ ಎಂದೇ ಹೇಳುತ್ತ ಬಂದಿದ್ದರು. ಆದರೀಗ ಈ ಪ್ರತಿಷ್ಠಿತ ಕೂಟದಲ್ಲಿ ಆಡುವುದನ್ನು ಸ್ಪಷ್ಟಪಡಿಸಿದ್ದಾರೆ. ಅಂದಹಾಗೆ ಅವರು ಆಡುವುದು ಕೊಜಿರು ಎಂಬ ಪುಟಾಣಿ ಅಭಿಮಾನಿಗಾಗಿ!
ಒಲಿಂಪಿಕ್ಸ್ನಲ್ಲಿ ಆಡುವ ವಿಚಾರವನ್ನು ಟ್ವಿಟರ್ನಲ್ಲಿ ಅಧಿಕೃತವಾಗಿ ತಿಳಿಸಿದ ಜೊಕೋ, “ನನ್ನ ಪುಟಾಣಿ ಗೆಳೆಯ ಕೊಜಿರುನನ್ನು ನಿರಾಸೆಗೊಳಿಸಲಾರೆ. ನಾನು ಟೋಕಿಯೊಗೆ ವಿಮಾನದ ಟಿಕೆಟ್ ಬುಕ್ ಮಾಡಿದ್ದೇನೆ. ಬಹಳ ಹೆಮ್ಮೆಯಿಂದ ನನ್ನ ದೇಶವಾದ ಸರ್ಬಿಯಾವನ್ನು ಜಾಗತಿಕ ಕ್ರೀಡಾಕೂಟದಲ್ಲಿ ಪ್ರತಿನಿಧಿಸುತ್ತೇನೆ’ ಎಂದಿದ್ದಾರೆ. ಜಪಾನಿನ 6 ವರ್ಷದ ಕೊಜಿರು, ಜೊಕೋವಿಕ್ ಅವರ ಕಟ್ಟಾ ಅಭಿಮಾನಿ. “ಜೊಕೋ ಕೇಕ್’ ಮೂಲಕ ತನ್ನ ಅಭಿಮಾನ ಪ್ರದರ್ಶಿಸಿದ್ದ. ಅದೇ ದಿನ ಜೊಕೋ ತಮ್ಮ ನಿರ್ಧಾರ ಪ್ರಕಟಿಸಿದ್ದು ಉಲ್ಲೇಖನೀಯ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Jharkhand; ಇಂಡಿಯಾ ಒಕ್ಕೂಟದ “ಸಪ್ತ ಗ್ಯಾರಂಟಿ’!: ಮಹಿಳೆಯರಿಗೆ ಮಾಸಿಕ 2,500 ರೂ.
T-Shirt: ಫ್ಲಿಪ್ಕಾರ್ಟ್, ಮೀಶೋದಲ್ಲಿ ಲಾರೆನ್ಸ್ ಬಿಷ್ಣೋಯ್ ಟೀಶರ್ಟ್ ಮಾರಾಟ: ಆಕ್ರೋಶ
Daily Horoscope; ಇಷ್ಟಾರ್ಥ ಸಿದ್ಧಿಯ ದಿನ..ಉದ್ಯೋಗ ಸ್ಥಾನದಲ್ಲಿ ಸದ್ಯಕ್ಕೆ ನಿಶ್ಚಿಂತೆ
Milk: ಕರ್ನಾಟಕ ಗಡಿಯ ಹಾಲು ಕೇರಳ ಪಾಲು! ಖರೀದಿ ದರ ಇಲ್ಲಿಗಿಂತ ಕೇರಳದಲ್ಲೇ ಅಧಿಕ
Congress: ಜಮೀರ್ ವಿರುದ್ಧ ಕೈಕಮಾಂಡ್ಗೆ 20ಕ್ಕೂ ಹೆಚ್ಚು ಶಾಸಕರಿಂದ ದೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.