ಎರಡು ಡೋಸ್ ಪಡೆಯದವರಿಗೆ ಒಮಿಕ್ರಾನ್ ಆತಂಕ ಹೆಚ್ಚು: ಡಾ. ಸುಧಾಕರ್
ವೇಗವಾಗಿ ಹರಡಿ, ಬೇಗ ಕಡಿಮೆಯಾಗುತ್ತದೆ ,ಆತಂಕ ಬೇಡ
Team Udayavani, Jan 5, 2022, 12:17 PM IST
ಬೆಂಗಳೂರು: ‘ಯಾರು ಎರಡು ಡೋಸ್ ಲಸಿಕೆ ಪಡೆದಿಲ್ಲವೋ ಅಂತಹವರಿಗೆ ಒಮಿಕ್ರಾನ್ ಆತಂಕ ಹೆಚ್ಚು’ ಎಂದು ಬುಧವಾರ ಅರೋಗ್ಯ ಸಚಿವ ಡಾ.ಸುಧಾಕರ್ ಅವರು ಬುಧವಾರ ಎಚ್ಚರಿಕೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ 15 ರಿಂದ 18 ವರ್ಷದೊಳಗಿನ 3,50,000 ಮಕ್ಕಳಿಗೆ ಈಗಾಗಲೇ ಲಸಿಕೆ ನೀಡಿದ್ದೇವೆ. ದೇಶದಲ್ಲಿ ನಾವು 3 ನೇ ಸ್ಥಾನದಲ್ಲಿದ್ದೇವೆ. ಈಗಾಗಲೇ 25 ಶೇಕಡಾ ಲಸಿಕಾಕರಣ ಆಗಿದೆ, ಅಂದರೆ 4 ಮಕ್ಕಳಲ್ಲಿಲ್ಲಿ ಒಬ್ಬರಿಗೆ ಲಸಿಕೆ ಆಗಿದೆ. ನಾನು ಹೇಳಿದ ಹಾಗೆ 10 ರಿಂದ 15 ದಿನಗಳಲ್ಲಿ ಸಂಪೂರ್ಣ ಲಸಿಕಾಕರಣ ಆಗುತ್ತದೆ ಎಂದಿದ್ದೆ. ಅದೇ ದಾರಿಯಲ್ಲಿ ಸಾಗಿದೆ. 28 ದಿನ ಆದ ಮೇಲೆ ಮಕ್ಕಳಿಗೆ 2 ನೇ ಡೋಸ್ ಕೋವ್ಯಾಕ್ಸಿನ್ ಲಸಿಕೆಯನ್ನೇ ನೀಡಲಾಗುತ್ತದೆ ಎಂದರು.
ಎಚ್ಚರಿಕೆ ಅಗತ್ಯ
ವಿಶ್ವದಲ್ಲಿ ಗಮನಿಸಿದ ಹಾಗೆ 4 ರಿಂದ 6 ವಾರಗಳು ಬಹಳ ಎಚ್ಚರಿಕೆ ಅಗತ್ಯ. ಇದು ವೇಗವಾಗಿ ಹರಡಿ, ಬೇಗವಾಗಿ ಕಡಿಮೆಯಾಗುತ್ತದೆ. ದೀರ್ಘ ಅಲೆ ಇರುವುದಿಲ್ಲ. ಕನಿಷ್ಠ 4 ರಿಂದ 6 ವಾರಗಳ ಕಾಲ ಬಹಳ ಎಚ್ಚರಿಕೆಯಿಂದ ಇದ್ದು ನಿಯಂತ್ರಣ ಮಾಡಲು ಸಹಕಾರ ನೀಡಬೇಕು ಎಂದು ಜನರಿಗೆ ಮನವಿ ಮಾಡಿದರು.
ಗಾಬರಿ ಬೇಡ
ಸೋಂಕು ಬಂದರೂ ಗಾಬರಿ ಬೇಡ, ಆಸ್ಪತ್ರೆಗೆ ದಾಖಲಾಗುವ ಅಗತ್ಯ ಇಲ್ಲ,ಆತಂಕ ಬೇಡ. ಒಮಿಕ್ರಾನ್ ವೈರಾಣು ಸ್ವಭಾವ ಹೇಗಿದೆ ಎಂದರೆ ಮೂಗಿನಿಂದ ಗಂಟಲಿಗೆ ಹೋಗುತ್ತದೆ, ಶ್ವಾಸಕೋಶಕ್ಕೆ ಹೋಗುವುದು ತೀರಾ ಕಡಿಮೆ. ಹಾಗಾಗಿ ಆಕ್ಸಿಜೆನ್, ವೆಂಟಿಲೇಟರ್ ಅಗತ್ಯ ಕಡಿಮೆ, ಐಸಿಯು ನಲ್ಲಿ ದಾಖಲಾದ ಸಂಖ್ಯೆಯೂ ತೀರಾ ಕಡಿಮೆ ಇದೆ ಎಂದರು.
60 ಮೇಲ್ಪಟ್ಟವರಿಗೆ ಬೂಸ್ಟರ್ ಡೋಸ್
10 ನೇ ತಾರೀಖಿನಿಂದ ಇತರೆ ರೋಗಗಳಿಂದ ಬಳಲುತ್ತಿರುವರಿಗೆ ಮೂರನೇ ಬೂಸ್ಟರ್ ಡೋಸ್ ನೀಡುತ್ತೇವೆ. ಆರೋಗ್ಯ ಕ್ಷೇತ್ರದ ಎಲ್ಲರಿಗೂ, ಫ್ರಂಟ್ ಲೈನ್ ವಾರಿಯರ್ಸ್ ಗಳಿಗೆ ಮೂರನೇ ಬೂಸ್ಟರ್ ಡೋಸ್ ನೀಡುತ್ತೇವೆ ಎಂದು ತಿಳಿಸಿದರು.
ಇದನ್ನೂ ಓದಿ : ಯಾರು ಏನೇ ಮಾಡಿದರೂ”ವಾಕ್ ಫಾರ್ ವಾಟರ್”ನಿಲ್ಲುವುದಿಲ್ಲ: ಡಿಕೆಶಿ
ಮೇಕೆದಾಟು ಪಾದಯಾತ್ರೆ : ಕಾನೂನು ಕ್ರಮ
ಮೇಕೆದಾಟು ಪಾದಯಾತ್ರೆ ನಡೆಸಲು ಮುಂದಾಗಿರುವ ಕಾಂಗ್ರೆಸ್ ಬಗ್ಗೆ ಪ್ರತಿಕ್ರಿಯಿಸಿ, ಆರೋಗ್ಯದ ತುರ್ತು ಪರಿಸ್ಥಿತಿ ಇದ್ದು, ಎಲ್ಲಾ ಪಕ್ಷಗಳು, ಎಲ್ಲಾ ಸಂಘ ಸಂಸ್ಥೆಗಳು ಸರಕಾರಕ್ಕೆ ಸಹಕಾರ ನೀಡಬೇಕಾಗಿದೆ. ಜನರು ತೀರ್ಮಾನ ಮಾಡುತ್ತಾರೆ, ಎಲ್ಲವನ್ನೂ ನೋಡುತ್ತಿದ್ದಾರೆ. ನಾವು ದುರುದ್ದೇಶದಿಂದ ಕಾನೂನು ಜಾರಿ ಮಾಡಿಲ್ಲ. ಕಾಂಗ್ರೆಸ್ ಗೆ ಜನರ ಹಿತ ಕಾಯುವ ಮನಸ್ಸು ಇದೆ ಎಂದು ತಿಳಿದಿದ್ದೇನೆ. ಮುಖ್ಯಮಂತ್ರಿಗಳಾಗಿದ್ದವರು, ಸಚಿವರಾಗಿದ್ದವರು, ಅನೇಕರು ಪ್ರಮುಖ ಸ್ಥಾನದಲ್ಲಿದ್ದವರು ಅಲ್ಲಿದ್ದಾರೆ, ಸುದೀರ್ಘವಾಗಿ ದೇಶವನ್ನು ಆಳಿದ ಪಕ್ಷ ಕಾಂಗ್ರೆಸ್. ಯಾವುದು ಒಳ್ಳೆಯದು ಎಂದು ತೀರ್ಮಾನ ಮಾಡಲಿ. ಕಾನೂನು ಅದರ ಕೆಲಸ ಮಾಡುತ್ತದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bhadravathi:ಬಾಯ್ಲರ್ ಸ್ಫೋ*ಟದಿಂದ ರೈಸ್‌ಮಿಲ್ ಕುಸಿತ:7 ಮಂದಿಗೆ ಗಾಯ
Sringeri; ಅಸ್ಸಾಂ ಕಾರ್ಮಿಕನಿಂದ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿ*ಕ ದೌರ್ಜನ್ಯ
Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಬಂಧನ
Belagavi Session ಉದ್ವಿಗ್ನ:ಹೆಬ್ಬಾಳ್ಕರ್ ವಿರುದ್ದ ಅವಾಚ್ಯ ಪದ ಬಳಸಿದರೆ ಸಿ.ಟಿ.ರವಿ?
Bidar: ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.