ಒಡಿಶಾ ನಗರ ಸಂಸ್ಥೆಗಳ ಚುನಾವಣೆ : ಬಿಜೆಡಿ ಜಯಭೇರಿ; ಬಿಜೆಪಿಗೆ ಹಿನ್ನಡೆ
ಭಾರಿ ಗೆಲುವಿಗೆ ಮತದಾರರಿಗೆ ಧನ್ಯವಾದ ಸಲ್ಲಿಸಿದ ಸಿಎಂ ಪಟ್ನಾಯಕ್
Team Udayavani, Mar 27, 2022, 10:16 AM IST
ಭುವನೇಶ್ವರ: ಒಡಿಶಾ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಫಲಿತಾಂಶ ಶನಿವಾರ ಹೊರ ಬಿದ್ದಿದ್ದು, ಆಡಳಿತ ಪಕ್ಷ ಬಿಜು ಜನತಾ ದಳ ತನ್ನ ಅಸ್ತಿತ್ವ ತೋರಿದೆ.
108 ನಗರ ಸ್ಥಳೀಯ ಸಂಸ್ಥೆಗಳ ಪೈಕಿ ಬಿಜೆಡಿ 95 ರಲ್ಲಿ ಪ್ರಚಂಡ ಗೆಲುವು ಸಾಧಿಸಿದೆ, ಬಿಜೆಪಿ ಕೇವಲ 6, ಕಾಂಗ್ರೆಸ್ 4, ಸ್ವತಂತ್ರರು 3 ಸ್ಥಾನಗಳನ್ನು ಪಡೆಡಿದ್ದಾರೆ.
ಬಿಜು ಜನತಾ ದಳ 1,731 ಕೌನ್ಸಿಲರ್ ಸ್ಥಾನಗಳಲ್ಲಿ 1,183 ಸ್ಥಾನಗಳನ್ನು ಪಡೆದುಕೊಂಡಿದೆ. ಭಾರತೀಯ ಜನತಾ ಪಕ್ಷ 286 ಸ್ಥಾನಗಳನ್ನು ಗೆದ್ದಿದೆ. ಕಾಂಗ್ರೆಸ್ ಕೇವಲ 139 ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಗಿದ್ದು, ಇತರರು 116 ಸ್ಥಾನಗಳನ್ನು ಪಡೆಡಿದ್ದಾರೆ.
ಭಾರಿ ಗೆಲುವಿಗೆ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ಮತದಾರರಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಪಂಚಾಯತ್ ಮತ್ತು ನಗರ ಚುನಾವಣೆಗಳಲ್ಲಿ ನಮಗೆ ಈ ಪ್ರಚಂಡ ವಿಜಯವನ್ನು ನೀಡಿದ್ದಕ್ಕಾಗಿ ನಮ್ಮ ರಾಜ್ಯದ ಜನರಿಗೆ ನನ್ನ ಕೃತಜ್ಞತೆಯನ್ನು ಸಲ್ಲಿಸಲು ಬಯಸುತ್ತೇನೆ. ನಮ್ಮ ಜನರ ಕಲ್ಯಾಣಕ್ಕಾಗಿ ನಾವು ನಮ್ಮ ಒಳ್ಳೆಯ ಕೆಲಸವನ್ನು ಮುಂದುವರಿಸುತ್ತೇವೆ ಎಂದಿದ್ದಾರೆ.
ರಾಜ್ಯ ಸರ್ಕಾರವು ಭುವನೇಶ್ವರ್ ಮತ್ತು ಬೆರ್ಹಾಂಪುರ ಮುನ್ಸಿಪಲ್ ಕಾರ್ಪೊರೇಷನ್‌ಗಳಲ್ಲಿ ಮೇಯರ್ ಸ್ಥಾನವನ್ನು ಮಹಿಳೆಯರಿಗೆ ಮೀಸಲಿಟ್ಟಿತ್ತು. ಚುನಾವಣೆಯಲ್ಲಿ ಒಡಿಶಾದಾದ್ಯಂತ ಎಲ್ಲಾ ಮೂರು ಮುನ್ಸಿಪಲ್ ಕಾರ್ಪೊರೇಷನ್‌ಗಳಲ್ಲಿ ಬಿಜೆಡಿ ಮೇಯರ್ ಸ್ಥಾನಗಳನ್ನು ಗೆದ್ದಿದೆ.ಸುಲೋಚನಾ ದಾಸ್ ಪ್ರತಿಷ್ಠಿತ ಭುವನೇಶ್ವರ ಕ್ಷೇತ್ರವನ್ನು ಗೆದ್ದರೆ, ಸುಭಾಷ್ ಸಿಂಗ್ ಮತ್ತು ಸಂಘಮಿತ್ರ ದಲೇ ಕಟಕ್ ಮತ್ತು ಬೆರ್ಹಾಂಪುರ ಸ್ಥಾನಗಳನ್ನು ಗೆದ್ದಿದ್ದಾರೆ.
ರಾಜ್ಯದಲ್ಲಿ ತನ್ನ ಅಸ್ತಿತ್ವ ಗಟ್ಟಿ ಮಾಡಿಕೊಳ್ಳಲು ಹವಣಿಸುತ್ತಿರುವ ಬಿಜೆಪಿ ಪಟ್ನಾಯಕ್ ಅವರ ಅಲೆಯ ಎದುರು ಯಶಸ್ಸು ಸಾಧಿಸಲು ಸಾಧ್ಯವಾಗುತ್ತಿಲ್ಲ ಎನ್ನುವುದನ್ನು ಚುನಾವಣಾ ಫಲಿತಾಂಶ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.