ಹಳೆ ಕಟ್ಟಡಕ್ಕೆ ಇದೀಗ ದುರಸ್ತಿ ಭಾಗ್ಯ : ಪೊಲೀಸ್ ಸಿಬಂದಿಗೆ ವಸತಿ ಗೃಹವಾಗಿ ಪರಿವರ್ತನೆ
Team Udayavani, Feb 25, 2021, 5:00 AM IST
ಬಂಟ್ವಾಳ: ಪೊಲೀಸ್ ಇಲಾಖೆಗೆ ಹಸ್ತಾಂತರಗೊಂಡಿರುವ ಪಾಣೆಮಂಗಳೂರು ಗೂಡಿನಬಳಿಯ ಪಶು ಇಲಾಖೆಯ ಹಳೆ ಕಟ್ಟಡಕ್ಕೆ ಇದೀಗ ದುರಸ್ತಿ ಭಾಗ್ಯ ದೊರಕಿದ್ದು, ಕಟ್ಟಡದ ಕೆಲಸ ಕಾರ್ಯಗಳು ನಡೆಯುತ್ತಿವೆ. ಮುಂದೆ ಈ ಕಟ್ಟಡವು ಪೊಲೀಸರಿಗೆ ವಸತಿ ಗೃಹವಾಗಿ ಪರಿವರ್ತನೆಗೊಳ್ಳಲಿದೆ.
ಬಂಟ್ವಾಳದಲ್ಲಿ ಕರ್ತವ್ಯ ನಿರ್ವಹಿಸುವ ಕೆಎಸ್‌ಆರ್‌ಪಿ ಸಿಬಂದಿಗೆ ಉಳಿದು ಕೊಳ್ಳುವುದಕ್ಕೆ ಸೂಕ್ತ ಸ್ಥಳವಿಲ್ಲದೆ ಯಾವುದೋ ಮದುವೆ ಹಾಲ್ ಸೇರಿದಂತೆ ಇನ್ನಿತರ ಸ್ಥಳಗಳಲ್ಲಿ ಉಳಿದುಕೊಳ್ಳಬೇಕಿತ್ತು. ಇದೀಗ ಇಂತಹ ಸಿಬಂದಿಗಾಗಿ ಪೊಲೀಸ್ ಇಲಾಖೆ ಸೂಕ್ತ ನಿರ್ಧಾರ ಕೈಗೊಂಡಿದ್ದು, ಪ್ರಸ್ತುತ ಕಟ್ಟಡ ದುರಸ್ತಿಗೊಳ್ಳುತ್ತಿದೆ.
ಬಂಟ್ವಾಳ ಪಶು ಇಲಾಖೆ ಹಾಗೂ ಆಸ್ಪತ್ರೆ ಕಟ್ಟಡ ಗೂಡಿನಬಳಿಯಲ್ಲೇ ಹೊಸ ಕಟ್ಟಡಕ್ಕೆ ಸ್ಥಳಾಂತರಗೊಂಡ ಬಳಿಕ ಹಳೆ ಕಟ್ಟಡ ಹಾಗೂ ನಿವೇಶನ ಪಾಳು ಬಿದ್ದಿತ್ತು. ಬಳಿಕ ಅದನ್ನು ಪೊಲೀಸ್ ಇಲಾಖೆಗೆ ಹಸ್ತಾಂತರಿಸಿ ಟ್ರಾಫಿಕ್ ಠಾಣೆ ಮಾಡುವುದಕ್ಕೆ ಯೋಚಿಸಲಾಗಿತ್ತು. ಆದರೆ ಟ್ರಾಫಿಕ್ ಪೊಲೀಸ್ ಠಾಣೆಗೆ ಅಲ್ಲಿ ಸೂಕ್ತ ಸ್ಥಳಾವಕಾಶವಿಲ್ಲದ ಕಾರಣದಿಂದ ಅವರು ಬೇರೆ ಸ್ಥಳವನ್ನು ಹುಡುಕುತ್ತಿದ್ದಾರೆ.
ಈ ಕಟ್ಟಡ ಪಾಳು ಬಿದ್ದಿದ್ದು, ನಿವೇಶನಕ್ಕೆ ಆವರಣ ಗೋಡೆಯೂ ಇಲ್ಲ, ಹೀಗಾಗಿ ಅನೈತಿಕ ಚಟುವಟಿಕೆಯ ಅಪಾಯದ ಜತೆಗೆ ಒತ್ತುವರಿಯಾಗುವ ಸಾಧ್ಯತೆಯ ಕುರಿತು ಉದಯವಾಣಿ ಸುದಿನದಲ್ಲಿ ಜ. 20ರಂದು ತೆರವುಗೊಳ್ಳದ ಪಾಳು ಬಿದ್ದ ಕಟ್ಟಡ ಎಂಬ ಶೀರ್ಷಿಕೆಯಲ್ಲಿ ಸಚಿತ್ರ ವರದಿ ಪ್ರಕಟಗೊಂಡಿತ್ತು.
ಅರ್ಧಂಬರ್ಧ ಬಿದ್ದಿತ್ತು
ಗೋಡೆ, ಅಡಿಪಾಯ ಸುಸಜ್ಜಿತವಾಗಿ ದ್ದರೂ, ಹಂಚಿನ ಮೇಲ್ಛಾವಣಿ ಅರ್ಧಂ ಬರ್ಧ ಬಿದ್ದುಕೊಂಡಿತ್ತು. ಆದರೆ ಇದೀಗ ಹಂಚಿನ ಮೇಲ್ಛಾವಣಿಯನ್ನು ಸಂಪೂರ್ಣ ದುರಸ್ತಿಪಡಿಸಲಾಗುತ್ತಿದೆ. ಎದುರಿನ ಭಾಗದಲ್ಲಿ ಜಿಐ ಶೀಟ್‌ಗಳ ಮೂಲಕ ಮೇಲ್ಛಾವಣಿ ಮಾಡಲಾಗಿದೆ. ಜತೆಗೆ ಸಿಮೆಂಟ್ ಫಾಸ್ಟರಿಂಗ್ ಮಾಡಲಾಗುತ್ತಿದೆ. ಈ ಎಲ್ಲ ಕಾರ್ಯಗಳು ನಡೆದು ಬಣ್ಣ ಬಳಿದರೆ ಹೊಸ ಕಟ್ಟಡದಂತೆ ಮಿಂಚಲಿದೆ.
ಪ್ರಸ್ತುತ ಕಟ್ಟಡದಲ್ಲಿ ಕೆಎಸ್‌ಆರ್‌ಪಿ ಸಿಬಂದಿ, ಬಂದೋಬಸ್ತ್ಗೆ ಆಗಮಿಸಿದ ಸಿಬಂದಿಗೆ ಉಳಿದುಕೊಳ್ಳುವುದಕ್ಕೆ ಹಾಲ್ ಇರುತ್ತದೆ. ಜತೆಗೆ ಶೌಚಾಲಯ, ವಿದ್ಯುತ್, ನೀರಿನ ವ್ಯವಸ್ಥೆ ಬಂದಲ್ಲಿ ವಸತಿಗೃಹವಾಗಿ ಪರಿವರ್ತನೆಗೊಳ್ಳಲಿದೆ. ಎಲ್ಲೆಲ್ಲೋ ಉಳಿದುಕೊಳ್ಳುವ ಸಿಬಂದಿ ತಮ್ಮದೇ ಸೂರಿನಲ್ಲಿ ಆಶ್ರಯ ಪಡೆಯಬಹುದಾಗಿದೆ.
ವಸತಿ ಗೃಹದ ರೀತಿ ದುರಸ್ತಿ
ಈ ಕಟ್ಟಡವು ಪೊಲೀಸ್ ಇಲಾಖೆಗೆ ಹಸ್ತಾಂತರವಾಗಿದ್ದು, ಕೆಎಸ್‌ಆರ್‌ಪಿ ಸಿಬಂದಿಗೆ ಉಳಿದುಕೊಳ್ಳುವುದಕ್ಕೆ ವಸತಿ ಗೃಹದ ರೀತಿಯಲ್ಲಿ ದುರಸ್ತಿ ಮಾಡಲಾಗುತ್ತಿದೆ. ಉಳಿದುಕೊಳ್ಳುವುದಕ್ಕೆ ಹಾಲ್ ಸೇರಿದಂತೆ ಶೌಚಾಲಯದ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಸಾಮಾನ್ಯ ವಾಗಿ ಸಿಬಂದಿ ಮದುವೆ ಹಾಲ್ ಗಳಲ್ಲಿ ಉಳಿದುಕೊಂಡಾಗ ಸಮಾರಂಭಗಳಿದ್ದಾಗ ಎದ್ದು ಹೋಗ ಬೇಕಾಗುತ್ತದೆ. ಆದರೆ ಈ ವ್ಯವಸ್ಥೆಯಿಂದ ಸೂಕ್ತ ವಸತಿ ಸಿಕ್ಕಂತಾಗುತ್ತದೆ.
-ಅವಿನಾಶ್, ಪಿಎಸ್‌ಐ, ಬಂಟ್ವಾಳ ನಗರ ಪೊಲೀಸ್ ಠಾಣೆ
ಸಮಾರಂಭಗಳಿದ್ದಾಗ ತೊಂದರೆ
ಬಂಟ್ವಾಳದಲ್ಲಿ 2 ಕೆಎಸ್‌ಆರ್‌ಪಿ ತಂಡ ವಿದ್ದು, ತಲಾ 20 ಮಂದಿ ಇರುತ್ತಾರೆ. ಇವರು ಇಲ್ಲಿನ ಮದುವೆ ಹಾಲ್ ಸೇರಿದಂತೆ ಇನ್ನಿತರ ಕಡೆಗಳಲ್ಲಿ ಉಳಿಯಬೇಕಿತ್ತು. ಹಾಲ್‌ಗಳಲ್ಲಿ ಮದುವೆ, ಇನ್ನಿತರ ಸಮಾರಂಭಗಳಿದ್ದಾಗ ಎದ್ದು ಹೋಗಬೇಕಿತ್ತು. ಇದು ಸಾಕಷ್ಟು ತೊಂದರೆಯಾಗುತ್ತಿರುವ ಕಾರಣ ಪೊಲೀಸ್ ಇಲಾಖೆ ಸೂಕ್ತ ಕ್ರಮಕೈಗೊಂಡಿದೆ. ಈ ಕಟ್ಟಡವಿರುವಲ್ಲಿ ಕೆಎಸ್‌ಆರ್‌ಪಿಯ ಬಸ್ ನಿಲ್ಲಿಸುವುದಕ್ಕೂ ಸೂಕ್ತ ಸ್ಥಳವಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Udupi: ಸಾಲ ಮರುಪಾವತಿಸದೆ ನಕಲಿ ದಾಖಲೆ ಸೃಷ್ಟಿಸಿ ಮರು ಸಾಲ; ಪ್ರಕರಣ ದಾಖಲು
ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡಕ್ಕಾಗಿ ಕೈಗೊಂಡ 5 ನಿರ್ಣಯಗಳೇನು ಗೊತ್ತಾ?
Kasaragodu: ಸ್ಲೀಪರ್ ಸೆಲ್ ರಚನೆಗಾಗಿ ಭಾರತಕ್ಕೆ ಬಂದಿದ್ದ ಭಯೋತ್ಪಾದಕ ಶಾಬ್‌ಶೇಖ್
Ayodhya: ರಾಮಮಂದಿರಕ್ಕೆ 1 ವರ್ಷ: ಜ.11ರಿಂದ 3 ದಿನ ಪೂಜೆ
ಸಿ.ಟಿ.ರವಿ ನಕಲಿ ಎನ್‌ಕೌಂಟರ್‌ಗೆ ಸರಕಾರದ ಹುನ್ನಾರ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.