ಏಕದಿನ World Cup ಪಂದ್ಯಾವಳಿ-2023 :ಚೆನ್ನೈ, ಕೋಲ್ಕತಾ-ಪಾಕ್‌ಗೆ ಸುರಕ್ಷಿತ
Team Udayavani, Apr 12, 2023, 8:07 AM IST
ಹೊಸದಿಲ್ಲಿ: ಭಾರತದ ಆತಿಥ್ಯದಲ್ಲಿ ವರ್ಷಾಂತ್ಯ ನಡೆಯುವ ಏಕದಿನ ವಿಶ್ವಕಪ್ ಪಂದ್ಯಾವಳಿಯಲ್ಲಿ ಪಾಕಿಸ್ಥಾನ ಕೂಡ ಪಾಲ್ಗೊಳ್ಳಬೇಕಾಗುವುದು ಅನಿವಾರ್ಯವಾಗುತ್ತದೆ. ಎರಡು ದೇಶಗಳ ನಡುವಿನ ರಾಜಕೀಯ ಸಂಬಂಧ ಅದೆಷ್ಟೇ ಹದಗೆಟ್ಟಿದ್ದರೂ ಐಸಿಸಿ ಪಂದ್ಯಾವಳಿಯನ್ನು ಬಹಿಷ್ಕರಿಸುವಂತಿಲ್ಲ. ಇಂಥ ಸನ್ನಿವೇಶದಲ್ಲಿ ಚೆನ್ನೈ ಮತ್ತು ಕೋಲ್ಕತಾ ತಾಣಗಳು ಪಾಕಿಸ್ಥಾನ ಪಾಲಿಗೆ ಅತ್ಯಂತ ಸುರಕ್ಷಿತ ಎಂಬುದಾಗಿ ಐಸಿಸಿ ಮೂಲಗಳಿಂದ ತಿಳಿದು ಬಂದಿದೆ.
ವಿಶ್ವಕಪ್ ಪಂದ್ಯಾವಳಿ ಅ. 5ರಂದು ಮೊದಲ್ಗೊಳ್ಳುತ್ತದೆ. ಒಟ್ಟು 46 ಪಂದ್ಯ ಗಳನ್ನು ಭಾರತದ 12 ಕೇಂದ್ರಗಳಲ್ಲಿ ಆಡಲಾಗುವುದು. ಇವುಗಳೆಂದರೆ ಅಹ್ಮದಾಬಾದ್, ಚೆನ್ನೈ, ಕೋಲ್ಕತಾ, ಲಕ್ನೋ, ಮುಂಬಯಿ, ರಾಜ್‌ಕೋಟ್, ಬೆಂಗಳೂರು, ಹೊಸದಿಲ್ಲಿ, ಇಂದೋರ್, ಗುವಾಹಟಿ, ಹೈದರಾಬಾದ್ ಮತ್ತು ಧರ್ಮಶಾಲಾ.
ಸುರಕ್ಷಿತ ತಾಣ
“ಇದು ಬಿಸಿಸಿಐ ಮತ್ತು ಭಾರತ ಸರಕಾರದ ಆಯ್ಕೆ ಆಗಲಿದೆ. ಸುರಕ್ಷತೆಯ ದೃಷ್ಟಿಯಿಂದ ಪಾಕಿಸ್ಥಾನ ತನ್ನ ಬಹುತೇಕ ಪಂದ್ಯಗಳನ್ನು ಕೋಲ್ಕತಾ ಮತ್ತು ಚೆನ್ನೈಯಲ್ಲಿ ಆಡಲು ಬಯಸ ಬಹುದು. 2016ರ ಟಿ20 ವಿಶ್ವಕಪ್ ವೇಳೆ ಭಾರತ-ಪಾಕಿಸ್ಥಾನ ನಡುವಿನ ಪಂದ್ಯ ಕೋಲ್ಕತಾದಲ್ಲಿ ನಡೆದಿತ್ತು. ಉಳಿದ ಪಂದ್ಯಗಳನ್ನು ಚೆನ್ನೈಯಲ್ಲಿ ಆಡಿತ್ತು. ಇದು ಕೂಡ ಸುರಕ್ಷಿತ ಕೇಂದ್ರವಾಗಿದೆ” ಎಂಬುದಾಗಿ ಐಸಿಸಿಗೆ ತೀರಾ ಹತ್ತಿರವಾಗಿ ರುವ ಮೂಲವೊಂದು ಪಿಟಿಐಗೆ ತಿಳಿಸಿದೆ.
ಪಾಕಿಸ್ಥಾನ ಪಂದ್ಯಕ್ಕೆ ಸುರಕ್ಷಿತ ವಲ್ಲದ ತಾಣಗಳೆಂದರೆ ಮುಂಬಯಿ, ಧರ್ಮಶಾಲಾ ಎಂಬುದು ರಹಸ್ಯವೇನಲ್ಲ.
ಮೊಹಾಲಿಯಲ್ಲಿ ಪಂದ್ಯವಿಲ್ಲ
ಭಾರತದೆದುರಿನ 2011ರ ಏಕದಿನ ವಿಶ್ವಕಪ್ ಸೆಮಿಫೈನಲ್ ಪಂದ್ಯವನ್ನು ಪಾಕಿಸ್ಥಾನ ಮೊಹಾಲಿಯಲ್ಲಿ ಆಡಿತ್ತು. ಪಾಕ್ ವೀಕ್ಷಕರಿಗೆ ಆಗಮಿಸಲು ಅನುಕೂಲವಾಗಲಿದೆ ಎಂಬುದು ಅಂದಿನ ಲೆಕ್ಕಾಚಾರ ವಾಗಿತ್ತು. ಆದರೆ 2023ರಲ್ಲಿ ಮೊಹಾಲಿ ಯನ್ನು ಕೈಬಿಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Australia: ಪರ್ತ್‌ಗೆ ಆಗಮಿಸಿದ ರೋಹಿತ್ ಶರ್ಮ
Pro Kabaddi League: ಬೆಂಗಾಲ್ ವಾರಿಯರ್ ಮೇಲೆ ಪುಣೇರಿ ಪಲ್ಟಾನ್ ಸವಾರಿ
RCB ತಂಡಕ್ಕೆ ಸೇರಿದ ಫಿಲ್ ಸಾಲ್ಟ್, ಜಿತೇಶ್ ಶರ್ಮ, ಹ್ಯಾಜಲ್‌ವುಡ್
IPL Auction 2025: ಸೇಲ್ ಆದ – ಆಗದ ಪ್ರಮುಖರು.. 3ನೇ ಸುತ್ತಿನ ಸಂಪೂರ್ಣ ಪಟ್ಟಿ ಇಲ್ಲಿದೆ..
IPL Mega Auction: ಮೂರನೇ ಸೆಟ್ ನ ಆಟಗಾರರ ಹರಾಜು ಮಾಹಿತಿ ಇಲ್ಲಿದೆ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.